[06/06, 4:27 PM] +91 91644 68888: *ಶ್ರೀ ಗುರುರಾಮವಿಠಲ ದಾಸರ ರಚನೆ*
ಹರಿಯೇಕಾಯೋ ಶರಧಿಶಯನನೇ
ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ
ಪ
ನಿರುತ ನಿನ್ನ ಸ್ಮರಿಸುವ ಸ | ಜ್ಜನರಘಗಳ ಪರಿಹರಿಸುವ
ಬಿರುದ ಧರಿಸಿ ಮೆರೆಯವೆ ನೀ ಧರೆಯೊಳು ಶುಭಚರಿತನೆ
ಅ.ಪ
ವರರುಕ್ಮಾಂಗದ ಪ್ರಹ್ಲಾದರು ದ್ರೌಪದಿ ವಿಭೀಷಣಶ-
ಬರಿಧೃವಮುಖರೆಲ್ಲರು ನಿನ ಸಿರಿ ನಾಮದ ಮಹಿಮೆಯು
1
ಬುದ್ಧಿವಂತರೆಲ್ಲ ಮನವ ತಿದ್ದಿಕೊಳುತಲಹರ್ನಿಶಿಯಲಿ
ವುದ್ಧವಪ್ರಿಯ ನಿನ್ನಪಾದ ಪದ್ಮಮಧುಪರೆನಿಪರು
2
ಧೃಹಿಣನುಮಗ ಮೊಮ್ಮಗ ನಿನಗಹಿಭೂಷಣ ನಿನ್ನ ಮಹಿಮೆ
ಗಹನವಳವಡುವಡಲ್ಲವು ಮಹಿಯೊಳು ಪಾಮರರಿಗೆ
3
ಸಕಲಕು ನೀನೆ ಗತಿಯೆಂದ ಕುಟಿಲರು ನಿರಂತರ ಪರ
ಸುಖವನು ತಾವ್ಕೋರದೆ ಸದ್ಭಕುತಿಯಿಂದ ಸೇವಿಪರು
4
ಅರಿಯದ ದುರ್ಜನರೀದುಸ್ತರ ಸಂಸಾರದಿ ಮುಳುಗುತ
ಹೊರಳಿ ಹೊರಳಿ ನೋಯ್ವರು ಶ್ರೀ ಗುರುರಾಮ ವಿಠಲನೇ
5
[06/06, 4:27 PM] +91 91644 68888: Sathyavahini
ಪ್ರಯಾಣಕಾಲೇ ಪಠನೀಯಸ್ತೋತ್ರಾಣಿ
ಶ್ರೀಗುರುಭ್ಯೋ ನಮ:
*ಪ್ರಯಾಣಕಾಲದಲ್ಲಿ ಪಠಿಸಲೇಬೇಕಾದ ನಮ್ಮ ಸರ್ವಾಪತ್ತುಗಳನ್ನೂ ಪರಿಹರಿಸಿ ರಕ್ಷಿಸಿ ನಮಗೆ ರಕ್ಷಾಕವಚವಾಗಿರುವ ಸ್ತೋತ್ರಗಳು*
ನಾವು ದಾರಿಯಲ್ಲಿ ಪ್ರಯಾಣಿಸುವಾಗ ಮುಖ್ಯವಾಗಿ ಜೀವನಪಥದಲ್ಲಿ ಸಾಗುವಾಗ ವಿಧವಿಧ ಆಪತ್ತುಗಳು ನಿರೀಕ್ಷಿತವಾಗಿಯೊ ಅನಿರೀಕ್ಷಿತವಾಗಿಯೊ ಎದುರಾಗುತ್ತವೆ. ಅವುಗಳನ್ನು ಎದುರಿಸುವ ಶಕ್ತಿ ನಮಗಿಲ್ಲ. ಆದ್ದರಿಂದಲೇ ಪ್ರಾಚೀನರು ನಮಗೆ ರಕ್ಷಾಕವಚವಾಗಿರುವ ಸ್ತೋತ್ರಗಳನ್ನು ರಚಿಸಿ ಕೊಟ್ಟಿದ್ದಾರೆ.
ಇವುಗಳ ಪಠಣಮಾತ್ರದಿಂದ ಮಹಾವಿಪತ್ತುಗಳಿಂದ ಹೂವಿನಂತೆ ರಕ್ಷಣೆಯಾಗುತ್ತದೆ. ಸ್ವತಃ ಜಗದೀಶ್ವರನೇ ಬಂದು ನಮ್ಮನ್ನು ರಕ್ಷಿಸುತ್ತಾನೆ. ಇದಕ್ಕೆ ಅನೇಕ ಉದಾಹರಣೆಗಳಿವೆ.
ಇಂತಹ ಸ್ತೋತ್ರಗಳನ್ನು ಪ್ರತಿನಿತ್ಯ ಒಂದುಬಾರಿಯಾದರೂ ಪಠಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಪ್ರಯಾಣಕಾಲದಲ್ಲಿಯಂತೂ ವಿಶೇಷವಾಗಿ ಪಠಿಸಲೇಬೇಕು. ಅದಕ್ಕಾಗಿ ಆ ಸ್ತೋತ್ರಗಳ ಸಂಗ್ರಹವನ್ನು ಇಲ್ಲಿ ಯಥಾಮತಿ ಮಾಡಲಾಗಿದೆ.
ಜೊತೆಗೆ ಅರ್ಥಾನುಸಂಧಾನಕ್ಕೆ ಅನುಕೂಲವಾಗಲು ಆ ಸ್ತೋತ್ರಗಳ ಮಹತ್ವ ಹಾಗೂ ತಾತ್ಪರ್ಯವನ್ನು ಮುಂದೆ ನೀಡಲಾಗಿದೆ.
ಮೊದಲು ಸಂಕಲ್ಪವನ್ನು ಮಾಡಿ ಅನಂತರ ಸ್ತೋತ್ರವನ್ನು ಪಠಿಸಿ ಅನಂತರ ಕೃಷ್ಣಾರ್ಪಣವನ್ನು ಬಿಡಬೇಕು.
ಅಥ ಶುಭಮುಹೂರ್ತೇ ಪ್ರಯಾಣಕಾಲೇ ಸಂಭಾವಿತಸಕಲಾಪತ್ಪರಿಹಾರಾರ್ಥಂ ಆಪತ್ಪರಿಹಾರಕಸ್ತೋತ್ರಪಠನಂ ಭಾರತೀರಮಣಮುಖ್ಯಪ್ರಾಣಾಂತರ್ಗತಗರುಡಾರೂಢಲಕ್ಷ್ಮೀನರಸಿಂಹಪ್ರೇರಣಯಾ ಭಾರತೀರಮಣಮುಖ್ಯಪ್ರಾಣಾಂತರ್ಗತಗರುಡಾರೂಢಲಕ್ಷ್ಮೀನರಸಿಂಹಪ್ರೀತ್ಯರ್ಥಂ ಕರಿಷ್ಯೇ. ಅಸ್ಮತ್ಪ್ರಯಾಣಂ ಭಗವತ್ಪ್ರದಕ್ಷಿಣರೂಪಂ ಭೂಯಾತ್
अग्रतो नारसिंहश्च पृष्ठतो गोपिनन्दनः।
उभयोः पार्श्वयोरास्तां सशरौ रामलक्ष्मणौ।।
प्रयाणे गरुडारूढं पारिजातहरं हरिम्।
सत्यभामायुतं कृष्णं वन्दे वाञ्छितसिद्धये।।
अन्धोऽहं करुणासिन्धो वीक्षे न क्षेमपद्धतिम्।
इन्दिरेश करं गृह्णन् वर्तयानिन्द्यवर्त्मनि।।
नमस्ते नरसिंहाय समस्तखलवैरिणे।
प्रमास्तु मे भ्रमो मास्तु श्रमोऽस्तु मम वैरिणाम्।।
माता नृसिंहश्च पिता नृसिंहो भ्राता नृसिंहश्च सखा नृसिंहः।
विद्या नृसिंहो द्रविणं नृसिंहः स्वामी नृसिंहः सकलं नृसिंहः।।
इतो नृसिंहश्च ततो नृसिंहो यतोयतो यामि ततो नृसिंहः।
नृसिंहदेवादपरं न किञ्चित् तस्मान्नृसिंहं शरणं प्रपद्ये।।
भर्जनं भवबीजानां सर्जनं सर्वसम्पदाम्।
त्रासनं यमदूतानां नृहरेर्नामगर्जनम्।।
नरसिंह नरसिंह नरसिंह
ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ ಹಿಂದು ಮುಂದುಪದ್ರವವಾಗದಂತೆ ಇಂದಿರೇರಮಣ ಕಾಯುತ್ತಲಿರೆ ಎನಗಾವ ಬಂಧನಗಳಿಲ್ಲ ಧನ್ಯ ಧನ್ಯ ಕಂದರ್ಪನಯ್ಯ ಸಿರಿ ವಿಜಯವಿಟ್ಠಲರೇಯ ಎಂದೆಂದಿಗಾಪತ್ತು ಬರಲೀಯನೋ
ಅನೇನ ಆಪತ್ಪರಿಹಾರಕಸ್ತೋತ್ರಪಠನೇನ ಭಾರತೀರಮಣಮುಖ್ಯಪ್ರಾಣಾಂತರ್ಗತಗರುಡಾರೂಢ: ಲಕ್ಷ್ಮೀನರಸಿಂಹ: ಪ್ರೀಯತಾಮ್। ಸರ್ವೇ ಸಜ್ಜನಾ: ಸಂರಕ್ಷಿತಾ: ಸ್ವಧರ್ಮನಿಷ್ಠಾಶ್ಚ ಭವಂತು।
ಸ್ತೋತ್ರಗಳ ಮಹತ್ವ ಹಾಗೂ ತಾತ್ಪರ್ಯ
अग्रतो नारसिंहश्च पृष्ठतो गोपिनन्दनः।
उभयोः पार्श्वयोरास्तां सशरौ रामलक्ष्मणौ।।
ನಮ್ಮ ಎದುರಿನಲ್ಲಿ ನರಸಿಂಹದೇವರು ನಿಂತು ನಮ್ಮನ್ನು ರಕ್ಷಿಸುತ್ತಾರೆ. ಹಿಂಭಾಗದಲ್ಲಿ ಶ್ರೀಕೃಷ್ಣಪರಮಾತ್ಮನು ನಿಂತು ರಕ್ಷಿಸುತ್ತಾನೆ. ಎರಡು ಬದಿಗಳಲ್ಲಿ ರಾಮಲಕ್ಷ್ಮಣರು ನಿಂತು ರಕ್ಷಿಸುತ್ತಾರೆ.
