#ಶ್ರೀ #ರಘೋತ್ತಮ #ತೀರ್ಥರ #ಆರಾಧನಾ #ಮಹೋತ್ಸವ*

[04/01, 5:48 PM] +91 82176 31756: *ಜೀವನದ ಪರಿಪೂರ್ಣತೆ!*

ಏವಂ ಪ್ರಸನ್ನಮನಸೋ 
ಭಗವದ್ಭಕ್ತಿಯೋಗತಃ 
ಭಾಗವತತ್ತ್ವ ವಿಜ್ಞಾನಂ 
ಮುಕ್ತಸಂಗಸ್ಯ ಜಾಯತೇ 

“ಹೀಗೆ ನಿಷ್ಕಲ್ಮಶವಾದ ಸತ್ತ್ವ ಕ್ರಮದಲ್ಲಿ ಸ್ಥಾಪಿಸಲ್ಲ್ಪಟ್ಟಿರುವ ವ್ಯಕ್ತಿಯು, ಭಗವಂತನ ಭಕ್ತಿಸೇವೆಯ ಸಂಪರ್ಕದಿಂದ ಮನಸ್ಸು ಪ್ರಫುಲ್ಲಗೊಂಡು ಎಲ್ಲಾ ಭೌತಿಕ ಸಹವಾಸದಿಂದ ಮುಕ್ತಿಯ ಹಂತದಲ್ಲಿ, ಭಗವಂತನ ವ್ಯಕ್ತಿತ್ವದ ಸಕಾರಾತ್ಮಕವಾದ ವೈಜ್ಞಾನಿಕ ಜ್ಞಾನವನ್ನು ಪಡೆಯುತ್ತಾನೆ.”

_ಶ್ರೀಮದ್ಭಾಗವತಮ್ 1.2.20_
[04/01, 5:56 PM] +91 89713 62063: 🌺🌺🌺🌺🌺🌺🌺
*#ಶ್ರೀ #ರಘೋತ್ತಮ #ತೀರ್ಥರ #ಆರಾಧನಾ #ಮಹೋತ್ಸವ*
🌺🌺🌺🌺🌺🌺🌺
- ಶ್ರೀ ನಿಋತಿ ಅಂಶ ಸಂಭೂತರೂ - ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ರಘೋತ್ತಮ ತೀರ್ಥರ ಆರಾಧನಾ ಮಹೋತ್ಸವ "
ಶ್ರೀ ವಿದ್ಯಾಧೀಶ ತೀರ್ಥರು...
ಸಚ್ಛಾಸ್ತ್ರಾಮಲಭಾವಬೋಧಕಿರಣೈ:
ಸಂವರ್ಧಯನ್ ಮಧ್ವಸತ್ ।
ಸಿದ್ಧಾಂತಾಭ್ಧಿಮನಂತ ಶಿಷ್ಯ
ಕುಮುದವ್ರಾತ೦ವಿಕಾಸಂ ನಯನ್ ।।
ಉದ್ಭೂತೋ ರಘುವರ್ಯತೀರ್ಥ
ಜಲಧೇ: ತಾಪತ್ರಯಂ ತ್ರಾಸಯನ್ ।
ಯಸ್ತ೦ ನೌಮಿ ರಘೋತ್ತಮಾಖ್ಯ
ಶಶಿನಂ ಶ್ರೀ ವಿಷ್ಣು ಪಾದಾಶ್ರಯಮ್ ।।
ಈ ಪುಷ್ಯ ಮಾಸದಲ್ಲಿ ಬರುವ ಮುಕ್ಕೋಟಿ ದ್ವಾದಶಿಯು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ರಘೋತ್ತಮತೀರ್ಥರ ಪುಣ್ಯ ದಿನವಾದುದರಿಂದ ವೈಷ್ಣವರಿಗೆಲ್ಲ ಒಂದು ಪುಣ್ಯ ಪರ್ವ ಕಾಲವಾಗಿದೆ.
ಶಕ ಪುರುಷರೆನಿಸಿದ ಇವರ ವೃಂದಾವನವು ದಕ್ಷಿಣ ದೇಶದ ಪಿನಾಕಿನಿ ನದಿಯ ದಂಡೆಯ ಮೇಲೆ ತಿರುಕೊಯಿಲೂರು ಎಂಬ ಪ್ರಸಿದ್ಧ ಕ್ಷೇತ್ರದಲ್ಲಿದೆ.
