[23/01, 12:59 PM] Kpcc official: ಬೆಂಗಳೂರಿನ ಟ್ರಿನಿಟಿ ವೃತದಲ್ಲಿ ಸೋಮವಾರ ನಡೆದ *"ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ"* ಪ್ರದರ್ಶನದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಚಿವ ದಿನೇಶ್ ಗುಂಡೂರಾವ್, ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಮತ್ತಿತರರು ಭಾಗವಹಿಸಿದ್ದರು.
[23/01, 2:14 PM] Kpcc official: *ಭ್ರಷ್ಟಾಚಾರ ತೊಲಗಿಸಿ, ಬೆಂಗಳೂರು ಉಳಿಸಿ, ಪ್ರತಿಭಟನೆ ಸಂದರ್ಭ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ*
ಭ್ರಷ್ಟಾಚಾರ ತೊಲಗಿಸಿ ಬೆಂಗಳೂರು ಉಳಿಸಿ ಎಂಬ ಘೋಷಣೆ ಮೂಲಕ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ 300ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಮ್ಮ ಕಾರ್ಯಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಕೋಲಾರದಲ್ಲಿ ಇಂದು ಪ್ರಜಾಧ್ವನಿ ಯಾತ್ರೆ ಸಮಾವೇಶ ನಡೆಯಲಿದ್ದು, ಮಾರ್ಗ ಮಧ್ಯದಲ್ಲಿ ಟ್ರಿನಿಟಿ ವೃತ್ತದ ಬಳಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಕ್ಷದ ನಾಯಕರೆಲ್ಲರೂ ಪಾಲ್ಗೊಂಡಿದ್ದೇವೆ.
ಬೆಂಗಳೂರಿನ ರಸ್ತೆಗಳು ಗುಂಡಿಮಯವಾಗಿದ್ದು, ಬೆಂಗಳೂರು ರಸ್ತೆ ಗುಂಡಿಗಳ ರಾಜಧಾನಿಯಾಗಿದೆ. ಕಸದ ಸಮಸ್ಯೆ ಹೆಚ್ಚಾಗಿದೆ. 40% ಕಮಿಷನ್ ಭ್ರಷ್ಟಾಚಾರದಿಂದ ನಗರದ ಕಾಮಗಾರಿಗಳು ಕಳಪೆಯಾಗಿವೆ. ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅನೇಕ ಸಾವುಗಳು ಸಂಭವಿಸಿದ್ದು, ಬಿಜೆಪಿ ಸರ್ಕಾರ ಈ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ.
ಇದಕ್ಕೆಲ್ಲ ಉತ್ತರ ನೀಡುವವರು ಯಾರು? ಸರ್ಕಾರದ ದುರಾಡಳಿತದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕೇಳಲಾದ ಪ್ರಶ್ನೆಗಳಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬಿಜೆಪಿ ಸರ್ಕಾರಕ್ಕೆ ಬೆಂಗಳೂರು ನಗರ ಹಾಗೂ ರಾಜ್ಯದ ಜನರಿಗೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಜನರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ. ನಾವು ಜನರ ಧ್ವನಿಯಾಗಿ ಕೆಲಸ ಮಾಡಲು ಪ್ರಜಾಧ್ವನಿ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ.
ಕೆಲದಿನಗಳ ಹಿಂದೆ ನಾನು ಬೀದಿ ಬದಿ ವ್ಯಾಪಾರಿಗಳ ಸಮಾವೇಶದಲ್ಲಿ ಭಾಗವಹಿಸಿದ್ದೆ. ಅವರು ದಿನನಿತ್ಯ ವ್ಯಾಪಾರ ಮಾಡಲು ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಹೆಚ್ಚಿನ ಕಿರುಕುಳ ಎದುರಿಸುತ್ತಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಬೀದಿ ವ್ಯಾಪಾರಿಗಳಿಂದಲೇ ತಿಂಗಳಿಗೆ ಒಂದು ಕೋಟಿಯಷ್ಟು ಹಣ ಸಂಗ್ರಹಿಸಲಾಗುತ್ತಿದೆ. ನಿತ್ಯ ಪ್ರತಿ ವ್ಯಾಪಾರಿಯಿಂದ ಇನ್ನೂರು, ಮುನ್ನೂರು ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತಿದೆ. ಈ ಮಟ್ಟದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ.
ಬಿಜೆಪಿ ಸರ್ಕಾರ ಬೀದಿ ವ್ಯಾಪಾರಿಗಳು, ಕಸ ವಿಲೇವಾರಿ ಮಾಡುವರನ್ನು ಬಿಡದೆ ಸುಲಿಗೆ ಮಾಡುತ್ತಿದೆ. ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕೇರಿದ್ದು, ಜನರ ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿದೆ.
ಕಾಂಗ್ರೆಸ್ ಪಕ್ಷಕ್ಕೆ ಕೆಲ ಪ್ರಶ್ನೆ ಕೇಳಿ, ಇವುಗಳಿಗೆ ಉತ್ತರ ನೀಡಿದ ನಂತರ ಪ್ರತಿಭಟನೆ ಮಾಡುವಂತೆ ಬಿಜೆಪಿ ಆಗ್ರಹಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ʼಮುಖ್ಯಮಂತ್ರಿಗಳು ಯಾವುದೇ ಮಾಧ್ಯಮಗಳ ವೇದಿಕೆಯಲ್ಲಿ ಚರ್ಚೆಗೆ ಬರಲಿ, ನಾನು ಅವರೆಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ಸಿದ್ಧನಿದ್ದೇನೆ. ಎಲ್ಲ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಾವು ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇವೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುವ ಬದಲು ನೇರಾನೇರ ಚರ್ಚೆಗೆ ಬರಲಿ. ನಾವು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನೂರಕ್ಕೂ ಹೆಚ್ಚು ಪ್ರಶ್ನೆಗಳನ್ನು ದಿನನಿತ್ಯ ಕೇಳುತ್ತಿದ್ದೇವೆ. ಅದರಲ್ಲಿ ಒಂದು ಪ್ರಶ್ನೆಗೂ ಈ ಸರಕಾರ ಉತ್ತರಿಸಿಲ್ಲ. ಅವರು ಸಮಯ ಹಾಗೂ ವೇದಿಕೆ ನಿಗದಿಪಡಿಸಲಿ, ನಾನು ಚರ್ಚೆಗೆ ಬಂದು ಉತ್ತರ ನೀಡುತ್ತೇನೆʼ ಎಂದು ತಿಳಿಸಿದರು.
[23/01, 3:06 PM] Kpcc official: ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಂದ ಕೋಲಾರಕ್ಕೆ ಸೋಮವಾರ ತೆರಳುವ ಮಾರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅಭಿಮಾನಿಗಳಿಂದ ಆತ್ಮೀಯ ಸ್ವಾಗತ ದೊರೆತದ್ದು ಹೀಗೆ...
[23/01, 3:47 PM] Kpcc official: Today, Kolar depicts ‘CHANGE’,
CHANGE against BJP’s Corruption,
CHANGE against Job Scams,
CHANGE against Price Rise,
CHANGE against Hate Politics,
CHANGE against Wealth Disparity!
CHANGE IS HERE
CONGRESS IS HERE!
https://twitter.com/rssurjewala/status/1617458358155644929?s=46&t=AC_mDBo7t3Yp5uVAjfmH9Q
[23/01, 9:54 PM] Kpcc official: ಚಿಕ್ಕಬಳ್ಳಾಪುರದಲ್ಲಿ ಸೋಮವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ಹ್ಯಾರಿಸ್ ನಲಾಪಾಡ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ ಮತ್ತಿತರರು ಭಾಗವಹಿಸಿದ್ದರು.
[23/01, 9:54 PM] Kpcc official: *ಚಿಕ್ಕಬಳ್ಳಾಪುರ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಜನರ ನೋವು, ಸಂಕಟ ತಿಳಿದು, ಅವರ ಅಭಿಪ್ರಾಯ ಪಡೆದುಕೊಂಡು ಅವುಗಳಿಗೆ ಪರಿಹಾರ ನೀಡಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಿಂದ ಈ ಯಾತ್ರೆ ಆರಂಭಿಸಿದ್ದೇವೆ. ಇದುವರೆಗೂ ಸುಮಾರು 17 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು, ಎಲ್ಲಿ ಹೋದರೂ ಜನಸಾಗರ. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದ ಜನರಿಗೆ ಧ್ವನಿ ನೀಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷ ಈ ರಾಜ್ಯಕ್ಕೆ ಅತ್ಯುತ್ತಮ ಆಡಳಿತ ನೀಡಿದ ಪರಿಣಾಮ ವಿಶ್ವದ ನಾಯಕರು ಬೆಂಗಳೂರು ಹಾಗೂ ಕರ್ನಾಟಕದ ಮೂಲಕ ಭಾರತ ದೇಶವನ್ನು ನೋಡುತ್ತಿದ್ದರು. ಇಲ್ಲಿನ ಅಭಿವೃದ್ಧಿ ಗಮನಿಸಿ ನಮಗೆ ಗೌರವ ನೀಡುತ್ತಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಮಿಸಿದ್ದರು. ಆಗ ವಾಜಪೇಯಿ ಅವರು ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದುನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ಇಲ್ಲಿನ ಸಂಪತ್ತು, ಪರಿಶುದ್ಧ ಆಡಳಿತ ಕಾರಣ ಎಂದು ಹೇಳಿದ್ದರು.
ಆದರೆ ಇಂದು ಈ ರಾಜ್ಯಕ್ಕೆ ಏನಾಗಿದೆ? ನಮ್ಮ ರಾಜ್ಯ ಕಳಂಕಿತ ರಾಜ್ಯವಾಗಿದೆ. ಈ ಕಳಂಕ ತಂದುಕೊಟ್ಟವರು ಯಾರು? ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಸ್.ಎಂ ಕೃಷ್ಣ, ಧರಂ ಸಿಂಗ್ ಹಾಗೂ ಸಿದ್ದರಾಮಯ್ಯ ಅವರ ಕಾಲದಲ್ಲಿ ನಮ್ಮ ಪಕ್ಷ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿಕೊಂಡು ಬಂದಿತ್ತು. ಇದು ಕಾಂಗ್ರೆಸ್ ಇತಿಹಾಸ, ಶಕ್ತಿ. ಯಾವಾಗೆಲ್ಲ ಕಾಂಗ್ರೆಸ್ ಅಧಿಕಾರ ಮಾಡಿದೆಯೋ ಎಲ್ಲ ವರ್ಗದ ಜನರಿಗೆ ಸಹಾಯ ಮಾಡಿಕೊಂಡು ಬಂದಿದೆ. ವೀರಪ್ಪ ಮೋಯ್ಲಿ ಅವರ ಕಾಲದಲ್ಲಿ ಸಿಇಟಿ ಆರಂಭಿಸಿದೆವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಬೆಳಎಯಲು ಬುನಾದಿ ಹಾಕಲಾಯಿತು. ಇದರ ಮೇಲೆ ಎಶ್.ಎಂ ಕೃಷ್ಣ ಅವರ ಕಾಲದಲ್ಲಿ ಅನೇಕ ಕಾರ್ಯಕ್ರಮ ನೀಡಿ ಕರ್ನಾಟಕ ಹಾಗೂ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಯಿತು.
ಮೆಟ್ರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ತ್ರೀಶಕ್ತಿ ಸಂಘ, ಬಿಸಿಯೂಟ ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನಿಗೆ ಭೂಮಿ ನೀಡುತ್ತಾ ಬಂದಿದ್ದೇವೆ. ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಕಾರ್ಯಕ್ರಮ ರೂಪಿಸಲಾಯಿತು. ಬಂಗಾರಪ್ಪನವರ ಕಾಲದಲ್ಲಿ ಆಶ್ರಯ, ಆರೋಗ್ಯ, ಆರಾಧನಾ, ವಿಶ್ವ ಯೋಜನೆ ತಂದು ಹಳ್ಳಿಗಳ ಗುಡಿಗಳಿಗೆ ಗೌರವ ನೀಡಲು ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯ ಅವರ ಕಾಲದಲ್ಲಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು. ಅದರಲ್ಲಿ 159 ಭರವಸೆಗಳನ್ನು ಈಡೇರಿಸಲಾಗಿದೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯನವರು ಬಸವಣ್ಣನವರ ಜಯಂತಿ ದಿನದಂದು ಅಧಿಕಾರ ಸ್ವೀಕಾರ ಮಾಡಿ, ವಿಧಾನಸೌಧಕ್ಕೆ ಹೋದ ತಕ್ಷಣ ರಾಜ್ಯದ ಜನರ ಹಸಿವು ನೀಗಿಸಲು 5 ಕೆ.ಜಿ ಅಕ್ಕಿ ಉಚಿತ ನೀಡುವ ಯೋಜನೆ ಜಾರಿತಂದರು. ರಮೇಶ್ ಕುಮಾರ್ ಅವರು ನಮ್ಮ ಜಿಲ್ಲೆ ಸಿಲ್ಕ್ ಹಾಗೂ ಮಿಲ್ಕ್ ಉತ್ಪಾದನೆ ಇದ್ದು, ರೈತರಿಗೆ ಸಹಾಯ ಮಾಡಬೇಕು ಎಂದು ಕೇಳಿದರು. ಹೀಗಾಗಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡಿದರು.