ಯಾದವಾರ್ಯರು ಶಾಸ್ತ್ರಾಧ್ಯಯನವನ್ನು ಮಾಡುವ ಮೊದಲು ಚಿನ್ನ-ಬೆಳ್ಳಿವ್ಯಾಪಾರವನ್ನು ಮಾಡುತ್ತಿದ್ದರು. ತನ್ನಿಮಿತ್ತವಾಗಿ ಒಂದು ದಿನ ಬೆಲೆಬಾಳುವ ಚಿನ್ನ-ಬೆಳ್ಳಿ-ಮುತ್ತು-ರತ್ನಗಳನ್ನು ಹೊತ್ತು ಏಕಾಂಗಿಯಾಗಿ ಸಾಗುತ್ತಿದ್ದರು.
ಇದನ್ನು ಗಮನಿಸಿದ ಕಳ್ಳರು ಏಕಾಏಕಿ ಯಾದವಾರ್ಯರ ಮೇಲೆ ಆಕ್ರಮಣಕ್ಕೆ ಮುಂದಾದರು.
ಆದರೆ ಯಾದವಾರ್ಯರು ಎಲ್ಲಿಯೇ ಹೋಗಬೇಕಾದರೂ ಅಗ್ರತೋ ನಾರಸಿಂಹಶ್ಚ.. ಎಂಬ ಈ ಶ್ಲೋಕವನ್ನು ಹೇಳಿಯೇ ಹೊರಡುತ್ತಿದ್ದರು. ಅದರ ಪ್ರಭಾವದಿಂದ ನರಸಿಂಹ-ಕೃಷ್ಣ-ರಾಮ-ಲಕ್ಷ್ಮಣರು ಯಾದವಾರ್ಯರ ಸುತ್ತಲೂ ನಿಂತು ರಕ್ಷಿಸುತ್ತಿದ್ದರು.
ಈ ದೃಶ್ಯವನ್ನು ಕಂಡ ಕಳ್ಳರು ಹೆದರಿ ಯಾದವಾರ್ಯರಿಗೆ ನಮಿಸಿ ಕ್ಷಮೆಯನ್ನು ಪ್ರಾರ್ಥಿಸಿ ಹೋಗುತ್ತಾರೆ.
ಈ ಘಟನೆಯೇ ಯಾದವಾರ್ಯರು ಶಾಸ್ತ್ರಮಾರ್ಗಕ್ಕೆ ಬರಲು ಪ್ರೇರಕವಾಗುತ್ತದೆ. ಅಷ್ಟು ಶಕ್ತಿಶಾಲಿಯಾದ ಸ್ತೋತ್ರವಿದು.
प्रयाणे गरुडारूढं पारिजातहरं हरिम्।
सत्यभामायुतं कृष्णं वन्दे वाञ्छितसिद्धये।।
ಸತ್ಯಭಾಮೆಯ ಜೊತೆಗೂಡಿ ಗರುಡನ ಮೇಲೆ ಕುಳಿತು ನರಕಾಸುರನನ್ನು ಸಂಹರಿಸಿ ಸತ್ಯಭಾಮೆಯ ಅಪೇಕ್ಷೆಯಂತೆ ದೇವಲೋಕದಲ್ಲಿದ್ದ ಪಾರಿಜಾತವೃಕ್ಷವನ್ನು ಭೂಲೋಕಕ್ಕೆ ತಂದ ಶ್ರೀಕೃಷ್ಣಪರಮಾತ್ಮನನ್ನು ಪ್ರಯಾಣಕಾಲದಲ್ಲಿ ಸ್ಮರಿಸುವುದರಿಂದ ಅಪೇಕ್ಷಿತಸತ್ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣವಾಗುತ್ತವೆ.
अन्धोऽहं करुणासिन्धो वीक्षे न क्षेमपद्धतिम्।
इन्दिरेश करं गृह्णन् वर्तयानिन्द्यवर्त्मनि।।
ಕುರುಡರಿಗೆ ದಾರಿ ಕಾಣುವುದಿಲ್ಲ. ಅವರನ್ನು ಮತ್ತೊಬ್ಬರು ಕೈಹಿಡಿದು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕು. ಅಂತೆಯೇ ಕ್ಷೇಮದ ದಾರಿ ಯಾವುದು ಎಂದು ಗೊತ್ತಿಲ್ಲದ ನಮ್ಮ ಕೈ ಹಿಡಿದು ಲಕ್ಷ್ಮೀಪತಿಯು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಲಿ.
ಶ್ರೀಮದ್ವಾದಿರಾಜಗುರುಸಾರ್ವಭೌಮರು ಸರಸಭಾರತೀವಿಲಾಸದಲ್ಲಿ ದಾಖಲಿಸಿದ ನಮ್ಮ ಮುಗ್ಧತೆಯನ್ನು ದೇವರಲ್ಲಿ ನಿವೇದಿಸುವ ಅದ್ಭುತವಾದ ಶ್ಲೋಕವಿದು.
नमस्ते नरसिंहाय समस्तखलवैरिणे।
प्रमास्तु मे भ्रमो मास्तु श्रमोऽस्तु मम वैरिणाम्।।
ಸಮಸ್ತದುಷ್ಟರನ್ನು ಸಂಹರಿಸುವ ನರಸಿಂಹನೆ! ನಿನಗೆ ನಮಸ್ಕಾರ. ನಮಗೆ ಯಾವುದೇ ರೀತಿಯ ಭ್ರಮೆ ಬರದಿರಲಿ. ಯಥಾರ್ಥಜ್ಞಾನವೆ ಇರಲಿ. ನಮ್ಮ ಸಾಧನೆಗೆ ತೊಡಕಾದ ಶತ್ರುಗಳಿಗೆ ಶ್ರಮವೇ ಇರಲಿ.
माता नृसिंहश्च पिता नृसिंहो भ्राता नृसिंहश्च सखा नृसिंहः।
विद्या नृसिंहो द्रविणं नृसिंहः स्वामी नृसिंहः सकलं नृसिंहः।।
ನಮ್ಮ ತಾಯಿ ತಂದೆ ಅಣ್ಣ ತಮ್ಮ ಸ್ನೇಹಿತರು ವಿದ್ಯೆ ಸಂಪತ್ತು ರಕ್ಷಕ ಎಲ್ಲವೂ ನರಸಿಂಹನೆ.
इतो नृसिंहश्च ततो नृसिंहो यतोयतो यामि ततो नृसिंहः।
नृसिंहदेवादपरं न किञ्चित् तस्मान्नृसिंहं शरणं प्रपद्ये।।
ನಮ್ಮ ಸಮೀಪದಲ್ಲಿ ದೂರದಲ್ಲಿ ನಾವು ಎಲ್ಲಿಎಲ್ಲಿ ಹೋಗುತ್ತೇವೆ ಆ ಎಲ್ಲ ಸ್ಥಳಗಳಲ್ಲಿ ನರಸಿಂಹದೇವರೆ ಇರುತ್ತಾರೆ. ಅಲ್ಲಿದ್ದು ನಮ್ಮನ್ನು ರಕ್ಷಿಸುತ್ತಾರೆ. ನರಸಿಂಹದೇವರನ್ನು ಬಿಟ್ಟು ಬೇರೆ ಯಾರು ರಕ್ಷಕರಿಲ್ಲ. ಆದ್ದರಿಂದ ನರಸಿಂಹದೇವರನ್ನೇ ಶರಣು ಹೊಂದಬೇಕು.