ಅಲ್ಲಿ ಅನುಗಾಲವೂ ಶ್ರೀ ಶ್ರೀಗಳವರ ವೃಂದಾವನದ ಸೇವಾ ಸೂತ್ರಗಳು, ಆರಾಧನೆ, ಉಪಾಸನೆಗಳು ಅವಿಚ್ಛಿನ್ನವಾಗಿ ನಡೆಯುತ್ತಲಿದ್ದು ಇದೊಂದು ಪ್ರತಿ ಮಂತ್ರಾಲಯದಂತೆ ಪ್ರಸಿದ್ಧವಾಗಿ ರಾರಾಜಿಸುತ್ತಿದೆ.
ಕಲಿಯುಗದ ಕಲ್ಪವೃಕ್ಷದಂತಿರುವ ಶ್ರೀ ರಘೋತ್ತಮ ತೀರ್ಥರ ವೃಂದಾವನದ ಸೇವೆಯಿಂದ ಪ್ರತಿವರ್ಷವೂ ಸಾವಿರಾರು ಜನರು ತಮ್ಮ ಇಷ್ಟಾರ್ಥಗಳನ್ನು ಪಡೆದು ಧನ್ಯರಾಗುತ್ತಿದ್ದಾರೆ.
ಅನೇಕ ವೈದ್ಯರು ಅಸಾಧ್ಯವೆಂದು ಕೈಬಿಟ್ಟ ಎಷ್ಟೋ ರೋಗಿಗಳು ಶ್ರೀ ರಘೋತ್ತಮರ ಸೇವಾ, ವೃಂದಾವನದ ಪ್ರದಕ್ಷಿಣ ನಮಸ್ಕಾರ, ಮೃತ್ತಿಕಾ, ತೀರ್ಥ ಪ್ರಾಶನಗಳಿಂದ ಪರಿಹಾರವಾದದ್ದು ಅಸಂಖ್ಯ ಜನರ ಅನುಭವಕ್ಕೆ ಬಂದಿದೆ.
ದನ ಕರುಗಳಿಗೆ ಬೇನೆ ಬಂದಾಗ ಶ್ರೀ ಶ್ರೀಗಳವರ ವೃಂದಾವನ ಪ್ರದಕ್ಷಿಣೆ, ಮೃತ್ತಿಕಾ ಪ್ರಶನಾದಿಗಳನ್ನು ಮಾಡಿಸುವುದರಿಂದ ಅವುಗಳಿಗೆ ಗುಣವಾಗುವ ಪ್ರಸಂಗಗಳು ಪ್ರಸಿದ್ಧವಾಗಿವೆ.
ಇಂಥಾ ದೀನ ದಯಾಳುಗಳಾದ ಶ್ರೀ ರಘೋತ್ತಮ ತೀರ್ಥರ ಪೂರ್ವಾಶ್ರಮದ ಹೆಸರು ಶ್ರೀ ರಾಮಚಂದ್ರಾಚಾರ್ಯರು.
ತಂದೆ : ಶ್ರೀ ಸುಬ್ಬಾಭಟ್ಟ
ತಾಯಿ : ಸಾಧ್ವೀ ಗಂಗೂಬಾಯಿ
ಬಾಲ ಬ್ರಹ್ಮಚಾರಿಗಳಾದ ಶ್ರೀ ರಾಮಚಂದ್ರಾಚಾರ್ಯರು ಶ್ರೀ ರಘುವರ್ಯ ತೀರ್ಥರಿಂದ ಆಶ್ರಮ ಸ್ವೀಕರಿಸಿ" ಶ್ರೀ ರಘೋತ್ತಮತೀರ್ಥ " ರೆಂಬ ಅಭಿದಾನದಿಂದ ಗುರುಗಳಲ್ಲಿಯೇ ಕೆಲದಿನ ವಿದ್ಯಾಭ್ಯಾಸ ಮಾಡಿದರು.
ಬಾಲ್ಯದಲ್ಲಿ ಇವರ ಮೇಧಾಶಕ್ತಿಯೂ, ಕಾವ್ಯ ಪಾಂಡಿತ್ಯವೂ, ಸಂತ್ಯಸಂಧತೆಯೂ ಲೋಕೋತ್ತರವಾಗಿದ್ದಿತು.
