ಬೆಂಗಳೂರು: ಬಿಜೆಪಿ ರಾಜ್ಯ ಕಾರ್ಯಾಲಯ *“ಜಗನ್ನಾಥ ಭವನ”ದಲ್ಲಿ* 8.6.2023ರ ಗುರುವಾರ ಬೆಳಿಗ್ಗೆ 10.30 ಗಂಟೆಗೆ *ನೂತನವಾಗಿ ಚುನಾಯಿತರಾದ ಬಿಜೆಪಿ ಶಾಸಕರ ಸಭೆ,* ಮಧ್ಯಾಹ್ನ 3.00 ಗಂಟೆಗೆ *ಎಲ್ಲಾ ಪರಾಜಿತ ಅಭ್ಯರ್ಥಿಗಳ ಸಭೆ* ಹಾಗೂ ಸಂಜೆ 6.00 ಗಂಟೆಗೆ *ಕೋರ್ ಕಮಿಟಿ ಸಭೆ* ನಡೆಯಲಿದೆ.
ಈ ಕಾರ್ಯಕ್ರಮಗಳಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರು ಮತ್ತು ಸಂಸದರಾದ *ಶ್ರೀ ನಳಿನ್ ಕುಮಾರ್ ಕಟೀಲ್,* ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ *ಶ್ರೀ ಬಿ.ಎಸ್. ಯಡಿಯೂರಪ್ಪ,* ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ *ಶ್ರೀ ಬಸವರಾಜ ಬೊಮ್ಮಾಯಿ,* ರಾಜ್ಯದ ಪ್ರಭಾರಿಗಳು ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಅರುಣ್ ಸಿಂಗ್,* ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಸಿ.ಟಿ. ರವಿ,* ಮಾಜಿ ಉಪಮುಖ್ಯಮಂತ್ರಿಗಳಾದ *ಶ್ರೀ ಕೆ.ಎಸ್. ಈಶ್ವರಪ್ಪ,* ಮಾಜಿ ಸಚಿವರಾದ *ಶ್ರೀ ಆರ್. ಅಶೋಕ್* ಅವರು ಭಾಗವಹಿಸಲಿದ್ದಾರೆ.
ತಮ್ಮ ಪತ್ರಿಕೆಯ ವರದಿಗಾರರು, ಛಾಯಾಗ್ರಾಹಕರು ಮತ್ತು ಟಿ.ವಿ. ಮಾಧ್ಯಮಗಳ ವರದಿಗಾರರು ಈ ಸಂದರ್ಭದಲ್ಲಿ ಭಾಗವಹಿಸಿ ಸೂಕ್ತ ಪ್ರಚಾರ ನೀಡಬೇಕಾಗಿ ವಿನಂತಿ.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment