ಕಿಡಿ ಕಿಡಿ KPCC...

[12/01, 11:29 AM] Kpcc official: ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ @BJP4Karnataka ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ.

◆ಯುವಜನರ ಉದ್ಯೋಗ ಮಾರಟ
◆ಶಿಷ್ಯವೇತನ ನೀಡದೆ ಯುವಜನರ ಶಿಕ್ಷಣಕ್ಕೆ ದ್ರೋಹ
◆KPSC, KEA, KSP ಅಭ್ಯರ್ಥಿಗಳಿಗೆ ವಂಚನೆ

@narendramodi ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ.
[12/01, 11:56 AM] Kpcc official: ಯುವಕರಿಗೆ ಪಕೋಡಾ ಮಾರುವ ಸಲಹೆ ನೀಡಿದ @narendramodi ಅವರೇ,
ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸುಗಳ ಕಾರ್ಯಕ್ರಮ ಮಾಡುವುದಲ್ಲ.

ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,

ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ?
#ModiMouna
[12/01, 11:59 AM] Kpcc official: ಹುಬ್ಬಳ್ಳಿಯಲ್ಲೇ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿದೆ.

ಅವರದ್ದೇ ಕ್ಷೇತ್ರದಲ್ಲಿ ಅವರನ್ನೇ ಕಡೆಗಣಿಸುತ್ತಿರುವುದು ಇದು ಎರಡನೇ ಬಾರಿ.

BSY ವಿರುದ್ಧ ಕಟೀಲ್ + ಸಂತೋಷ್ ಜೋಡಿಯಾದರೆ,
ಶೆಟ್ಟರ್ ವಿರುದ್ಧ ಬೊಮ್ಮಾಯಿ + ಜೋಶಿ ಜೋಡಿಯಾಗಿದ್ದಾರೆ!
#BJPvsBJP
[12/01, 3:25 PM] Kpcc official: ಮಹದಾಯಿ ಯೋಜನೆ ವಿರೋಧಿಸಿ, DPR ಒಪ್ಪಿಗೆಯನ್ನು ರದ್ದುಪಡಿಸುವಂತೆ
ಗೋವಾ ಸಚಿವರ ನಿಯೋಗ ಮಾಡಿದ ಮನವಿಗೆ @AmitShah ಸಕಾರಾತ್ಮಕವಾಗಿ ಸ್ಪಂದಿಸಿದ್ದಾರಂತೆ.

"ಸಕಾರಾತ್ಮಕ" ಅಂದರೆ ಏನು @BSBommai ಅವರೇ? ಕರ್ನಾಟಕಕ್ಕೆ ಅನ್ಯಾಯ ಮಾಡುವುದೇ?

ಗೋವಾದ ಬಿಜೆಪಿ ಸರ್ಕಾರದ ವಿರೋಧಕ್ಕೆ @narendramodi ನಿಲುವು ಏನು? ಮೌನವೇಕೆ?
#ModiMouna
[12/01, 5:06 PM] Kpcc official: ಮಾನ್ಯ @narendramodi ಅವರೇ,

ಸ್ಯಾಂಟ್ರೋ ರವಿಯನ್ನು @BJP4Karnataka ಸರ್ಕಾರ "ಚೀಫ್ ಬ್ರೋಕರ್" ಆಗಿ ನೇಮಿಸಿಕೊಂಡಿದೆ!
ಎಲ್ಲಾ ವರ್ಗಾವಣೆಗಳಿಗೆ ಆತನೇ ಚೀಫ್ ಬ್ರೋಕರ್.

ನಿಮ್ಮದೇ ಪಕ್ಷದ ಕಾರ್ಯಕರ್ತನ "ಸ್ಯಾಂಟ್ರೋ ಸಾಧನೆ" ಬಗ್ಗೆ, ನಿಮ್ಮ ಸರ್ಕಾರದ ಸಹಬಾಗಿತ್ವದ ಬಗ್ಗೆ @BSBommai ಅವರಲ್ಲಿ ಮಾಹಿತಿ ಪಡೆದು ಮಾತಾಡುವಿರಾ?
#ModiMouna
[12/01, 5:06 PM] Kpcc official: ವಿಧಾನಸೌಧದಲ್ಲಿ ₹10 ಲಕ್ಷ ಹಣದೊಂದಿಗೆ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದರು.