ಆಶ್ರಮವಾದ ಹೊಸತರಲ್ಲಿ ಪ್ರಾತಃ ಸ್ನಾನ ಮಾಡಿ ತಮ್ಮ ಆಹ್ನೀಕ, ಜಪ - ತಪ ಮುಗಿಸಿ ಬಾಲ ಯತಿ ಶ್ರೀ ರಘೋತ್ತಮ ತೀರ್ಥರನ್ನು ಕರೆದು ನೀರ್ಮಾಲ್ಯ ತೀರ್ಥ, ನೈವೇದ್ಯಕ್ಕಿಟ್ಟ ಖೊಬ್ಬರಿ, ಕಲ್ಲುಸಕ್ಕರೆ, ಮಂತ್ರಾಕ್ಷತೆಯನ್ನು ಕೊಟ್ಟರು.
ಆಗ ಶ್ರೀ ರಘೋತ್ತಮತೀರ್ಥರು ನಿರ್ಮಾಲ್ಯ ತೀರ್ಥ ತೆಗೆದುಕೊಂಡು ಗುರು ಪ್ರಸಾದವೆಂದು ಖೊಬ್ಬರಿ, ಕಲ್ಲುಸಕ್ಕರೆಯನ್ನು ಬಾಯಲ್ಲಿ ಹಾಕಿಕೊಂಡು ತಮ್ಮ ಅಧ್ಯಯನವನ್ನು ಮುಂದುವರೆಸಿದರು.
ಅಂದು ಮಧ್ಯಾಹ್ನ ಗುರುಗಳು ದೇವರ ಪೂಜಾ ಪದ್ಧತಿಗಳನ್ನು ಚೆನ್ನಾಗಿ ತಿಳಿಸಿ ಕೊಡಬೇಕೆಂದು ಸಂಕಲ್ಪಿಸಿ...
" ಇಂದು ನೀವೇ ದೇವರ ಪೂಜೆ ಮಾಡಬೇಕೆಂದು " ಹೇಳಿದರು.
ಆಗ ಸತ್ಯ ನಿಷ್ಠರಾದ ಶ್ರೀ ರಘೋತ್ತಮ ತೀರ್ಥರು ತಮ್ಮ ಕಾವ್ಯಮಯವಾದ ವಾಣಿಯಲ್ಲಿ....
ಇಂದೂ ನಾನು ದೇವದೇವಸ್ಯ ಪೂಜಾ೦ ।
ಮಾಡೋದಿಲ್ಲ ಖೊಬ್ಬರಿ ತಿಂದ ಪ್ರಯುಕ್ತ ।।
ಎಂದು ಸರಸ ಸುಂದರವಾಗಿಯೇ ಹೇಳಿದರಂತೆ. ಶ್ರೀ ರಘೋತ್ತಮ ತೀರ್ಥರ ಸತ್ಯವಾದಿತ್ವ, ವೈರಾಗ್ಯವನ್ನು ಮೆಚ್ಚಿ ಗುರುಗಳು ತಮ್ಮ ಮಠದ ಸರ್ವಾಧಿಕಾರವನ್ನೂ ಒಪ್ಪಿಸಿದರು.
" ವಿದ್ಯಾಭ್ಯಾಸ "
ಜ್ಞಾನ ಲಾಲಸೆಯುಳ್ಳ ಈ ಬಾಲ ಯತಿಗಳು ತಮ್ಮ ಗುರುಗಳ ಅಪ್ಪಣೆಯ ಪ್ರಕಾರ ಅಭಿಮಾನ ಬಿಟ್ಟು ಅವರ ಶಿಷ್ಯರಾದ ಶ್ರೀ ವರದರಾಜಾಚಾರ್ಯರಲ್ಲಿ ಶಾಸ್ತ್ರಾಧ್ಯಯನಕ್ಕೆ ನಿಂತರು.
ಶ್ರೀ ಆದ್ಯ ಆಚಾರ್ಯರಲ್ಲಿ ಅಧ್ಯಯನ ಮಾಡುತ್ತಿದ್ದ ಶ್ರೀ ರಘೋತ್ತಮತೀರ್ಥರು ಒಂದು ಸಾಧನೀ ದ್ವಾದಶಿಯ ದಿನ ನದಿಗೆ ಸ್ನಾನಕ್ಕೆ ಹೋಗಿ ಅಲ್ಲಿಯೇ ತಮ್ಮ ಸ್ನಾನಾಹ್ನೀಕಗಳನ್ನೂ ಮಾಡುತ್ತಾ ಕುಳಿತಿದ್ದರು.
