*ನಿತ್ಯ ಪಂಚಾಂಗ NITYA PANCHANGA 06.06.2023 ಮಂಗಳವಾರ TUESDAY**ಸಂವತ್ಸರ:*ಶೋಭಕೃತ್.*SAMVATSARA :* SHOBHAKRUT

                                                                                                                          *ನಿತ್ಯ ಪಂಚಾಂಗ NITYA PANCHANGA 06.06.2023 ಮಂಗಳವಾರ TUESDAY*
*ಸಂವತ್ಸರ:*ಶೋಭಕೃತ್.
*SAMVATSARA :* SHOBHAKRUT
*ಆಯಣ:* ಉತ್ತರಾಯಣ.
*AYANA:* UTTARAAYANA.
*ಋತು:* ಗ್ರೀಷ್ಮ.
*RUTHU:* GREESHMA.
*ಮಾಸ:* ಜ್ಯೇಷ್ಠ.
*MAASA:*  JYESHTHA.
*ಪಕ್ಷ:* ಕೃಷ್ಣ.
*PAKSHA:* KRISHNA.
*ವಾಸರ:* ಭೌಮವಾಸರ.
*VAASARA:* BHOUMAVAASARA.
*ನಕ್ಷತ್ರ:* ಪೂರ್ವಾಷಾಢಾ.
*NAKSHATRA:* POORVASHADA.
*ಯೋಗ:* ಶುಭ / ಶುಕ್ಲ.
*YOGA:* SHUBHA / SHUKLA.
*ಕರಣ:* ವಣಿಕ್.
*KARANA:* VANIK.
*ತಿಥಿ:* ತೃತೀಯಾ.
*TITHI:* TRATIYA.
*ಶ್ರಾದ್ಧ ತಿಥಿ:* ತೃತೀಯಾ.
*SHRADDHA TITHI:* TRATIYA.
*ಸೂರ್ಯೊದಯ (Sunrise):* 05.53
*ಸೂರ್ಯಾಸ್ತ (Sunset):* 06:50
*ರಾಹು ಕಾಲ (RAHU KAALA) :* 03:00PM To 04:30PM.
*ದಿನ ವಿಶೇಷ (SPECIAL EVENT'S)*
*ಶ್ರೀರಘುವರ್ಯತೀರ್ಥರ ಪು (ನವ ವೃಂದಾವನ).*                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                              ಶುಭಮಸ್ತು...ಶುಭದಿನ
[05/06, 8:07 AM] Pandit Venkatesh. Astrologer. Kannada: ಜನನ ಕಾಲದಲ್ಲಿ
ಗ್ರಹಗಳ ಯುತಿಫಲ :

ರವಿ ಚಂದ್ರನೊಡನೆ ಒಂದೇ ಭಾವದಲ್ಲಿ ಇದ್ದರೆ ವಿವಿಧ ಯಂತ್ರಗಳನ್ನು ವಿಜ್ಞಾನಿಯಂತೆ ಕಂಡುಹಿಡಿದು
ರಚಿಸುತ್ತಾನೆ.
ಕೆತ್ತನೆ ಕೆಲಸಗಳನ್ನು ಮಾಡುತ್ತಾನೆ.

ರವಿಯು ಕುಜನ ಜೊತೆ ಯುತಿ ಇದ್ದರೆ
ಪಾಪ ಕರ್ಮಾಸಕ್ತ.

ರವಿ ಬುದ ಯುತಿ ಇದ್ದರೆ:
ಸಕಲ ಕಾರ್ಯಗಳಲ್ಲಿ ನಿಪುಣ ಒಳ್ಳೆಯ ಬುದ್ಧಿ ಸಾಮರ್ಥ್ಯದವನು.
ಲೋಕ ಪ್ರಸಿದ್ಧ ಮನ ಸಂತೋಷದ ಸುಖಿ.

ರವಿ ಗುರು ಯುತಿ ಇದ್ದರೆ 
ದಯೇ ಇಲ್ಲದ
 ಕ್ರೂರನಾಗಿ
ತನ್ನ ಕಾರ್ಯ ಮರೆತು ಅನ್ಯರ ಕಾರ್ಯಾಸಕ್ತ.
[ಗುರು ಬಲಯಿನನಾದರೆ ಕ್ರೂರ .ಬಲಿಷ್ಠನಾದರೆ ಪರಕಾರ್ಯಾಸಕ್ತ. ]

ರವಿ ಶುಕ್ರ ಯುತಿ ಇದ್ದರೆ ಅಭಿನಯಕಲೆಯವನು.ರಂಗನಟ. ಗೀತಾ ವಾದ್ಯಾದಿ ತಜ್ಞ .

