[04/01, 11:38 AM] Cm Ps: ಬಳ್ಳಾರಿ, ಜನವರಿ 04:- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬಳ್ಳಾರಿಯ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದರು.
ಸಚಿವ ಬಿ.ಶ್ರೀ ರಾಮುಲು, ಶಾಸಕರಾದ ಬಿ.ನಾಗೇಂದ್ರ, ಸೋಮಶೇಖರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
[04/01, 12:54 PM] Cm Ps: ಸಿಎಂ ಕುರಿತು ವಿರೋಧ ಪಕ್ಷದ ನಾಯಕರ ಹೇಳಿಕೆ
*ಸಿದ್ದರಾಮಯ್ಯನವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ*: *ಸಿಎಂ ಬೊಮ್ಮಾಯಿ*
ಬಳ್ಳಾರಿ, ಜನವರಿ 04: ಸಿದ್ದರಾಮಯ್ಯ ಹೇಳಿಕೆಗೆ
ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
*ವ್ಯಕ್ತಿತ್ವಕ್ಕೆ ತೋರಿಸುತ್ತದೆ*
ಮುಖ್ಯಮಂತ್ರಿಗಳ ವಿರುದ್ಧ ಸಿದ್ದರಾಮಯ್ಯ ಅವರು ನಾಯಿ ಮರಿ ಪದ ಬಳಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ. ನಾಯಿ ನಿಯತ್ತಿನ ಪ್ರಾಣಿ. ಜನರಿಗೆ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನ ಜನರ ಪರವಾಗಿ ಉಳಿಸಿಕೊಂಡು ಹೋಗುವೆ ಎಂದರು.
*ದೌರ್ಭಾಗ್ಯ ನೀಡಿಲ್ಲ*
ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡುವುದಿಲ್ಲ. ಸೌಭಾಗ್ಯ ಕೊಡುತ್ತೇವೆ ಎಂದು ಹೇಳಿ ದೌರ್ಭಾಗ್ಯ ನೀಡಿಲ್ಲ . ಈ ರೀತಿಯ ಕೆಲಸ ನಾವು ಮಾಡಿಲ್ಲ ಎಂದರು.
*ರಾಜಕೀಯವಾಗಿ ಹೇಳಿಕೆ ಸಲ್ಲದು*
ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ನೀಡಿರುವ ಹಿನ್ನಲೆಯಲ್ಲಿ ಮಾತನಾಡಿ ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದೂ ಇಲ್ಲ.
15 ದಿನಗಳ ಕಾಲ ಸದನ ನಡೆಯಿತು. ಅದಕ್ಕಿಂತಲೂ ಹಿಂದೆಯೂ ನಡೆದಿದೆ. ವೇದಿಕೆ ಇದ್ದಾಗ ಚರ್ಚೆ ಮಾಡದೆ, ಹೊರಗೆ ರಾಜಕೀಯವಾಗಿ ಹೇಳಿಕೆ ನೀಡುತ್ತಾರೆ. ಜನವರಿ ಫೆಬ್ರವರಿ ಯಲ್ಲಿ ಪುನಃ ಅಧಿವೇಶನ ನಡೆಯಲಿದ್ದು, ಚರ್ಚೆ ಮಾಡೋಣ. ವಿಧಾನಮಂಡಲಕ್ಕಿಂತ ಪವಿತ್ರ ವೇದಿಕೆ ಎಲ್ಲಿದೆ ಎಂದರು.
*ಮೋದಿ ಕಾಮಧೇನು*
ಸಿದ್ದರಾಮಯ್ಯ ಹಿಂದೆ ಅತ್ಯಂತ ಸಭ್ಯ ಪ್ರಧಾನಿ ಮನಮೋಹನ ಸಿಂಗ್ ಎದುರಿಗೆ ಹೆದರಿಕೊಂಡು ಹೋಗಲೇ ಇಲ್ಲ. ರಾಜ್ಯಕ್ಕೆ ನಯಾಪೈಸೆ ತರಲು ಆಗಲಿಲ್ಲ. ಬಹಳ ರಾಜ್ಯಕ್ಕೆ ಅವರು ಕೊಡುಗೆ ಏನೂ ಇಲ್ಲ ಎಂದರು.
ಮೋದಿಯವರು ಪ್ರಧನಾನಿಯಾದ ನಂತರ ವಿಶೇಷ ವಾದ ಕೊಡುಗೆಗಳನ್ನು ನೀಡಿದ್ದಾರೆ. ಮೋದಿಯವರು ರಾಜ್ಯಕ್ಕೆ 6 ಸಾವಿರ ಕಿ.ಮೀ ಹೆದ್ದಾರಿ ಕೊಡಿಗೆ ನೀಡಿದ್ದಾರೆ. ಸ್ವತಂತ್ರ ಬಂದ ನಂತರ ಒಂದು ರಾಜ್ಯಕ್ಕೆ ಇಷ್ಟು ದೊಡ್ಡ ಬಂದಿರುವುದು ಒಂದು ದಾಖಲೆ. ಬೆಂಗಳೂರು ಮೈಸೂರು ಹೆದ್ದಾರಿ ಯೋಜನೆ, ಮಂಗಳೂರು ಕಾರವಾರ ಬಂದರು, ಕಳಸಾ ಬಂಡೂರಿ ಯೋಜನೆಗೆ ಅನುಮೋದನೆ ನೀಡಿದ್ದಾರೆ. ಬರುವ ದಿನಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಅನುದಾನ ನೀಡಲಿದ್ದಾರೆ. ಎಲ್ಲಾ ಮಹಾನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದ್ದಾರೆ. ಇವರ ಕಾಲದಲ್ಲಿ ಇರಲಿಲ್ಲ. ಇಂಥ ಮಹತ್ವವನ್ನು ಯೋಜನೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ದಾರೆ. ಮೋದಿ ಕೊಡುವ ಕಾಮಧೇನು
ಅವರಿಗೆ ಅದರ ಬಗ್ಗೆ ಜ್ಞಾನ ಇಲ್ಲ.