ನಿಮ್ಮ ಭೂಮಿ, ಜಮೀನು ಅಂತರ್ಜಲ ಹೆಚ್ಚಿಸಿ ನೀರಾವರಿ ಮಾಡಲು ಕಾರ್ಯಕ್ರಮ ರೂಪಿಸಿದೆವು. ಕೋಲಾರದಲ್ಲಿ ನೀರಿಗಾಗಿ 1500 ಅಡಿಗಳವರೆಗೆ ಕೊರೆಯಬೇಕಿತ್ತು. ಹೀಗಾಗಿ ಕೆ.ಸಿ ವ್ಯಾಲಿ ಯೋಜನೆ ಜಾರಿ ಮಾಡಲಾಯಿತು. ಮಂಗಳೂರಿನಿಂದ ನೀರು ತರಲು ನಾವು ಮುಂದಾಗಿದ್ದು, ಅರ್ಧದಷ್ಟು ಮುಗಿದಿದೆ. ಇದನ್ನು ಕುಮಾರಸ್ವಾಮಿ ಅವರಾಗಲಿ, ಬಿಜೆಪಿಯವರಾಗಲಿ, ನಿಲ್ಲಿಸಲು ಸಾಧ್ಯವಿಲ್ಲ. ನಿಮ್ಮ ಬದುಕಿನಲ್ಲಿ ನಾವು ಬದಲಾವಣೆ ತರಬೇಕು.
ಬಿಜೆಪಿ ನಿಮ್ಮ ಆದಾಯ ಡಬಲ್ ಮಾಡುತ್ತೇವೆ ಎಂದರು. ನೀವು ಹಣ್ಮು ತರಕಾರಿ ಬೆಳೆಯುತ್ತಿದ್ದು, ರಸಗೊಬ್ಬರ ಬೆಲೆ ಹೆಚ್ಚಾಗಿದೆಯೇ ಹೊರತು, ಆದಾಯ ಡಬಲ್ ಆಯಿತಾ? ಆಪರೇಶನ್ ಕಮಲಕ್ಕೆ ಹೋದ ನಂತರ ಸುಧಾಕರ್ ನಿಮ್ಮ ಆದಾಯ ಹೆಚ್ಚಳ ಮಾಡಿದರಾ? 2 ಕೋಟಿ ಉದ್ಯೋಗ ನೀಡುತ್ತೇನೆ ಎಂದರು. ನಿಮಗೆ ಸಿಕ್ಕಿತಾ? ಕೊವಿಡ್ ಸಮಯದಲ್ಲಿ ನಾವು ನಿಮ್ಮ ಜಿಲ್ಲೆಯ ರೈತರ ಜಮೀನಿಗೆ ಬಂದು ನೋಡಿದೆವು. ಮಾರುಕಟ್ಟೆ ಇಲ್ಲದೆ ದ್ರಾಕ್ಷಿಯನ್ನು ಕೇವಲ 5 ರೂ.ಗೆ ತೆಗೆದುಕೊಳ್ಳಿ ಎಂದು ಹೇಳುವ ಪರಿಸ್ಥಿತಿ ಇತ್ತು. ಬೆಂಬಲ ಬೆಲೆ ಇರಲಿಲ್ಲ. ತರಕಾರಿಗಳನ್ನು 2-3 ರೂ.ಗೆ ನೀಡಲು ಮುಂದಾಗಿದ್ದರು. ನಮ್ಮ ಪಕ್ಷದ ನಾಯಕರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ರೈತರಿಗೆ ಬೆಂಬಲ ಬೆಲೆಯಲ್ಲಿ ಅವರ ಹಣ್ಣು ತರಕಾರಿ ಖರೀದಿ ಮಾಡಿ ಅವರಿಗೆ ನೆರವಾದೆವು. ಅವುಗಳನ್ನು ಬಡವರಿಗೆ ಉಚಿತವಾಗಿ ಹಂಚಿದ್ದೆವು.
ಕೋವಿಡ್ ಸಂದರ್ಭದಲ್ಲಿ ಇಡೀ ದೇಶ ತಲೆತಗ್ಗಿಸುವಂತೆ ಆಡಳಿತ ನಡೆಸಲಾಯಿತು. ಬೆಡ್ ಹಗರಣ ನಡೆದಿದೆ ಎಂದು ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಹೇಳಿದರು. ಇವರು ಹಾಕಿದ್ದ ಸಾವಿರಾರು ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಲ್ಲಿ ಒಬ್ಬರೂ ಹೋಗಿ ಮಲಗಲಿಲ್ಲ.ಆಸ್ಪತ್ರೆಗಳಲ್ಲಿ ಬೆಡ್ ಪಡೆಯಲು ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಂಪಣ್ಣ ಈ ಸರ್ಕಾರ 40% ಸರ್ಕಾರ ಎಂದರೆ, ಕೋವಿಡ್ ಸಲಕರಣೆ ಹಾಗೂ ಔಷಧಿ ಖರೀದಿ ವೇಳೆ 200-300% ರಷ್ಟು ಭ್ರಷ್ಟಾಚಾರ ನಡೆದಿದೆ. ಇದೆಲ್ಲವನ್ನು ನಾವು ಹೇಳಿದ್ದೆವಾ? ಕೇಂದ್ರ ಸರ್ಕಾರದ ವರದಿಗಳೇ ರಾಜ್ಯ ಸರ್ಕಾರ ಹಣ ದುರುಪಯೋಗ ಮಾಡಿರುವ ಬಗ್ಗೆ ವರದಿ ನೀಡಿದೆ. ಇಂದು ನಮ್ಮ ಮಂತ್ರಿಗಳು ಪತ್ರಿಕಾಗೋಷ್ಠಿ ಮಾಡಿ ಕಾಂಗ್ರೆಸ್ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದ್ದರೆ, ಅಣ್ಣಾ, ಆಗ ನೀನು ನಮ್ಮ ಬೆಡ್ ರೂಂ ನಲ್ಲೇ ಇದೆಯಲ್ಲವೇ? ಹಾಗಿದ್ದರೆ ನಿಮಗೂ ಭಾಗ ಇರಬೇಕಲ್ಲವೇ? ಸರ್ಕಾರದಲ್ಲಿ ನೀನು ಪ್ರತಿಯೊಂದಕ್ಕೂ ಭಾಗಿಯಾಗಿದ್ದಲ್ಲಣ್ಣಾ, ಈ ವಿಚಾರವಾಗಿ ಚರ್ಚೆ ಬೇಡ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಸುಧಾಕರ್ ನಿನಗೆ ಮಾನವೀಯತೆ ಇರಬೇಕಿತ್ತು. ನೀನು ಒಬ್ಬರ ಮನೆಗೂ ಹೋಗಿ ಸಾಂತ್ವನ ಹೇಳಲಿಲ್ಲ. ಕೇಂದ್ರದ ಮಂತ್ರಿ ದೆಹಲಿಯಲ್ಲಿ ಕೋವಿಡ್ ನಿಂದ ಸತ್ತರು. ಅವರ ಹೆಣವನ್ನು ಅವರ ಊರಿಗೆ ತಂದು ಕೊಡಲು ಆಗಲಿಲ್ಲ. 36 ಮಂದಿ ಮೃತರಿಗೆ ಪರಿಹಾರ ನೀಡಲಾಗಲಿಲ್ಲ. ಕೋವಿಡ್ ಮೃತರಿಗೆ ಪ್ರಮಾಣಪತ್ರ ನೀಡಲು ಸಾಧ್ಯವಾಗುತ್ತಿಲ್ಲ. ನಿಮಗೆ ಮಾನವೀಯತೆ ಇದೆಯಾ? ನಾನು ಸಿದ್ದರಾಮಯ್ಯ ಅವರು ಹೋಗಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಪಕ್ಷದ ವತಿಯಿಂದ ಪ್ರತಿ ಮನೆಗೆ ತಲಾ 1 ಲಕ್ಷ ಆರ್ಥಿಕ ನೆರವು ನೀಡಿದ್ದೇವೆ. ನಾವು ಮಾನವೀಯತೆ ಮೆರೆದಿದ್ದೇವೆ.
ಕೋವಿಡ್ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗುವಾಗ ಬಸ್ ಟಿಕೆಟ್ ದರವನ್ನು ಮೂರು ಪಟ್ಟು ಹೆಚ್ಚಿಸಿ ಬಡ ಕಾರ್ಮಿಕರಿಂದ ಸುಲಿಗೆ ಮಾಡಲು ಸರ್ಕಾರ ಮುಂದಾಗಿತ್ತು. ಆಗ ನಾನು ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿ, ಪಕ್ಷದ ವತಿಯಿಂದ 1 ಕೋಟಿ ಚೆಕ್ ನೀಡಲು ಮುಂದಾಗಿ, ಇವರು ಬರಿ ಕಾರ್ಮಿಕರಲ್ಲ, ದೇಶದ ನಿರ್ಮಾತೃಗಳು ಅವರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಿ ಎಂದು ಹೋರಾಟ ಮಾಡಿದೆವು. ಪರಿಣಾಮ ಸರ್ಕಾರ ಒಂದು ವಾರ ಉಚಿತ ಸಾರಿಗೆ ನೀಡಿತು. ನಂತರ ಇಡೀ ದೇಶದಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಯಿತು.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಇಕಾರಕ್ಕೆ ಬಂದರೆ, ಎಲ್ಲ ವರ್ಗದ ಜನ ಅಧಿಕಾರಕ್ಕೆ ಬಂದಂತೆ. ಬಿಜೆಪಿ ಸರ್ಕಾರದ ಮೂರುವರೆ ವರ್ಷಗಳ ಆಡಳಿತದಲ್ಲಿ ಮಾಡಿರುವ ಪಾಪದ ಪುರಾಣವನ್ನು ನಾವು ಬಿಡುಗಡೆ ಮಾಡಿದ್ದೇವೆ. ನೇಮಕಾತಿ, ಗುತ್ತಿಗೆದಾರರು, ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದೇವೆ. ಸರ್ಕಾರದ ಪ್ರತಿಯೊಂದು ಹುದ್ದೆಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಬಿಜೆಪಿ ಶಾಸಕರು ಹೇಳಿರುವಂತೆ ಮುಖ್ಯಮಂತ್ರಿ ಹುದ್ದೆ, ಮಂತ್ರಿ ಹುದ್ದೆಗೂ ಹಣ ನಿಗದಿ ಮಾಡಲಾಗಿದೆ.
ಹರಿಪ್ರಸಾದ್ ಅರ ಮಾತಿಗೆಬಿಜೆಪಿ ನಾಯಕನೊಬ್ಬ ಮಾನನಷ್ಟ ಮೊಕದ್ದಮೆ ಹಾಕಿದ್ದಾನಂತೆ. ಕಾಂಗ್ರೆಸ್ ನಾಯಕರು, ನಿಮ್ಮ ಕೇಸು, ನೋಟೀಸ್ ಗಳಿಗೆ ಹೆದರುವುದಿಲ್ಲ.ಈ ದೇಶದ ಸ್ವಾತಂತ್ರ್ಯಕ್ಕೆನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿರುವ ಇತಿಹಾಸವಿದೆ. ನಿಮಗೆ ಹದರುವ ಅಗತ್ಯವಿಲ್ಲ.
ನಿಮ್ಮ ಬದುಕು ಹಸನ ಮಾಡಲು ನಾವು ಚಿಂತನೆ ನಡೆಸುತ್ತೇವೆ. ಬಿಜೆಪಿ ಕೇವಲ ಭಾವನೆ ಬಗ್ಗೆ ಗಮನಹರಿಸುತ್ತದೆ. ಅವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡುತ್ತಾರೆ. ನಾವು ಹಿಂದೂಗಳಲ್ಲವೇ? ನಮಗೆ ದೇವರಿಲ್ಲವೇ? ನಮ್ಮಪ್ಪ ನನಗೆ ಶಿವಕುಮಾರ ಎಂದು, ಸಿದ್ದರಾಮಯ್ಯ ಅವರ ತಂದೆ ತಾಯಿ ಅವರಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟಿಲ್ಲವೇ? ಇವು ಹಿಂದೂ ಹೆಸರುಗಳಿಲ್ಲವೇ? ನಾವು ಪೂಜೆ ಪುನಸ್ಕಾರ ಮಾಡುವುದಿಲ್ಲವೇ? ಬಿಜೆಪಿ ಹಿಂದೂಗಳು ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಒಕ್ಕಲಿಗರು, ಲಿಂಗಾಯತರು, ಕುರುಬರು ಎಲ್ಲರೂ ಒಂದು ಎನ್ನುತ್ತೇವೆ.
ನಾವು ಹುಟ್ಟುವವಾಗ ಇಂತಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದ್ದೆವೆ? ಹಿಂದೂ ಮುಸಲ್ಮಾನರ ರಕ್ತದ ಬಣ್ಣ ಬೇರೆ ಇದೆಯೇ? ಕಣ್ಣೀರು ಬೇರೆ ಇದೆಯೇ? ಬೆವರು ಬೇರೆ ಇದೆಯೇ? ಇದು ಮನುಷ್ಯ ಜನ್ಮ, ಮಾನವೀಯತೆ ಮುಖ್ಯ. ಆಸ್ಪತ್ರೆಯಲ್ಲಿ ರಕ್ತ ಬೇಕಾದಾಗ ಅದು ಹಿಂದೂ ರಕ್ತವೋ ಮುಸಲ್ಮಾನರ ರಕ್ತವೋ ಎಂದು ಪರೀಕ್ಷೆ ಮಾಡುತ್ತೀರಾ? ಆದರೆ ಈ ಸಮಾಜವನ್ನು ಜಾತಿ, ಧರ್ಮದ ವಿಚಾರದಲ್ಲಿ ಸಮಾಜ ಒಡೆಯುತ್ತಿರುವುದು ಏಕೆ?