भर्जनं भवबीजानां सर्जनं सर्वसम्पदाम्।
त्रासनं यमदूतानां नृहरेर्नामगर्जनम्।।
ನರಸಿಂಹದೇವರ ನಾಮಸ್ಮರಣೆಯಿಂದ ಸಂಸಾರಬಂಧವು ಸಡಿಲವಾಗುತ್ತದೆ. ಎಲ್ಲಾ ಸತ್ಸಂಪತ್ತುಗಳು ಪ್ರಾಪ್ತವಾಗುತ್ತವೆ. ಯಮದೂತರ ಭಯವು ಇರುವುದಿಲ್ಲ.
नरसिंह नरसिंह नरसिंह
ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ ಹಿಂದು ಮುಂದುಪದ್ರವವಾಗದಂತೆ ಇಂದಿರೇರಮಣ ಕಾಯುತ್ತಲಿರೆ ಎನಗಾವ ಬಂಧನಗಳಿಲ್ಲ ಧನ್ಯ ಧನ್ಯ ಕಂದರ್ಪನಯ್ಯ ಸಿರಿ ವಿಜಯವಿಟ್ಠಲರೇಯ ಎಂದೆಂದಿಗಾಪತ್ತು ಬರಲೀಯನೋ
ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಹಲಿಗೆಯನ್ನು ಹಿಡಿದು ನಮಗೆ ಯಾವುದೇ ತೊಂದರೆಯಾಗದಂತೆ ಜೊತೆಗಿದ್ದು ಪರಮಾತ್ಮನು ರಕ್ಷಿಸುವನು.
ಈ ಉಗಾಭೋಗವನ್ನು ವಿಜಯದಾಸರು ರಚಿಸಿದ್ದಾರೆ. ಇದರ ಹಿನ್ನೆಲೆ ಹೀಗಿದೆ:-
ಒಮ್ಮೆ ಗೋಪಾಲದಾಸರು ಉಡುಪಿಯಾತ್ರೆಗೆ ಹೋಗುವ ಸಂಕಲ್ಪವನ್ನು ಮಾಡುತ್ತಾರೆ. ಇದನ್ನು ತಿಳಿದ ವಿಜಯದಾಸರು ಮಾರ್ಗದಲ್ಲಿ ಯಾವುದೇ ಆಪತ್ತು ಬರದಿರಲಿ ಎಂದು ಈ ಉಗಾಭೋಗವನ್ನು ರಚಿಸಿ ಗೋಪಾಲದಾಸರಿಗೆ ಉಪದೇಶಿಸಿ ಪಠಿಸಲು ಹೇಳುತ್ತಾರೆ. ಈ ಉಗಾಭೋಗವನ್ನು ಪಠಿಸುತ್ತಾ ಗೋಪಾಲದಾಸರು ಯಾತ್ರೆಯನ್ನು ಆರಂಭಿಸುತ್ತಾರೆ.
ಮಾರ್ಗಮಧ್ಯದಲ್ಲಿ ಮಂಡಗಡ್ಡೆ ಎಂಬ ಗ್ರಾಮ ಬರುತ್ತದೆ. ಅಲ್ಲಿ ಭೀಮ ಎಂಬ ಹೆಸರಿನ ಕಳ್ಳನು ಹಾಗೂ ಅವನ ಸಂಗಡಿಗರು ದಾಸರು ಹಾಗೂ ಅವರ ಸಂಗಡಿಗರ ಮೇಲೆ ಆಕ್ರಮಣ ಮಾಡಲು ಮುಂದಾಗತ್ತಾರೆ. ಆಗ ಕೈಯಲ್ಲಿ ಖಡ್ಗ ಹಿಡಿದ ರಕ್ಷಕರು ದಾಸರ ಸುತ್ತಲೂ ಇರುವುದನ್ನು ಕಂಡು ಹೆದರಿ ಓಡಿ ಹೋಗುತ್ತಾರೆ.
ಹೀಗೆ ವಿಜಯದಾಸರ ಉಗಭೋಗದ ಮಹಿಮೆಯಿಂದ ಗೋಪಾಲದಾಸರು ಸಂರಕ್ಷಿತರಾಗುತ್ತಾರೆ. (ನರಹರಿ ಸುಮಧ್ವ ಅವರಿಂದ ಸಂಗೃಹೀತ)
ಇಂತಹ ಸರ್ವಾಪತ್ತುಗಳನ್ನೂ ಪರಿಹರಿಸುವ ಈ ಸ್ತೋತ್ರಗಳನ್ನು ಪ್ರತಿನಿತ್ಯವೂ ಮುಖ್ಯವಾಗಿ ಪ್ರಯಾಣಕಾಲದಲ್ಲಿ ಪಠಿಸುವುದು ಆವಶ್ಯಕವಾಗಿದೆ.
ಪ್ರಯಾಣಕಾಲದಲ್ಲಿ ಸಂಭವಿಸಬಹುದಾದ ಎಲ್ಲಾ ರೀತಿಯ ಆಪತ್ತುಗಳು ಪರಿಹಾರಕ್ಕಾಗಿ ಪಠಿಸಲೇಬೇಕಾದ ಸ್ತೋತ್ರಗಳು.
ಶ್ರೀನಿವಾಸ ಕೊರ್ಲಹಳ್ಳಿ
[06/06, 4:27 PM] +91 91644 68888: ಶ್ರೀ ರಘುವರ್ಯ ತೀರ್ಥರು ನವ ವೃಂದಾವನ ಜ್ಯೇಷ್ಠ ಕೃ. ತೃತೀಯಾ ಮಧುಸೂದನ ಕಲಿಭಟ್ ಬೆಂಗಳೂರು (ಧಾರವಾಡ )
ಉತ್ತರಾದಿ ಮಠದ ಕೀರ್ತಿಶೇಷ ರಾದ, ಭಾವ ಭೋದಕಾರರಾದ ಶ್ರೀ ರಘುತ್ತಮ ತೀರ್ಥರ ಗುರುಗಳೇ ಇಂದಿನ ದಿನದ ಕಥಾನಾಯಕರು. ಗುರುಗಳ ಪೂರ್ವಾಶ್ರಮ ಹೆಸರು ರಾಮಚಂದ್ರ ಶಾಸ್ತ್ರಿಗಳು. ರಘುನಾಥ ತೀರ್ಥರಿಂದ ರಘುವರ್ಯ ತೀರ್ಥರೆಂದು ಆಶ್ರಮ ಪಡೆದರು. ರಘುವರ್ಯರು 54ವರ್ಷಗಳ ಕಾಲ ಸಂಸ್ಥಾನ ಆಳಿದರು. ಶ್ರೀ ವ್ಯಾಸ ತೀರ್ಥರು ಮತ್ತು ಗುರುಗಳಾದ ರಘುನಾಥ ತೀರ್ಥರು ಕಾಲರಾದ ನಂತರದಲ್ಲಿ ಮಧ್ವ ಮತದ ಅಭಿವೃದ್ಧಿ ಕಾರ್ಯವು ಶ್ರೀ ವಿಜಯಿಂದ್ರ ತೀರ್ಥರು ಮತ್ತು ರಘುವರ್ಯರ ಮೇಲೆ ಬಿದ್ದಿತು. ಅದ್ವೈತಿಗಳು ತಮ್ಮ ಮತ ಸ್ಥಾಪನೆಗೆ ಪ್ರಯತ್ನ ಪಡುತ್ತಿದ್ದರು. ಇನ್ನೊಂದು ಕಡೆಗೆ ಮುಸ್ಲಿಮ ನವಾಬರ ದಾಳಿ ಅಲ್ಲಲ್ಲಿ ಆಗುತ್ತಾ ಇತ್ತು. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ರಘುವರ್ಯರ ಧೈರ್ಯ ಹೇಳತೀರದು. ರಾಮದೇವರ ಪೆಟ್ಟಿಗೆಯನ್ನು ಹೆಗಲಿಗೆ ಹಾಕಿಕೊಂಡು ನಡೆದುಕೊಂಡು ಹೋಗಬೇಕು. ಈಗಿನಂತೆ ವಾಹನ ಸೌಕರ್ಯ ಇರಲಿಲ್ಲ.