ರಾಜಕೀಯ ಪ್ರೇರಿತ ಹೇಳಿಕೆಗಳನ್ನ ಕೊಡುವುದು ಸಿದ್ದರಾಮಯ್ಯ ರೂಡಿ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು. ತಳಬುಡ ಇಲ್ಲದ ಹೇಳಿಕೆಗಳನ್ನು ನೀಡುತ್ತಾರೆ ಎಂದರು.
[04/01, 1:25 PM] Cm Ps: ಬಳ್ಳಾರಿ, ಜನವರಿ 04:- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಳ್ಳಾರಿ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಸಿಂಥೆಟಿಕ್ ಟ್ರ್ಯಾಕ್ ಮತ್ತು ಪೆವಿಲಿಯನ್ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬಿ.ಶ್ರೀ ರಾಮುಲು, ಶಾಸಕರಾದ ಸೋಮಶೇಖರ ರೆಡ್ಡಿ, ಬಿ.ನಾಗೇಂದ್ರ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
[04/01, 2:29 PM] Cm Ps: ಬಳ್ಳಾರಿ, ಜನವರಿ 04:- *ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ* *ಬೊಮ್ಮಾಯಿ* ಅವರು *ಜಿಲ್ಲಾಡಳಿತ ಹಾಗೂ ಜಿಲ್ಲಾ* *ಪಂಚಾಯತ್ ಬಳ್ಳಾರಿ* ಹಾಗೂ *ಕರ್ನಾಟಕ ಸರ್ಕಾರದ* *ವಿವಿಧ ಇಲಾಖೆಗಳ* ಸಹಯೋಗದೊಂದಿಗೆ *ಎಕ್ಸ್* *ಮುನಿಪ್ಸಲ್ ಮೈದಾನದಲ್ಲಿ* ಆಯೋಜಿಸಿರುವ *ಬಳ್ಳಾರಿ ಜಿಲ್ಲೆಯ* *ವಿವಿಧ ಕಾಮಗಾರಿಗಳ* ಉದ್ಘಾಟನಾ ಮತ್ತು *ಶಂಕುಸ್ಥಾಪನಾ* *ಕಾರ್ಯವನ್ನು ನೆರವೇರಿಸಿ* *ಸಾರ್ವಜನಿಕ ಸಭೆಯಲ್ಲಿ* ಪಾಲ್ಗೊಂಡು *ಮಾತನಾಡಿದರು*
[04/01, 3:07 PM] Cm Ps: ಬಳ್ಳಾರಿ, ಜನವರಿ 04:- *ಮಾನ್ಯ* *ಮುಖ್ಯಮಂತ್ರಿ ಶ್ರೀ ಬಸವರಾಜ* *ಬೊಮ್ಮಾಯಿ* ಅವರು ಬಳ್ಳಾರಿಯ *ವಿಜಯನಗರ* *ವೈದ್ಯಕೀಯ* *ಮಹಾವಿದ್ಯಾಲಯ* ಹಾಗೂ *ಜಿಂದಾಲ್ಸ ಹಯೋಗದೊಂದಿಗೆ* ಮಹಾವಿದ್ಯಾಲಯದ ಆವರಣದಲ್ಲಿ *ನಿರ್ಮಿಸಲು ಉದ್ದೇಶಿಸಿರುವ 400* *ಹಾಸಿಗೆಗಳ* *ತಾಯಿ* ಮತ್ತು *ಮಕ್ಕಳ ಆಸ್ಪತ್ರೆಯ ಕಟ್ಟಡ* ಕಾಮಗಾರಿಯ *ಶಂಕುಸ್ಥಾಪನೆಯನ್ನು ನೆರವೇರಿಸಿ* ಮಾತನಾಡಿದರು.
[04/01, 6:01 PM] Cm Ps: ಬೆಂಗಳೂರಿಗೆ ಆಗಮಿಸಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
[04/01, 6:11 PM] Cm Ps: *ಬಳ್ಳಾರಿಯಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬಳ್ಳಾರಿ, ಜನವರಿ 04 : ಬಳ್ಳಾರಿಯಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಂದು ಉದ್ಘಾಟಿಸಲಾಗಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು, ಹಕ್ಕುಪತ್ರ ವಿತರಣೆ ಸುಮಾರು 600 ಕೋಟಿ ರೂ. ಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಧ್ಯ ಕರ್ನಾಟಕದಲ್ಲಿ ಬಳ್ಳಾರಿ ಬಹಳ ಪ್ರಾಮುಖ್ಯತೆ ಪಡೆದಿರುವ ಊರು ಮತ್ತು ಜಿಲ್ಲೆ. ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ವಿಶೇಷ ಅಭಿವೃದ್ದಿ ಯೋಜನೆಯನ್ನು ರೂಪಿಸಲಾಗುವುದು ಎಂದರು.
*ಕಾರ್ಖಾನೆ ಸ್ಥಾಪನೆಗೆ ಕ್ರಮ*
ಕೆಕೆಆರ್ ಡಿಬಿಯಿಂದ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಆಗಿದ್ದರೂ, ರೈತರಿಗೆ ಪರಿಹಾರ ದೊರೆತಿಲ್ಲ. 10-12 ವರ್ಷಗಳ ಹಿಂದೆ ಪ್ರತಿಷ್ಠಿತ ಸ್ಟೀಲ್ ಮತ್ತು ವಿದ್ಯುತ್ ಕ್ಷೇತ್ರದ ಕಾರ್ಖಾನೆಗಳನ್ನು ಸ್ಥಾಪಿಸಲು ಮುಂದೆ ಬಂದಿದ್ದರೂ, ಅದನ್ನು ಕಾರ್ಯಗತ ಮಾಡಿಲ್ಲ. ಈಗಾಗಲೇ ಅವರಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ. ಅವರಿಂದ ಸ್ವಾಧೀನವಾಗಿರುವ ಭೂಮಿಯನ್ನು ಮರಳಿಪಡೆದು, ಅದೇ ಉದ್ದೇಶದ ಬೇರೆ ಸಂಸ್ಥೆಗೆ ನೀಡಲಾಗುವುದು ಎಂದರು.