ವಿಧಾನ ಸೌಧ ಈಗ ವ್ಯಾಪಾರ ಸೌಧವಾಗಿದೆ, ಸರ್ಕಾರಿ ಹುದ್ದೆಗಳನ್ನು ರೇಟ್ ಕಾರ್ಡ್‌ನೊಂದಿಗೆ ಮಾರಾಟಕ್ಕಿಡಲಾಗಿದೆ,

@narendramodi ಅವರೇ, ಯುವಜನರ ನಿರುದ್ಯೋಗ, @BJP4Karnataka ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದು ಪದವಾದರೂ ಮಾತಾಡುವಿರಾ?
#ModiMouna
[12/01, 5:06 PM] Kpcc official: '@narendramodi ಅವರೇ,
ದಾರವಾಡದಲ್ಲಿರುವ ಕೈಮಗ್ಗ ಧ್ವಜ ತಯಾರಕರ ಬದುಕಿಗೆ ಮಾರಕವಾಗುವಂತೆ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿದ್ದೀರಿ,

ಪರಂಪರಾಗತವಾಗಿ ಧ್ವಜ ತಯಾರಿಸುತ್ತಿದ್ದವರ ಬದುಕಿನ ಸಂಕಷ್ಟಗಳನ್ನು ಆಲಿಸುವಿರಾ? ಅವರ ಬಗ್ಗೆ ಮಾತಾಡದೆ ಮೌನವಹಿಸಿರುವುದೇಕೆ?
#ModiMouna
[12/01, 5:06 PM] Kpcc official: 40% ಸರ್ಕಾರದ ಕಮಿಷನ್ ಕಿರುಕುಳಕ್ಕೆ ಸಂತೋಷ್ ಪಾಟೀಲ್ ಬರೆದ ಪತ್ರಕ್ಕೆ ತಮ್ಮ ಸ್ಪಂದನೆ ಶೂನ್ಯ..

ತಾವು ಭ್ರಷ್ಟಾಚಾರಕ್ಕೆ ಮೌನದ ಮೂಲಕ ಬೆಂಬಲಿಸಿದ ಕಾರಣ ಮತ್ತೊಬ್ಬ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಜೆಪಿ ಭ್ರಷ್ಟಾಚಾರಕ್ಕೆ ಬಲಿಯಾದ ಗುತ್ತಿಗೆದಾರರಾದ, ಸಂತೋಷ್, ಪ್ರಸಾದ್ ಕುಟುಂಬಗಳಿಗೆ ಸಾಂತ್ವಾನ ಹೇಳುವಿರಾ?
#ModiMouna
[12/01, 6:12 PM] Kpcc official: *ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕಿಯರ ಮಾತುಗಳು*

*ಮಾಜಿ ಸಚಿವೆ ಉಮಾಶ್ರೀ:*

ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯು ನಾ ನಾಯಕಿ ಸಮಾವೇಶ ಮಾಡಲು ಅವಕಾಶ ನೀಡಿದೆ. ಪಕ್ಷದ ಅಧ್ಯಕ್ಷರಾದ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿದಂತೆ ವರಿಷ್ಠರ ಸಹಕಾರ ಸಿಕ್ಕಿದೆ. ಜನವರಿ 16ರಂದು ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶವನ್ನು ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಮಹಿಳೆಯರು, ಬೆಂಗಳೂರಿನ ಸುತ್ತ ಮುತ್ತಲ ಜಿಲ್ಲೆಗಳಿಂದ ಮಹಿಳಾ ನಾಯಕಿಯರು, ಶಾಸಕಿಯರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು, ಪದಾಧಿಕಾರಿಗಳು ಸೇರಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ.

ಅಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ವಿಶೇಷವಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ಅವರಿಗೆ ಪಕ್ಷದ ಎಲ್ಲ ನಾಯಕಿಯರು ಸೇರಿ ಮನವಿ ಮಾಡುತ್ತೇವೆ.