ಹೀಗಿರಲಾಗಿ ರಘುವರ್ಯರು ಗುರುಗಳು ಸ್ಥಾಪಿಸಿದ ಮಣ್ಣೂರು ವಿದ್ಯಾಪೀಠದಲ್ಲಿ. ಇದ್ದರೂ. ಆಗ ರಾಯಚೂರು ನವಾಬನು ಮಠದ ಆಸ್ತಿ, ಬೆಳ್ಳಿ ಬಂಗಾರ ಲೂಟಿ ಮಾಡಲು ಪ್ರಯತ್ನಿಸಿದನು. ಸನ್ಯಾಸಿಗಳಾಗಿ ತಮ್ಮ ರಕ್ಷಣೆಯೊಂದಿಗೆ ಮಠದ ಸಿಬ್ಬಂದಿಯನ್ನು ರಕ್ಷಿಸಿಕೊಳ್ಳುವ ಹೊಣೆ ಗುರುಗಳಿಗೆ ಇತ್ತು. ಒಂದು ಮಳೆಗಾಲದಲ್ಲಿ ನವಾಬನ ಸೈನ್ಯ ಮಠಕ್ಕೆ ಮುತ್ತಿಗೆ ಹಾಕುವದು ಎಂಬುದನ್ನು ತಿಳಿದು ರಘುವರ್ಯರು ದೇವರ ಪೆಟ್ಟಿಗೆ ತೆಗೆದುಕೊಂಡು ಶಿಷ್ಯರೊಡನೆ ಭೀಮಾ ತೀರಕ್ಕೆ ಬಂದು ನದಿ ದಾಟಿ ಹೋಗಲು ನಿರ್ಧರಿಸಿದರು. ಭೀಮೆ ಗುರುಗಳಿಗೆ ಮೊಣಕಾಲು ವರೆಗೆ ನೀರು ಬರುವಂತೆಬ್ದಾರಿ ಮಾಡಿಕೊಟ್ಟು ಎಲ್ಲರನ್ನೂ ದಾಟಿಸಿ ಆಪತ್ತಿನಿಂದ ಪಾರು ಮಾಡಿದಳು. ಹಿಂದಿನಿಂದ ಬಂದ ನವಾಬನ ಸೈನಿಕರನ್ನು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದಳು. ಶ್ರೀ ರಾಮಚಂದ್ರ ಎಲ್ಲರನ್ನು ಆಪತ್ತಿನಿಂದ ಪಾರು ಮಾಡಿದನು. ಈ ಘಟನೆಯನ್ನು ಗುರುಗಳ ಚರಮ ಶ್ಲೋಕದಲ್ಲಿ ಅಡಗಿಸಿದ್ದಾರೆ.
.ರಘುವರ್ಯರಿಗೆ ತಮ್ಮ ಅವಸಾನ ಕಾಲ ಸಮೀಪಿಸಿದೆ ಎಂದು ತಿಳಿದು ತುಂಗಭದ್ರಾ ತೀರದಲ್ಲಿ ಒಂದು ದಿನ ಮಧ್ವ ಮತ ಹೇಗೆ ಎತ್ತಿ ಮೇಲೆ ತರಬೇಕೆಂದು ವಿಚಾರಿಸುತ್ತಾ ಮಲಗಿದರು. ಆಗ ಸ್ವಪ್ನದಲ್ಲಿ ಆಚಾರ್ಯ ಮಧ್ವರು ಕಾಣಿಸಿಕೊಂಡು ವತ್ಸಾ, ಚಿಂತಿಸಬೇಡ ಸ್ವರ್ಣವಾಟ ಊರಲ್ಲಿ ನಿಮ್ಮ ಪೂರ್ವಾಶ್ರಮದ ತಂಗಿ ಮತ್ತು ಭಾವ ಸುಬ್ಬಭಟ್ಟರು ವೃತನಿಯಮ ಮಾಡಿಕೊಂಡು ಇರುವರು ಅವರಲ್ಲಿ ಜನಿಸುವ ಮಗ ಮುಂದಿನ ಪೀಠಾದಿಪತಿ. ನೀವು ಅವರಿಗೆ ಆಶೀರ್ವಾದ ಮಾಡಿ ರಿ. ಎಂದು ಹೇಳಿದರು. ಗುರುಗಳು ಸ್ವರ್ಣವಾಟ ಊರಿಗೆ ಬಂದು ತಂಗಿಗೆ ಆಶೀರ್ವಾದ ಮಾಡಿ ಜನಿಸಿದ ಮಗುವನ್ನು ಮಠಕ್ಕೆ ಪಡೆದರು. ಬಾಲಕನಿಗೆ ರಾಮಚಂದ್ರವೆಂದು ಹೆಸರು ಇಟ್ಟರು. ಮಧ್ವರ ಆದೇಶ ದಂತೆ ಆಗಿದ್ದರಿಂದ ಮಧ್ವ ಅಷ್ಟಕ ರಚಿಸಿ ಅರ್ಪಿಸಿದರೂ.ರಾಮಚಂದ್ರ ಗೆ ಆರು ವರ್ಷ ಆದಾಗ ಉಪನಯನ ಮಾಡಿಸಿ ಆಶ್ರಮ ನೀಡಿ ರಘುತ್ತಮ ತೀರ್ಥ ರೆಂದು ಕರೆದರು. ನೂತನ ಪೀಠಾಧಿಪತಿಗಳಿಗೆ ಈಗ ದೇವರ ಪೆಟ್ಟಿಗೆ ಹೆಗಲ ಮೇಲೆ ಹೊತ್ತು ಒಯ್ಯುವ ಕಾಲ. ನೀವು ಮತವನ್ನು ಸುಧಾರಿಸಿ ದೇವರನ್ನು ಮಂಟಪದಲ್ಲಿ ಇಟ್ಟು ಪೂಜೆ ಮಾಡುವ ವ್ಯವಸ್ಥೆ ಮಾಡಿರಿ. ಹಿತಶತ್ರು ಗಳಿಂದ ದೂರವಿದ್ದು ಸಂಸ್ಥಾನದ ಕೀರ್ತಿ ಮುಗಿಲು ಮುಟ್ಟುವಂತೆ ಮಾಡಿರೆಂದು ಆಶೀರ್ವಾದ ಮಾಡಿದರು. ನೂತನ ಯತಿಗಳಿಗೆ ಪಾಠ ಹೇಳಲು ಮಣ್ಣೂರಿನ ಆದ್ಯ ಮನೆತನದ ಘನ ಪಂಡಿತರಾದ ವರದಾಚಾರ್ಯರಿಗೆ ಹೇಳಿ ಸಂಸ್ಥಾನದ ಪಾಠ ಶಾಸ್ತ್ರ ಸಂಸ್ಕೃತಿ ಅಭಿವೃದ್ಧಿ ನೋಡಿಕೊಳ್ಳಲು ಆಜ್ಞೆ ಮಾಡಿ ಜ್ಯೇಷ್ಠ ಶುಕ್ಲ ಪಕ್ಷ ತದಿಗೆ ದಿನ ಆನೆಗೊಂದಿ ಹತ್ತಿರ ತುಂಗಭದ್ರಾ ನದಿಯ ನವವೃಂದಾವನ ದ್ವೀಪದಲ್ಲಿ ಹರಿಧ್ಯಾನ ಪರರಾದರು. ಗುರುಗಳ ಅಂತರ್ಯಾಮಿ ಭಾ. ಮು. ಅಂ. ಹಯಗ್ರೀವದೇವರು ಎಲ್ಲರಿಗೂ ಜ್ಞಾನ ವೈರಾಗ್ಯ ಭಕ್ತಿ ಕೊಟ್ಟು ಕಾಪಾಡಲೆಂದು ಬೇಡಿಕೊಳ್ಳುವೆ.
[06/06, 4:27 PM] +91 91644 68888: ಶ್ರೀ ರಘುವರ್ಯತೀರ್ಥ ಗುರುಭ್ಯೋ ನಮಃ
ಶ್ರೀ ರಘುತ್ತಮತೀರ್ಥ ಗುರುಭ್ಯೋ ನಮಃ
ಒಮ್ಮೆ ಶ್ರೀ ರಘುವರ್ಯತೀರ್ಥರು ಸಂಚಾರದಲ್ಲಿದ್ದಾಗ, ಸ್ವರ್ಣವಾಟೀ ಎಂಬ ಗ್ರಾಮಕ್ಕೆ ಬಂದಾಗ ಒಬ್ಬ ದಂಪತಿಗಳು ತಮಗೆ ಭಿಕ್ಷೆ ನೀಡಲು ಆಹ್ವಾನಿಸಿದಾಗ ಶ್ರೀ ರಘುವರ್ಯರು ಅವರನ್ನು “ಮುಂದೆ ಜನಿಸುವ ನಿಮ್ಮ ಮಗನನ್ನು ನಮ್ಮ ಮಠಕ್ಕೆ ನೀಡಬೇಕು” ಎಂದು ಕೇಳಿದಾಗ ಮಕ್ಕಳಿಲ್ಲದ ಆ ದಂಪತಿಗಳು ಒಪ್ಪುತ್ತಾರೆ. ಅದರಂತೆ ಆ ದಂಪತಿಗಳು ಹುಟ್ಟಿದ ಗಂಡು ಮಗುವನ್ನು ಶ್ರೀ ಮಠಕ್ಕೆ ಒಪ್ಪಿಸುತ್ತಾರೆ. ಶ್ರೀ ಮಠದ ಅಭಿಷೇಕದ ಹಾಲಿನಿಂದಲೇ ಬೆಳೆದ ಮಗುವಿಗೆ ರಾಮಾಚಾರ್ಯನೆಂಬ ಹೆಸರನ್ನಿಟ್ಟು ತಮ್ಮ ಶ್ರೀ ಮಠದಲ್ಲೇ ಅವನ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡುತ್ತಾರೆ.