*ರಾಷ್ಟ್ರೀಯ ಹೆದ್ದಾರಿ ಹಾಗೂ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲಾಗುವುದು*
ಎಮನ್ ಇಂಡಿಯಾ ಸಂಸ್ಥೆ ಯೋಜನೆ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆಮೀ ಬಗ್ಗೆ ಸಂಸ್ಥೆಯ ಯೋಜನೆ ಬಗ್ಗೆ ಕೇಂದ್ರ ಸಚಿವರ ಗಮನವನ್ನು ಸೆಳೆಯಲಾಗಿದೆ. ಎಮನ್ ಇಂಡಿಯಾ ಸಂಸ್ಥೆಯೂ ಸಹ ಹಣಕಾಸಿನ ದುಸ್ಥಿತಿಯಲ್ಲಿದ್ದು, ಕಾಮಗಾರಿ ಆಗುತ್ತಿಲ್ಲ. ಆದರೆ ಮರುಟೆಂಡರ್ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದೆ. ಫೆಬ್ರವರಿ ಅಂತ್ಯದೊಳಗೆ ಅದು ಮರುಟೆಂಡರ್ ಆಗಲಿದೆ. ನಾಳೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರು ರಾಜ್ಯ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ಸುಧಾ ಸರ್ಕಲ್ ನಲ್ಲಿ ರಸ್ತೆ ಓವರ್ ಬ್ರಿಡ್ಜ್ ನಿರ್ಮಾಣದ ಅವಶ್ಯಕತೆ ಇದೆ ಇವೆರಡನ್ನೂ ಪ್ರಸ್ತಾಪ ಮಾಡಿ ಮಂಜೂರಾತಿ ಪಡೆಯಲಾಗುವುದು. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕೆಕೆಆರ್ ಡಿ ಬಿ ಯಿಂದ ಮೊದಲನೇ ಹಂತದ 40 ಕೋಟಿ ರೂ.ಗಳನ್ನು ಈಗಾಗಲೇ ನಿಗದಿಪಡಿಸಿ ನೀಡಲಾಗಿದೆ. ಮುಖ್ಯ ಕೆಲಸಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ನ್ಯಾಯಾಲಯದ ವ್ಯಾಜ್ಯವಿದ್ದು, ಇದನ್ನು ಬಗೆಹರಿಸಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಭೂ ಮತ್ತು ಜಲ ಆಡಿಟ್
ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕ್ ನ ಸಮಸ್ಯೆಗಳಿರುವ ಬಗ್ಗೆ ಉತ್ತರಿಸಿ, , ಭೂಮಿ ಹಂಚಿಕೆ ಮಾಡಿ ಪ್ರಾರಂಭ ಮಾಡದೇ ಇರುವುದು ಭೂಮಿಯನ್ನು ಹಂಚಿಕೆ ಮಾಡಿಯೂ ಪ್ರಾರಂಭಿಸದಿರುವುದು, ಮತ್ತು ಪೂರ್ಣಪ್ರಮಾಣದಲ್ಲಿ ಉಪಯೋಗ ಮಾಡದೇ ಇರುವುದು ನೀತಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಎರಡು ಅಂಶಗಳು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಬಳಕೆಯಾಗದಿರುವ ಭೂಮಿಯು ಎಷ್ಟಿದೆ ಎಂದು ತಿಳಿಯಲು ಭೂಮಿಯ ಆಡಿಟ್ ಮಾಡಲು ಕೈಗಾರಿಕಾ ಇಲಾಖೆಯ ಪ್ರಧಾನಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಉಕ್ಕು ಮತ್ತು ಇಂಧನ ವಲಯದಲ್ಲಿ ನೀರನ್ನು ಹಂಚಿಕೆ ಮಾಡಿ ಬ್ಲಾಕ್ ಮಾಡಿ 15-20 ವರ್ಷಗಳಾಗಿದೆ. ಅವರೂ ಕೂಡ ಉಪಯೋಗ ಮಾಡದೆ, ನೀರಾವರಿಗೂ ಬಿಡುತ್ತಿಲ್ಲ, ಕುಡಿಯುವ ನೀರಿಗೆ ಅವಶ್ಯಕತೆ ಇದೆ. ಜಲ ಆಡಿಟ್ ಮಾಡಿ ಮೊದಲ ಹಂತದ ಆಡಿಟ್ ವರದಿ ಬಂದಿದ್ದು, ಮೊದಲ ಹಂತದ ಹಂಚಿಕೆಯನ್ನು ರದ್ದುಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ನವೆಂಬರ್ ನಲ್ಲಿ ಆದೇಶ ಹೊರಡಿಸಿದ್ದು, ಜನವರಿ ಅಂತ್ಯದೊಳಗೆ ಸಮಪುರ್ಣ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಎರಡನೇ ಆಡಿಟ್ ಮಾಡಿ ಸ್ವಾಧೀನ ಪಡಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
*ರಾಜ್ಯದ ಹಿತಾಸಕ್ತಿಯೊಂದಿಗೆ ರಾಜಿ ಇಲ್ಲ*
ಸಮಾನಾಂತರ ಜಲಾಶಯಕ್ಕೆ ಕುರಿತಂತೆ ಡಿಪಿಆರ್ ಸಿದ್ದಪಡಿಸಲು 20 ಕೋಟಿ ರೂ.ಗಳು ಮಂಜೂರಾಗಿದ್ದು, ಡಿಪಿಆರ್ ಆದ ನಂತರ ತುಂಗಭದ್ರ ಮಂಡಳಿಯಿಂದ ಅನುಮೋದನೆಯ ಅವಶ್ಯಕತೆ ಇದೆ. ಅಂತರರಾಜ್ಯ ಮಂಡಲಿಯಲ್ಲಿ ಪ್ರತಿ ಬಾರಿ ಅಂತರ ರಾಜ್ಯ ಯೋಜನೆ ರೂಪಿಸಿದಾಗ ಅನಗತ್ಯ ವಿವಾದ ಮಾಡಿಕೊಂಡು 10-20 ವರ್ಷ ಎಳೆದಾಡಬಾರದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ನಾನೇ ಮಾತನಾಡಿದ್ದೇನೆ. ಅವರು ಒಂದು ತಾಂತ್ರಿಕ ತಂಡವನ್ನು ಕಳಿಸಿಕೊಟ್ಟು, ನಮ್ಮ ತಾಂತ್ರಿಕ ತಂಡ ಅವರೊಂದಿಗೆ ಮಾತನಾಡಿದ್ದಾರೆ. ಆಂಧ್ರ ಮತ್ತು