ರವಿ ಮತ್ತು ಶನಿ ಯುತಿ ಇದ್ದರೆ ಲೋಹ ಧಾತುಗಳ ಪರಿವರ್ತನೆಗಳಿಂದ ವಿವಿಧ ತಯಾರಿಕೆಗಳು.
ವಿವಿಧ ವಸ್ತುಗಳನ್ನು -ಪಾತ್ರೆಗಳನ್ನು ತಯಾರಿಸಿ ವ್ಯಾಪಾರ ಮಾಡುತ್ತಾನೆ

ಓಂ ನಮೋ ನಾರಾಯಣಾಯ :
[05/06, 8:07 AM] Pandit Venkatesh. Astrologer. Kannada: ಮನೆಯಿಂದ ಹೊರಡುವಾಗ ಅರಿಶಿಣ ಕಾಣಿಸಿದರೆ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವುದು ಪ್ರಕಾಶಕರಿಗೆ ಬರಹಗಾರರಿಗೆ ನಟ ನಟಿಯರಿಗೆ ಭೋಗ ವಸ್ತು ವ್ಯಾಪಾರಿಗಳಿಗೆ ಲಾಭದಾಯಕವಾಗುತ್ತದೆ ಎಂಬುದನ್ನು ಸೂಚಿಸುತ್ತದೆ
[05/06, 8:07 AM] Pandit Venkatesh. Astrologer. Kannada: *ಕನಸಿನಲ್ಲಿ ನದಿಯಲ್ಲಿ ಸ್ನಾನ ಮಾಡಿದಂತೆ ಕಾಣಿಸಿದರೆ ಅಂತವರಿಗೆ ಒಳ್ಳೆಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.*
[05/06, 8:07 AM] Pandit Venkatesh. Astrologer. Kannada: ಕನಸಿನಲ್ಲಿ ಮೀನುಗಳು ತನ್ನನ್ನು ನುಂಗಿದಂತೆ ಕಂಡರೆ ಅಂತವರಿಗೆ ಯಾವುದೇ ರೋಗವಿದ್ದರೂ ನಿವಾರಣೆಯಾಗಿ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಓಂ ನಮೋ ನಾರಾಯಣಾಯ
[05/06, 8:07 AM] Pandit Venkatesh. Astrologer. Kannada: ಸ್ವಾತಿ ನಕ್ಷತ್ರ ಒಂದು ವಿವರಣೆ :

ಅಧಿಪತಿ ರಾಹು:
ನಕ್ಷತ್ರ ದೇವತೆ ವಾಯು .
ಅಧಿದೇವತೆ
ತ್ವಷ್ಟ್ರಾರ
ಪ್ರತ್ಯದಿ ದೇವತೆ
ಇಂದ್ರಾಗ್ನಿ .

