ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಬ್ಲಾಕ್‌ಗಳ ಯಶಸ್ವಿ ಬಿಡ್ಡರ್‌ಗಳಿಗೆ 22 ಕಲ್ಲಿದ್ದಲು ಗಣಿಗಳಿಗೆ ವೆಸ್ಟಿಂಗ್ ಆದೇಶಗಳನ್ನು ನೀಡಿದೆ

ಜೂನ್ 08, 2023
4:44PM

ಕಲ್ಲಿದ್ದಲು ಸಚಿವಾಲಯವು ಕಲ್ಲಿದ್ದಲು ಬ್ಲಾಕ್‌ಗಳ ಯಶಸ್ವಿ ಬಿಡ್ಡರ್‌ಗಳಿಗೆ 22 ಕಲ್ಲಿದ್ದಲು ಗಣಿಗಳಿಗೆ ವೆಸ್ಟಿಂಗ್ ಆದೇಶಗಳನ್ನು ನೀಡಿದೆ

@PIB_India
ನವದೆಹಲಿಯಲ್ಲಿ ಇಂದು ನಡೆದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿನಲ್ಲಿ ಕಲ್ಲಿದ್ದಲು ಬ್ಲಾಕ್‌ಗಳ ಯಶಸ್ವಿ ಬಿಡ್ಡರ್‌ಗಳಿಗೆ ಕಲ್ಲಿದ್ದಲು ಸಚಿವಾಲಯವು 22 ಕಲ್ಲಿದ್ದಲು ಗಣಿಗಳಿಗೆ ವೆಸ್ಟಿಂಗ್ ಆದೇಶಗಳನ್ನು ನೀಡಿದೆ. ಹದಿನಾರು ಕಲ್ಲಿದ್ದಲು ಗಣಿಗಳನ್ನು ಸಂಪೂರ್ಣವಾಗಿ ಪರಿಶೋಧಿಸಿದರೆ ಆರು ಗಣಿಗಳನ್ನು ಭಾಗಶಃ ಪರಿಶೋಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

22 ಕಲ್ಲಿದ್ದಲು ಗಣಿಗಳ ಸಂಚಿತ ಗರಿಷ್ಠ-ಶ್ರೇಣಿಯ ಸಾಮರ್ಥ್ಯವು ವರ್ಷಕ್ಕೆ 53 ಮಿಲಿಯನ್ ಟನ್‌ಗಳು. ಈ ಗಣಿಗಳಿಂದ ವಾರ್ಷಿಕ ಒಂಬತ್ತು ಸಾವಿರದ 831 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಲಾಗಿದೆ ಮತ್ತು ಸುಮಾರು ಎಂಟು ಸಾವಿರ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲಿದೆ. ಇದು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 71 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡುತ್ತದೆ. ಈ 22 ಕಲ್ಲಿದ್ದಲು ಗಣಿಗಳ ಹಸ್ತಾಂತರದೊಂದಿಗೆ, ಕಲ್ಲಿದ್ದಲು ಸಚಿವಾಲಯವು ಇಲ್ಲಿಯವರೆಗೆ ವಾಣಿಜ್ಯ ಹರಾಜಿನ ಅಡಿಯಲ್ಲಿ ಒಟ್ಟು 73 ಕಲ್ಲಿದ್ದಲು ಗಣಿಗಳಿಗೆ ವೆಸ್ಟಿಂಗ್ ಆದೇಶಗಳನ್ನು ನೀಡಿದೆ.

Post a Comment

Previous Post Next Post