ನಮ್ಮ ಜನರಿಗೆ ಹೊಟ್ಟೆಗೆ ಊಟ, ಕೈಗಳಿಗೆ ಕೆಲಸ, ಶುದ್ಧ ಆಡಳಿತ, ನಮಗೆ ಬರುವ ಆದಾಯದಲ್ಲಿ ನೆಮ್ಮದಿ ಬದುಕು ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ಕೆಲಸವನ್ನು ಬಿಜೆಪಿ ಸರ್ಕಾರದಿಂದ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರ ನಿಮ್ಮ ಆದಾಯ ಡಬಲ್ ಮಾಡಿದೆಯಾ? ಕೋವಿಡ್ ಸಮಯದಲ್ಲಿ ನಿಮ್ಮ ಆಸ್ಪತ್ರೆ ಬಿಲ್ ಪಾವತಿ ಮಾಡಿದ್ದಾರಾ? ಆರಂಭದಲ್ಲಿ ಲಸಿಕೆಗೂ ಹಣ ವಸೂಲಿ ಮಾಡಲು ಆರಂಭಿಸಿದರು. ಎಲ್ಲರೂ ಸೇರಿ ಗುಮ್ಮಿದ ನಂತರ ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದರು.
ಆಟೋ ಚಾಲಕರು ಈ ಹಿಂದೆ 6 ತಾಸು ಆಟೋ ಓಡಿಸಿದರೆ ಜೀವನ ನಡೆಸಬಹುದಿತ್ತು, ಆದರೆ ಈಗ 16 ಗಂಟೆ ಓಡಿಸಿದರೂ ಜೀವನ ನಡೆಸುವುದು ಕಷ್ಟವಾಗಿದೆ. ಮಕ್ಕಳ ಶುಲ್ಕ, ಮನೆ ಬಾಡಿಗೆ ಕಟ್ಟಲು ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ಹೇಳುತ್ತಿದ್ದಾರೆ. ಇವರಿಗೆಲ್ಲ ಹೇಗೆ ಸಹಾಯ ಮಾಡಬೇಕು ಎಂದು ಪಕ್ಷದ ಎಳ್ಲ ನಾಯಕರು ಚರ್ಚೆ ಮಾಡಿ ಪಕ್ಷದ ವತಿಯಿಂದ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ.
ಪ್ರತಿ ಮನೆ ಬೆಳಗಬೇಕು ಎಂದು ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ಆರ್ಥಿಕ ನೆರವು ನೀಡಲು ತೀರ್ಮಾನಿಸಿದ್ದೇವೆ. ಈ ಯೋಜನೆಯನ್ನು ಪ್ರಿಯಾಂಕಾ ಗಾಂಧಿ ಅವರು ಘೋಷಣೆ ಮಾಡಿದರು. ನಾನು ಸಿದ್ದರಾಮಯ್ಯ ಅವರು ಗ್ಯಾರೆಂಟಿ ಚೆಕ್ ಗೆ ಸಹಿ ಹಾಕಿದ್ದೇವೆ. ನಾವು ಈ ಎರಡು ಯೋಜನೆ ಘೋಷಣೆ ಮಾಡಿದ ನಂತರ ಎಲ್ಲಿಲ್ಲದ ಟೀಕೆ ಮಾಡುತ್ತಿದ್ದಾರೆ. ಟೀಕೆ ಮಾಡುವ ಮುನ್ನ, ನಿಮ್ಮ ಪ್ರಣಾಳಿಕೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದರಲ್ಲ, ಎಲ್ಲಿ ಮಾಡಿದ್ದೀರಿ? ಆದಾಯ ಡಬಲ್ ಮಾಡುತ್ತೇವೆ ಎಂದಿದ್ದೀರಿ, 15 ಲಕ್ಷ ನಿಮ್ಮ ಖಾತೆಗೆ ಹಾಕುತ್ತೇವೆ ಎಂದಿದ್ದರು, ಯಾರಿಗಾದರೂ ಬಂತಾ? ಯಾರಿಗೂ ನಯಾಪೈಸೆ ಸಿಕ್ಕಿಲ್ಲ. ಚಾಲಕರು, ಬೀದಿವ್ಯಾಪಾರಿಗಳಿಗೆ 10 ಸಾವಿರ ನೀಡಲಿಲ್ಲ, ಇನ್ನು 15 ಲಕ್ಷ ನೀಡುವರೇ? ನಾವು ನುಡಿದಂತೆ ನಡೆಯದಿದ್ದರೆ, ನಾವು ರಾಜಕಾರಣದಿಂದ ನಿವೃತ್ತಿಯಾಗುತ್ತೇವೆ. ಇದು ಕಾಂಗ್ರೆಸ್ ಸಿದ್ಧಾಂತ. ನಾವು ಸುಮ್ಮನೆ ಖಾಲಿ ಮಾತನಾಡುವುದಿಲ್ಲ.
ನಾನು ಅಧ್ಯಕ್ಷನಾದ ನಂತರ ವಿಧಾನಪರಿಷತ್ ಸದಸ್ಯರ ಚುನಾವಣೆ ಎದುರಾಯಿತು. ಕೋಲಾರದಲ್ಲಿ ತುಮಕೂರು, ಮಂಡ್ಯದಲ್ಲಿ ನಾವು ಸೋತಿದ್ದೆವು. ಹಾಲಿ ಎಂಎಲ್ಸಿ ಮನೋಹರ್, ಕಾಂತರಾಜ್ ಅವರು ಕಾಂಗ್ರೆಸ್ ಸೇರಿದರು. ಆಗ ನಮಗೆ ಶಕ್ತಿ ನೀಡಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಗೆಲ್ಲಲು ಕಾರಣರಾದರು. ಜೀವನದಲ್ಲಿ ಯಾರು ಸಹಾಯ ಮಾಡುತ್ತಾರೋ ಅವರನ್ನು ನೆನೆಯಬೇಕು. ಉಪಕಾರ ಸ್ಮರಣೆ ಇಲ್ಲದಿದ್ದರೆ, ಯಾರೂ ಬದುಕಲು ಸಾಧ್ಯವಿಲ್ಲ.
ನಾವು ನಮ್ಮ ತಾಯಿಯನ್ನು ನೆನೆಸಿಕೊಳ್ಳುತ್ತೇವೆ. ಅಮ್ಮನ ನೆನಪು, ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ. ಅದೇ ರೀತಿ ಸುಧಾಕರ್, ಮಂಜು ಅವರ ಸಹಾಯ ಮರೆಯುವುದಿಲ್ಲ. ಅವರಿಬ್ಬರಿಗೂ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ. ಅವರ ಜತೆಗೆ ವಿ.ಮುನಿಯಪ್ಪ, ರಮೇಶ್ ಕುಮಾರ್, ಶಿವಶಂಕರ್ ರೆಡ್ಡಿ, ನಂಜೇಗೌಡರು, ಸುಬ್ಬಾರೆಡ್ಡಿ, ಆಂಜನಪ್ಪ ಎಲ್ಲರೂ ಶಕ್ತಿ ನೀಡಿದ್ದಾರೆ.
ಕಾಂತರಾಜು ಹಾಲಿ ಪರಿಷತ್ ಸದಸ್ಯರಿದ್ದರೂ ಅದನ್ನು ಬಿಟ್ಟು ಕಾಂಗ್ರೆಸ್ ಸೇರಲು ದಡ್ಡರಾ? ಮಧುಬಂಗಾರಪ್ಪ, ದತ್ತಾ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಬರಲು ದಡ್ಡರಾ? ದಳಕ್ಕೆ ಭವಿಷ್ಯವಿಲ್ಲ ಎಂದು ಅವರೆಲ್ಲರಿಗೂ ಗೊತ್ತಿದೆ. ಭವಿಷ್ಯವಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಕುಮಾರಣ್ಣನಿಗೆ ಅಧಿಕಾರ ಕೊಟ್ಟಿದ್ದೆವು. ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೆವು. ಈ ಮಹಾಜನತೆಗೆ ಕೇಳುವುದೊಂದೆ, ನಿಮ್ಮ ಸೇವೆ ಮಾಡಲು ನಮಗೆ ಶಕ್ತಿ ನೀಡಿ ಎಂದು ನಿಮ್ಮ ಪಾದಗಳಿಗೆ ನಮಸ್ಕರಿಸಿ ಕೇಳುತ್ತೇನೆ.ನಿಮ್ಮ ಮಗನಂತೆ ನಾನು, ನಿಮ್ಮ ಕಷ್ಟಕ್ಕೆ ನಾನು ನಿಲ್ಲುತ್ತೇನೆ. ನೀವು ಇಡೀ ರಾಜ್ಯಕ್ಕೆ ಹಾಲು, ತರಕಾರಿ ಕೊಟ್ಟಿದ್ದೀರಿ. ನಿಮಗಾಗಿ ದುಡಿಯಲು ನಾವು ಸಿದ್ಧ. ಈ ಜಿಲ್ಲೆಯ 5 ಕ್ಷೇತ್ರಗಲಲ್ಲಿ 5 ಕ್ಷೇತ್ರಗಳಲ್ಲಿ ಗೆಲ್ಲಿಸಿ, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಿಸಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಬೇಕು. ಟಿಕೆಟ್ ಸಿಗದವರಿಗೆ ನಿಗಮ ಮಂಡಳಿ ಹಾಗೂ ಇತರೆ ಸ್ಥಾನಮಾನ ನೀಡಿ ಅಧಿಕಾರ ನೀಡಲಾಗುವುದು. ಈ ಹಿಂದೆ ನಾವು ಎಲ್ಲರಿಗೂ ಅಧಿಕಾರ ಕೊಟ್ಟಿದ್ದೇವೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬಂತೆ ಕೆಲಸ ಮಾಡುತ್ತೇವೆ.
ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅವರಿಗೆ ಶಕ್ತಿ ನೀಡಿ. ರಾಹುಲ್ ಗಾಂಧಿ ಅವರು ದೇಶದುದ್ದಕ್ಕೂ ನಡೆಯುತ್ತಿದ್ದಾರೆ. ಯಾರಿಗಾಗಿ, ನಿಮಗಾಗಿ. ಅವರು ರಾಜ್ಯದಲ್ಲಿ ನಡೆಯುವಾಗ ಒಬ್ಬ ವಯಸ್ಸಾದ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇ ಕಾಯಿ ಕೊಟ್ಟರು. ಕೊಡುವಾಗ ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆದಿದ್ದೇವೆ ತಗೊಳ್ಳಿ ಎಂದು ಕೊಟ್ಟರು. ರಾಹುಲ್ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಹಗಲು ರಾತ್ರಿ, ಬಿಸಿಲು, ಮಳೆ, ಚಳಿ ಎನ್ನದೇ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಹೆಜ್ಜೆ ಹಾಕುತ್ತಿದ್ದಾರೆ. ಅವರಿಗೆ ನೀವು ಶಕ್ತಿ ನೀಡಬೇಕು. ಇಂದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಾಗಲಿದೆ. ಕರ್ನಾಟಕದ ಮೂಲಕ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ನೀವು ಯಾವುದೇ ಕಾರಣಕ್ಕೂ ಯಾಮಾರಬೇಡಿ. ವ್ಯಕ್ತಿ ಪೂಜೆ ಬಿಟ್ಟು, ಪಕ್ಷ ಪೂಜೆ ಮಾಡಿ. ನಮ್ಮ ಸಮೀಕ್ಷೆ ಪ್ರಕಾರ 136ರಿಂದ 140 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ.
ಮುಂದಿನ ಕೆಲ ದಿನಗಳಲ್ಲಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಗೆ ಅರ್ಜಿ ಕಳುಹಿಸುತ್ತೇನೆ. ಪ್ರತಿ ಮೆನೆ ಮನೆಗೆ ಹೋಗಿ 200 ಯುನಿಟ್ ವಿದ್ಯುತ್ ಉಚಿತ, 2 ಸಾವಿರ ಆರ್ಥಿಕ ನೆರವು ಯಾರಿಗೆ ಬೇಕು ಎಂದು ಅವರಿಂದ ಅರ್ಜಿ ತುಂಬಿಸಿ. ಆ ಮೂಲಕ ನಮ್ಮ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಗೆ ತಲುಪಿಸಿ.
[24/01, 12:09 PM] Kpcc official: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಮಂಗಳವಾರ ನೀಡಿದ ಪ್ರತಿಕ್ರಿಯೆ...