ತೆಲಂಗಾಣ ಮತ್ತು ನಮ್ಮ ನೀರಾವರಿ ಸಚಿವರು ಮಾತನಾಡಿ, ನಾನೂ ಕೂಡ ಈಗಾಗಲೇ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಬಹು ರಾಜ್ಯವಾಗಿರುವುದರಿಂದ ಅವರ ಹಿತಾಸಕ್ತಿಯೇನಿದೆ ಮತ್ತು ನಮ್ಮ ರಾಜ್ಯದ ಹಿತಾಸಕ್ತಿಯನ್ನು ಎಲ್ಲಿಯೂ ರಾಜಿ ಮಾಡಿಕೊಳ್ಳದೇ ಅವರೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಲು ನಾನು ಮುಂದಾಗಿದ್ದೇನೆ. ಆಂಧ್ರದ ಇಂಜಿನಿಯರ್ ಗಳು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವುಗಳಿಗೆ ಸೂಕ್ತವಾಗಿ ಉತ್ತರಿಸಲಾಗಿದೆ. ಮುಂದೆ ಆಡಳಿತಾತ್ಮಕವಾಗಿ ಹಾಗೂ ಅಂತಿಮವಾಗಿ ತಾಜಕೀಯ ಮಟ್ಟದಲ್ಲಿ ಇದನ್ನು ಬಗೆಹರಿಸಲಾಗುವುದು ಎಂದರು. ಕೆ.ಆರ್.ಎಸ್ ಸೇರಿದಂತೆ ಆಲಮಟ್ಟಿ, ನಾರಾಯಣಪುರ, ಹಿಡಕಲ್ ಜಲಾಶಯಗಳಿಂದ ನೀರನ್ನು ಹಂಚಿಕೆ ಮಾಡಲಾಗಿದೆ. ಎಲ್ಲೆಲ್ಲಿ ಬಳಕೆಯಾಗಿಲ್ಲ ಹಾಗೂ ಬಳಸುವ ಸಾಧ್ಯತೆ ಇಲ್ಲವೋ ಅವುಗಳನ್ನು ಪುನ: ಸ್ವಾಧೀನಕ್ಕೆ ಪಡೆಯಲಾಗುವುದು ಎಂದರು.
*ಚರ್ಚೆಗೆ ಅವಕಾಶವಿದೆ*
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ
ವಿಧಾನಸಭೆಯಲ್ಲಿ ಎಲ್ಲಾ ವಿಷಯಗಳನ್ನು ಮಾತನಾಡಲು ಅವಕಾಶವಿದೆ. ಅಲ್ಲಿ ಯಾಕೆ ಚರ್ಚೆ ಮಾಡುವುದು ಇಲ್ಲ. ಹೊರಗಡೆ ಯಾಕೆ ಹೇಳುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಕೇಳಬಹುದಿತ್ತು, ಮುಂದೆ ಬೆಂಗಳೂರಿನ ಅಧಿವೇಶದಲ್ಲಿ ಕೇಳಲಿ ಎಂದರು. ಒಬ್ಬ ವಿರೋಧ ಪಕ್ಷದ ನಾಯಕರು ಎದ್ದು ನಿಂತು ಏನು ಬೇಕಾದರೂ ಕೇಳಬಹುದು ಎಂದರು.
--
[04/01, 6:37 PM] Cm Ps: *ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಕೇಂದ್ರದ ಒಪ್ಪಿಗೆ* *ಸಿಎಂ ಬೊಮ್ಮಾಯಿ*
ಬಳ್ಳಾರಿ, ಜನವರಿ 04: ಆರು ಸಾವಿರ ಕೋಟಿ ರೂ.ಗಳನ್ನು ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ಬೆಂಗಳೂರಿನ ಫೆರಿಫೆರಲ್ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ನಾವು ಕ್ರಮ ವಹಿಸಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೆಕೆಆರ್ ಡಿ ಬಿಯಾಗಲಿ ಬಜೆಟ್ ಅನುದಾನವಾಗಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ ಎಂದರು.
ಹೊಸ ಕಾಮಗಾರಿಗಳ ಉದ್ಘಾಟನೆ ಬಗ್ಗೆ ಚಿಂತನೆ ಇದೆಯೇ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಚಿಂತನೆ ಮಾಡಿ ಹೇಳಿದ್ದಾರೆ. ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಅವರ ಬಳಿ ಚರ್ಚೆ ಮಾಡಿ ಸರ್ಕಾರದ ನಿಲುವನ್ನು ತಿಳಿಸಲಾಗುವುದು. ಸಿದ್ದರಾಮಯ್ಯನ ಕಾಲದಲ್ಲಿ 15 ನೇ ಹಣಕಾಸಿನ ಆಯೋಗ ತೀರ್ಮಾನವಾಗಿದೆ. ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಸರಿಯಾದ ಮಾಹಿತಿಗಳನ್ನು ನೀಡಿ, ದೃಷ್ಟಿಯಲ್ಲಿ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಯೋಗಕ್ಕೆ ತಿಳಿಸುವಲ್ಲಿ ಇದು ಅಂದಿನ ಸರ್ಕಾರದ ವಿಫಲವಾಗಿದೆ. ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಈಗಿರುವ ಮುಖ್ಯ ಬಜೆಟ್, ಕೆಕೆಆರ್‍ಡಿಬಿ ಬಜೆಟ್, ಮಿನರಲ್ ಫಂಡ್‍ಗಳನ್ನು ಉಪಯೋಗ ಮಾಡಲು, ಈಗಾಗಲೇ ಮಂಜೂರಾಗಿರುವ ಕೆಲಸಗಳನ್ನು ನಿರ್ವಹಿಸಿಲು ವಿಶೇಷ ಇಂಜಿನಿಯರ್ ಸೆಲ್ ಅಗತ್ಯವಿದೆ. ಅದರ ಕಡೆ ಲಕ್ಷ್ಯ ಕೊಡಲಾಗುತ್ತಿದೆ. ಶೇ 50 ರಷ್ಟು ರಿಂಗ್ ರಸ್ತೆಯನ್ನು ಮಿನರಲ್ ಫಂಡ್ ನಲ್ಲಿ ಕೈಗೊಳ್ಳಲಾಗಿದೆ ಉಳಿದ ಶೇ 50 ರಷ್ಟು ಕಾಮಗಾರಿ ಎಮೆನ್ –ಇಂಡಿಯಾ ಕಾಮಗಾರಿಯ ಭಾಗವಾಗಿದೆ ಎಂದರು. ಮೊದಲ ಆದ್ಯತೆ ರಿಂಗ್ ರಸ್ತೆ ಪೂರ್ಣಗೊಳಿಸಲು ಸೂಚಿಸಿದೆ ಎಂದರು.
