[24/01, 6:36 AM] +91 91644 68888: *🌹ಶ್ರೀ ವಿಠಲ ಕೃಷ್ಣೋ ವಿಜಯತೆ 🌹*
🌹 *ನಿತ್ಯ ಪಂಚಾಂಗ* 🌹
🌹 *೨೪ - ೦೧ - ೨೦೨೩*🌹
ಶ್ರೀ ಮನೃಪ ಗತ ಶಾಲಿವಾಹನ ಶಕೆ *೧೯೪೪ನೇ ಶ್ರೀ ಶುಭಕೃತ ನಾಮ* - ಸಂವತ್ಸರಸ್ಯ,
*ಉತ್ತರ* - ಆಯನ
*ಶಿಶಿರ* - ಋತೌ
*ಮಾಘ* - ಮಾಸೆ,
*ಶುಕ್ಲ* - ಪಕ್ಷೇ.
*ತೃತೀಯಾಂ* - ತಿಥೌ
*ಭೌಮ* - ವಾಸರೆ,
*ಶತಭಿಷಾ* - ನಕ್ಷತ್ರೆ.
*ವರಿಯಾನ್* - ಯೋಗೆ,
*ತೈತಿಲ* - ಕರಣೆ,
*ಶ್ರಾದ್ಧ ತಿಥಿ* - *೦೩.*
*ರವಿ ಉದಯ* - ೦೭:೦೦.
*ರವಿ ಅಸ್ತ.* - ೦೬:೧೯.
*ರಾಕಾ ೦೩:೦೦ - ೦೪:೩೦*
*ಗುಕಾ ೧೨:೦೦ - ೦೧:೩೦*
*ಯಕಾ ೦೯:೦೦ - ೧೦:೩೦*
*ದಿ ವಿ ~ *.*
~~~~~~~~~~~~~~~~
🌹 *೨೫ - ೦೧ - ೨೦೨೩*🌹
ಶ್ರೀ ಮನೃಪ ಗತ ಶಾಲಿವಾಹನ ಶಕೆ *೧೯೪೪ ನೇ ಶ್ರೀ ಶುಭಕೃತ ನಾಮ* - ಸಂವತ್ಸರಸ್ಯ,
*ಉತ್ತರ* - ಆಯನ
*ಶಿಶಿರ* - ಋತೌ
*ಮಾಘ* - ಮಾಸ
*ಶುಕ್ಲ* - ಪಕ್ಷೆ
*ಚತುರ್ಥ್ಯಾಂ* - ತಿಥೌ
*ಸೌಮ್ಯ* - ವಾಸರೆ
*ಪೂ ಭಾದ್ರಪದಾ* - ನಕ್ಷತ್ರೆ,
*ಪರೀಘ* - ಯೋಗೆ,
*ವಣಿಕ* - ಕರಣೆ,
*ಶ್ರಾದ್ಧ ತಿಥಿ* - *೦೪.*
*ರವಿ ಉದಯ* - ೦೭:೦೦.
*ರವಿ ಅಸ್ತ.* - ೦೬:೧೯.
*ರಾಕಾ ೧೨:೦೦ ~ ೦೧:೩೦*
*ಗುಕಾ ೧೦:೩೦ ~ ೧೨:೦೦*
*ಯಕಾ ೦೭:೩೦ ~ ೦೯:೦೦*
*ದಿ ವಿ - *.*
~~~~~~~~~~~~~~~~~
*ತಿಥೇಶ್ಚಶ್ರೀಕರಂ ಪ್ರೋಕ್ತಂ ವಾರಾದಾಯುಷ್ಯವರ್ಧನಂ ||*
*ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗನಿವಾರಣಂ ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ*|
*ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್* ||
💐💐💐💐💐💐💐
~~~~~~~~~~~~~~~~
🌹 *Nitya Panchang*🌹
🌹 *24 - 01 - 2023* 🌹
1944ne *Shree Shubhakruta nam*
samvatsarasya ,
*Uttara* - ayan
*Shishir* rutou,
*Magha* - maase ,
*Shukla* - pakshe,
*Truteeyam* - titho
*Bhouma* - vasare
*Shatabhisha* - nakshatre ,
*Variyan* - yoge
*Taitila* - Karane
*Shra.ti* ~ *03.*
*Ravi Udaya* ~ 07 : 00.
*Ravi Astha* ~ 06 : 19.