[24/01, 3:22 PM] Kpcc official: *ಸಿಎಂ, ಮಂತ್ರಿಗಳು ಗಂಟುಮೂಟೆ ಕಟ್ಟಿಕೊಂಡು ಹೊರಡಲಿ, ವಿಧಾನಸೌಧನಾ ಗಂಜಲ ಹಾಕಿ ತೊಳೆಯುತ್ತೇವೆ: ಡಿ.ಕೆ. ಶಿವಕುಮಾರ್*
*ಬೆಂಗಳೂರು:*
‘ಬಿಜೆಪಿ ಸರ್ಕಾರ ಇಡೀ ರಾಜ್ಯಕ್ಕೆ ಕಳಂಕ ತಂದಿದ್ದು, ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಮಂತ್ರಿಗಳು ವಿಧಾನಸೌಧದಿಂದ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಹೊರಡಲಿ, ನಾವು ಗಂಜಲ ತಂದು ವಿಧಾನಸೌಧವನ್ನು ಶುದ್ಧ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಎರಡು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು, ಆಮೂಲಕ 200 ಯುನಿಟ್ ಉಚಿತ, 2 ಸಾವಿರ ಪ್ರೋತ್ಸಾಹ ಧನ ನೀಡುವುದು ಖಚಿತ ಎಂದು ಘೋಷಿಸಿದ ನಂತರ ಬಿಜೆಪಿಯವರ ತಲೆ ಕೆಟ್ಟು ಹೋಗಿದೆ. ಮಹಿಳೆಯರಿಗೆ ಪ್ರೋತ್ಸಾಹ ಧನದ ಮೂಲಕ ವರ್ಷಕ್ಕೆ 24 ಸಾವಿರ, 200 ಯುನಿಟ್ ಉಚಿತ ವಿದ್ಯುತ್ ಮೂಲಕ ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ ರು. ಗೃಹಿಣಿಯರಿಗೆ ಉಳಿತಾಯವಾಗುತ್ತದೆ. ಇಂತಹ ದೊಡ್ಡ ಯೋಜನೆ, ಜನರ ಹೃದಯ ತಲುಪುವ ಯೋಜನೆ ಘೋಷಿಸಿರುವುದರ ಬಗ್ಗೆ ಸಂಕಟದಿಂದ ಅಪಸ್ವರ ಎತ್ತಿದ್ದಾರೆ. ಈ ಸರ್ಕಾರದ ಆಯಸ್ಸು ಇನ್ನು 40 ದಿನ ಇದೆ. ನೀವು ಇನ್ಯಾರಿಂದ ವಸೂಲಿ ಮಾಡುವುದು ಬಾಕಿ ಇದೆಯೋ ಅದನ್ನು ಮಾಡಿಕೊಂಡು ನಿಮ್ಮ ಟೆಂಟ್ ಖಾಲಿ ಮಾಡಿ. ನಾವು ಬಂದು ವಿಧಾನಸೌಧ ಸ್ವಚ್ಛ ಮಾಡುತ್ತೇವೆ. ಈ ಸರ್ಕಾರವನ್ನು ಜನರೇ ಓಡಿಸುತ್ತಾರೆ.
ಬಿಜೆಪಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಬಂದಿದ್ದು, ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 35 ಸಾವಿರ ಕೋಟಿ ಅಕ್ರಮವಾಗಿದೆ ಎಂದು ಹೇಳಿಸಿದ್ದಾರೆ. ಈಗ ಆರೋಪ ಮಾಡುವವರು ಕಳೆದ ಮೂರುವರೆ ವರ್ಷಗಳಿಂದ ಕಡಲೇಕಾಯಿ ತಿನ್ನುತ್ತಿದ್ದರಾ? ನಿಮಗೆ ಅಧಿಕಾರ ಇದ್ದಾಗ ತನಿಖೆ ಮಾಡದಂತೆ ತಡೆದಿದ್ದವರು ಯಾರು? ನಿಮ್ಮ ಅಧಿಕಾರ ಉಪಯೋಗಿಸಿಕೊಂಡು ತನಿಖೆ ಮಾಡಿಸಿ ಜನರ ಮುಂದೆ ಸತ್ಯಾಸತ್ಯತೆ ಇಡಬೇಕಾಗಿತ್ತು. ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಸಿಕ್ಕಿದೆ. ಅದನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ನೀವು ಹೇಳುವ 35 ಸಾವಿರ ಕೋಟಿ ಹಣ ನಮ್ಮ ನಾಯಕರ ಖಾತೆಗೆ ಬಂದಿದೆಯಾ? ವಿದೇಶಕ್ಕೆ ಹೋಗಿದೆಯಾ? ಹೇಳಿ. ಬಿಜೆಪಿಯವರು ಲಂಚ ತಿಂದು ಕಾಂಗ್ರೆಸ್ ಪಕ್ಷದ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಏನೂ ಆಗುವುದಿಲ್ಲ.
ಜನರ ಮನದಲ್ಲಿ ಕಾಂಗ್ರೆಸ್ ಬಗ್ಗೆ ಒಲವು ಮೂಡಿದೆ. ಬಿಜೆಪಿಯವರು, ಖಾಸಗಿ ಸಂಸ್ಥೆಗಳು, ಮಾಧ್ಯಮಗಳು ಸಮೀಕ್ಷೆಯಲ್ಲಿ ಬಿಜೆಪಿ ಸಂಖ್ಯಾಬಲ 60ರ ಮೇಲೆ ದಾಟುತ್ತಿಲ್ಲ. ನಮ್ಮದು 120-130 ಕ್ಷೇತ್ರಗಳು ಬರುತ್ತಿವೆ. ಇವು ನಿಜವಾಗುತ್ತದೋ ಸುಳ್ಳಾಗುತ್ತದೋ ಮುಂದಿನ ವಿಚಾರ. ಆದರೆ ಬಿಜೆಪಿಯವರಲ್ಲಿ ಯಡಿಯೂರಪ್ಪ- ಬೊಮ್ಮಾಯಿ, ಯತ್ನಾಳ್ – ನಿರಾಣಿ, ಯೋಗೇಶ್ವರ್, ಅಶೋಕ್, ಮಾಜಿ ಡಿಸಿಎಂ - ಹೀಗೆ ಬೇರೆ ಬೇರೆ ನಾಯಕರ ನಡುವೆ ಆಂತರಿಕ ಜಗಳ ಹೆಚ್ಚಾಗುತ್ತಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡುತ್ತೀರಲ್ಲ, ಬಿಜೆಪಿ ಪಕ್ಷದಲ್ಲಿ 32 ಗುಂಪುಗಳಿವೆ. ಇವೆಲ್ಲವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಅವರುಗಳು ಬಹಿರಂಗವಾಗಿ ಮಾತನಾಡಲು ಹೆದರುತ್ತಿದ್ದಾರೆ. ಈ ಕಾರಣಕ್ಕೆ ನಮ್ಮ ಪಕ್ಷದಲ್ಲಿದ್ದ ಸುಧಾಕರ್ ಅವರಿಂದ ಕಾಂಗ್ರೆಸ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಸಿದ್ದಾರೆ.
ನಿಮ್ಮ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ಮಾತನಾಡಿದರು. ಪಿಪಿಇ ಕಿಟ್, ವ್ಯಾಕ್ಸಿನ್, ಔಷಧಿ ಹಗರಣ ಮಾಡಿದ್ದಾರೆ. ಇವುಗಳ ಬಗ್ಗೆ ಈ ಸರ್ಕಾರ ಮಾತನಾಡುತ್ತಿಲ್ಲ. ಪರಿಶಿಷ್ಟ ಜಾತಿ ಪಂಗಡದ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅರ್ಜಿ ಹಾಕದವರಿಗೆ ಹಣ ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ. ಈ ಅಧಿಕಾರಿ ನಿಮ್ಮ ಬೆಂಬಲ ಇಲ್ಲದೇ, ಅರ್ಜಿ ಹಾಕದವರಿಗೆ ಹಣ ನೀಡಲು ಸಾಧ್ಯವೇ? ಈ ರೀತಿ ದಲಿತರ ಹಣ ಲೂಟಿ ಮಾಡಿದ್ದೀರ... ಈ ಸರ್ಕಾರ ಮಠ ಮಾನ್ಯಗಳ ಹಣದಲ್ಲೂ ಕಮಿಷನ್ ಪಡೆದಿದ್ದು, ಈ ಸರ್ಕಾರ 40% ಕಮಿಷನ್ ಸರ್ಕಾರ ಎಂಬ ಬ್ರ್ಯಾಂಡ್ ಪಡೆದಿದೆ. ಈ ಬ್ರ್ಯಾಂಡ್ ಅನ್ನು ವಿಶ್ವ ಮಟ್ಟದಲ್ಲೇ ಮಾರಾಟ ಮಾಡಬಹುದು.
ಬಿಜೆಪಿ ಸರ್ಕಾರ ಸುಮ್ಮನೆ ಬಜೆಟ್ ಮಂಡಿಸುವ ಪ್ರಯತ್ನ ಮಾಡುತ್ತಿದೆ. ಅವರು ಕಳೆದ ವರ್ಷಗಳಲ್ಲಿ ಮಂಡಿಸಿದ ಬಜೆಟ್ ನಲ್ಲಿ ಅರ್ಧದಷ್ಟು ಹಣ ವೆಚ್ಚ ಮಾಡಿಲ್ಲ. 26 ಸಂಸದರನ್ನು ಇಟ್ಟುಕೊಂಡು ಅವರನ್ನು ಕರೆದುಕೊಂಡು ಹೋಗಿ ಪ್ರಧಾನಿಗಳಿಗೆ ಭೇಟಿ ನೀಡಿ ರಾಜ್ಯಕ್ಕೆ ಒಂದು ಯೋಜನೆಯನ್ನು ಘೋಷಣೆ ಮಾಡಲಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಇಷ್ಟು ದಿನ ಮಾಡಲಾಗದಿದ್ದವರು ಈಗ ಏನು ಮಾಡಲು ಸಾಧ್ಯ? ನೆರೆ ಬಂದಾಗ ಸತ್ತವರಿಗೆ ಪರಿಹಾರ ನೀಡಲಿಲ್ಲ, ಕೋವಿಡ್ ಸಮಯದಲ್ಲಿ ಸತ್ತವರಿಗೆ ಪ್ರಮಾಣ ಪತ್ರ ನೀಡಿ ಪರಿಹಾರ ನೀಡಲಿಲ್ಲ. ಕೋವಿಡ್ ಸಮಯದಲ್ಲಿ ಬಡವರಿಗೆ ನೆರವಾಗಲಿಲ್ಲ. ಎಲ್ಲರ ಮುಂದೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಎಲ್ಲ ಸಮುದಾಯಗಳಿಗೂ ಮೀಸಲಾತಿ ಹೆಸರಲ್ಲಿ ತಲೆಗೆ ತುಪ್ಪ ಸವರುತ್ತಿದ್ದಾರೆ. ಅದನ್ನು ನೋಡಲು ಆಗಲ್ಲ, ಸುವಾಸೆ, ರುಚಿಯೂ ಅನುಭವಿಸದ ಪರಿಸ್ಥಿತಿ ಮಾಡಿದ್ದಾರೆ ಎಂದು ಸ್ವಾಮೀಜಿಗಳು ಚೆನ್ನಾಗಿ ವರ್ಣಿಸಿದ್ದಾರೆ. ಜನರಿಗೆ ಈ ಸರ್ಕಾರ ಯಾಕೆ ಇಷ್ಟು ಮೋಸ ಮಾಡುತ್ತಿದೆ?
ಸಚಿವ ಸುಧಾಕರ್ ಅವರ ತಲೆ ಮೇಲೆ ಭ್ರಷ್ಟಾಚಾರದ ಆರೋಪಗಳ ಪರ್ವತವೇ ಇದೆ. ಆದರೂ ಮಾಧುಸ್ವಾಮಿ, ಮುಖ್ಯಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ? ಮುಖ್ಯಮಂತ್ರಿಗಳು ಅಥವಾ ಬಿಜೆಪಿಯ ಇತರ ಮುತ್ತುರತ್ನಗಳು ಕಾರಜೋಳ, ಉಪಮುಖ್ಯಮಂತ್ರಿಯಾಗಿದ್ದವರ ಮೂಲಕ ಈ ವಿಚಾರವಾಗಿ ಪತ್ರಿಕಾಗೋಷ್ಠಿ ಮಾಡದೇ, ಸುಧಾಕರ್ ಅವರಿಂದಲೇ ಮಾಡಿಸಿದ್ದು ಯಾಕೆ? ಕೇವಲ ಆಪರೇಷನ್ ಕಮಲದಿಂದ ಬಂದವರಿಂದಲೇ ಮಾತನಾಡಿಸುತ್ತಿರುವುದೇಕೆ? ನಾವು ಅವರನ್ನೇನು ಪಕ್ಷಕ್ಕೆ ತೆಗೆದುಕೊಳ್ಳಲು ಹೋಗುವುದಿಲ್ಲ. ಅವರಿಗೆ ನಮ್ಮ ಬಸ್ ನಲ್ಲಿ ಜಾಗ ಇಲ್ಲ. ಹೀಗಾಗಿ ನೀವು ತಲೆ ಕೆಡಿಸಿಕೊಳ್ಳದೇ ನಿಮ್ಮ ಮೂಲ ಬಿಜೆಪಿಗರಿಂದ ಮಾತನಾಡಿಸಿ. ನಿಮ್ಮ ಮೂಲ ಬಿಜೆಪಿಗರ ವಿರುದ್ಧ ಯಾವುದೇ ಪ್ರಕರಣ ದಾಖಲಾದರೆ ಕೇವಲ ಮೂರು ತಿಂಗಳಲ್ಲಿ ಬಿ ರಿಪೋರ್ಟ್ ಹಾಕುತ್ತಾರೆ. ಇದು ಬಿ ರಿಪೋರ್ಟ್ ಸರ್ಕಾರ. ಈ ಸರ್ಕಾರ ರಾಜ್ಯಕ್ಕೆ ಕಳಂಕ ತಂದಿದೆ.’