[04/01, 6:57 PM] Cm Ps: ಸಿಎಂ ರಿಂದ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ
*ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು: ಸಿಎಂ ಬೊಮ್ಮಾಯಿ*
ಬಳ್ಲಾರಿ, ಜನವರಿ 04: ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ನಿರ್ಮಿಸಲು ಉದ್ದೇಶಿಸಿರುವ 400 ಹಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಇಡೀ ಕರ್ನಾಟಕದಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲೂ ಇಲ್ಲ. ಇಲಾಖೆಯಿಂದ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾವಾಗುತ್ತದೆ. ಆದರೆ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ಜಿಂದಾಲ್ ಸಂಸ್ಥೆ ಕಟ್ಟಿಕೊಡಲು ಒಪ್ಪಿದ್ದು, ಸರ್ಕಾರ ಸಲಕರಣೆಗಳನ್ನು ಒದಗಿಸಲಿದೆ. 400 ಹಾಸಿಗೆಗಳ ಆಸ್ಪತ್ರೆ, ಸಮಗ್ರ ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಹಾಗೂ ತಾಯಂದಿರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿದೆ ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದರು.
*ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನ*
ನಮ್ಮ ದೇಶದಲ್ಲಿ ಪೌಷ್ಠಿಕತೆ ಮುಖ್ಯವಾದ ಸವಾಲು ಪೌಷ್ಟಿಕತೆಯ ಕೊರತೆಯಿಂದ ಮಕ್ಕಳ ಬೆಳವಣಿಗೆ ಸರಿಯಾಗುವುದಿಲ್ಲ. ಪದೇ ಪದೇ ಕಾಯಿಲೆಗೆ ಒಳಪಡುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ. ನಮ್ಮ ರಾಜ್ಯದ ಬಜೆಟ್ ನಲ್ಲಿ ಪೌಷ್ಟಿಕತೆಗೆ ಅನುದಾನ ಒದಗಿಸಲಾಗಿದೆ. ತೀವ್ರ ಮತ್ತು ಮಧ್ಯಮ ಎಂಬ ಎರಡು ಬಗೆಯ ಅಪೌಷ್ಟಿಕತೆಯಿದೆ. ಹಿಂದಿನ ಸರ್ಕಾರ ಮದ್ಯಮಕ್ಕೆ ಕಡಿಮೆ ಪೌಷ್ಟಿಕ ಆಹಾರ ತೀವ್ರಕ್ಕೆ ಮಾತ್ರ ಪೌಷ್ಟಿಕಾಂಶವುಳ್ಳ ಆಹಾರ ಕೊಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಬದಲಾವಣೆ ಮಾಡಿ ತೀವ್ರ ಪೌಷ್ಟಿಕಾಂಶದ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಎಲ್ಲರಿಗೂ ನೀಡಬೇಕೆಂಬ ಪ್ರಮುಖ ತೀರ್ಮಾನ ಮಾಡಿದ್ದೇವೆ. ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಕಲ್ಯಾಣ ಕರ್ನಾಟಕಕ್ಕೆ 24 ಪಿಹೆಚ್ ಸಿ ಕೇಂದ್ರವನ್ನು ಸಿ ಹೆಚ್ ಸಿ ಕೇಂದ್ರವಾಗಿ ಮೇಲ್ದರ್ಜೇಗೇರಿಸಲಾಗುತ್ತಿದೆ. ಹಾಗು ಹೊಸ ಪಿಹೆಚ್ ಸಿ ಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಬಂದಿರುವುದು ನಮ್ಮೆಲ್ಲ ಪ್ರಯತ್ನಕ್ಕೆ ಜಿಂದಾಲ್ ಕಂಪನಿ ಶಕ್ತಿ ಹಾಗೂ ಬೆಂಬಲ ನೀಡಿದೆ. ಜಿಂದಾಲ್ ಸಂಸ್ಥೆಗೆ ಶಕ್ತಿ ಇದೆ. ಇನ್ನಷ್ಟು ಸಿಎಸ್ ಆರ್ ನಿಧಿಯನ್ನು ಬಳ್ಳಾರಿ, ಹೊಸಪೇಟೆ, ಎರಡೂ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಜಿಂದಾಲ್ ಕೊಡುಗೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಬಿ ನಾಗೇಂದ್ರ, ಸೋಮಶೇಖರರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
--
[04/01, 7:54 PM] Cm Ps: ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಏರ್ಪಡಿಸಿದ್ದ ಸ್ವದೇಶಿ ಮೇಳ ಕಾರ್ಯಕ್ರಮ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಸಂಸದರಾದ ಡಿ.ವಿ. ಸದಾನಂದಗೌಡ, ಜಗ್ಗೇಶ್, ಮಾಜಿ ಶಾಸಕ ಮುನಿರಾಜು ಹಾಗೂ ಮತ್ತಿತರರು ಹಾಜರಿದ್ದರು.