ಭೋಗವಿಲಾಸಿಗಳು ವಿದ್ಯಾವಂತರು.
ಪ್ರಬಲ ಸಾಹಸಸಿಗಳು 
ಗರ್ವಿ
ಸಣ್ಣ ದೇಹ ಉಳ್ಳವರು.
ನ್ಯಾಯ ಶಾಂತಿ ಜೀವನ ನಡೆಸುತ್ತಾರೆ.
ಕೃತಜ್ಞರು.
ನಂಬಿಕೆ ಇಲ್ಲದವರು
ಸಂಶೋಧಕರು
ಪ್ರತಿಷ್ಠೆ ಗೌರವ ಮಾನ್ಯತೆಗಳಿಗಾಗಿ ಹೋರಾಟ
ಕಾರ್ಯಕ್ಕಿಂತ ಮಾತು ಹೆಚ್ಚು.
ಪುತ್ರರಲ್ಲಿ ಕಷ್ಟವನ್ನು ಹೊಂದುತ್ತಾರೆ.
ಜೀವನದ ಪ್ರಾರಂಭದಲ್ಲಿ ಕಷ್ಟ ಮಧ್ಯದಲ್ಲಿ ಶ್ರಮ ಅಂತ್ಯದಲ್ಲಿ ಸುಖ.
ತುಂಬಾ ಆಕರ್ಷಕ ಶರೀರ.
ಸುಂದರವಾದ ಕಣ್ಣುಗಳು.
ಎತ್ತರವಾದ ಶರೀರ
ಶಕ್ತಿ ಸಾಮರ್ಥ್ಯ ಉಳ್ಳವರು.
ತೃಪ್ತರು.
ಆಚಾರ ವಿಚಾರ ದಾನ ಧರ್ಮ ಪೂಜಾ ನಿಷ್ಠೆ ಉಳ್ಳವರು.
ಆಸ್ತಿಕಭಾವದ 
ಆಸ್ತಿಕ ಭಾವದ ಆಸ್ತೆಉಳ್ಳವರು.
ಮೋಹಿತಾಂಗರು
ಎಲ್ಲರಿಗೂ ಬೇಕಾದವರು
ಸರ್ವತಂತ್ರ ಸ್ವತಂತ್ರರು.
ಬುದ್ಧಿವಂತರು
ನಾನಾ ವಿದ್ಯೆಯನ್ನು ತಿಳಿದವರು.
ಖರ್ಚು ಮಾಡುವವರು ಜಿತೇಂದ್ರಿಯರು
ವ್ಯಾಪಾರದ ಮರ್ಮ ತಿಳಿದವರು
ಯಜ್ಞ ಯಾಗಗಳನ್ನು ಆಚರಿಸುವವರು.
ಸರ್ಕಾರದ ಮೂಲಕ ಧನವನ್ನು ಹೊಂದುತ್ತಾರೆ.
 ಭವ್ಯವಾದ ಬದುಕು
ಭಾಗ್ಯಶಾಲಿ.
ಕಸವನ್ನು ರಸವನ್ನಾಗಿಸುವ ಕೌಶಲ್ಯ.
ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ.
ನೀರಿನಲ್ಲಿ ಹೆಚ್ಚು ಆಸಕ್ತಿ.
ಉಪಕಾರ ಸ್ಮರಣೆ ಇಲ್ಲದವರು.
ತಮಗೆ ಬೇಕಾದುದ್ದನ್ನು ಹೊಂದುವಲ್ಲಿ ಪಟ್ಟು ಹಿಡಿಯುತ್ತಾರೆ.
ಸೋಲನ್ನು ಒಪ್ಪದವರು ಆಗಿರುತ್ತಾರೆ.

ಮೊದಲನೇ ಪಾದ ಧನಸು ನವಾಂಶ ಗುರು ಅಧಿಪತಿ ಜಾತಕರು ಧನವಂತರು ಅನೇಕ ಸ್ತ್ರೀಯರ ಸಮಾಗಮಿ
ಸದ್ಗುಣಿ
ಸದಾಚಾರ ಸಂಪನ್ನರು.
ಆಚಾರ ವಿಚಾರವಂತರು.
ಧನ ಕನಕ ಸಕಲ ಸಂಪತ್ತು ಉಳ್ಳವರು.

ಎರಡನೇ ಪಾದ ಮಕರನವಾಂಶ ಶನಿಯಧಿಪತಿ.
ಲೋಬಿ.
ದುಷ್ಟ ಸ್ವಭಾವ.
ಸಿಡುಕು.
ಮಾತಿಗಿಂತ ಕೃತಿಗೆ ಹೆಚ್ಚು ಮಹತ್ವ.
ಶೀಘ್ರಕೋಪಿ 
ಒಣ ಆಡಂಬರ.

ಮೂರನೇ ಪಾದ ಕುಂಭನವಾಂಶ
ಶನಿಯಧಿಪತಿ
ನಾಸ್ತಿಕ
ಉಗ್ರ ಸ್ವಭಾವ
ದಯಾ ದಾಕ್ಷಿಣ್ಯವಿಲ್ಲದವರು.
ಮೂರ್ಖರು 
ದುರ್ವ್ಯಸನ.
ಶಕ್ತಿ ಇಲ್ಲದವರು ಡಂಬಾಚಾರಿ ಅವಿವೇಕಿ ದುರ್ಗುಣ.

ನಾಲ್ಕನೇ ಪಾದ ಮೀನನವಾಂಶ ಗುರು ಅಧಿಪತಿ ಸದ್ಗುಣಿ 
ಶ್ರೇಷ್ಠ ವ್ಯಕ್ತಿ
ಉದಾರಿ
ವಿದ್ವಾಂಸ
ವಿಶಾಲ ಹೃದಯ
ಕುಂದು ಕೊರತೆ ಇಲ್ಲದವರು.
ಕೀರ್ತಿಶಾಲಿ ಸಕಲ ಗುಣ ಸಂಪನ್ನ.