ಈಗಾಗಲೇ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿ, ಒಂದು ಪ್ರಯತ್ನ ಮಾಡಲಾಗಿದೆ. ಇದುವೆರಗೂ ಪಕ್ಷದಲ್ಲಿ 109 ಮಹಿಳೆಯರು ಪಕ್ಷದ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಅತಿ ಹೆಚ್ಚು ಮಹಿಳಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚಿನ ಒಲವು ತೋರಿಸಬೇಕು ಎಂದು ಕೇಳಿಕೊಳ್ಳುತ್ತೇವೆ.

ನಾ ನಾಯಕಿ ಕಾರ್ಯಕ್ರಮ ಯಶಸ್ಸಿಗಾಗಿ ಎಲ್ಲ ಸ್ಥರದ ಮಹಿಳೆಯರು ಪ್ರಯತ್ನಿಸುತ್ತಿದ್ದಾರೆ. ನಾವು ರಾಜ್ಯದ ಎಲ್ಲ ಪಂಚಾಯ್ತಿ, ವಾರ್ಡ್ ಮಟ್ಟದ ನಾಯಕಿಯರು ಈ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರು ಆಗಮಿಸಲಿದ್ದಾರೆ.

*ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್:*

ಇದೇ 16ರಂದು ಪ್ರಿಯಾಂಕಾ ಗಾಂಧಿ ಅವರನ್ನು ಬರ ಮಾಡಿಕೊಳ್ಳಲು ನಾವೆಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ. ಇಂದು ಪ್ರಿಯಾಂಕಾ ಗಾಂಧಿ ಅವರ ಜನ್ಮದಿನವಾಗಿದೆ. ಈ ಸಂದರ್ಭದಲ್ಲಿ ನಮ್ಮೆಲ್ಲರ ಪರವಾಗಿ ನಮ್ಮ ನೆಚ್ಚಿನ ನಾಯಕಿಗೆ ಹುಟ್ಟು ಹಬ್ಬದ ಶುಭಾಷಯಗಳು. 

ಮುಂಬರುವ ಚುನಾವಣೆಯಲ್ಲಿ ನಾವು ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಬಸ್ ಯಾತ್ರೆ ಆರಂಭಿಸಿದ್ದಾರೆ. ನಿನ್ನೆ ಯಾತ್ರೆ ಮೊದಲ ದಿನ ಪಕ್ಷ ಗೃಹಜ್ಯೋತಿ ಎಂಬ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಯೋಜನೆ ಘೋಷಿಸಲಾಗಿದೆ. 

ಈ ಬಾರಿ ಪಕ್ಷದ ವತಿಯಿಂದ ಮಹಿಳೆಯರಿಗಾಗಿ ಪ್ರತ್ಯೆಕ ಪ್ರಣಾಳಿಕೆ ನೀಡಲು ಮಹಿಳೆಯರಿಂದಲೇ ಸಲಹೆಗಳನ್ನು ಪಡೆಯಲು ಆಹ್ವಾನ ನೀಡಲಾಗಿದೆ. ಎಲ್ಲ ವರ್ಗದ ಜನರನ್ನು ಮುಟ್ಟಲು ಈ ಪ್ರಯತ್ನ ಮಾಡಲಾಗಿದೆ. ಮಹಿಳಾ ಕಾಂಗ್ರೆಸ್ ಜಿಲ್ಲಾ, ಬ್ಲಾಕ್, ಬೂತ್ ಮಟ್ಟದ ಅಧ್ಯಕ್ಷರು ಈ ವಿಚಾರವನ್ನು ತಳಮಟ್ಟದವರೆಗೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಜೂಮ್ ಮೂಲಕ 3 ಬಾರಿ ಮಹಿಳಾ ಪದಾಧಿಕಾರಿಗಳ ಸಭೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚು ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ. ಪ್ರತಿ ವಾರ್ಡ್ ಹಾಗೂ ಪಂಚಾಯ್ತಿ ಮಟ್ಟದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸಲು ತೀರ್ಮಾನಿಸಲಾಗಿದೆ.

Post a Comment

Previous Post Next Post