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಪಟ್ಟಿ ಮಾಡಿದಂತೆ, ಬಿಜೆಪಿ ಕೂಡ ಕಾಂಗ್ರೆಸ್ ವಿರುದ್ಧ ಆರೋಪಪಟ್ಟಿ ಮಾಡುತ್ತಿವೆ ಎಂದು ಕೇಳಿದಾಗ, ‘ಬಿಜೆಪಿಯವರು ಕಾಪಿ ಮಾಡುವುದರಲ್ಲಿ ನಿಸ್ಸೀಮರು. ಪಿಎಸ್ಐ, ಉಪಕುಲಪತಿ, ಜೆಇಇ ನೇಮಕಾತಿಯಲ್ಲಿ ಕಾಪಿ ಮಾಡಿ ಅಕ್ರಮ ಮಾಡಿರುವುದನ್ನು ನೋಡಿದ್ದೇವೆ. ಇಂತಹ ಹೈಟೆಕ್ ಅಕ್ರಮ ಎಲ್ಲಾದರೂ ನಡೆದಿದೆಯೇ? ಓದುವ ಮಕ್ಕಳ ತಲೆಯನ್ನು ಕೆಡಿಸುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.’
*ಸದಾಶಿವನಗರದಲ್ಲಿ ನೀಡಿದ ಪ್ರತಿಕ್ರಿಯೆ:*
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಮಯದ ಅಭಾವವಿದೆ. ಜ.27ರಂದು ನಾವು ರಾಮನಗರದಲ್ಲಿ ನಡೆಯಬೇಕಾಗಿದ್ದ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿದ್ದು, ಅಂದು ನಮ್ಮ ಪಕ್ಷದ ಗ್ಯಾರಂಟಿ ಯೋಜನೆ, ಪ್ರಜಾಧ್ವನಿ ಯಾತ್ರೆ ಸಮಯದಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಪ್ರಚಾರದ ರೂಪುರೇಷೆಗಳ ವಿಚಾರವಾಗಿ ಎಲ್ಲ ಬ್ಲಾಕ್ ಕಾಂಗ್ರೆಸ್ ನಾಯಕರು, ಪರಾಜಿತ ಅಭ್ಯರ್ಥಿಗಳು ಹಾಗೂ ನೂತನ ಪ್ರಚಾರ ಸಮಿತಿಯ ಜತೆ ಸಭೆ ಆಯೋಜಿಸಿದ್ದೇವೆ. ಈ ಸಭೆಗೆ ಪಕ್ಷದ 1 ಸಾವಿರ ನಾಯಕರನ್ನು ಆಹ್ವಾನಿಸಿದ್ದೇವೆ. ಈ ಸಭೆಯಲ್ಲಿ ನಮ್ಮ ನಾಯಕರಿಗೆ ಟಾಸ್ಕ್ ನೀಡಲಾಗುವುದು.
ರಾಮನಗರ ಬೆಂಗಳೂರಿನ ಪಕ್ಕದಲ್ಲಿದ್ದು, ನನ್ನ ವಿಧಾನಸಭಾ ಕ್ಷೇತ್ರ ಸೇರಿದಂತೆ ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ನಾವು ಯಾವಾಗ ಬೇಕಾದರೂ ಅಲ್ಲಿ ಯಾತ್ರೆ ಮಾಡಬಹುದು. ಅಧಿವೇಶನ ಆರಂಭವಾದ ನಂತರ ಬಿಡುವಿರುವ ಒಂದು ದಿನ ಹೋಗಿಯೂ ಯಾತ್ರೆ ಮಾಡಬಹುದು. ಹೀಗಾಗಿ ರಾಮನಗರದ ಯಾತ್ರೆಯನ್ನು ಮುಂದಕ್ಕೆ ಹಾಕಿದ್ದೇವೆ.
ಅಮಿತ್ ಶಾ ಅವರ ರಾಜ್ಯ ಪ್ರವಾಸ ಹಾಗೂ ಬೆಂಗಳೂರಿನಲ್ಲಿ ಪ್ರಧಾನಿಗಳ ರೋಡ್ ಶೋ ಮಾಡುವಂತೆ ಬಿಜೆಪಿ ನಾಯಕರ ಮನವಿ ಬಗ್ಗೆ ಕೇಳಿದಾಗ, ‘ಅವರು ದಿನನಿತ್ಯ ರಾಜ್ಯಕ್ಕೆ ಬಂದು ರೋಡ್ ಶೋ ಮಾಡಲಿ. ಅವರು ರೋಡ್ ಶೋ ಮಾಡಿ, 40% ಕಮಿಷನ್ ಆರೋಪ, ಎಷ್ಟು ಜನರಿಗೆ ಉದ್ಯೋಗ ನೀಡಿದ್ದಾರೆ? ಜನರ ಖಾತೆಗೆ 15 ಲಕ್ಷ ಯಾವಾಗ ಹಾಕುತ್ತಾರೆ? ರೈತರ ಆದಾಯ ಯಾವಾಗ ಡಬಲ್ ಆಗುತ್ತದೆ? ಎಂಬ ವಿಚಾರವಾಗಿ ಮಾತನಾಡಲಿ. ಅವರು ಏನಾದರೂ ಮಾಡಲಿ. ಅವರ ಮಂತ್ರಿಗಳು, ನಾಯಕರ ಮಾತುಗಳಿಗೆ ಅವರು ಉತ್ತರ ನೀಡಲಿ. ಅವರ ನಾಯಕನೊಬ್ಬ ಪ್ರತಿ ಮತದಾರನಿಗೆ ಹಣ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ. ಆದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ? ಆದಾಯ ತೆರಿಗೆ ಇಲಾಖೆ ಏನು ಮಾಡುತ್ತಿದೆ? ಬಿಜೆಪಿಯವರು ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರತಿ ಮತಕ್ಕೆ 6 ಸಾವಿರ ರೂ ನೀಡಿ ಮತಗಳನ್ನು ಖರೀದಿ ಮಾಡುತ್ತಾರಾ? ಇದೇನಾ ಬಿಜೆಪಿ ಸಂಸ್ಕೃತಿ?’ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಯಡಿಯೂರಪ್ಪನವರು ಏನಾದರೂ ಹೇಳಿಕೊಳ್ಳಲಿ. ಹೈಕಮಾಂಡ್ ಒಪ್ಪಿಗೆ ನೀಡಿದರೆ, ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಒಬ್ಬ ನಾಯಕ ತನ್ನ ಆಸೆ ಹೇಳಿಕೊಳ್ಳಬಾರದಾ? ಯಡಿಯೂರಪ್ಪನವರು ತಮ್ಮ ಹಾಗೂ ತಮ್ಮ ಮಗನ ಭವಿಷ್ಯದ ಬಗ್ಗೆ ನೋಡಿಕೊಳ್ಳಲಿ. ನಂತರ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ’ ಎಂದು ತಿರುಗೇಟು ನೀಡಿದರು.
ಸ್ತ್ರೀಶಕ್ತಿ ಸಂಘಗಳ ಸಾಲದ ಪ್ರಮಾಣ ಹೆಚ್ಚಳದ ಘೋಷಣೆ ಪಕ್ಷದ ನಾಲ್ಕನೇ ಗ್ಯಾರಂಟಿ ಯೋಜನೆಯೇ ಎಂದು ಕೇಳಿದಾಗ, ‘ಅದನ್ನು ನಮ್ಮ ಗ್ಯಾರಂಟಿ ಯೋಜನೆ ಪಟ್ಟಿಯ ಕಾರ್ಯಕ್ರಮ ಎಂದು ಹೇಳಿಲ್ಲ. 10 ಕೆ.ಜಿ ಅಕ್ಕಿ ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಇನ್ನುಳಿದ ಯೋಜನೆಗಳನ್ನು ಘೋಷಿಸಲು ಇನ್ನು ಸಮಯಾವಕಾಶ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಘೋಷಿಸುತ್ತೇವೆ’ ಎಂದು ಸ್ಪಷ್ಟನೆ ನೀಡಿದರು.
[24/01, 3:22 PM] Kpcc official: *ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು*
ಸಚಿವ ಮಾಧುಸ್ವಾಮಿ ಅವರು ಹೇಳಿಕೆ ನೀಡಿದ ನಂತರ ಮಲಗಿದ್ದ ಬಿಜೆಪಿ ನಾಯಕರೆಲ್ಲರೂ ಎದ್ದು ಸುಳ್ಳನ್ನು 10 ಬಾರಿ ಹೇಳಿ ಸತ್ಯ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಿಟ್ಲರ್ ಸರ್ಕಾರದಲ್ಲಿ ಸುಳ್ಳು ಹೇಳುವ ಕಾರಣಕ್ಕೆ ಒಬ್ಬ ಮಂತ್ರಿ ಇಟ್ಟುಕೊಂಡಿದ್ದ. ಅದೇ ರೀತಿ ಬಿಜೆಪಿ ಸರ್ಕಾರದಲ್ಲಿ ಸಿ.ಟಿ ರವಿ, ಅಸ್ವತ್ಥ್ ನಾರಾಯಣ್, ಅಶೋಕ್, ಸುಧಾಕರ್ ಜತೆಗೆ ಒಂದಿಬ್ಬರು ಶಾಸಕರನ್ನು ತಯಾರು ಮಾಡಿದ್ದಾರೆ. ಇನ್ನು ನಾಲ್ಕೈದು ಜನರ ತಯಾರಿ ನಡೆಯುತ್ತಿದೆ.
ನಿನ್ನೆ ಡಾ.ಸುಧಾಕರ್, ಶಾಸಕ ರಾಜೀವ್, ಅಶ್ವತ್ಥ ನಾರಾಯಣ್ ಸೇರಿದಂತೆ ಬಿಜೆಪಿ ನಾಯಕರು 2013ರಿಂದ 2018ರವರೆಗೆ ಸಿಎಜಿ ವರದಿ ಉಲ್ಲೇಖಿಸಿ ಆ ವರದಿಯ ದಾಖಲೆ ನೀಡದೇ 35 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹಸಿ ಸುಳ್ಳು ಹೇಳಿ ಜಾಗ ಖಾಲಿ ಮಾಡಿದ್ದಾರೆ.
ಬಿಜೆಪಿಯ ಸುಳ್ಳಿನ ಮಂತ್ರಿಗಳಿಗೆ ಕೇಳುವುದಿಷ್ಟೇ, ಈ ಸಚಿವರು ಸದನದಲ್ಲಿ ಕಳೆದ ಮೂರು ನಾಲ್ಕು ಬಾರಿಯಿಂದ ಇದ್ದಾರೆ. ಆದರೂ ಸದನ ಹೇಗೆ ನಡೆಯಲಿದೆ ಎಂಬ ಕನಿಷ್ಟ ಪರಿಜ್ಞಾನವೂ ಇಲ್ಲವಾಗಿದೆ. ಸಿಎಜಿ ವರದಿ ನೇರವಾಗಿ ರಾಜ್ಯ ಸರ್ಕಾರಕ್ಕೆ ಬರುವುದಿಲ್ಲ, ಪಿಎಸಿ ಪಬ್ಲಿಕ್ ಅಕೌಂಟ್ಸ್ ಕಮಿಟಿ ಇರುತ್ತದೆ. ಅದರ ಮುಖ್ಯಸ್ಥರಾಗಿ ವಿರೋಧ ಪಕ್ಷದ ನಾಯಕರು ಇರುತ್ತಾರೆ. ಈ ವರದಿಯಲ್ಲಿ ಅಂದಾಜು ಮೊತ್ತ ಹಾಗೂ ವೆಚ್ಚವಾದ ಮೊತ್ತದ ಬಗ್ಗೆ ಮಾಹಿತಿ ನೀಡಿರುತ್ತಾರೆಯೇ ಹೊರತು ಇಂತಿಷ್ಟು ಮೊತ್ತದ ಭ್ರಷ್ಟಾಚಾರ ನಡೆದಿದೆ ಎಂದು ಉಲ್ಲೇಖವಾಗಿರುವುದಿಲ್ಲ. ಅದು ಉಲ್ಲೇಖವಾಗಿದ್ದರೆ ಬಿಜೆಪಿಯವರು ಏನೇ ಶಿಕ್ಷೆ ನೀಡಿದರೂ ನಾವು ಸ್ವೀಕರಿಸಲು ಸಿದ್ಧವಿದ್ದೇವೆ. ನೀವು ಆ ಅಂಶವನ್ನು ವರದಿಯಲ್ಲಿ ತೋರಿಸಿ.
ಸಿಎಜಿ ವರದಿಯಲ್ಲಿ ಐದು ವರ್ಷಗಳ ಆಡಳಿತದಲ್ಲಿ 35 ಸಾವಿರ ಕೋಟಿಯಷ್ಟು ಎಸ್ಕಲೇಷನ್ ಅಂದರೆ ಯೋಜನೆಯ ಅಂದಾಜು ಮೊತ್ತ ಏರಿಕೆಯಾಗುತ್ತದೆ. ಈ ಬಗ್ಗೆ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಉದಾಹರಣೆಗೆ ಹೇಳುವುದಾದರೆ 2017ರಲ್ಲಿ ಬೆಂಗಳೂರು ಮೈಸೂರು ದಶಪಥ ರಸ್ತೆಗೆ 6 ಸಾವಿರ ಕೋಟಿ ಹಣ ಅಂದಾಜು ಮಾಡಲಾಗಿದ್ದು, ಇದುವರೆಗೂ 13 ಸಾವಿರ ಕೋಟಿ ಖರ್ಚು ಆಗಿದೆ. ಅಂದರೆ 7 ಸಾವಿರ ಕೋಟಿ ಭ್ರಷ್ಟಾಚಾರವಾಗಿದೆ ಎಂದು ಅರ್ಥವೇ?