ಪರಮಪೂಜ್ಯ ಶ್ರೀ ರಘುವರ್ಯತೀರ್ಥರಿಂದ ತಮ್ಮ ಎಂಟನೇ ವಯಸ್ಸಿನಲ್ಲೇ ಆಶ್ರಮ ಸ್ವೀಕರಿಸಿ ಸುಮಾರು ೩೮ ವರ್ಷಕಾಲ ಪೀಠಾಧಿಪತ್ಯದಲ್ಲಿದ್ದು ಶ್ರೀ ರಘುಪತಿ ತೀರ್ಥರು, ಶ್ರೀ ವೇದವ್ಯಾಸತೀರ್ಥರು, ಶ್ರೀ ವೇದೇಶ ತೀರ್ಥರು, ತರಂಗಿಣಿ ರಾಮಾಚಾರ್ಯರು, ರೊಟ್ಟಿ ವೆಂಕಟಾದ್ರಿಭಟ್ಟರು, ಶ್ರೀ ಆನಂದ ಭಟ್ಟಾರಕರು ಮುಂತಾದ ಹಲವಾರು ವಿದ್ವನ್ಮಣಿಗಳನ್ನು ಮಧ್ವ ಶಾಸ್ತ್ರಕ್ಕೆ ನೀಡಿದ ಮಹಾನುಭಾವರೇ “ಭಾವಭೋಧಕಾರ”ರೆಂದು ಪ್ರಖ್ಯಾತರಾದ
ಶ್ರೀ ಉತ್ತರಾದಿಮಠಕ್ಕೆ ಭಾವಭೋಧಕರು ಯಾರ ಶಿಷ್ಯ, ಪ್ರಶಿಷ್ಯರೇ ಮೊದಲಾದವರೂ ಕೂಡ ಟಿಪ್ಪಣ್ಣಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೋ, ಅಂತಹ ಮಹಾ ಮಹಿಮರಾದ “ಭಾವಭೋಧ” ಟಿಪ್ಪಣಿಗಳನ್ನು ರಚಿಸಿರುವ ಶ್ರೀ ರಘುತ್ತಮತೀರ್ಥ ಶ್ರೀಪಾದಂಗಳವರನ್ನು ನಿಡಿದ ಶ್ರೀ ರಘುವರ್ಯತೀರ್ಥರ ಪ್ರೀತಿಯ ಶಿಷ್ಯರು.. ಶ್ರೀ ರಘುವರ್ಯತೀರ್ಥ ಸ್ವಾಮಿ ಶ್ರೀಪಾದ ಗುರುಭ್ಯೋ ನಮಃ 🙏 🙏 🙏
#सत्यप्रमोदसुधारत्नाकराः #srisathyatmateerth #sriuttaradimatha
[06/06, 6:26 PM] +91 91644 68888: 🔯 *ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ* 🔯 🕉️ *ಓಂ ಶ್ರೀ ಗುರುಭ್ಯೋ ನಮಃ* 🕉️ *ಶ್ರೀ ನಿತ್ಯ ಪಂಚಾಂಗ* 🪔🪔🪔🪔🪔🪔🪔🪔🪔🪔🪔 🎆 ದಿನದ ವಿಶೇಷ : *ಸಂಕಷ್ಟಹರ ಚತುರ್ಥೀ - ಚಂದ್ರೋದಯ ರಾತ್ರಿ 10:14 pm* 🪔🪔🪔🪔🪔🪔🪔🪔🪔 🪔🪔 ದಿನಾಂಕ : *07/06/2023*
ವಾರ : *ಬುಧ ವಾರ* ಸಂವತ್ಸರ : *ಶ್ರೀ ಶೋಭಕೃತ್ ನಾಮ* : ಆಯನ : *ಉತ್ತರಾಯಣೇ* *ಗ್ರೀಷ್ಮ* ಋತೌ
*ಜ್ಯೇಷ್ಠ* ಮಾಸೇ *ಕೃಷ್ಣ* : ಪಕ್ಷೇ *ಚತುರ್ಥ್ಯಾಂ* ತಿಥೌ (ಪ್ರಾರಂಭ ಸಮಯ *ಮಂಗಳ ರಾತ್ರಿ 12-49 am* ರಿಂದ ಅಂತ್ಯ ಸಮಯ : *ಬುಧ ರಾತ್ರಿ 09-50 pm* ರವರೆಗೆ) *ಸೌಮ್ಯ* ವಾಸರೇ ವಾಸರಸ್ತು *ಉತ್ತರಾಷಾಢ* ನಕ್ಷತ್ರೇ (ಪ್ರಾರಂಭ ಸಮಯ : *ಮಂಗಳ ರಾತ್ರಿ 11-12 pm* ರಿಂದ ಅಂತ್ಯ ಸಮಯ : *ಬುಧ ರಾತ್ರಿ 09-01 pm* ರವರೆಗೆ) *ಬ್ರಹ್ಮ* ಯೋಗೇ (ಬುಧ ರಾತ್ರಿ *10-21 pm* ರವರೆಗೆ) *ಬವ* ಕರಣೇ (ಬುಧ ಹಗಲು *11-19 am* ರವರೆಗೆ) ಸೂರ್ಯ ರಾಶಿ : *ವೃಷಭ* ಚಂದ್ರ ರಾಶಿ : *ಧನಸ್ಸು* 🌅 ಸೂರ್ಯೋದಯ - *05-53 am* 🌄ಸೂರ್ಯಾಸ್ತ - *06-43 pm*
*ರಾಹುಕಾಲ* *12-18 pm* ಇಂದ *01-55 pm* *ಯಮಗಂಡಕಾಲ*
*07-30 am* ಇಂದ *09-06 am* *ಗುಳಿಕಕಾಲ*
*10-42 am* ಇಂದ *12-18 pm* *ಅಭಿಜಿತ್ ಮುಹೂರ್ತ* : ಬುಧ ಹಗಲು *11-53 am* ರಿಂದ *12-44 pm* ರವರೆಗೆ *ದುರ್ಮುಹೂರ್ತ* : ಬುಧ ಹಗಲು *11-53 am* ರಿಂದ *12-44 pm* ರವರೆಗೆ *ವರ್ಜ್ಯ* ಬುಧ ಹಗಲು *06-28 am* ರಿಂದ *07-56 am* ರವರೆಗೆ *ಅಮೃತ ಕಾಲ* : ಬುಧ ಹಗಲು *03-13 pm* ರಿಂದ *04-41 pm* ರವರೆಗೆ 🚩🚩🚩🚩🚩🚩🚩🚩🚩🚩 ಮರು ದಿನದ ವಿಶೇಷ : *
🚩🚩🚩🚩🚩🚩🚩🚩🚩🚩 ಶುಭಮಸ್ತು...ಶುಭದಿನ
[06/06, 6:26 PM] +91 91644 68888: 🕉️ ಓಂ ಶ್ರೀ ಗುರುಭ್ಯೋ ನಮಃ 🕉️ *ಕೃಷ್ಣ ಪಿಂಗಳ ಸಂಕಷ್ಟಹರ ಚತುರ್ಥಿ ಸಮಯ, ಪೂಜಾ ವಿಧಾನ, ಮಹತ್ವ, ಮಂತ್ರ..!*
ಸನಾತನ ಧರ್ಮದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಮಹಿಳೆಯರು ತಮ್ಮ ಪತಿ ಮತ್ತು ಮಕ್ಕಳ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಈ ಉಪವಾಸವನ್ನು ಆಚರಿಸುತ್ತಾರೆ. ಪ್ರತಿ ತಿಂಗಳು ಬರುವ ಕೃಷ್ಣ ಚತುರ್ಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಜ್ಯೇಷ್ಠ ಮಾಸದಲ್ಲಿ ಬರುವ ಚತುರ್ಥಿ ತಿಥಿಯನ್ನು ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.
*ಕೃಷ್ಣ ಪಿಂಗಳ ಸಂಕಷ್ಟಹರ ಚತುರ್ಥಿ ದಿನಾಂಕ ಮತ್ತು ಸಮಯ*
- ಚತುರ್ಥಿ ತಿಥಿ ಪ್ರಾರಂಭ: 2023 ರ ಜೂನ್ 6 ರಂದು ರಾತ್ರಿ 12:50 ರಿಂದ
- ಚತುರ್ಥಿ ತಿಥಿ ಮುಕ್ತಾಯ: 2023 ರ ಜೂನ್ 7 ರಂದು ರಾತ್ರಿ 9:50 ರವರೆಗೆ
- ಕೃಷ್ಣಪಿಂಗಳ ಸಂಕಷ್ಟ ಚತುರ್ಥಿ ಚಂದ್ರೋದಯ - 2023 ರ ಜೂನ್ 7 ರಂದು ರಾತ್ರಿ 10:14 ಕ್ಕೆ.
*ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಪೂಜೆ ವಿಧಾನ*
- ಕೃಷ್ಣ ಪಿಂಗಳ ಸಂಕಷ್ಟಹರ ಚತುರ್ಥಿ ದಿನದಂದು ಸೂರ್ಯೋದಯಕ್ಕೆ ಮುನ್ನ ಬೆಳಿಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
- ದೇವರ ವಿಗ್ರಹ ಅಥವಾ ಫೋಟೋವನ್ನು ಸ್ಥಾಪಿಸುವ ಸ್ಥಳ ಅಥವಾ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು.
- ಇದರ ನಂತರ, ಪ್ರತಿಮೆಯನ್ನು ಗಂಗಾ ನೀರಿನಿಂದ ಅಭಿಷೇಕ ಮಾಡಿ ಮತ್ತು ನಂತರ ಧೂಪ-ದೀಪಗಳನ್ನು ಬೆಳಗಿಸಿ. ಒಂದು ವೇಳೆ ಗಣೇಶನ ಫೋಟೋವನ್ನು ಪೂಜಿಸುತ್ತಿದ್ದರೆ, ಗಂಗಾ ಜಲವನ್ನು ಫೋಟೋದ ಮೇಲೆ ಸಿಂಪಡಿಸಬಹುದು ಅಥವಾ ಒದ್ದೆ ಬಟ್ಟೆಯಿಂದ ಒರೆಸಬಹುದು.
- ಈ ದಿನ ಗಣೇಶನಿಗೆ ದುರ್ವಾ, ಮೋದಕ, ಅಕ್ಷತೆ, ಕೆಂಪು ಚಂದನವನ್ನು ಅರ್ಪಿಸಿ.
- ಅವರಿಗೆ ಪ್ರಸಾದದಲ್ಲಿ ಹಣ್ಣುಗಳು ಮತ್ತು ಮೋದಕಗಳನ್ನು ಅರ್ಪಿಸಿ ಮತ್ತು ಗಣೇಶ ಚಾಲೀಸಾವನ್ನು ಪಠಿಸಿ.
- ಈ ದಿನ ಸಂಕಷ್ಟಹರ ಚತುರ್ಥಿ ವ್ರತ ಕಥೆಯನ್ನು ಕೇಳಬೇಕು ಅಥವಾ ಓದಬೇಕು.
- ಚಂದ್ರೋದಯವಾದಾಗ ಚಂದ್ರನಿಗೆ ಅರ್ಘ್ಯ (ನೀರನ್ನು) ಅರ್ಪಿಸಿ ಪೂಜಿಸಿ ನಂತರ ಉಪವಾಸವನ್ನು ತ್ಯಜಿಸಬೇಕು.
*ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಮಹತ್ವ*
ಪ್ರತಿ ತಿಂಗಳ ಸಂಕಷ್ಟಹರ ಚತುರ್ಥಿಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ. ಗಣೇಶನನ್ನು ಮೆಚ್ಚಿಸಲು ಜನರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಪ್ರತಿ ತಿಂಗಳು ಗಣಪತಿಯನ್ನು ಬೇರೆ ಬೇರೆ ಹೆಸರು ಮತ್ತು ಪೂಜೆ ವಿಧಿ - ವಿಧಾನಗಳಿಂದ ಪೂಜಿಸಲಾಗುತ್ತದೆ. ಪ್ರತಿ ಸಂಕಷ್ಟಹರ ಚತುರ್ಥಿಗೂ ವಿಭಿನ್ನ ಆಚರಣೆಗಳು ಮತ್ತು ಕಥೆಗಳು ಇರುತ್ತವೆ. ಈ ದಿನ ಅತ್ಯಂತ ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಪ್ರಾರ್ಥನೆ ಸಲ್ಲಿಸುವವನು ಎಲ್ಲಾ ಕೆಟ್ಟ ಕರ್ಮಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಗಣೇಶನು ತನ್ನ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಬಯಸಿದ ಇಷ್ಟಾರ್ಥಗಳನ್ನು ದಯಪಾಲಿಸುತ್ತಾನೆ.
ಗಣೇಶನು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗ ಮತ್ತು ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶಿವನು ಗಣೇಶನನ್ನು ಪ್ರಥಮ ಪೂಜ್ಯ ಅಥವಾ ಸರ್ವೋಚ್ಚ ದೇವರು ಎಂದು ಘೋಷಿಸಿದ ದಿನವೇ ಸಂಕಷ್ಟಹರ ಚತುರ್ಥಿ. ಆದ್ದರಿಂದ ಈ ದಿನ ಗಣೇಶನ ಪೂಜೆ ಮಾಡುವ ಭಕ್ತಾದಿಗಳ ಜೀವನದ ಎಲ್ಲಾ ಅಡೆತಡೆಗಳನ್ನು ಮತ್ತು ನೋವುಗಳು ನಿವಾರಣೆಯಾಗುತ್ತದೆ. ಮಕ್ಕಳಿಲ್ಲದವರು ಮಗುವನ್ನು ಹೊಂದಲು ಈ ನಿರ್ದಿಷ್ಟ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಗಣೇಶನ ಆಶೀರ್ವಾದವನ್ನು ಪಡೆಯುತ್ತಾರೆ ಎನ್ನುವ ನಂಬಿಕೆಯಿದೆ. ಗಣೇಶನ ಆಶೀರ್ವಾದ ಪಡೆಯಲು ಹೆಚ್ಚಿನ ಜನರು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
*ಕೃಷ್ಣ ಪಿಂಗಳ ಸಂಕಷ್ಟ ಚತುರ್ಥಿ ಮಂತ್ರ*
- ಓಂ ಗಂ ಗಣಪತಯೇ ನಮಃ
- ಓಂ ಶ್ರೀ ಗಣೇಶಾಯ ನಮಃ.
- ಓಂ ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೇದೇವ
ಸರ್ವ ಕಾರ್ಯೇಷು ಸರ್ವದಾ
- ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥಜಂಭೂಫಲ ಚಾರು ಭಕ್ಷಿಣಾಂ
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ್ವರ
ಪಾದ ಪಂಕಜಂ | ವರ್ಣನಾಮಾರ್ಥ ಸಂಘಾನಾಂ ರಸನಾಂ
ಚಂದ ಸಮಾಪಿ ಮಂಗಳನಾಮ್
ಚ ಕರ್ತಾರೌ ವಂದೇ ವಾಣಿ ವಿನಾಯಕೌ
ಹಿಂದೂ ಪಂಚಾಂಗದ ಪ್ರಕಾರ, ಈ ವರ್ಷ ಚಂದ್ರೋದಯ ಸಮಯವು ಕೃಷ್ಣ ಪಿಂಗಳ ಸಂಕಷ್ಟಹರ ಚತುರ್ಥಿ ವ್ರತದ ದಿನದಂದು ಲಭ್ಯವಿರುವುದಿಲ್ಲ. ವಾಸ್ತವವಾಗಿ, ಪಂಚಾಂಗದ ಪ್ರಕಾರ, ಚಂದ್ರೋದಯದ ಸಮಯವನ್ನು ರಾತ್ರಿ 10.14 ಕ್ಕೆ ಎಂದು ಹೇಳಲಾಗಿದೆ ಮತ್ತು ಚತುರ್ಥಿ ಜೂನ್ 07 ರಂದು ರಾತ್ರಿ 09.50 ಕ್ಕೆ ಕೊನೆಗೊಳ್ಳುತ್ತದೆ. ಅದರ ನಂತರ ಪಂಚಮಿ ತಿಥಿ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಸಂಕಷ್ಟಹರ ಚತುರ್ಥಿ ಚಂದ್ರನನ್ನು ನೋಡಲು ಸಾಧ್ಯವಾಗುವುದಿಲ್ಲ.
*ಈ ಗಣಪತಿ ಮೂರ್ತಿಯನ್ನು ಪೂಜಿಸಿ*
ಕೃಷ್ಣ ಪಿಂಗಳ ಸಂಕಷ್ಟಹರ ಚತುರ್ಥಿಯಂದು ಮನೆಯಲ್ಲಿ ಗಣೇಶನ ಸಿದ್ಧಿ ವಿನಾಯಕನ ರೂಪವನ್ನು ಸ್ಥಾಪಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಕುಳಿತಿರುವ ಗಣಪತಿಯನ್ನು ಪ್ರತಿಷ್ಠಾಪಿಸುವುದರಿಂದ ಸುಖ, ಶಾಂತಿ, ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.