ಇತ್ತ ಮನೆಯಲ್ಲಿ ತುಸು ಹೊತ್ತು ಹಾದಿ ನೋಡಿ ಸ್ವಾಮಿಗಳು ಬಾರದ್ದರಿಂದ ದ್ವಾದಶಿ ಸಾಧನೀ ಮೀರುತ್ತದೆಂದು ಆದ್ಯರು ಊಟಕ್ಕೆ ಕುಳಿತರು.
ಆ ಸಮಯಕ್ಕೆ ಸ್ವಾಮಿಗಳು ಬಂದರು.
ಎಲ್ಲರೂ ಊಟಕ್ಕೆ ಕುಳಿತಿದ್ದನ್ನು ನೋಡಿ ಮರಳಿ ದೇವಸ್ಥಾನಕ್ಕೆ ಹೋದರು.
" ಅತಿ ಪರಿಚಯಾದವಜ್ಞಾ "
ಎಂಬಂತೆ ತಮ್ಮ ಈ ಪರಗೃಹ ವಾಸದಿಂದ ತಮ್ಮ ಮಠಕ್ಕೆ ಅವಮಾನವಾಯಿತು ಎಂಬ ಈ ವಿಚಾರದಿಂದ ಚಿಂತಿಸುತ್ತ ಇವರು ದೇವಾಲಯದಲ್ಲಿ ಮಲಗಿದರು.
ಆಗ ಸ್ವಪ್ನದಲ್ಲಿ ಗುರುಗಳು ಬಂದು.....
ನೀವು ಆದ್ಯ ಆಚಾರರಲ್ಲಿ ಓದುವುದನ್ನು ನಿಲ್ಲಿಸಿ.
ನೀವೇ ಪಾಠವನ್ನು ಹೇಳುವುದನ್ನು ಪ್ರಾರಂಭಿಸಿ ಮತ್ತು ಸಂಚಾರವನ್ನು ಮಾಡಿ ಶಿಷ್ಯ ಸಂಪತ್ತನ್ನು ಹೆಚ್ಚಿಸಿ ..........
ಎಂದು ಅಪ್ಪಣೆ ಮಾಡಿದರು.
" ಗ್ರಂಥಗಳು "
ಶ್ರೀಮಜ್ಜಯತೀರ್ಥರ ತತ್ತ್ವಪ್ರಕಾಶಿಕಾ, ತತ್ತ್ವನಿರ್ಣಯ, ಪ್ರಮೇಯದೀಪಿಕಾ ಮೊದಲಾದ ಗ್ರಂಥಗಳಿಗೆ ಶ್ರೀ ರಘೋತ್ತಮತೀರ್ಥರು ಬರೆದ " ಭಾವಬೋಧ " ಎಂಬ ಹೆಸರಿನ ಪ್ರೌಢ ಟಿಪ್ಪಣಿಗಳು ಇವರ ಅತ್ಯದ್ಭುತ ಶಾಸ್ತ್ರ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ.
ಸರ್ವೋತ್ಕೃಷ್ಟವಾದ ಈ ಭಾವಬೋಧ ಟಿಪ್ಪಣಿಗಳಿಂದಾಗಿ ಶ್ರೀ ರಘೋತ್ತಮ ತೀರ್ಥರು " ಭಾವಬೋಧಕಾರ " ರೆಂದೇ ಪ್ರಸಿದ್ಧರಾಗಿದ್ದಾರೆ.
ಇದಲ್ಲದೇ, ಶ್ರೀ ರಘೋತ್ತಮ ತೀರ್ಥರು...
" ಬೃಹತೀ ಸಹಸ್ರ " ಕ್ಕೆ ಒಂದು ಭಾವಬೋಧ ಟೀಕೆ ಬರೆದು ವೇದೋಕ್ತಿಗಳ ನಿಜವಾದ ಭಾವ ಜನರಿಗೆ ಬೋಧವಾಗುವಂತೆ ಮಾಡಿದರು.
" ನ್ಯಾಯ ವಿವರಣ " ಕ್ಕೆ ಬರೆದ " ಬ್ರಹ್ಮ ಪ್ರಕಾಶಿಕಾ ಟಿಪ್ಪಣಿ " ಶ್ರೀಮದಾಚಾರ್ಯರ ಅಮೋಘ ಸೇವೆಯಾಗಿದೆ.
ಇದರಂತೆ " ಅನುವ್ಯಾಖ್ಯಾನ ನ್ಯಾಯಮಾಲಾ " ಎಂಬ ಪ್ರಬಂಧವು ಅನುವ್ಯಾಖ್ಯಾನ, ನ್ಯಾಯ ವಿವರಣದಲ್ಲಿ ಶ್ರೀಮದಾಚಾರ್ಯರು ಹೇಳಿದ ಪೂರ್ವಪಕ್ಷ ಸಿದ್ಧಾಂತ ನ್ಯಾಯಗಳಿಗೆಲ್ಲ ಸೂತ್ರಾರೂಢತ್ವವು ಹೇಗೆ ಬರುವುದೆಂಬುದನ್ನು ಸಮಂಜಸವಾಗಿ ಪ್ರತಿಪಾದಿಸಿದ್ದಾರೆ.
ಅಂತೂ ದ್ವೈತ ಸಿದ್ಧಾಂತದ ವೇದಾಂತ ವೀಥಿಯಲ್ಲಿ ಶ್ರೀ ಭಾವಬೋಧ ಗ್ರಂಥಗಳು ಒಂದು ವಿಶಿಷ್ಟ ವ್ಯಾಖ್ಯಾ ಪ್ರಕ್ರಿಯೆಗೆ ಮೈಲುಗಲ್ಲುಗಳಾಗಿವೆ.
ಈ ಭಾವಬೋಧ ಪದ್ಧತಿಗೆ ಶ್ರೀ ರಘೋತ್ತಮ ತೀರ್ಥರೇ ಸೀಮಾ ಪುರುಷರೂ, ಶಕ ಪುರುಷರೂ ಮತ್ತು ಮಹಾ ಪುರುಷರು!
1. ತತ್ತ್ವಪ್ರಕಾಶಿಕಾ ಭಾವಬೋಧ.
2. ಬೃಹದಾರಣ್ಯಕೋಪನಿಷದ್ಭಾಷ್ಯ ಭಾವಬೋಧ.
3. ವಿಷ್ಣುತತ್ತ್ವನಿರ್ಣಯ ಟೀಕಾ ಭಾವಬೋಧ.
4. ಗೀತಾ ಭಾಷ್ಯ ಪ್ರಮೇಯದೀಪಿಕಾ ಭಾವಬೋಧ.
5. ಸನ್ನ್ಯಾಯ ವಿವೃತಿ ಭಾವಬೋಧ
6. ಅನುವ್ಯಾಖ್ಯಾನ ನ್ಯಾಯಮಾಲಾ ಬ್ರಹ್ಮಸೂತ್ರ ಸಂಬಂಧ ಪ್ರದೀಪ
7. ವಿವಾರಣೋದ್ಧಾರ
8. ತಾರತಮ್ಯ ಸ್ತೋತ್ರ
9. ತಿಥಿತ್ರಯವಿನಿರ್ಣಯ
10. ಶ್ರವಣ ದ್ವಾದಶೀ ನಿರ್ಣಯ
" ಆರಾಧನೆ " -
ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ  ರಘೋತ್ತಮ ತೀರ್ಥರು ಪುಷ್ಯ ಶುದ್ಧ ಏಕಾದಶೀ ವೈಕುಂಠ ಯಾತ್ರೆ ಮಾಡಿದರು. ಅವರ ಆರಾಧನೆಯನ್ನು  ಪುಷ್ಯ ಶುದ್ಧ ದ್ವಾದಶೀ ಆಚಾರಿಸಲಾಗುವದು
ಶ್ರೀ ವೇದೇಶ ತೀರ್ಥರು....
ರಘೋತ್ತಮ ಗುರುರ್ಭೂಯಾ-
ನ್ಮಮ ಜ್ಞಾನಾಯ ಸರ್ವದಾ ।
ಶ್ರೀ ಮಧ್ವಶಾಸ್ತ್ರಂ ಸಂಶೊಧ್ಯ
ಯಃ ಸಮ್ಯಜ್ಞಾನಮಾಪ್ತವಾನ್ ।।
ಭಾವಬೋಧಕೃತಂ ಸೇವೇ
ರಘೋತ್ತಮ ಮಹಾಗುರುಮ್ ।
ಯಚ್ಛಿಷ್ಯಶಿಷ್ಯಶಿಷ್ಯಾದ್ಯಾಷ್ಟಿ-
ಪ್ಪಾಣ್ಯಾಚಾರ್ಯ ಸಂಜ್ಞಿತಾ: ।
Forwding in whatsapp

Post a Comment

Previous Post Next Post