ಈ 35 ಸಾವಿರ ಕೋಟಿ ವೆಚ್ಚ ಹೆಚ್ಚಳ ಭ್ರಷ್ಟಾಚಾರ ಎನ್ನುವುದಾದರೆ, ಸಿಎಜಿ ವರದಿ ಪ್ರಕಾರ ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ 60 ಸಾವಿರ ಕೋಟಿಯಷ್ಟು ಹಣ ಏರುಪೇರಾಗಿದೆ. ಅಂದರೆ ಬಿಜೆಪಿ ಸರ್ಕಾರ 60 ಸಾವಿರ ಕೋಟಿಯಷ್ಟು ಹಗರಣವಾಗಿದೆ ಎಂದು ನೇರವಾಗಿ ಹೇಳಬಹುದೇ?
ಸುಧಾಕರ್ ಅವರೇ ನೀವು 2008ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತಾಗ ಎಲ್ಲಿ ಕೆಲಸ ಮಾಡುತ್ತಿದ್ದಿರಿ? ಈಗ ಎಷ್ಟು ಕೋಟಿಗೆ ಬಾಳುತ್ತೀರಿ ಎಂದು ಬಹಿರಂಗ ಚರ್ಚೆಗೆ ಬನ್ನಿ. ಅಥವಾ ತನಿಖೆ ನಡೆಯಲಿ. ಸಚಿವರಾದ ನಂತರ ಎಷ್ಟು ಹಣ ಲೂಟಿ ಮಾಡಿದ್ದೀರಿ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಮ ಅವರು ಮಾಧ್ಯಮಗೋಷ್ಠಿ ಮಾಡಿ ಮಾಹಿತಿ ದಾಖಲೆ ನೀಡಿದ್ದಾರೆ. ಕೆಂಪಣ್ಣ ಅವರ ಪ್ರಕಾರ 2 ಸಾವಿರ ಕೋಟಿಯಷ್ಟು ಕಾಮಗಾರಿ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ನಡೆಯುತ್ತಿದ್ದು, ಅದನ್ನು ಇವರು ಟೆಂಡರ್ ಹಾಕುವ ಮುನ್ನವೇ ಶೇ.5ರಷ್ಟು ಕಮಿಷನ್ ನೀಡಬೇಕು. ಅರ್ಜಿ ಹಾಕಿದ ನಂತರ ಶೇ.5ರಷ್ಟು, ಟೆಂಡರ್ ಸಿಕ್ಕ ನಂತರ ಮೊದಲ ಹಂತದಲ್ಲಿ ಶೇ.10ರಷ್ಟು, ಕಾಮಗಾರಿ ಶೇ.75ರಷ್ಟು ಮುಗಿಯುವ ಒಳಗೆ ಉಳಿದ ಶೇ.20ರಷ್ಟು ಕಮಿಷನ್ ನೀಡಬೇಕಾಗಿದೆ. ಇದು ಕೆಂಪಣ್ಣನವರ ಆರೋಪ.
ಇನ್ನು ಚಿಕ್ಕಬಳ್ಳಾಪುರದ ಜನರ ಪ್ರಕಾರ ಬಿಜೆಪಿ ಮಾಜಿ ಶಾಸಕರು ಸುಧಾಕರ್ ಅವರ ಅಕ್ರಮಗಳ ಬಗ್ಗೆ ಸುಮಾರು 40 ದೂರುಗಳನ್ನು ನೀಡಿದ್ದಾರೆ. ಕೋವಿಡ್ ಸಮಯದಲ್ಲಿ ಪ್ರತಿ ಉಪಕರಣ ಖರೀದಿಯಲ್ಲಿ ಅಕ್ರಮ ಮಾಡಿದ್ದಾರೆ. 50 ರೂ ಬೆಲೆಯ ಮಾಸ್ಕ್ ಅನ್ನು 350 ರೂ.ಗೆ ಖರೀದಿ ಮಾಡಿದ್ದಾರೆ. ಸುಧಾಕರ್ ಅವರು ಸಚಿವರಾದ ನಂತರ ಆಸ್ಪತ್ರೆ ಬೆಡ್ ದಂಧೆ ಮಾಡಿದ್ದಾರೆ. ಎಲ್ಲ ಉಪಕರಣಗಳಲ್ಲಿ ಸುಳ್ಲು ಲೆಕ್ಕ ಬರೆದು 100 ಕೋಟಿ ಖರ್ಚಾದರೆ 400 ಕೋಟಿ ಮಾಡಿ ಲೂಟಿ ಮಾಡಿದ್ದಾರೆ. ಸುಮಾರು ಇವರೊಬ್ಬರೇ 1200 ಕೋಟಿ ಲೂಟಿ ಮಾಡಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ. ಇವರ ವಿರುದ್ಧ ಮಾತನಾಡಿದರೆ ಕೇಸ್ ಹಾಕುತ್ತಾರೆ. ಕನ್ನಡಪ್ರಭದ ಸಿಬ್ಬಂದಿಯೊಬ್ಬ ಈತನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದರು.
ಚಿಕ್ಕಬಳ್ಳಾಪುರದಲ್ಲಿನ ಶೇ.60ರಷ್ಟು ಸಿವಿಕ್ ಕಾಮಗಾರಿಗಳನ್ನು ಇವರ ಸಂಬಂಧಿಕರಿಗೆ ಗುತ್ತಿಗೆ ನೀಡಲಾಗಿದೆ. ಇವರು ತಮ್ಮ ಪತ್ನಿ ಹೆಸರಲ್ಲಿ ಸಾಕಷ್ಟು ಚೆಕ್ ಪಡೆದಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ನೀವು ತನಿಖೆ ಮಾಡಿಸಿ ನಂತರ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಿ. ನೀವು ಕಾಂಗ್ರೆಸ್ ಶಾಸಕರಾಗಿದ್ದ ಸಂದರ್ಭದಲ್ಲಿ ಡೈರಿಯಲ್ಲಿ 1 ಸಾವಿರ ಕೋಟಿ ನಮೂದನೆಯಾಗಿದೆ ಎಂದು ಅದನ್ನು ಹೈಕಮಾಂಡ್ ಗೆ ಕಪ್ಪ ಕಾಣಿಕೆ ನೀಡಲಾಗಿದೆ ಎಂದು ಹೇಳುತ್ತೀರಿ. ಅದನ್ನು ನೀವು ತೆಗೆದುಕೊಂಡು ಹೋಗಿ ಕೊಟ್ಟಿದ್ದೀರಾ? ನಾವು ಸುಧಾಕರ್ ಅವರ ವಿರುದ್ಧ ಇಡಿಗೆ ದೂರು ನೀಡಲು ನಿರ್ಧರಿಸಿದ್ದೇವೆ.
ನಿಮಗೆ ಯೋಗ್ಯತೆ ಇದ್ದರೆ ನೀವು ದಾಖಲೆ ಸಮೇತ ಚರ್ಚೆಗೆ ಬನ್ನಿ, ನಾವು ಕೂಡ ಚರ್ಚಗೆ ಬರುತ್ತೇವೆ. ಇಂದು ನೀವು 2 ಸಾವಿರ ಕೋಟಿಗೂ ಹೆಚ್ಚಿನ ಆಸ್ತಿ ಪಡೆದಿದ್ದೀರಿ ಎಂದು ಜನ ಮಾತನಾಡುತ್ತಿದ್ದಾರೆ. ಈ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. 2008ರ ಹಿಂದೆ ಏನಾಗಿದ್ದಿರಿ. ನಿಮಗೆ ಟಿಕೆಟ್ ನೀಡುವಾಗ ವೀರಪ್ಪ ಮೋಯ್ಲಿ ಅವರು ನೀವೊಬ್ಬ ಫ್ರಾಡ್ ನಿಮಗೆ ಟಿಕೆಟ್ ನೀಡಬಾರದು ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಈಗ ಪಶ್ಚಾತಾಪ ಪಡುತ್ತಿದ್ದಾರೆ. ಇವರು ಎಷ್ಟೇ ಭ್ರಷ್ಟಾಚಾರ ಮಾಡಿದರೂ ಮುಖ್ಯಮಂತ್ರಿಗಳು ಇವರನ್ನು ಕೇಳುವುದಿಲ್ಲ.
ಬೊಮ್ಮಾಯಿ ಅವರು ರಾತ್ರಿ 7ರ ನಂತರ ಯಾರಿಗೂ ಲಭ್ಯವಾಗುವುದಿಲ್ಲ. ಕೇವಲ ಸುಧಾಕರ್ ಅವರ ಜತೆ ಇರುತ್ತಾರೆ. ಸುಧಾಕರ್ ಏನೇ ಮಾಡಿದರು ಅದನ್ನು ಸಹಿಸಿಕೊಂಡಿರುತ್ತಾರೆ. ದೇಶದ ಇತಿಹಾಸದಲ್ಲಿ ಮುಖ್ಯಮಂತ್ರಿ ಚೆಕ್ ಮೂಲಕ ಲಂಚ ಪಡೆದು ಜೈಲು ಸೇರಿದ ಇತಿಹಾಸ ಬಿಜೆಪಿ ಸರ್ಕಾರಕ್ಕಿದೆ. ಇವರು ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಮುನ್ನ ಸಾಕ್ಷ್ಯಾಧಾರಗಳನ್ನು ನೀಡಲಿ. ಶಿವಕುಮಾರ್ ಅವರು ಸುಮಾರು 25 ಸಾವಿರ ಲೈನ್ ಮ್ಯಾನ್ ಗಳಿಗೆ ಕೆಲಸ ನೀಡಿದರು. ಆ ಪೈಕಿ ಯಾರಾದರೂ ಒಬ್ಬರು ಇವರ ವಿರುದ್ಧ ಹಗರಣದ ಆರೋಪ ಮಾಡಿದ್ದಾರಾ? ಶಿವಕುಮಾರ್ ಅವರು ರಿಯಲ್ ಎಸ್ಟೇಟ್, ಶಿಕ್ಷ್ಣ ಸಂಸ್ಥೆ, ಮೆಡಿಕಲ್ ಕಾಲೇಜು, ಮಾಲುಗಳನ್ನು ಹೊಂದಿರುವ ಉದ್ಯಮಿ. ಅವರು ತಮ್ಮ ವ್ಯಾಪಾರ ವ್ಯವಹಾರಗಳ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮೇಲೂ ನೀವು ನಿಮ್ಮ ಐಟಿ ಇಡಿ ದಾಳಿ ನಡೆಸಿ ನಿಮಗೆ 35 ಜತೆ ಪಂಚೆ, ಜುಬ್ಬಾ ಸಿಗುತ್ತೆ. ಅದನ್ನು ಬೇಕಾದರೆ ಹೊತ್ತುಕೊಂಡು ಹೋಗಿ.
ಇಂತಹ ಪರಿಸ್ಥಿತಿಯಲ್ಲಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಮಾಡಲು ನಿಮಗೆ ನಾಚಿಕೆಯಾಗಬೇಕು. ನೀವು ಈ ಬಾರಿ 50 ಸೀಟು ಮೇಲೆ ಗೆಲ್ಲುವುದಿಲ್ಲ. ಅಮಿತ್ ಶಾ ಅವರು ಮಂಡ್ಯಕ್ಕೆ ಹೋಗಿ ಜೆಡಿಎಸ್ ಬಗ್ಗೆ ಹಿಗ್ಗಾಮುಗ್ಗಾ ಬೈದರೂ ಒಳಗೆ ಹೊಂದಾಣಿಕೆ ಇದೆ. ಮುಸ್ಲಿಂ ಮತಗಳು ಕಾಂಗ್ರೆಸ್ ಹೋಗುವುದನ್ನು ತಡೆದು ಜೆಡಿಎಸ್ ಕಡೆ ವಾಲುವಂತೆ ಮಾಡುವ ಪ್ರಯತ್ನ. ಸಿ.ಪಿ ಯೋಗೇಶ್ವರ್, ಯತ್ನಾಳ್ ಅವರ ಹೇಳಿಕೆ ತನಿಖೆ ಮಾಡಿಸಿ.
ಇನ್ನು ಅಸ್ವತ್ಥ ನಾರಾಯಣ ಹಾಗೂ ಅವರ ಸಹೋದರರು ಬೆಂಗಳೂರನ್ನು ಎಷ್ಟು ಲೂಟಿ ಹೊಡೆದಿದ್ದಾರೆ ಎಂದು ಮುಂದಿನ ದಿನಗಳಲ್ಲಿ ಹೇಳುತ್ತೇವೆ.