ಓಂ ನಮೋ ನಾರಾಯಣಾಯ 

ಜಾತಕ ವಿಮರ್ಶೆಗೆ ಸಂಪರ್ಕಿಸಿ.
[05/06, 8:07 AM] Pandit Venkatesh. Astrologer. Kannada: ಮಕರ ರಾಶಿಯ ಒಂದು ವಿವರಣೆ :

ಈ ರಾಶಿ ಅಧಿಪತಿ ಶನಿ.ಚರ ರಾಶಿ ಜಲರಾಶಿಯು ಹೌದು.
ಈ ರಾಶಿಯಲ್ಲಿ ಹುಟ್ಟಿದವರು ವ್ಯವಹಾರ ಕುಶಲಿಗಳು ವಾಣಿಜ್ಯ ವಹಿವಾಟುಗಳಲ್ಲಿ ಸಿದ್ದಹಸ್ಥರು.
ವ್ಯಾಪಾರಿ ಕ್ಷೇತ್ರದಲ್ಲಿ ಪ್ರಭಾವಿ 
ವಿಜ್ಞಾನ ತಂತ್ರಜ್ಞಾನ ಕಂಪ್ಯೂಟರ್ ಜ್ಞಾನವು ಸಹ ಇವರಿಗೆ ಕರಗತವಾಗಿರುತ್ತದೆ.
ಕರ್ಮಸ್ಥನಾದಿಪತಿಯಾದ ಶುಕ್ರನು 
ಪಂಚಮಾಧಿಪತಿಯು ಆಗಿರುವುದರಿಂದ ಮಕರ ರಾಶಿಯ ಜಾತಕರಿಗೆ ಶುಕ್ರ ಕಾರಕತ್ವದ ಹುದ್ದೆಗಳು ದೊರಕುತ್ತವೆ.
ಅನೇಕರು ವಿದ್ಯಾ ವ್ಯಾಸಂಗ ಮುಂದುವರಿಸಲು ಇಚ್ಛಿಸದೆ ವ್ಯಾಪಾರಿ ವೃತ್ತಿಯನ್ನು ಗಳಿಸಿಕೊಳ್ಳುತ್ತಾರೆ.
ಚಲನಚಿತ್ರೋದ್ಯಮ ಕಲಾವಿದ ತಂತ್ರಜ್ಞಾನ ತಾಂತ್ರಿಕ ವೃತ್ತಿಗಳನ್ನು ಪಡೆಯುತ್ತಾರೆ.
ದೂರಸಂಪರ್ಕ ದೂರದರ್ಶನ ದೂರವಾಣಿ ಇಲಾಖೆಗಳಲ್ಲಿ ತಂತ್ರಜ್ಞರಾಗಿ ಸೇವೆ ಸಲ್ಲಿಸಬಹುದು.
ಜಾಹೀರಾತು ಮಾಧ್ಯಮ ಗೃಹ ಇಲಾಖೆ ಸಾರ್ವಜನಿಕ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಸ್ಥಾನಮಾನಗಳಿಗೆ ಏರುತ್ತಾರೆ.
ಇವರಿಗೆ ಉದ್ಯೋಗ ಕ್ಷೇತ್ರದಲ್ಲಿ ಸಾಮರಸ್ಯದ ವಾತಾವರಣವಿರುತ್ತದೆ.
ಸಹದ್ಯೋಗಿಗಳಿಂದ ಇವರಿಗೆ ಸಹಾಯ ಬೆಂಬಲ ದೊರಕುತ್ತದೆ.
ಈ ರಾಶಿಯವರು ಪಂಚಮಾಧಿಪತಿ ಹಾಗೂ ಕರ್ಮಸ್ಥಾನಾಧಿಪತಿ ಒಬ್ಬನೇ ಆಗಿರುವ ಶುಕ್ರನು ಉನ್ನತ ಸ್ಥಾನಮಾನಗಳನ್ನು ಪ್ರಾಪ್ತಗೊಳಿಸುತ್ತಾನೆ.

