ಜೂನ್ 05, 2023 | , | 7:07PM |
ಭಾರತೀಯ ನೌಕಾಪಡೆಯು 58 ಬೀಚ್‌ಗಳು, 2,000 ಕಿಲೋಮೀಟರ್‌ಗಳ ಕರಾವಳಿಯಿಂದ 78,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತದೆ
@IN_NavalAcademy
ಭಾರತೀಯ ನೌಕಾಪಡೆಯು ಕಳೆದ ವರ್ಷದಲ್ಲಿ 58 ಬೀಚ್‌ಗಳು ಮತ್ತು 2,000 ಕಿಲೋಮೀಟರ್‌ಗಳಷ್ಟು ಕರಾವಳಿಯಿಂದ 78,000 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಿದೆ. ಪುನೀತ್ ಸಾಗರ್ ಅಭಿಯಾನದ ಅಡಿಯಲ್ಲಿ ಭಾರತೀಯ ನೌಕಾಪಡೆಯು ರಾಷ್ಟ್ರವ್ಯಾಪಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.ಈ ಅಭಿಯಾನವು ಕಡಲತೀರಗಳು, ಬೀಚ್‌ಗಳನ್ನು ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಿಂದ ಸ್ವಚ್ಛಗೊಳಿಸುವ ಮತ್ತು ಅವುಗಳನ್ನು ಸ್ವಚ್ಛವಾಗಿಡುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನಹರಿಸುತ್ತದೆ. 2022-23 ರಲ್ಲಿ, ಭಾರತೀಯ ನೌಕಾಪಡೆಯು ದೇಶಾದ್ಯಂತ ಐದು ಲಕ್ಷದ 24 ಸಾವಿರ ಮರಗಳ ಸಸಿಗಳನ್ನು ನೆಡಲಾಗಿದ್ದು, ಒಂದು ವರ್ಷದಲ್ಲಿ ಸರಿಸುಮಾರು 11,500 ಟನ್ ಇಂಗಾಲವನ್ನು ಸೆರೆಹಿಡಿಯಲಾಗಿದೆ.
Post a Comment