ಇನ್ನು ಸೊರಬದಲ್ಲಿ ಕಳೆದ ಮೂರುವರೆ ವರ್ಷಗಳಲ್ಲಿ 16 ತಹಶೀಲ್ದಾರರು ಬದಲಾಗಿದ್ದಾರೆ. ಇಷ್ಟು ದಿನ ವರ್ಷಕ್ಕೊಂದು ವರ್ಗಾವಣೆ ಮಾಡುತ್ತಿದ್ದವರು ಈಗ ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದಾರೆ. ಮಾತೆತ್ತಿದರೆ ಶಿವಕುಮಾರ್ ಅವರ ಮೇಲೆ ಅಕ್ರಮ ಆಸ್ತಿ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ. ಯಡಿಯೂರಪ್ಪನವರು ಯಾಕೆ ಜೈಲಿಗೆ ಹೋದರು? ಎಂದು ಹೇಳಬೇಕು.
*ರಮೇಶ್ ಬಾಬು:*
ಕಳೆದ ಒಂದುವಾರದ ಹಿಂದೆ ಚಿತ್ರದಪರ್ಗದ ಚಳ್ಳಕೆರೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ತಹಶೀಲ್ದಾರ್ ಕಾಂಗ್ರೆಸ್ ಶಾಸಕ ರಘುಮೂರ್ತಿ ಅವರ ಮೇಲೆ ನಿಂದನೆ ಮಾಡಿ ಸಭೆ ಬಹಿಷ್ಕರಿಸಿ ಸಭೆಯಿಂದ ಹೋಗುತ್ತಾರೆ. ಅವರು ಬೆಂಗಳೂರಿನಲ್ಲಿ ಕಲಸ ಮಾಡಿದ್ದು, ಅಕ್ರಮ ನಡೆಸಿದ ಸಂಬಂಧ ದಾಳಿ ನಡೆದಿದೆ. ಅವರ ಮೇಲೆ ಆರೋಪವಿದ್ದರೂ ಈ ಸರ್ಕಾರ ಮತ್ತೆ ಅವರಿಗೆ ಮತ್ತೆ ಅಧಿಕಾರ ನೀಡಿದ್ದು ಯಾಕೆ? ಸೊರಬದಲ್ಲಿ 16 ತಹಶೀಲ್ದಾರ್ ವರ್ಗಾವಣೆಯಾಗಿದ್ದು, ಇದೊಂದು ದಂಧೆಯಾಗಿದೆ.
ಬಿಜೆಪಿ ಸರ್ಕಾರ ಬಂದ ನಂತರ ಕ್ಲಾಸ್ 1 ಹುದ್ದೆ ತುಂಬುತ್ತಿಲ್ಲ. ರಾಜ್ಯದಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿರುವವರಲ್ಲಿ ಶೇ.50ರಷ್ಟು ಬಡ್ತಿ ಮೂಲಕ ಹುದ್ದೆಗೆ ಬಂದಿದ್ದರೆ, ಉಳಿದವರು ಆರೋಪ ಹೊತ್ತಿರುವವರನ್ನು ಕಂದಾಯ ಇಲಾಖೆ ಮೂಲಕ ತಹಶೀಲ್ದಾರ್ ಹುದ್ದೆ ನೀಡಿ ದಂಧೆ ಮಾಡುತ್ತಿದೆ. ಬಿಜೆಪಿ ಕಾರ್ಯಾಂಗದ ಶೈಲಿಯನ್ನು ಹಣದ ಆಸೆಗೆ ಕಲುಶಿತ ಮಾಡಬೇಡಿ. ಚಳ್ಳಕೆರೆ ತಹಶೀಲ್ದಾರ್ ಅವರನ್ನು ಅಮಾನತು ಮಾಡಬೇಕು. ಇದರಲ್ಲಿ ಶ್ರೀರಾಮುಲು, ಆರ್.ಅಶೋಕ್ ಅವರು ಭಾಗಿಯಾಗಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಐದಾರು ಮಂತ್ರಿಗಳ ಗುದ್ದಾಟದ ಮಧ್ಯೆ ಬೆಂಗಳೂರು ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಇಟ್ಟುಕೊಂಡಿದ್ದಾರೆ. ಆರ್.ಅಶೋಕ್ ಕಂದಾಯ ಸಚಿವರು ತಮ್ಮ ಕ್ಷೇತ್ರ ಪದ್ಮನಾಭನಗರದಲ್ಲಿ 8 ವಾರ್ಡ್ ಗಳು ಬರುತ್ತವೆ. ಈ ಕ್ಷೇತ್ರದಲ್ಲಿ ಯಾವ ರೀತಿ ಬಿಬಿಎಂಪಿ ಕಾಮಗಾರಿಗಳ ಅವ್ಯವಹಾರ ನಡೆಯುತ್ತಿವೆ. ಅಶೋಕ್ ಅವರು ತಮ್ಮ ಕ್ಷೇತ್ರದಲ್ಲಿನ ಅವ್ಯವಹಾರದ ಬಗ್ಗೆ ತಿನಿಖೆಗೆ ಸಹಕಾರ ನೀಡುತ್ತಿಲ್ಲ ಯಾಕೆ? ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ 400 ಕೋಟಿಗೂ ಹೆಚ್ಚು ಕಾಮಗಾರಿ ನಡೆದಿವೆ. ಒಬ್ಬ ವ್ಯಕ್ತಿ ಪ್ರಭಾವಕ್ಕೆ ಒಳಗಾಗಿ ಎಲ್ಲ ಕಾಮಗಾರಿ ಅಕ್ರಮವಾಗಿ ಹಂಚಿಕೆಯಾಗಿದೆ. ಒಂದೇ ಸಮುದಾಯ ಭವನ ರಿಪೇರಿಗೆ 8 ಬಾರಿ ಖರ್ಚು ಮಾಡಿದ್ದಾರೆ. ಯಡಿಯೂರು ಮೈದಾನ ದಲ್ಲಿ ನಾಲ್ಕು ಕಾಮಗಾರಿ ಹೆಸರಲ್ಲಿ 4 ಕೋಟಿ ವೆಚ್ಚವಾಗಿವೆ. ಬಿಬಿಎಂಪಿ ಕಚೇರಿ 8 ಬಾರಿ ಕಾಮಗಾರಿ ಮಾಡಿ 1.22 ಕೋಟಿ ವೆಚ್ಚ ಮಾಡಿದ್ದಾರೆ. ಸೌಥ್ ಎಂಡ್ ಗಡಿಯಾರ ಕಾಮಗಾರಿಗೆ 3.21 ಕೋಟಿ ಹಣಕ್ಕೆ 10 ಬಾರಿ ಬಿಲ್ ಮಾಡಿದ್ದಾರೆ. ಯಡಿಯೂರು ಮಾರುಕಟ್ಟೆಯಲ್ಲಿ 5 ವರ್ಷಗಳಲ್ಲಿ 10 ಬಾರಿ ಕಾಮಗಾರಿ ಮಾಡಿ 5 ಕೋಟಿ ಖರ್ಚು ಮಾಡಿದ್ದಾರೆ. ಈ ರೀತಿ 500 ಕೋಟಿ ರೂ ಕಾಮಗಾರಿ ಇದೊಂದು ವಾರ್ಡ್ ನಲ್ಲಿ ನಡೆದಿದೆ. ಇನ್ನು 8 ವಾರ್ಡ್ ಗಳ ಮಾಹಿತಿಯನ್ನು ಕೇಳಿದ್ದೇವೆ.
ಅಶೋಕ್ ಅವರು ಪದ್ಮನಾಭನಗರ, ಬೆಂಗಳೂರು ರಾಜ್ಯದ ಹಿತದೃಷ್ಟಿಯಿಂದ ನಿಮ್ಮ ಕ್ಷೇತ್ರದ ಕಾಮಗಾರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶ ನೀಡಿ.
ಇನ್ನು ಯಡಿಯೂರಪ್ಪನವರು ಇಷ್ಟು ದಿನ ಬಿಜೆಪಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಸಂಬಂಧದ ಬಗ್ಗೆ ಮಾತನಾಡುತ್ತಿದ್ದರು. ಪ್ರಜಾಧ್ವನಿ ಯಾತ್ರೆ ನಂತರ ಸುಮ್ಮನಾಗಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಯಡಿಯೂರಪ್ಪ ಬೊಮ್ಮಾಯಿ ಅವರು ನಾನೊಂದು ತೀರಾ ನೀನೊಂದು ತೀರದಂತಾಗಿದ್ದಾರೆ. ದೆಹಲಿಯ ಕಾರ್ಯಕಾರಣಿ ಸಭೆ ಸಮಯದಲ್ಲಿ 30 ಶಾಸಕರು ಸಹಿ ಮಾಡಿ ಬೊಮ್ಮಾಯಿ ಅವರ ನಾಯಕತ್ವ ಬದಲಾಗಬೇಕು ಎಂದು ಪತ್ರ ಬರೆದಿದ್ದಾರೆ. ಇದನ್ನು ಬರೆದಿರುವವರು ಯಡಿಯೂರಪ್ಪನವರ ಬೆಂಬಲಿಗರು. ಅವರು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ಸಿದ್ಧರಿಲ್ಲ. ಹೀಗಾಗಿ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮುಗಿಲು ಮುಟ್ಟಿದೆ. ಇದೇ ಕಾರಣಕ್ಕೆ ಅಮಿತ್ ಶಾ ಅವರು ಮಂಡ್ಯಕ್ಕೆ ಬಂದಾಗ ಯಡಿಯೂರಪ್ಪ ತಪ್ಪಿಸಿಕೊಂಡರು. ನಳೀನ್ ಕುಮಾರ್ ಸಿ.ಟಿ ರವಿ ಅವರದು ಒಂದು ತಂಡ, ಯತ್ನಾಳ್ ಅವರದು ಮತ್ತೊಂದು ತಂಡ, ಬೊಮ್ಮಾಯಿ ಅವರದು, ಯಡಿಯೂರಪ್ಪನವರದ್ದು ಮತ್ತೊಂದು ತಂಡವಾಗಿದೆ. ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ನಾಯಕರ ಜತೆ ವ್ಯವಹಾರ ಮಾಡಲು ಸಮಯ ಸಾಲುತ್ತಿಲ್ಲ.
[24/01, 4:08 PM] Kpcc official: ತುಮಕೂರಿನಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ರಾಣಿ ಸತೀಶ್, ಯು ಟಿ ಖಾದರ್, ಎಚ್ ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಕೆ ಎನ್ ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.
[24/01, 4:25 PM] Kpcc official: *ತುಮಕೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು*
ಇಂದು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ನಮಸ್ಕರಿಸಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೇವೆ. ದೇಶದಲ್ಲಿ ಧರ್ಮ, ಸಂಸ್ಕೃತಿ, ಅಕ್ಷರ ಹಾಗೂ ಅನ್ನ ದಾಸೋಹ ನಮ್ಮ ಆಸ್ತಿ. ಈ ಕಲ್ಪತರು ನಾಡು ಪ್ರಜ್ಞಾವಂತರ ನಾಡು. ಈ ನಾಡಿಗೆ ಇಂದು ಈ ಪ್ರಜಾಧ್ವನಿ ಯಾತ್ರೆ ಬಂದಿದೆ. ರಾಜ್ಯದ ಜನರ ನೋವು, ಅಭಿಪ್ರಾಯ ಅರಿತು, ಅವರಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ಯಾತ್ರೆ ಮಾಡುತ್ತಿದ್ದೇವೆ.
ನಮ್ಮ ರಾಜ್ಯದ ರೈತರು, ಕಾರ್ಮಿಕರು, ವರ್ತಕರು, ಯುವಕರು, ಮಹಿಳೆಯರಿಗೆ ಶಕ್ತಿ ತುಂಬಲು ಕಾಂಗ್ರೆಸ್ ಶ್ರಮಿಸುತ್ತಿದ. ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಜನರ ಜೀವನದಲ್ಲಿ ಬದಲಾವಣೆ ತರಲು ಎಲ್ಲ ರೀತಿ ವಿಫಲವಾಗಿದೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮ್ಮ ಖಾತೆಗೆ 15 ಲಕ್ಷ ನೀಡುವುದಾಗಿ ಹೇಳಿದ್ದರು. ಇವುಗಳಲ್ಲಿ ಯಾವುದನ್ನಾದರೂ ಮಾಡಿದ್ದಾರಾ?
ಬಿಜೆಪಿ 600 ಭರವಸೆ ನೀಡಿ, ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ 1 ಲಕ್ಷದ ವರೆಗಿನ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು. ಅಚ್ಛೇದಿನ ನೀಡುತ್ತೇವೆ ಎಂದಿದ್ದರು. ಯಾವುದಾದರೂ ಸಿಕ್ಕಿದೆಯಾ ? ಕೋವಿಡ್ ಸಮಯದಲ್ಲಿ ಪರಿಹಾರ ನೀಡಲಿಲ್. ಈ ದುರಾಡಳಿತ ಕೊನೆ ಆಗಬೇಕು. ಪರೀಕ್ಷೆ ಕಾಲ ಬಂದಿದೆ. 45 ದಿನಗಳ ನಂತರ ನಿಮ್ಮ ಸರ್ಕಾರ ಬರಲಿದೆ. ರಾಜೇಂದ್ರ ಎಂಎಲ್ಸಿ ಆಗುವ ಮುನ್ನ, ಕಾಂತರಾಜು ಹಾಗೂ ಕೋಲಾರದಲ್ಲಿ ಮನೋಹರ್ ಅವರು ಹಾಲಿ ಎಂಎಲ್ಸಿ ಸ್ಥಾನ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದರು. ನಂತರ ನಡೆದ ಚುನಾವಣೆ ನಡೆಯಿತು. ನಮ್ಮ ಅಧಿಕಾರ ಇದ್ದಾಗ, ಮಂಡ್ಯ ತುಮಕುರು, ಕೋಲಾರದಲ್ಲಿ ಸೋತಿದ್ದೆವು. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ಪಧವೀದರರು, ಶಿಕ್ಷಕರು ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ದಿಕ್ಸೂಚಿ ನೀಡಲು ಈ ಮೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದರು.