ಉತ್ತಮ ಸಂಸ್ಕಾರ ವಿಶೇಷಗಳನ್ನು ಹೊಂದಿರುವ ಮಕರ ರಾಶಿಯವರು ದೇವತಾ ಅನುಗ್ರಹದಿಂದ ಉದ್ಯೋಗ ಮೂಲಕ ಅಪಾರ ದ್ರವ್ಯ ಹಣಕಾಸುಗಳನ್ನು ಸಂಪಾದಿಸಿ ಯಶಸ್ವಿಗೊಳಿಸುತ್ತಾರೆ.
ಮಕರ ರಾಶಿಗೆ ಚತುರ್ಥ ವಿದ್ಯಾ ಸ್ಥಾನದ ಅಧಿಪತಿ
ಕುಜ ಆಗಿರುವುದರಿಂದ ಮತ್ತು ಕುಜನು ಮಕರ ರಾಶಿಯಲ್ಲಿ ಉಚ್ಚನಾಗಿದ್ದರೆ
ವ್ಯಕ್ತಿಯು ಉನ್ನತ ತಾಂತ್ರಿಕ ಪದವಿಗಳಿಸಿ
ವಿದೇಶದಲ್ಲಿ ಉದ್ಯೋಗ ಅವಲಂಬಿಸಿ ಆಕರ್ಷಣೆ ವಾದ ಜೀವನವನ್ನು ನಡೆಸುತ್ತಾನೆ.
ಮಕರ ರಾಶಿಗೆ ಶುಕ್ರನು ಏಕ ಮಾತ್ರ ರಾಜಕಾರಕಆಗುವುದರಿಂದ ಮಕರ ರಾಶಿಯವರಿಗೆ ಅಲ್ಪ ಶ್ರಮದಿಂದಲೂ ಅಧಿಕ ಹಣ ಪ್ರಾಪ್ತವಾಗಬಹುದು.
ವ್ಯಾಪಾರ ವಹಿವಾಟುಗಳಲ್ಲಿ ಅಪಾರ ಹಣ ಪ್ರಾಪ್ತವಾಗಿ ಗೃಹ ವಾಹನ ವಸ್ತ್ರ ಆಭರಣಗಳು ಯಥೇಚ್ಛವಾಗಿ ಲಭಿಸುತ್ತವೆ.
ಸೂರ್ಯ ಅಥವಾ ರವಿಯು ಅಷ್ಟಮ ಉಪಜೀವನ ಸ್ಥಾನಾಧಿಪತಿಯಾಗಿರುವುದರಿಂದ ಮಕರ ರಾಶಿಯವರಿಗೆ ಉಪವೃತ್ತಿಗಳು ಇದ್ದು ಈ ಮೂಲಕ ಅಪಾರ ದೃವ್ಯ ಲಭಿಸುತ್ತದೆ.
ಆಸ್ತಿ ಮಾರಾಟ ಕ್ಷೇತ್ರದಲ್ಲಿ ಮಧ್ಯವರ್ತಿಯ ವೃತ್ತಿಗಳು ಲಭಿಸಬಹುದು.
ತನ್ಮೂಲಕ ಅಪಾರ ಹಣ ಲಭಿಸಿ ವಿಳಾಸ ಜೀವನ ಉಂಟಾಗಬಹುದು.
ಭಾಗ್ಯದಿಪತಿ ಬುಧ ಆಗಿರುವುದರಿಂದ
ಮಕರ ರಾಶಿಯವರಿಗೆ ಅದೃಷ್ಟ ಉನ್ನತವಾಗಿರುತ್ತದೆ.

ಓಂ ನಮೋ ನಾರಾಯಣಾಯ 

ಸಂಪರ್ಕಿಸಿ ಜಾತಕ ಪರಿಶೀಲನೆಗೆ
[05/06, 8:07 AM] Pandit Venkatesh. Astrologer. Kannada: ಜಾತಕದಲ್ಲಿ.9ನೇ ಭಾವ ವಿಶ್ಲೇಷಣೆ :

ದೈವಿ ಬಾವ
 ಋಜುಮಾರ್ಗ
ಬೋಧಕ ಮೊಮ್ಮಕ್ಕಳು ಆಧ್ಯಾತ್ಮಿಕ ಅಧ್ಯಯನ
ಕಲ್ಪನಾ ಶಕ್ತಿ.
ಅಂತರ್ಬೋಧ
ಧಾರ್ಮಿಕ ಭಕ್ತಿ ಭಾವ
ಕಾನೂನು ಸಾನುಭೂತಿ
ದರ್ಶನ ಶಾಸ್ತ್ರ
ವಿಜ್ಞಾನ ಸಾಹಿತ್ಯ
ಚಿರ ಖ್ಯಾತಿ.
ಧರ್ಮ ಕಾರ್ಯಗಳು
ಭೂತ ಪ್ರೇತಗಳೊಡನೆ ಸಂಪರ್ಕ.
ದೀರ್ಘ ಪ್ರಯಾಣ
ಹೊರದೇಶ ಪ್ರವಾಸ
ತಂದೆ ಇವುಗಳನ್ನು ಪ್ರತಿನಿಧಿಸುತ್ತದೆ.