[04/01, 9:32 PM] Cm Ps: ಬೆಂಗಳೂರು, ಜನವರಿ 04:- *ಮಾನ್ಯ ಮುಖ್ಯಮಂತ್ರಿ ಶ್ರೀ* *ಬಸವರಾಜ ಬೊಮ್ಮಾಯಿ ಅವರು* ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಡೆಟ್‍ನ ವತಿಯಿಂದ ರೇಸ್‍ಕೋರ್ಸ್ ರಸ್ತೆಯ *ತಾಜ್‍ವೆಸ್ಟ್ ಎಂಡ್‍ನಲ್ಲಿ* ಆಯೋಜಿಸಿರುವ *ಮಾರ್ಕೆಟಿಂಗ್ ಕಮ್ಯೂನಿಕೇಷನ್* ಮತ್ತು *ಅಡ್ವರ್ಟೈಸಿಂಗ್ ಲಿಮಿಟೆಡ್* ಸಂಸ್ಥೆಯ “ *ಸುವರ್ಣ* *ಮಹೋತ್ಸವ”ದ* ಉದ್ಘಾಟಿಸಿ, ವಿವಿಧ ಜಿಲ್ಲಾ *ಶಾಖೆಗಳ ಕಟ್ಟಡ* *ನಿರ್ಮಾಣ ಕಾಮಗಾರಿಯ* *ಶಂಕುಸ್ಥಾಪನಾ* ( *ವರ್ಚುವಲ್* ) ನೆರವೇರಿಸಿ ಮಾತನಾಡಿದರು.
[04/01, 10:28 PM] Cm Ps: *ಸರ್ಕಾರಿ ಸಂಸ್ಥೆ ಖಾಸಗಿಯವರೊಂದಿಗೆ ಪೈಪೋಟಿ ನಡೆಸುತ್ತಿರುವುದು ಹೆಮ್ಮೆಯ ವಿಷಯ – ಸಿಎಂ ಬೊಮ್ಮಾಯಿ*
ಬೆಂಗಳೂರು: ಒಂದು ಸರ್ಕಾರಿ ಸಂಸ್ಥೆ ವಾಣಿಜ್ಯೋದ್ಯಮ ವ್ಯವಹಾರ ಮಾಡುವುದು ದೊಡ್ಡ ಸವಾಲಿನ ಕೆಲಸ. ಸರ್ಕಾರಿ ಸಂಸ್ಥೆಗೆ ಎಷ್ಟೇ ನಿರ್ಬಂಧ ಇದ್ದರೂ ಅದನ್ನೆಲ್ಲಾ ಮೀರಿ ಖಾಸಗಿಯವರೊಂದಿಗೆ ಪೈಪೋಟಿ ನಡೆಸಿ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅವರು ಇಂದು ಎಂಸಿಎ (ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್) ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಗೆ 50 ವರ್ಷ ಆಗೋದು ಹೆಚ್ಚಲ್ಲ. ಆದ್ರೆ ಒಂದು ಸಂಸ್ಥೆಗೆ 50 ವರ್ಷ ಆಗೊದು ಮಹತ್ವದ ಘಟ್ಟ. ಕಳೆದ 50 ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ರಾಜ್ಯದಲ್ಲೂ ಬೇರೆ ಬೇರೆ ಕ್ಷೇತ್ರದಲ್ಲಿ ಬದಲಾವಣೆಗಳನ್ನು ನೋಡಿದ್ದೀವಿ. ಇದರ ನಡುವೆಯೂ ನಿಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬೆಳೆದಿರುವುದು ದೊಡ್ಡ ಸಾಧನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
1990 ರಲ್ಲಿ ದೇಶದಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರದ ನಂತರ ಎಲ್ಲವು ಬದಲಾಯಿತು. ಸರ್ಕಾರದ ಕಾರ್ಯ ಸ್ವರೂಪ, ವಿಧಾನಗಳೂ ಬದಲಾದವು. ಸರ್ಕಾರಿ ಕ್ಷೇತ್ರದಲ್ಲೂ ಖಾಸಗೀ ಅವರ ಪ್ರಮಾಣ ಹೆಚ್ಚಾಗುತ್ತಿದೆ. ವ್ಯವಸ್ಥೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದಾಗ ಖಾಸಗಿಯವರ ಮೇಲೆ ವಿಶ್ವಾಸ ಹೆಚ್ಚುತ್ತದೆ. ಒಂದು ಸಂಸ್ಥೆ ಸರಿಯಾಗಿ ಕೆಲಸ ಮಾಡಿದರೆ ಸರ್ಕಾರಕ್ಕೂ ಅನುಕೂಲವಾಗಲಿದೆ. ಎಂಸಿಎ ಯಶಸ್ವಿಯಾದರೆ ಸರ್ಕಾರಕ್ಕೂ ಅನುಕೂಲವಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ನಿಮ್ಮ ಸೃಜನಶೀಲತೆ ಹೆಚ್ಚಿಸಿಕೊಳ್ಳಬೇಕು*
ತಾಂತ್ರಿಕತೆ ಬೆಳೆದಿದೆ. ಡಿಜಿಟಲ್ ಮಾರ್ಕೆಟಿಂಗ್ ಬಂದಿದೆ. ಮಾರ್ಕೆಟಿಂಗ್ ವ್ಯವಸ್ಥೆ ಬದಲಾಗಿದೆ. ಸಾಕಷ್ಟು ಸ್ಪರ್ಧೆ ಇದೆ. ಇದರ ನಡುವೆ ಎಂಸಿಎ ಎದ್ದು ನಿಲ್ಲಬೇಕು. ಇದಕ್ಕೆ ನಿಮ್ಮ ಸೃಜನಶೀಲತೆ ಹೆಚ್ಚಿಸಿಕೊಳ್ಳಬೇಕು. ನನಗೆ ಎಂಸಿಎ ಜೊತೆ ಸಾಕಷ್ಟು ಸಂಬಂಧ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ನೀರಾವರಿ ಸಚಿವನಾಗಿ, ಗೃಹ ಸಚಿವನಾಗಿ ಕಾನೂನು ಸಚಿವನಾಗಿ ಎಂಸಿಎ ಮೂಲಕ ಸಾಕಷ್ಟು ಕ್ರಿಯೆಟಿವ್ ಆಡ್ ಗಳನ್ನು ಮಾಡಿಸಿದ್ದೇವೆ. ನಿಮ್ಮಿಂದ ಉತ್ತಮ ಗುಣಮಟ್ಟದ ಸೃಜನಶೀಲತೆ ಬಯಸುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಸಿಂಹಾವಲೋಕನ ಹಾಗೂ ಆತ್ಮಾವಲೋಕನ ಮಾಡಿಕೊಳ್ಳಿ*