ಗುಬ್ಬಿಯ ಶ್ರೀನಿವಾಸ್, ಮಧು ಮಾದೇಗೌಡರು, ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸ ಗೌಡರು, ವೈಎಸ್ವಿ ದತ್ತಾ, ಮಂಜುನಾಥ ಗೌಡರು, ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರೆಲ್ಲರೂ ನಾಯಕರು, ಜನಪ್ರತಿನಿಧಿಗಳು, ವಿದ್ಯಾವಂತರು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಿದ್ದಾರೆ.
ರಾಹುಲ್ ಗಾಂಧಿ ಅವರು 3570 ಕಿ.ಮೀ ಹೆಜ್ಜೆ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ 511 ಕಿ.ಮೀ ಹೆಜ್ಜೆ ಹಾಕಿದ್ದೇವೆ. ರಾಜ್ಯದಲ್ಲಿ ಸಾಮರಸ್ಯಕ್ಕೆ, ಬೆಲೆ ಏರಿಕೆ ನಿಯಂತ್ರಣಕ್ಕೆ, ಯುವಕರ ಭವಿಷ್ಯ ರಕ್ಷಿಸಿ, ಮೆಕೆದಾಟು ಆಣೆಕಟ್ಟು ಕಟ್ಟಿ ಕಾವೇರಿ ಜಲಾನಯನ ಪ್ರದೇಶಕ್ಕೆ ನೀರು ಒದಗಿಸಲು ಹೆಜ್ಜೆ ಹಾಕಿದ್ದೇವೆ. ಬಿಜೆಪಿ, ಜೆಡಿಎಸ್ ಈ ರೀತಿ ಒಂದು ಹೋರಾಟ ಮಾಡಿದರಾ?
ಅವರು ಅಧಿಕಾರ ಇದ್ದಾಗ ಏನಾದರೂ ಕೆಲಸ ಮಾಡಿದ್ದಾರಾ? ಈಗ ಟೀಕೆ ಮಾಡುತ್ತಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿದುಕೊಳ್ಳುತ್ತವೆ. ಕುವೆಂಪು ಅವರು ಹೇಳುವಂತೆ ಸತ್ತಂತೆ ಬದುಕಬಾರದು. ಸತ್ತು ಬದುಕುವುದು ಲೇಸು. ಇದನ್ನು ಕಾಂಗ್ರೆಸ್ ಸದಾ ಮಾಡಿಕೊಂಡು ಬಂದಿದೆ.
ನಾವು ಪಾದಯಾತ್ರೆ ಮಾಡುವಾಗ ಚಿತ್ರದುರ್ಗದ ಬಳಿ ಹಿರಿಯ ಮಹಿಳೆ ಬಂದು ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಟ್ಟರು. ಆಗ ಇದು ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಬೆಳೆದಿದ್ದೇವೆ ತಗೊಳ್ಳಿ ಎಂದು ಹೇಳಿದರು. ಉಳುವವನಿಗೆ ಭೂಮಿ, ನಿವೇಶನ, ಮನೆ, ಕೆಲಸ, ಪಿಂಚಣಿ ಕೊಟ್ಟಿದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ. ಬಿಜೆಪಿ ನಿಮಗೆ ಒಂದು ಕಾರ್ಯಕ್ರಮ ನೀಡಿಲ್ಲ.
ನೀವು ನಾಳೆಗೆ ಕಾಯಬೇಡಿ. ಇಂದು ನಿಮ್ಮ ಕೈಯಲ್ಲಿ ನಿಮ್ಮ ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯವಿದೆ. ನೀವು ಪ್ರತಿಜ್ಞೆ ಮಾಡಿ ಭ್ರಷ್ಟ ಹಾಗೂ ಕಳಂಕಿತ ಬಿಜೆಪಿ ಸರ್ಕಾರ ತೊಲಗಿಸಲು. ಜನ ಸಂಕಷ್ಟದಲ್ಲಿದ್ದಾರೆ, ಅವರಿಗೆ ನೆರವಾಗಲು ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹಜ್ಯೋತಿ ಎಂಬ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆವು. ನಂತರ ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷದಿಂದ ಏನನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯ ಸಂಗ್ರಹಿಸಿದೆವು. ನಂತರ ನಮ್ಮ ಪಕ್ಷದ ಎಲ್ಲ ನಾಯಕರು ಚರ್ಚೆ ಮಾಡಿ ಪ್ರತಿ ತಿಂಗಳು ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವ ಗೃಹಲಕ್ಷ್ಮಿ ಎಂಬ ಎರಡನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಆ ಮೂಲಕ ಬೆಲೆ ಏರಿಕೆಯಿಂದ ಮಹಿಳೆಯರ ರಕ್ಷಣೆ ಮಾಡಲು ಈ ಕಾರ್ಯಕ್ರಮ ನೀಡುತ್ತಿದ್ದೇವೆ. ವಿದ್ಯುತ್ ಮೂಲಕ ವರ್ಷಕ್ಕೆ 18 ಸಾವಿರ, ಮಹಿಳೆಯರಿಗೆ 24 ಸಾವಿರ ಪ್ರತಿ ಕುಟುಂಬಕ್ಕೆ ಉಳಿತಾಯವಾಗುತ್ತದೆ. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿ ನೀಡಿದೆಯಾ?
ಬಿಜೆಪಿ ನಿಮ್ಮ ಭಾವನೆ ಕೆರಳಿಸುತ್ತಿದೆ. ನಾವು ನುಡಿದಂತೆ ನಡೆಯುತ್ತೇವೆ. ನಾವು ಮಾತು ತಪ್ಪಿದರೆ ರಾಜಕೀಯ ಬದುಕಿನಿಂದ ನಿವೃತ್ತಿ ಪಡೆಯುತ್ತೇವೆ ಎಂಬ ಶಪಥ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ವಚನ. ನಮ್ಮ ಯೋಜನೆ ಕೇಳಿದ ನಂತರ ಬಿಜೆಪಿ ನಾಯಕರ ಮನಸ್ಸು ವಿಲವಿಲನೆ ಒದ್ದಾಡುತ್ತಿದೆ. ಜೆಡಿಎಸ್, ಕುಮಾರಸ್ವಾಮಿಯ ಎದೆ ಡವಡವ ಎಂದು ಒಡೆದು ಕೊಳ್ಳುತ್ತಿದೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಇಂತಹ ಕಾರ್ಯಕ್ರಮ ನೀಡಲಿಲ್ಲ? ನಾವು ಘೋಷಣೆ ಮಾಡಿದ ನಂತರ ಈಗ ಬಿಜೆಪಿಯವರು ನಾವು ಈ ಕಾರ್ಯಕ್ರಮ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಏರಲಾಗದೆ, ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಅಧಿಕಾರ ಇದ್ದಾಗ ಮಾಡದೇ ಅಧಿಕಾರ ಹೋಗುವಾಗ ಮಾಡುತ್ತೇವೆ ಎಂದರೆ ಆಗುತ್ತದೆಯಾ?
ಸರ್ಕಾರ ಫೆ.17ರಂದು ಬಜೆಟ್ ಮಂಡನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಬಜೆಟ್ ನಲ್ಲಿ ಏನು ಹೇಳಿದರೂ ಜಾರಿಗೆ ಬರುವುದಿಲ್ಲ. ಅವರು ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿ ಮಾಡಲಿಲ್ಲ. ನಾವು ಒಳ್ಳೆ ಕೆಲಸ ಮಾಡುತ್ತೇವೆ ಎಂದು ಹೋದರೆ ಅದು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ಉಚಿತವಾಗಿ ಅಕ್ಕಿ ನೀಡಲಿಲ್ಲವೇ? ಬಸವ ಜಯಂತಿ ದಿನ ಅಧಿಕಾರ ಸ್ವೀಕರಿಸಿ, ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದರು. ಇಲ್ಲಿ ಪಾವಗಡದವರು ಇದ್ದೀರಿ. 50 ಸಾವಿರ ಎಕರೆ ಬೆಲೆ ಬಾಳುತ್ತಿದ್ದ ಜಮೀನಿನಲ್ಲಿ ವರ್ಷಕ್ಕೆ 24 ಸಾವಿರ ಬಾಡಿಗೆ ಬರುವಂತೆ ಮಾಡಿ 14 ಸಾವಿರ ಎಕರೆಗಳಲ್ಲಿ ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇವೆ. ನಮ್ಮ ಕೈಯಲ್ಲಿ ಚಿತ ವಿದ್ಯುತ್ ನೀಡಲು ಆಗುವುದಿಲ್ಲವೇ? ರೈತರಿಗೆ ನೀಡಲಾಗುತ್ತಿದ್ದ 6 ತಾಸು ಗಂಟೆಯನ್ನು 7 ತಾಸಿಗೆ ಏರಿಕೆ ಮಾಡಿದೆವು. ಬಿಜೆಪಿಯವರು 10 ಗಂಟೆಗಳ ಕಾಲ ಕರೆಂಟ್ ನೀಡುತ್ತೇವೆ ಎಂದಿದ್ದರು. ಯಾಕೆ ನೀಡಲು ಆಗಲಿಲ್ಲ? ಈ ಸರ್ಕಾರದ 40% ಕಮಿಷನ್ ಲಂಚವನ್ನು ತಡೆದರೆ, ಬಡವರ ಜೇಬು ತುಂಬಬಹುದು.
ಮುಂದಿನ ತಿಂಗಳು ಮೊದಲ ವಾರದಿಂದ ಪ್ರತಿ ತಾಲೂಕಿಗೆ ಭೇಟಿ ಮಾಡುತ್ತೇವೆ. ಮೊದಲು ನಾನು ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇತ್ರಗಳಿಗೆ, ಸಿದ್ದರಾಮಯ್ಯನವರು ಉತ್ತರ ಭಾಗದ ಜಿಲ್ಲೆಗಳಲ್ಲಿ ಕ್ಷೇತ್ರಗಳಿಗೆ ಭೇಟಿ ನೀಡುತ್ತೇವೆ. ನಂತರ ನಾನು ಉತ್ತರ ಭಾಗದ ಕ್ಷೇತ್ರಗಳಿಗೆ ಹೋದರೆ, ಸಿದ್ದರಾಮಯ್ಯನವರು ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ನೀವು ಪ್ರತಿ ಮನೆಗೆ ನಮ್ಮ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸಬೇಕು. ಪಕ್ಷದ ಸದಸ್ಯತ್ವ ಮಾಡಿದ ರೀತಿ ಪ್ರಚಾರ ಮಾಡಿ. ನಿಮ್ಮ ಆಶೀರ್ವಾದ ನಮಗೆ ನೀಡಿ ಜಿಲ್ಲೆಯಿಂದ 10 ಶಾಸಕರನ್ನು ಆರಿಸಿ ಕಳುಹಿಸಬೇಕು ಎಂದು ಮನವಿ ಮಾಡುತ್ತೇನೆ.
[24/01, 6:46 PM] Kpcc official: "PSI ಹಗರಣದ ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು 3 ಕೋಟಿ ಕೇಳಿದ್ದರು, ನಾನು 76 ಲಕ್ಷ ಕೊಟ್ಟಿದ್ದೇನೆ" ಎಂಬ ಗಂಭೀರ ಆರೋಪ ಮಾಡಿದ್ದಾನೆ ಪ್ರಮುಖ ಆರೋಪಿ ಆರ್.ಡಿ ಪಾಟೀಲ್.
ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ @BSBommai ಅವರೇ, ನಿಮ್ಮ ಪಾರದರ್ಶಕತೆ ಇದೇನಾ?
ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ.
[24/01, 6:46 PM] Kpcc official: PSI ಹಗರಣದ ಪಾರದರ್ಶಕತೆ ಹೇಗಿದೆ ಎಂದು ಹಗರಣದ ಆರೋಪಿಯಿಂದಲೇ ಬೆತ್ತಲಾಗಿದೆ.
ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದಾಗ ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂಬ ಸೋಗಲಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗೃಹಸಚಿವ @JnanendraAraga ಸಿಐಡಿ ಅಧಿಕಾರಿಗಳ 3 ಕೋಟಿ ಡೀಲಿಂಗ್ ಬಗ್ಗೆ ಈಗ ಮಾತಾಡುತ್ತಿಲ್ಲವೇಕೆ?
[24/01, 7:26 PM] Kpcc official: ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ನಡೆದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ಅಂಜನಮೂರ್ತಿ, ಮಾಜಿ ಸಂಸದರಾದ ಚಂದ್ರಪ್ಪ, ನಾರಾಯಣಸ್ವಾಮಿ, ಶಾಸಕರಾದ ಶರತ್ ಬಚ್ಚೇಗೌಡ, ವೆಂಕಟರಮಣಯ್ಯ ಮತ್ತಿತರರು ಭಾಗವಹಿಸಿದ್ದರು.
[24/01, 9:35 PM] Kpcc official: ದೊಡ್ಡಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತುಗಳು...
Post a Comment