ದುರ್ಬಲ ಚಂದ್ರನು 9ರಲ್ಲಿ ನೀಚಾವಸ್ಥೆಯಲ್ಲಿದ್ದರೆ ಅಥವಾ ಶುಕ್ರನ ಕೆಟ್ಟವನಾಗಿ ದುಷ್ಟ ಯುತಿಯನ್ನು ಪಡೆದಿದ್ದರೆ ಅಥವಾ ಒಂಬತ್ತನೇ ಅಧಿಪತಿ, ನೀಚನಾಗಿದ್ದರೆ ಜಾತಕನು ಗುರು ಪತ್ನಿಯ ಸಂಗಡ ಅಕ್ರಮ ಸಂಬಂಧದ
ಪಾಪಕ್ಕೆ ಒಳಗಾಗುತ್ತಾನೆ.

9ರಲ್ಲಿ ಶುಭರಿದ್ದು
9ರ ಅಧಿಪತಿ ಪಾಪಿಗಳ ಸಂಗಡ ಇಲ್ಲವಾದರೆ ಅಂತಹ ವ್ಯಕ್ತಿಯು ಹೆಂಡತಿ ಸಂಗಡ ಸಂತೃಪ್ತನಾಗಿರುತ್ತಾನೆ
 
9ರ ಅಧಿಪತಿಯು 8ರಲ್ಲೂ ಯಾವುದೋ ಚರ ರಾಶಿಯಲ್ಲೂ ಇದ್ದರೆ ಅಂತಹ ಜಾತಕನು ತಂದೆ ಸ್ಥಳಾಂತರ ದಲ್ಲಿ ಇರುವಾಗ ಹುಟ್ಟುತ್ತಾನೆ.

9ರದಿಪತಿಯು ಗುರುವಿನ ನವಾಂಶದಲ್ಲಿದ್ದರೆ ಆ ವ್ಯಕ್ತಿಯು ಋಜುಮಾರ್ಗ ಪ್ರವರ್ತಕನಾಗಿ
ದಾನಶೀಲನು ಆಗಿರುತ್ತಾನೆ.

9ರ ಒಡೆಯ 4ರಲ್ಲಿ ಶನಿ ದೃಷ್ಟಿಗೆ ಒಳಗಾಗಿದ್ದರೆ ಅಂತಹ ವ್ಯಕ್ತಿಗೆ ಹಲವು ಬಾಬು ಗಳಲ್ಲಿ ಸಾಮರ್ಥ್ಯವಿರುತ್ತದೆ ಎಂದು ಹೇಳಬಹುದು.

9 ರಲ್ಲಿ ಕೇತುವಿದ್ದರೆ ಆ ವ್ಯಕ್ತಿಗೆ ವಶೀಕರಣ ವಿದ್ಯೆಯಲ್ಲಿ ಆಸಕ್ತಿ ಇರುತ್ತದೆ.

9ರ ಒಡೆಯ ನಾಲ್ಕರಲ್ಲಿ ಶನಿ ದೃಷ್ಟಿಗೆ ಒಳಗಾಗಿದ್ದರೆ ಅಂತಹ ವ್ಯಕ್ತಿ ದಾನಶೀಲ ಪ್ರವೃತ್ತಿ ಸಿಡುಕು ಸ್ವಭಾವ ಸಾಧಾರಣವಾಗಿ ಅಂದ ಶ್ರದ್ಧೆ.

ಲಗ್ನ ಮತ್ತು 9ರ ಅಧಿಪತಿಗಳು ಬಲವಾಗಿದ್ದು ಸೂರ್ಯನ ಶುಭ ದೃಷ್ಟಿಗೆ ಒಳಗಾಗಿದ್ದರೆ
ಜಾತಕನು ತಂದೆಗೆ ವಿಧೇಯನಾಗಿ ಕರ್ತವ್ಯ ಬದ್ಧನಾಗಿರುತ್ತಾನೆ.

ಒಂಬತ್ತರ ಅಧಿಪತಿ ಕೇಂದ್ರದಲ್ಲೂ ತ್ರಿಕೋನದಲ್ಲೂ ಇದ್ದರೆ ಅಂತಹ ವ್ಯಕ್ತಿ ಆಧ್ಯಾತ್ಮಿಕ ವಿದ್ಯೆಯಲ್ಲಿ ಆಸಕ್ತನಾಗಿರುತ್ತಾನೆ.
ಅಂದರೆ ಗುರು ದೃಷ್ಟಿ ಇರಬೇಕು.
ಇಲ್ಲವೇ ಗುರು ಕೇಂದ್ರದಲ್ಲಿ ಇರಬೇಕು.