*Dina vishesha* ~
*R K 03:00 ~ 04:30*
*G K 12:00 ~ 01:30*
*Y K 09:00 ~ 10:30*
*Sarwam shree Krishnarpanmastu*
🙏🙏🙏🙏🙏
ಸಂಗ್ರಹ ~ *ಗುರುರಾಜಾಚಾರ್ಯ ಕೃ. ಪುಣ್ಯವಂತ*
[24/01, 6:37 AM] +91 91644 68888: ದಿನಕ್ಕೊಂದು ವಿಷ್ಣು ಸಹಸ್ರನಾಮದ ವಿವರಣೆ
*958:ಪಣ:*
*ಜಗತ್ತಿನ ಸಮಸ್ತ ವ್ಯವಹಾರವನ್ನು ನೆಡೆಸುವವನು ಹಾಗೂ ಸಮಸ್ತ ಶಾಸ್ತ್ರಗಳಿಂದ ಸ್ತುತಿಸಲ್ಪಡುವ ಭಗವಂತ ಪಣ:*
[24/01, 6:38 AM] +91 91644 68888: ದಿನಕ್ಕೊಂದು ಕಥೆ
ಕಷ್ಟದ ಅಗತ್ಯ
ಒಬ್ಬ ವ್ಯಕ್ತಿಗೆ ಚಿಟ್ಟೆಯ ಮೊಟ್ಟೆ ಕಾಣಿಸಿತು. ಒಂದು ದಿನ ಅದರಲ್ಲಿ ಸಣ್ಣ ರಂಧ್ರ ಕಾಣಿಸಿತು. ಆ ರಂಧ್ರದ ಮೂಲಕ ಹೊರಬರಲು ಚಿಟ್ಟೆ ಮರಿ ಪ್ರಯತ್ನಿಸುತ್ತಿತ್ತು. ಆ ವ್ಯಕ್ತಿ ಚಿಟ್ಟೆಯ ಕಾರ್ಯವನ್ನೇ ನೋಡುತ್ತಾ ಕುಳಿತ. ಹಲವು ಗಂಟೆಗಳ ಕಾಲ ಒದ್ದಾಡಿದರೂ ಚಿಟ್ಟೆಗೆ ಹೊರಬರುವುದಕ್ಕೆ ಸಾಧ್ಯವಾಗಲಿಲ್ಲ. ಸುಸ್ತಾಗಿ ಅದು ಸುಮ್ಮನಾಯಿತು. ಚಿಟ್ಟೆ ಹೊರಬರಲು ಕಷ್ಟಪಡುತ್ತಿದೆ. ಅದಕ್ಕೆ ತಾನು ಸಹಾಯ ಮಾಡಬೇಕು ಎಂದು ಭಾವಿಸಿದ ವ್ಯಕ್ತಿ ಕತ್ತರಿ ತೆಗೆದುಕೊಂಡು ಮೊಟ್ಟೆಯ ರಂಧ್ರವನ್ನು ಸ್ವಲ್ಪ ದೊಡ್ಡದು ಮಾಡಿದ. ಚಿಟ್ಟೆ ಸುಲಭವಾಗಿ ಹೊರಬಂತು.
ಆದರೆ ಚಿಟ್ಟೆಯ ದೇಹ ಊದಿಕೊಂಡಿತ್ತು. ರೆಕ್ಕೆಗಳು ಬಲಿತಿರಲಿಲ್ಲ. ಆ ವ್ಯಕ್ತಿ ಮತ್ತೆ ಚಿಟ್ಟೆಯನ್ನೇ ನೋಡುತ್ತಾ ಕುಳಿತ. ಚಿಟ್ಟೆ ಹಾರುವುದಕ್ಕೆ ಪ್ರಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ದೇಹವನ್ನು ಎಳೆದುಕೊಂಡು ಅತ್ತಿಂದಿತ್ತ ಓಡಾಡುತ್ತಿತ್ತು. ಚಿಟ್ಟೆ ಈಗ ರೆಕ್ಕೆ ಬಿಚ್ಚಿ ಹಾರಬಹುದು ಎಂದು ವ್ಯಕ್ತಿ ಕಾದ. ಎಷ್ಟು ಸಮಯವಾದರೂ ಚಿಟ್ಟೆಗೆ ಹಾರುವುದಕ್ಕಾಗಲಿಲ್ಲ. ಆ ಚಿಟ್ಟೆ ತನ್ನ ಜೀವನವೆಲ್ಲ ಹೀಗೆ ತೆವಳುತ್ತಲೇ ಕಳೆಯಬೇಕಾಯಿತು.
