ಗುರುಗ್ರಾಮ್‌ನ ಹುಡಾ ಸಿಟಿ ಸೆಂಟರ್‌ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಸಂಪರ್ಕ ವಿಸ್ತರಣೆಗೆ ಸಂಪುಟ ಅನುಮೋದನೆ

ಜೂನ್ 07, 2023
5:39PM

ಗುರುಗ್ರಾಮ್‌ನ ಹುಡಾ ಸಿಟಿ ಸೆಂಟರ್‌ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಸಂಪರ್ಕ ವಿಸ್ತರಣೆಗೆ ಸಂಪುಟ ಅನುಮೋದನೆ

@PIB_India
ಹುಡಾ ಸಿಟಿ ಸೆಂಟರ್‌ನಿಂದ ಗುರುಗ್ರಾಮ್‌ನ ಸೈಬರ್ ಸಿಟಿವರೆಗೆ ಮೆಟ್ರೋ ಸಂಪರ್ಕವನ್ನು ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ವಿಸ್ತರಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.

ಈ ಸಂಪೂರ್ಣ ಎತ್ತರದ ಯೋಜನೆಗೆ ಸುಮಾರು ಐದು ಸಾವಿರದ 452 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇಂದು ಮಧ್ಯಾಹ್ನ ಹೊಸದಿಲ್ಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಈ ಹಂತದಲ್ಲಿ ಮೆಟ್ರೋ 28 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಲಿದ್ದು, ಈ ಮಾರ್ಗದಲ್ಲಿ 27 ನಿಲ್ದಾಣಗಳಿವೆ. ಮಂಜೂರಾದ ದಿನದಿಂದ ನಾಲ್ಕು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳುವ ಅಂದಾಜಿದೆ ಎಂದರು.

ಈ ಯೋಜನೆಯ ಪ್ರಯೋಜನಗಳನ್ನು ಎತ್ತಿ ತೋರಿಸುತ್ತಾ ಶ್ರೀ. ಗೋಯಲ್ ಅವರು, ಈ ಜಾಲವು ಗುರ್ಗಾಂವ್ ರೈಲು ನಿಲ್ದಾಣದೊಂದಿಗೆ ಸಂಪರ್ಕ ಹೊಂದುತ್ತದೆ ಮತ್ತು ಪ್ರದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
 
ಹೊಸ ಗುರುಗ್ರಾಮವನ್ನು ಹಳೆಯ ಗುರುಗ್ರಾಮದೊಂದಿಗೆ ಸಂಪರ್ಕಿಸುವುದು ಈ ಸಾಲಿನ ಮುಖ್ಯ ಲಕ್ಷಣವಾಗಿದೆ. ಮುಂದಿನ ಹಂತದಲ್ಲಿ, ಇದು ಐಜಿಐ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ಒದಗಿಸುತ್ತದೆ. 

Post a Comment

Previous Post Next Post