ವಿಷಯಗಳನ್ನು ಅರ್ಥಪೂರ್ಣವಾಗಿ ಸಂಕ್ಷಿಪ್ತವಾಗಿ ಹೇಳುವಂತಹ ಕಲೆ ಸಿದ್ದಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ವ್ಯವಹಾರ ನಿಮ್ಮಿಂದ ಆಗಬೇಕೆಂದು ಸರ್ಕಾರ ಬಯಸುತ್ತದೆ. ಯಾವುದೇ ಕಾರ್ಯಕ್ರಮದ ಬಗ್ಗೆ ಜನರ ಅಭಿಪ್ರಾಯ ಹೇಗಿದೆ. ಅದನ್ನು ಸೃಜನಶೀಲವಾಗಿ ಯಾವ ರೀತಿ ಜನರಿಗೆ ಮುಟ್ಟಿಸಬೇಕು ಅನ್ನುವುದನ್ನು ತಿಳಿಯುವ ಕೆಲಸ ಮಾಡಬೇಕು. ಐವತ್ತು ವರ್ಷದದಲ್ಲಿ ಎರಡು ಕೆಲಸ ಆಗಬೇಕು. ಸಿಂಹಾವಲೋಕನ ಹಾಗೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇನ್ನೂ ಏನು ಮಾಡಬೇಕು ಎನ್ನುವ ಬಗ್ಗೆ ಚಿಂತನೆ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು
ಕಾರ್ಯಕ್ರಮದಲ್ಲಿ ಮಾಜೀ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವರುಗಳಾದ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್, ಎಂಸಿಎ ಅಧ್ಯಕ್ಷರಾದ ಕರಿಗೌಡರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
[04/01, 10:43 PM] Cm Ps: *ಯಾವ ದೇಶಕ್ಕೆ ಸಂಸ್ಕೃತಿ ಇದೆಯೋ ಆ ದೇಶಕ್ಕೆ ಭವಿಷ್ಯ ಇದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
*ಸ್ವದೇಶಿ ಮೇಳದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ*
ಬೆಂಗಳೂರು: ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರದೀಸಿ ನಾವು ನಮ್ಮ ಸಂಸ್ಕೃತಿಯನ್ನು ಮತೆಯುತ್ತಿದ್ದೇವೆ. ಯಾವ ದೇಶಕ್ಕೆ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಇಂದು ದಾಸರಹಳ್ಳಿಯ ಎಂಇಐ ಲೇಔಟ್‍ನ ಆಟದ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಆಯೋಜಿಸಲಾಗಿದ್ದ ಸ್ವದೇಶಿ ಮೇಳದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾವೆಲ್ಲರೂ ಅಭಿಮಾನ ಪಡುವ ಸಂಸ್ಥೆ ಸ್ವದೇಶಿ ಜಾಗರಣ ಮಂಚ್. ಜಗತ್ತಿನಲ್ಲಿ, ದೇಶದಲ್ಲಿ ಏನೇ ನಡೆದರೂ, ಅವರು ಸ್ವದೇಶಿ ಮಂತ್ರ ಜಪಿಸುತ್ತಾರೆ. ಕಳೆದ ಬಾರಿ ಜಯನಗರದಲ್ಲಿ ಈ ಮೇಳ ಮಾಡಿದ್ದರು. ಈ ಬಾರಿ ದಾಸರಹಳ್ಳಿಯಲ್ಲಿ ಮಾಡಲಾಗುತ್ತಿದೆ. ಜನರಿಗೆ ಸ್ವದೇಶಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಾಗರಿಕತೆ ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಭಾರತದಲ್ಲಿಯೂ ನಾಗರಿಕತೆ ಬೆಳೆಯುತ್ತಿದೆ. ಆದರೆ, ನಾಗರಿಕತೆ ಮತ್ತು ಸಾಂಸ್ಕೃತಿಕತೆಯ ಬಗ್ಗೆ ವ್ಯತ್ಯಾಸವಿದೆ. ಅದು ಬಹಳ ಜನರಿಗೆ ಗೊತ್ತಿಲ್ಲ. ಈಗ ದೊಡ್ಡ ಮನೆಗಳು, ಕಾರುಗಳು, ವಿಮಾನ ನಿಲ್ದಾಣಗಳು, ವಿದೇಶಿ ಕಾರುಗಳು ಬರುತ್ತಿವೆ. ವಿಮಾನ, ಹೆಲಿಕ್ಯಾಪ್ಟರ್ ಎಲ್ಲವೂ ಬಂದಿವೆ. ನಮ್ಮ ಬಳಿ ಏನಿದೆಯೋ ಅದು ನಾಗರಿಕತೆ. ನಾವೇನಾಗಿದ್ದೇವೆ ಅನ್ನುವುದು ಸಂಸ್ಕೃತಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ವಿದೇಶಿ ವ್ಯಾಮೋಹದಲ್ಲಿ ವಿದೇಶಿ ವಸ್ತುಗಳನ್ನು ಖರೀದಿಸಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ನಮ್ಮ ಹಿರಿಯರು ಬೀಸುವ ಕಲ್ಲು ಬೀಸುತ್ತ ತಮ್ಮ ತವರುಮನೆ ನೆನೆಯುತ್ತ ಹಾಡು ಹೇಳುತ್ತಿದ್ದರು. ಹಾಡು ಕೇಳಿದರೆ ಕಣ್ಣಲ್ಲಿ ನೀರು ಬರುತ್ತಿತ್ತು. ಒಣಕೆ ಇತ್ತು, ಅದು ಹೋಯಿತು. ಎತ್ತುಗಳು ಇದ್ದವು. ರೈತ ಅವುಗಳನ್ನು ಹೂಡುತ್ತ ಹಾಡುಗಳನ್ನು ಹೇಳುತ್ತಿದ್ದ. ಯಾವ ದೇಶಕ್ಕೆ ಅಂತಹ ಸಂಸ್ಕೃತಿ ಇರುತ್ತದೆಯೋ ಆ ದೇಶಕ್ಕೆ ಭವಿಷ್ಯವಿದೆ. ಆಧುನಿಕ ಕಾಲದಲ್ಲಿ ನಮ್ಮ ದೇಶದ ವಸ್ತುಗಳನ್ನು ಉತ್ಪಾದನೆ ಮಾಡಿ, ಜನರಿಗೆ ತಲುಪಿಸುವ ಕೆಲಸವನ್ನು ಸ್ವದೇಶಿ ಜಾಗರಣ ಮಂಚ್ ಮಾಡುತ್ತಿದೆ. ಅವರಿಗೆ ಸಿಎಂ ಬೊಮ್ಮಾಯಿ ಅಭಿನಂದನೆ ತಿಳಿಸಿದರು.