[06/06, 8:41 PM] +91 96865 46693: *ಶ್ರೀ ರಘುವರ್ಯ ತೀರ್ಥರು*
|| *ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ* |
*ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ* ||
ಉತ್ತರಾಧಿಮಠದ ಯತಿಪರಂಪರೆಯಲ್ಲಿ ಬರುವ ಮಹಾಸಾದ್ವಿಗಳು, ಶ್ರೀ ಮೂಲರಾಮಚಂದ್ರ ದೇವರ ಪರಮಭಕ್ತರು, ಶ್ರೀಮದಾಚಾರ್ಯರಿಂದ 12 ನೇ ಯತಿಗಳಾದವರು. ಕೇವಲ ಕಾಲ್ನಡಿಯ್ಗೆಯಲ್ಲಿ ಭಾರತದಲ್ಲಿ ಸಂಚಾರಮಾಡಿ ಮಧ್ವಮತವನ್ನು ಪ್ರಚಾರಮಾಡಿದವರು, ರಘುನಾಥ ತೀರ್ಥರಂತಹ ಮಹಾನ್ ಜ್ಞಾನಿಗಳಿಗೆ ಶಿಷ್ಯರು ಮತ್ತು ನಮಗೆ ಬೇಡಿದ್ದನ್ನು ನೀಡುವ ಕಲಿಯುಗದ ಕಾಮಧೇನು ಚಿಂತಾಮಣಿಗಳಾದ "ಶ್ರೀ *ರಘೋತ್ತಮ ತೀರ್ಥ"* ರನ್ನು ಕೊಟ್ಟಂತಹ ಮಹನೀಯರು. ಶ್ರೀ ರಘೋತ್ತಮರ ತೀರ್ಥರ ಗುರುಗಳು. ಇವರ ಸಮಕಾಲೀನರು " *ಶ್ರೀ ವ್ಯಾಸರಾಜರು* *ತೀರ್ಥರು* ".
ಪೂರ್ವಾಶ್ರಮ ನಾಮ : ಶ್ರೀ ರಾಮಚಂದ್ರ ಚಾರ್ಯ
ಆಶ್ರಮಗುರುಗಳು : ಶ್ರೀ ರಘುನಾಥ ತೀರ್ಥರು
ಆಶ್ರಮ ಶಿಷ್ಯರು : ಶ್ರೀ ರಘೋತ್ತಮ ತೀರ್ಥರು
ಆಶ್ರಮ ಸ್ಥಳ : ಆನೆಗುಂದಿ ಗಜಗಹ್ವರ- ನವಬೃಂದಾವನ ಕ್ಷೇತ್ರ
ಆರಾಧನಾ ದಿನ : ಜೇಷ್ಠ ಕೃಷ್ಣ ತೃತೀಯ
ವೇದಾಂತ ಸಾಮ್ರಾಜ್ಯ ಆಳ್ವಿಕೆ ಕಾಲ : 1502 ರಿಂದ 1557
ಇವರ ಪೂರ್ವಾಶ್ರಮದ ಬಗ್ಗೆ ನಮಗೆ ಹೆಚ್ಚು ಮಾಹಿತಿ ಸಿಗುವುದಿಲ್ಲ. ನಮಗೆ ಇತಿಹಾಸದಲ್ಲಿ ಎಲ್ಲರು ನೆನಪಿಡುವಂತಹ ಅವರ ಜೀವನವೇ ನಮಗೆ ಆದರ್ಶ, ಗುರುಭಕ್ತಿ. ಸುಮಾರು ಮುನ್ನೂರಕ್ಕೂ ಹೆಚ್ಚು ಯತಿಶಿಷ್ಯರನ್ನು ಹೊಂದಿದ್ದ ರಘುನಾಥ ತೀರ್ಥರ ಶಿಷ್ಯರು. ಪ್ರಖಾಂಡ ಪಂಡಿತರು. "ಗುರುಪ್ರಸಾದೋ ಬಲವಾನ್" ಎಂಬಂತ್ತೆ, ಶ್ರೀ ರಘೋತ್ತಮ ತೀರ್ಥರು ತಮ್ಮ ಗ್ರಂಥಗಳಲ್ಲಿ ಶ್ರೀ ರಘುವರ್ಯ ತೀರ್ಥರ ಕರಕಮಲಾ ಸಂಜಾತರು, ಭಾವಬೋಧ ಗ್ರಂಥವನ್ನು ಬರೆಯುವ ಸಾಮರ್ಥ್ಯ ನಮ್ಮಲ್ಲಿ ಬರಬೇಕಾದರೆ ಅದು ಶ್ರೀ ರಘುವರ್ಯ ತೀರ್ಥರ ಪರಮಾನುಗ್ರಹ ಎಂದು ತಮ್ಮ ವಾಕ್ಯಗಳಲ್ಲೇ ತಿಳಿಸಿದ್ದಾರೆ ಎಂದರೆ, ಇವರ ವ್ಯಕ್ತಿತ್ವ ಊಹಾತೀತಾ.
ಶ್ರೀ ಸತ್ಯಾಭಿನವ ತೀರ್ಥರು ರಚಿಸಿದ " *ಗುರುಚರಿತ್ರೆ* " ಮತ್ತು " *ಶ್ರೀಸತ್ಯನಿಧಿವಿಲಾಸ* " ಎಂಬ ಗ್ರಂಥಗಳಲ್ಲಿ ಬರುವ ವಿಷಯ.
ಒಮ್ಮೆ ದೇವಾತಾರ್ಚನೆ ಮಾಡಬೇಕು ಎಂದು ರಘುವರ್ಯರು ಸಿದ್ದಾರಾಗಿದ್ದರೆ, ಭೀಮಾನದಿತೀರದಲ್ಲಿ, ಅಲ್ಲಿನ ಮ್ಲೇಚ್ಛ ರಾಜ ತುರುಷ್ಕ ರಾಜ ಸೈನ್ಯ ಬಂದು ಆಕ್ರಮಣ ಮಾಡಲು ಪ್ರಯತ್ನಿಸಿದರು. ತಕ್ಷಣ ಶ್ರೀ ರಘುವರ್ಯ ತೀರ್ಥರು ಶ್ರೀ ರಾಮದೇವರ ಪೆಟ್ಟಿಗೆಯನ್ನು ಹೊತ್ತಿಕೊಂಡು, ಭೋರ್ಗರೆತ್ತಿರುವ ಪ್ರವಾಹ ಭೀಮಾನದಿಯಲ್ಲಿ, ಪ್ರವೇಶ ಮಾಡಿದರು. ಹಿಂದೆ ವಾಸುದೇವ ಹೇಗೆ ಶ್ರೀಕೃಷ್ಣ ಪರಮಾತ್ಮನನ್ನ ತಲೆಯಲ್ಲಿ ಇಟ್ಟುಕೊಂಡು ಯಮುನೆಯನ್ನು ದಾಟಿದನೋ, ಹಾಗೆ ಆಕೃಷ್ಣನೇ ಈ ಮೂಲರಾಮನಾದಕಾರಣ ತಲೆಯಲ್ಲಿ ಪೆಟ್ಟಿಗೆ ಇಟ್ಟುಕೊಂಡು ನೀರಿಗೆ ಧುಮುಕೆ ಬಿಟ್ಟರು, ಹಿಂದೆ ಸೈನ್ಯ ಇವರನ್ನು ಹಿಂಬಾಲಿಸಿ ಕೊಂಡು ಬರುತ್ತಿದೆ, ಆದರೆ ಇವರಿಗೆ ರಾಮದೇವರನ್ನು ಹೇಗಾದರೂ ಜೋಪಾನ ಮಾಡಬೇಕು ಎಂಬ ಮನಸ್ಸಿನ ಧ್ಯೇಯದಿಂದ ಭೀಮೆಯಲ್ಲಿ ಇಳಿದಾಗ, ಪ್ರವಾಹವಿದ್ದ ಭೀಮೆ ಶಾಂತಳಾಗಿ ಇವರಿಗೆ ಒಬ್ಬ ಮನುಷ್ಯ ಹೋಗುವಷ್ಟು ದಾರಿಕೊಟ್ಟು ಇಬ್ಬಾಗವಾಗಿ ಹೋದಳು. ರಾಮನಾಮಜಪ ಮಾಡುತ್ತಾ, ಆಕಡೆಯ ದಡವನ್ನು ದಾಟಿದರು, ಮತ್ತೆ ಇನ್ನು ಹೆಚ್ಚಿನ ಪ್ರವಾಹ ನದಿಯಲ್ಲಿ ಉಂಟಾಗಿ ಯಾವ ಮ್ಲೇಚ್ಛ ರಾಜನ ಸೈನಿಕರು ನೀರನ್ನು ಸ್ಪರ್ಶ ಮಾಡದಂತೆ ಆಯಿತು. ನಂತರ ಮುಂದೆ ರಾಮಚಂದ್ರ ದೇವರ ಪೂಜೆಯಾಯಿತು.