ರಾಹು ಶನಿಗಳು
9ರಲ್ಲಿ ಇದ್ದು ಬೇರೆ ರೀತಿಯಲ್ಲಿ ದು:ಸ್ತುತಿ ಎಲ್ಲಿದ್ದರೆ  ವ್ಯಕ್ತಿ ನಿಷ್ಕರುಣಿ ನಿರ್ದೋಷಿಗಳ ಮೇಲೆ ಕಷ್ಟ ಕಾರ್ಪಣ್ಯಗಳನ್ನು ಅಘಾತಗಳನ್ನು ಹೂಡುವುದರಲ್ಲಿ
ನಿರತ.ಸಾನುಭೂತಿ ರಹಿತ 
ಕುಜ ಕೇತುಗಳು 9ರಲ್ಲಿರುವಾಗ ಗುರು ಎರಡರಲ್ಲಿಯೂ ಬುಧ ಶುಕ್ರರು ಕ್ರಮವಾಗಿ ಐದರಲ್ಲೂ ಆರರಲ್ಲೂ ಏಳರಲ್ಲೂ ಇದ್ದರೆ ಅಂತಹ ವ್ಯಕ್ತಿ ಬಾರಿ ಐಶ್ವರ್ಯವಂತ.

ಲಗ್ನಾಧಿಪತಿಯು 9 ರಲ್ಲಿ ಪಂಚಮಾಧಿಪತಿಯ ಸಂಗಡ ಕೂಡಿದ್ದರೆ ಮಕ್ಕಳಿಗೆ ಸಂಪತ್ತನ್ನು ಕೂಡಿಡುತ್ತಾರೆ.

9ರ ಅಧಿಪತಿ ಬುಧನಾದರೆ ಅಥವಾ ಬುಧನು 9ರ ಅಧಿಪತಿಯನ್ನು ವೀಕ್ಷಿಸಿದರೆ
ಮತ್ತು ಗುರು ಉಚ್ಚಸ್ಥಾನದಲ್ಲಿದ್ದರೆ
ವ್ಯಕ್ತಿಯು ಆಧ್ಯಾತ್ಮ ವಿಷಯದಲ್ಲಿ ನಿಷ್ಣಾಥನಾಗಿರುತ್ತಾನೆಲಗ್ನಾಧಿಪತಿ ನವಮಾಧಿಪತಿ ಗಳು ಜೊತೆಗಿದ್ದರೆ ಇಲ್ಲವೇ ಪರಸ್ವರ ವೀಕ್ಷಿಸಿದರೆ ಅಥವಾ ಪರಸ್ಪರ ಕೇಂದ್ರಗಳಲ್ಲಿದ್ದರೆ
ಅಂತಹ ವ್ಯಕ್ತಿ ವಿದೇಶ ಪ್ರವಾಸ ಮಾಡುತ್ತಾನೆ.

ಓಂ ನಮೋ ನಾರಾಯಣಾಯ :
[05/06, 8:07 AM] Pandit Venkatesh. Astrologer. Kannada: ಮಾನವನಾಗಿ ಹುಟ್ಟಿದ ಮೇಲೆ ಮಾನವನಾಗಿ ಬೆಳೆಯಬೇಕೆ ವಿನಹ ಮೃಗವಾಗಿ ಬದುಕುವುದಲ್ಲ.
ಅವನ ಒಂದೊಂದು ಭಾವನೆಯು ಮಾನವ ಕಲ್ಯಾಣಕ್ಕೆ ಮೀಸಲಾಾಗಬೇಕು ಏನಾದರೂ ಆಗು ಮೊದಲು ಮಾನವನಾಗಿ ಬದುಕುವ ಭಾವನೆಗಳನ್ನು ಬೆಳೆಸಿಕೊಳ್ಳಬೇಕು ವ್ಯಕ್ತಿತ್ವ ವಿಕಸನಕ್ಕೆ ಸದ್ಭಾವನಾಯುಕ್ತ
ಸಂಸ್ಕಾರಗಳ ಮಾರ್ಗದರ್ಶನ ಅಗತ್ಯವಾಗಿರಬೇಕು.
ಈ ಉದಾತ್ತ ಭಾವನೆಗಳನ್ನು ಬಿತ್ತುವ ಯೋಗ್ಯರ ಸಂಪನ್ನರ ಸಹವಾಸವು ಬೇಕು ಆಗಲೇ ನೆಮ್ಮದಿ ಶಾಂತಿ ಸಮೃದ್ಧಿ.