ತಾನು ಚಿಟ್ಟೆಗೆ ನೆರವಾಗಬೇಕು ಎಂದ ತುಡಿತದಲ್ಲಿ ಆ ವ್ಯಕ್ತಿ ಚಿಟ್ಟೆಯ ಸೃಷ್ಟಿಯ ಹಿಂದಿರುವ ವಿಚಾರವನ್ನು ಮರೆತಿದ್ದ ಮೊಟ್ಟೆಯಿಂದ ಹೊರಬರಲು ಚಿಟ್ಟೆ ಒದ್ದಾಡುವಾಗ ಅದರ ದೇಹದಿಂದ ಒಂದು ದ್ರವ ಸ್ರವಿಸುತ್ತದೆ. ಇದು ರೆಕ್ಕೆಗಳನ್ನು ಬಲಪಡಿಸುತ್ತದೆ. ಮುಂದೆ ಹಾರುವುದಕ್ಕೆ ರೆಕ್ಕೆಗಳು ಅನುಕೂಲವಾಗಬೇಕು ಎಂದಾದರೆ ಚಿಟ್ಟೆ ಕಷ್ಟ ಪಡಲೇಬೇಕು. ಹೀಗೆ ಕಷ್ಟಪಟ್ಟು ಹೊರಬಂದ ಚಿಟ್ಟೆ ಹಾರುವುದಕ್ಕೆ ಸಿದ್ಧವಾಗಿರುತ್ತದೆ.
ನೀತಿ :-- ಜೀವನದಲ್ಲಿ ಕಷ್ಟಗಳು ಬರಲೇಬೇಕು. ಆಗ ಮಾತ್ರ ನಾವು ಬಲಿಷ್ಠಗೊಳ್ಳುವುದಕ್ಕೆ, ಸಮರ್ಥವಾಗಿ ಜೀವನವನ್ನು ಎದುರಿಸುವುದಕ್ಕೆ ಸಾಧ್ಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
[24/01, 6:38 AM] +91 91644 68888: ದಿನಕ್ಕೊಂದು ಕಥೆ
ಧರ್ಮ ಯಾವುದೇ ಆದರೂ ಬೆಳಕು ಮಾತ್ರ ಒಂದೆ.
ನಮ್ಮ ದೇಶದ ಸರ್ವಧರ್ಮ ಸಮನ್ವಯ ಸಾಧಕರಲ್ಲಿ ಗಮನಾರ್ಹರು ಸಾಧು ವಾಸ್ವಾನಿಯವರು. ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಇವರ ಕಾರ್ಯಕ್ಷೇತ್ರ ಸಿಂದ್ ಪ್ರಾಂತ್ಯವಾಗಿತ್ತು. ಶ್ರೀಮಂತಿಕೆಯನ್ನು ತೊರೆದು ಸಾಮಾನ್ಯ ಜನರ ಉದ್ಧಾರಕ್ಕಾಗಿ ಇವರು ಮಾಡಿದ ಉಪಯುಕ್ತ ಕಾರ್ಯಗಳಲ್ಲಿ, ವಿದ್ಯಾಭ್ಯಾಸ ಸೌಲಭ್ಯ ಕಲ್ಪಿಸುವುದೂ ಒಂದು.
ಮೀರಾ ಚಳವಳಿಯ ಮೂಲಕ ನಡೆಯುತ್ತಿದ್ದ ವಿದ್ಯಾಲಯಗಳು, ಕೆಲವರು ಮತಾಂಧರ ಕಣ್ಣಿಗೆ ಹಿಂದೂ ಧರ್ಮಪ್ರಚಾರ ಕೇಂದ್ರಗಳಾಗಿ ಕಂಡವು. ಸಾಮಾನ್ಯ ಜನರ ದೃಷ್ಟಿಯಲ್ಲಿ ಈ ವಿದ್ಯಾಲಯಗಳು ಮರ್ಯಾದೆ, ಗೌರವ, ಸಮಾನತೆಗಳನ್ನು ಕಲಿಸುತ್ತಿದ್ದವು. ಆದ್ದರಿಂದ ನಿಷೇಧಿಸುವುದು ಅಸಾಧ್ಯವಾಗಿತ್ತು. ಮೀರಾ ಚಳವಳಿಯನ್ನು
ಒಮ್ಮೆ 'ವಿದ್ಯಾಭ್ಯಾಸ ಮತ್ತು ಇಸ್ಲಾಂ ಮೂಲತತ್ತ್ವ'ಗಳ ಬಗ್ಗೆ ಭಾಷಣ ಮಾಡಲು ಸಾಧುವಾಸ್ವಾನಿಯವರಿಗೆ ಆಹ್ವಾನ ಬಂದಿತು. ಆ ವಿಶ್ವವಿದ್ಯಾ ನಿಲಯದ ಉಪಕುಲಪತಿ ಮಿಸ್ಟರ್ ಹಲೀಂ ಅಧ್ಯಕ್ಷತೆ ವಹಿಸಿದ್ದರು. ಸಾಧುವಾಸ್ವಾನಿಯವರ ಪಾಂಡಿತ್ಯ, ವಿಷಯದ ಬಗ್ಗೆ ಆಳ, ವಿಸ್ತಾರವನ್ನು ಗಮನಿಸಿದ ಪ್ರೇಕ್ಷಕರು ದಂಗಾದರು.
ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಿರಿಯ ಅಧಿಕಾರಿಯೊಬ್ಬರು ವಾಸ್ವಾನಿ ಯವರನ್ನು "ನೀವು ಹಿಂದುವೋ, ಮುಸಲ್ಮಾನರೋ" ಹೇಳು ಎಂದು ಒತ್ತಾಯಿಸಿದರು. "ನಾನು ಇಬ್ಬರಿಗೂ ಮಧ್ಯದವನು" ಎಂದರು ವಾಸ್ವಾನಿ. “ಇಬ್ಬರ ನಡುವೆ ಎನಿರುತ್ತೆ, ಏನೂ ಇಲ್ಲ'' ಎಂದರು ದರ್ಪಿಷ್ಟ ಅಧಿಕಾರಿ. “ಆ ಏನೂ ಇಲ್ಲವೇ ನಾನು” ಎಂದರು ವಾಸ್ವಾನಿಯವರು. ಮೀರಾಗೀತೆಯಲ್ಲಿ "ಧರ್ಮ ಯಾವುದೇ ಆದರೂ ಬೆಳಕು ಮಾತ್ರ ನೀನೇ ಓ ದೇವರೇ" ಎಂದು ಇವರು ಹಾಡಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ ಸಾಧುವಾಸ್ವಾನಿಯವರ ಮಾತು ಎಷ್ಟು ಸಮಂಜಸ ಅಲ್ಲವೇ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
[24/01, 6:38 AM] +91 91644 68888: ದಿನಕ್ಕೊಂದು ಕಥೆ
ಜ್ಞಾನೋದಯ
ಅಬ್ದುಲ್ಲಾ ಪ್ರತಿನಿತ್ಯ ಮೇಕೆಗಳನ್ನು ಮೇಯಿಸಿಕೊಂಡು ತೋಟಕ್ಕೆ ಹೋಗುತ್ತಿದ್ದ. ಮೇಕೆಗಳು ತಮ್ಮ ಪಾಡಿಗೆ ತಾವು ಮೇಯುತ್ತಿದ್ದವು. ತೋಟದಲ್ಲಿ ಕಾಡುಬಾದಾಮಿ ಮರಗಳು ಹಾಗೂ ದೊಡ್ಡ ಕುಂಬಳಕಾಯಿಗಳಿಂದ ತುಂಬಿದ್ದ ಬಳ್ಳಿಗಳೂ ಬೆಳೆದಿದ್ದವು. ಅಬ್ದುಲ್ಲಾ ಕಾಡು ಬಾದಾಮಿ ಮರದ ನೆರಳಿನಲ್ಲಿ ಮಲಗಿ ಮೇಲೆ ನೋಡುತ್ತಾ “ದೇವರು ಹೀಗೇಕೆ ಮಾಡಿದ? ದೊಡ್ಡ ಎತ್ತರದ ಮರಗಳಲ್ಲಿ ಸಣ್ಣ ಕಾಯಿಗಳು. ನೆಟ್ಟಗೆ ನಿಲ್ಲಲೂ ಶಕ್ತಿಯಿಲ್ಲದೆ, ಪಕ್ಕಪಕ್ಕಕ್ಕೆ ಹರಡಿರುವ ಬಳ್ಳಿಗಳಲ್ಲಿ ದೊಡ್ಡ ಗಾತ್ರದ ಕುಂಬಳಕಾಯಿಗಳು. ಬುದ್ಧಿಯಾದರೂ ಇದೆಯೇ?” ದೇವರಿಗೆ ಎಂದು ಯೋಚಿಸತೊಡಗಿದ.
ಅದೇ ಸಮಯಕ್ಕೆ ಸರಿಯಾಗಿ ಮರದ ಮೇಲಿನಿಂದ ಒಂದು ಒಣಗಿದ ಬಾದಾಮಿ ಹಣ್ಣು ಅವನ ಮುಖದ ಮೇಲೆ ಬಿತ್ತು. ತತ್‌ಕ್ಷಣ ಅಬ್ದುಲ್ಲ ಕಣ್ಣುಬಿಟ್ಟು ಆಕಾಶದತ್ತ ಕೈ ಚಾಚಿ "ಓ ದೇವರೇ ನಿನಗಿಂತ ಸೂಕ್ಷ್ಮಬುದ್ಧಿಯವರು ಯಾರಿದ್ದಾರೆ? ಬಳ್ಳಿಗಳಲ್ಲಿರುವ ಕುಂಬಳಕಾಯಿ, ಒಂದು ವೇಳೆ ಮರದ ಮೇಲೆ ಬಿಟ್ಟು ನನ್ನ ಮುಖದ ಮೇಲೆ ಬಿದ್ದಿದ್ದರೆ...?! ನನಗೇ ಬುದ್ಧಿಯಿಲ್ಲ” ಎಂದು ದೇವರಿಗೆ ಕ್ಷಮೆಯಾಚಿಸಿದ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 - 9341137882.
Post a Comment