ರಘುವರ್ಯತೀರ್ಥರ ಪರಮಾನುಗ್ರಹದಿಂದ ಶ್ರೀಮಠದಲ್ಲೇ ಭೂಸ್ಪರ್ಶವಿಲ್ಲದೆ ಬಂಗಾರದ ಹರಿವಾಣದಲ್ಲೇ ಜನಿಸಿದ ಮಹನೀಯರು ಶ್ರೀ ರಘೋತ್ತಮ ತೀರ್ಥರು. ಕೂರ್ಮಸಾಲಿಗ್ರಾಮಕ್ಕೆ ಅಭಿಷೇಕ ಮಾಡಿದ ಹಾಲಿನಿಂದಲೇ ಮಗುವಿನ ಬೆಳವಣಿಗೆ. ದಶಪ್ರಕರಣಗಳ ಪಾಠವನ್ನು ತಾವೇ ಹೇಳಿ, ಎಂಟನೇ ವಯಸ್ಸಿಗೆ ಆಶ್ರಮವನ್ನು ಕೊಟ್ಟು "ಶ್ರೀ ರಘೋತ್ತಮ ತೀರ್ಥ"ಎಂದು ನಾಮಕರಣ ಮಾಡಿದರು. ವೃಂದಾವನ ಪ್ರವೇಶ ಮಾಡುವ ಸಮಯದಲ್ಲಿ ಆದ್ಯವರದಾಚಾರ್ಯರಲ್ಲಿ ಶ್ರೀ ರಘೋತ್ತಮರಿಗೆ ಹೆಚ್ಚಿನ ಅಧ್ಯಯನ ಮಾಡಲು ಹೇಳಿ, ಆನೆಗುಂದಿಯ ಗಜಗಹ್ವರ ಇಂದಿನ ನವಾವೃಂದಾವನ ಜೇಷ್ಠ ಬಹುಳ ತೃತೀಯದಂದು ವೃಂದಾವನ್ಸ್ಟಾ ರಾದರು. ಮುಂದೆ ಆದ್ಯವರದಾಚಾರ್ಯರು ಶ್ರೀ ಮಠಕ್ಕೆ ಗೌರವ ನೀಡದೆ ಇದ್ದಾಗ ಸ್ವತಹ ಶ್ರೀ ರಘೋತ್ತಮ ತೀರ್ಥರಲ್ಲಿ ನಿಂತು ಅವರಿಂದ " *ಶ್ರೀಭಾವಬೋದ* " ಗ್ರಂಥಗಳನ್ನು ರಚಿಸಿದವರು, ಶ್ರೀ ರಘುವರ್ಯ ತೀರ್ಥರು.
ಹೀಗೆ ರಘುವರ್ಯ ತೀರ್ಥರ ಮಹಿಮೆ ಅಪಾರ,ಅವರ ಸ್ಮರಣೆ ಮಾಡುತ್ತಾ ನಮ್ಮೆಲ್ಲರಿಗೂ ಜ್ಞಾನ ಭಕ್ತಿ ಯತಾಶಕ್ತಿ ದಯಪಾಲಿಸಲಿ ಎಂದು ಗುರುಗಳಲ್ಲಿ ನಮಸ್ಕರಿಸೋಣ
*ಪ್ರೀತೋಸ್ತು ಕೃಷ್ಣ ಪ್ರಭೋ*
*ಫಣೀಂದ್ರ ಕೆ*
[06/06, 10:41 PM] Ranganath kas. shantappagoudar: Namasthe 🙏
Heart Attack ॥
3000 years ago in our country India there was a great sage. His name was Maharishi Vagvat ji, he had written a book named Ashtang Hrudayam and in this book he had written 7000 formulas to cure diseases, this is one of them.
Vagvat ji writes that whenever the heart is getting attacked, that means blockage is starting to happen in the tubes of the heart. So it means that acidity has increased in the blood. You understand acidity. There are two types of acidity:
One is the acidity of the stomach and the other is the acidity of the blood. When the acidity in your stomach increases, you will say that you are feeling a burning sensation in the stomach with sour breath.
Water is coming out of the mouth and if this acidity increases further, then there will be hyperacidity and when this acidity of the stomach increases, when it comes into the blood, then there is blood acidity and when acidity increases in the blood, it Acidic blood is not able to pass through the tubes of the heart and causes blockage in the tubes, only then heart attack occurs, without this, heart attack does not happen and this is the biggest truth of Ayurveda, which no doctor tells you, because its treatment is the easiest. Is.
What is the treatment?
Vagvat ji writes that when acidity has increased in the blood, then you should use such things which are alkaline.
You know there are two types of things acidic and alkaline.
Now What happens if Acid and Alkaline are mixed? Everyone knows that neutral is.
So Vagvat ji writes that if the acidity of the blood has increased, then eat alkaline things, then the acidity of the blood will become neutral and if the acidity in the blood becomes neutral, then there is no possibility of heart attack in life. This is the whole story.
Now you will ask what are the things which are alkaline and should we eat?
There are many such things in your kitchen which are alkaline, if you eat them, you will never get a heart attack and if you have had one, it will not happen again.
We all know that what is the most alkaline thing and all are easily available at home, it is Lauki which is also known as Dudhi.
In English it is called bottle gourd which you eat as a vegetable. There is nothing more alkaline than this. So you drink gourd juice every day or eat raw gourd.
Vagvat ji says that bottle gourd has the maximum power to reduce the acidity of the blood, so you should consume bottle gourd juice.
How much to consume?
Drink 200 to 300 mg daily.
When to drink:
You can drink it in the morning on an empty stomach (after going to the toilet) or after half an hour of breakfast.
You can make this gourd juice more alkaline, put 7 to 10 leaves of Tulsi in it. Tulsi is very alkaline, with it you can add 7 to 10 leaves of mint, mint is also very alkaline, along with it you must add black salt or rock salt, it is also very alkaline.
But remember, add only black or rock salt, never add other iodized salt, this iodized salt is acidic, so you must consume this gourd juice, it will cure all your heart blockage in a period of 2 to 3 months.
You will start seeing a lot of effect on the 21st day itself. You will not need any operation. It will be treated at home by our Ayurveda of India and your precious body and lakhs of rupees will be saved from the operation.
Sanatan Dharma is the best.
🙏🙏
[07/06, 6:24 AM] +91 94481 41949: ಶುಭೋದಯ सुप्रभातम्
ದಿನದ ಪಂಚಾಂಗ. पञ्चाङ्ग
ದಿನಾಂಕ दिनाङ्क 07-06-2023
ಬುಧವಾರ बुधवासरः
ಸಂವತ್ಸರ संवत्सरः :- ಶ್ರೀ ಶೋಭಕೃತು
ಆಯನ अयनम् :- ಉತ್ತರ
ಋತು ऋतुः :- ಗ್ರೀಷ್ಮ
ಮಾಸ मासः :- ಜ್ಯೇಷ್ಠ
ಪಕ್ಷ पक्षः :- ಕೃಷ್ಣ
ತಿಥಿ: तिथिः :- ಚತುರ್ಥಿ ೪೭-೩೬ ಘಳಿಗೆ
ವಾರ वासरः :- ಸೌಮ್ಯ
ನಕ್ಷತ್ರ नक्षत्रम् :-. ಉತ್ತರಾಷಾಢ ೪೬-೦೦ ಘಳಿಗೆ
ಯೋಗ योगः :- ಬ್ರಹ್ಮ ೪೯-೫೨ ಘಳಿಗೆ
ಕರಣ करणं :- ಬವ ೨೦-೨೮ ಘಳಿಗೆ
ಅಶುಭಕಾಲ:-
ರಾಹುಕಾಲ:- 12-20 pm to 01-56 pm
ಗುಳಿಕಕಾಲ:- 10-44 am to 12-20 pm
ಯಮಗಂಡಕಾಲ:- 07-32 am to 09-08 am
ಶುಭಕಾಲ:-
ಬ್ರಾಹ್ಮೀ:- 05-06 am to 05-54 am
ಅಭಿಜಿನ್:- ಇಲ್ಲಾ
ಗೋಧೂಳಿ:- 06-43 pm to 07-31 pm
ದಿನದ ವಿಶೇಷ :-
ಶ್ರಾದ್ಧ ತಿಥಿ :- ಸಿ. ವಾ. ೪ ತಿಥಿ:
ಸಂಕಷ್ಟ ಹರ ಚತುರ್ಥಿ
ಕೃತ್ತಿಕೆ ೨ ವೃಷಭ ಬುಧ ೩೪-೧ ೭ ಘಳಿಗೆ
ಚಂದ್ರೋದಯ: 9-15-39 pm
Daily panchangam
Date 07-06-2023
Wednesday
Samvatsara :- Sri Shobhakritu
Aayana:- Uttara
Rutu :- Greeshma
Maasa:- Jyestha
Paksha :- Krishna
Tithi :- Chaturthi 1-03 am
Vara :- Soumya
Nakshatra:- Uttaraashadha 0-25 am
Yooga:- Brahma
Karana:- Bava
Ashubhakaala:-
Raahukaala 12-20 pm to 01-56 pm Gulikakaala:- 10-44 am to 12-20 pm
Yamagandakala:- 07-32 am to 09-08 am
Shubha kaala:-
Brahmhii:- 05-06 am to 05-54 am
Abhijin:- Nil
Go dhooli:- 06-43 pm to 07-31 pm
Today's special:-
Shraadha tithi:-Si. Va. 4 thithi:
Sankastha Hara chaturthi
Krittike 2 Vrishabha Budha 34-17 ghalige after sunrise
Moon rise: 9-15-39 pm
Post a Comment