1990 ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಬಂದ ಮೇಲೆ ನಾವು ಅಂತಃಕರಣ ಮರೆತಿದ್ದೇವೆ. ಸ್ವದೇಶಿ ಜಾಗರಣ ಮಂಚ್ ಅಂತಃಕರಣವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ನಾವು ಸುಮಾರು 70-80 ವರ್ಷಗಳಿಂದ ಬಳಸಲಾಗುತ್ತಿರುವ ಟೂತ್ ಪೇಸ್ಟ್ ಕೂಡ ವಿದೇಶದ್ದು. ಈಗ ಪತಂಜಲಿ ಬರುತ್ತಿದ್ದು, ಈ ಸಮಯದಲ್ಲಿ ಯಾವುದು ಅಸಾಧ್ಯವಲ್ಲ ಎಂದರು.
*ಪ್ರಧಾನಿ ಮೋದಿಯವರ ಶ್ರಮದಿಂದ ಸ್ವದೇಶಿ ಉತ್ಪಾದನೆ ಹೆಚ್ಚಳ*
ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದ ಸ್ವದೇಶಿ ಜಾಗೃತಿ ಉತ್ಪಾದನೆ ಹೆಚ್ಚುತ್ತಿದೆ. ಯುನಿಲಿವರ್ ಕಂಪನಿಗೆ ನಿರ್ಮಾಪೌಡರ್ ಕೌಂಟರ್ ಆಗಿ ಬೆಳೆಯಿತು. ಅತಿ ಹೆಚ್ಚು ಗಾರ್ಮೆಂಟ್ ಉತ್ಪನ್ನವನ್ನು ಚೀನಾಗಿಂತ ಹೆಚ್ಚು ರಪ್ತು ಮಾಡುತ್ತಿರುವುದು ಭಾರತ. ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ಮೋದಿಯವರು ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯ ಮಾಡುವ ಯೋಜನೆ ಜಾರಿಗೆ ತಂದಿದ್ದಾರೆ. ಒಂದು ವರ್ಷದಲ್ಲಿ ಒಂದೂವರೆ ಲಕ್ಷ ಜನರಿಗೆ ಸೌಲಭ್ಯ ನೀಡಲಾಗಿದೆ ಎಂದರು.
*ಭಾರತದಲ್ಲಿ ಕೊರೋನಾ ಲಸಿಕೆ ಉತ್ಪಾದನೆ*
ಮಹಾಮಾರಿ ಕೊರೋನಾಗೆ ಭಾರತದಲ್ಲಿಯೇ ಲಸಿಕೆ ಉತ್ಪಾದನೆ ಮಾಡಲಾಯಿತು. ದೇಶ-ವಿದೇಶಗಳಿಗೆ ಕೊರೋನಾ ಲಸಿಕೆ ವಿತರಣೆ ಮಾಡಲಾಯಿತು. ನಮ್ಮ ದೇಶದ ಜನರಿಗೆ ಉಚಿತ ಲಸಿಕೆ ನೀಡುವುದಲ್ಲದೆ, ಬೂಸ್ಟರ್ ಡೋಸ್ ನೀಡಲಾಗಿದೆ ಎಂದರು.
*ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿ*
ಜನರು ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚು ಮಾಡಬೇಕು. ಕೇವಲ ಮೇಳದಲ್ಲಿ ಖರೀದಿ ಮಾಡುವುದಲ್ಲದೇ, ದಿನನಿತ್ಯ ಬಳಕೆ ಮಾಡಬೇಕು. ಮಹಿಳೆಯರಿಗೆ ಸ್ತ್ರೀ ಶಕ್ತಿ ಯೋಜನೆ, ಯುವಕರಿಗೆ ಸ್ವಾಮಿ ವಿವೇಕಾನಂದ ಯೋಜನೆ ಮೂಲಕ ಐದು ಲಕ್ಷದ ವರೆಗೆ ಸಾಲ ನೀಡಲಾಗುತ್ತಿದೆ. ವೃತ್ತಿ ಆಧಾರಿತ ಕೆಲಸ ಮಾಡುವವರಿಗೆ ಕಾಯಕ ಯೋಜನೆ ಮೂಲಕ ಎಲ್ಲ ಸಮುದಾಯಗಳಿಗೆ ಸಹಾಯ ಮಾಡಲಾಗುತ್ತಿದೆ. ಮೊದಲು ದುಡ್ಡೆ ದೊಡ್ಡಪ್ಪ ಅಂತ ಇತ್ತು ಈಗ ದುಡಿಮೆಯೇ ದೊಡ್ಡಪ್ಪ. ನಮ್ಮ ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ಸ್ವದೇಶಿ ಉತ್ಪನ್ನಗಳ ನ್ನು ಬಳಕೆ ಮಾಡೋಣ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
Post a Comment