ಓಂ ನಮೋ ನಾರಾಯಣಾಯ
[05/06, 8:12 AM] Pandit Venkatesh. Astrologer. Kannada: 🔯 ಆಧ್ಯಾತ್ಮಿಕ  ವಿಚಾರ.📖🔯

*ಬೃಹಸ್ಪತಿ..!*

ಅಂಗಿರಸ ಋಷಿಯ ಮಗ ಬೃಹಸ್ಪತಿ.
ಇವನು ದೇವತೆಗಳಿಗೆ ಗುರು.ಬ್ರಹ್ಮವಾದಿನಿ ಇವನ ಸೋದರಿ.ಪ್ರಭಾಸ ಇವಳ ಪತಿ..
ತಾರೆ ಬೃಹಸ್ಪತಿಯ ಪತ್ನಿ.ತಾರೆಗೆ ಸುಭೆ,ಚಾಂದ್ರಮಸಿ ಎಂಬ ಹೆಸರುಗಳಿವೆ.
ಚಂದ್ರನಿಂದ ಈಕೆಯಲ್ಲಿ ಬುಧನು ಜನಿಸಿದನು.
ತಾರೆ-ಬೃಹಸ್ಪತಿಗಳಿಗೆ ಶಂಯು,ನಿಶ್ಚ್ಯವನ,ವಿಶ್ವಭುಕ್,ವಿಶ್ವಜಿತ್,ಸ್ವಿಷ್ಟಕೃತ್,ಬಡಬಾಗ್ನಿ ಎಂಬ ಆರು ಅಗ್ನಿಗಳಲ್ಲದೆ,ಕಚನೆಂಬ ಮಗನೂ,ಸ್ವಾಹೆ ಎಂಬ ಮಗಳೂ ಸೇರಿದಂತೆ ಒಟ್ಟು ಎಂಟುಜನ ಮಕ್ಕಳು.
ಒಮ್ಮೆ ಶುಕ್ರಾಚಾರ್ಯರು ಧೂಮವ್ರತವೆಂಬ ತಪಸ್ಸು ಮಾಡುತ್ತಿದ್ದಾಗ,ಶುಕ್ರನ ವೇಷದಿಂದ ರಾಕ್ಷಸ ರಾಜನ ಬಳಿ ಬಂದು,
ನಾಸ್ತಿಕವಾದವನ್ನು ಬೋಧಿಸಿದನು.
ಮುಂದೆ ತಪಸ್ಸು ಮುಗಿಸಿ ಬಂದ ಶುಕ್ರನನ್ನು ರಾಕ್ಷಸರಾಜನು ತಿರಸ್ಕರಿಸಿದನು.
ಕೋಪಗೊಂಡ ಶುಕ್ರನು ರಾಕ್ಷಸರನ್ನು ಶಪಿಸುತ್ತಲೇ ತನ್ನ ಕಾರ್ಯವಾಯಿತೆಂದು ಬೃಹಸ್ಪತಿಯು ಅದೃಶ್ಯನಾದನು.

#ಬೃಹಸ್ಪತಿ_ನೀತಿಯನ್ನು ದ್ರೌಪದಿ ಚಿಕ್ಕವಳಿದ್ದಾಗ ದ್ರುಪದನ ಅರಮನೆಯಲ್ಲಿ ಒಬ್ಬ ಬ್ರಾಹ್ಮಣನು ಉಪದೇಶಿಸಿದ್ದನು.
ನಹುಷನು ಇಂದ್ರ ಪದವಿಗೇರಿ,
ಶಚೀದೇವಿಯನ್ನು ಕೂಡಲು ಬಯಸಿದಾಗ,ಬೃಹಸ್ಪತಿಯು ಸಪ್ತಋಷಿಗಳು ಹೊತ್ತಿರುವ ಪಲ್ಲಕ್ಕಿಯಲ್ಲಿ ಬಂದರೆ ಮಾತ್ರ ಇಂದ್ರಾಣಿ ನಿನ್ನ ವಶವರ್ತಿಯಾಗುವಳು ಎಂದು ಹೇಳಿ,ನಹುಷನನ್ನು ಅನರ್ಥಕ್ಕೆ ಈಡುಮಾಡಿ ಅಗಸ್ತ್ಯರ ಶಾಪದಿಂದ ಅವನು ಸರ್ಪವಾಗಿ ಭೂಮಿಗೆ ಬಿದ್ದು ಅವಳ ಪಾತಿವ್ರತ್ಯವನ್ನು ರಕ್ಷಿಸಿದನು.
ದೈತ್ಯ ವಿನಾಶಕ್ಕಾಗಿ ಬೃಹಸ್ಪತಿಯು ಸರಸ್ವತೀ ನದೀ ತೀರದಲ್ಲಿ ಯಾಗವನ್ನು ಮಾಡಿದನು.ಅದರ ಪ್ರಭಾವದಿಂದ ದೇವ ದಾನವರ ಯುದ್ಧದಲ್ಲಿ, ರಾಕ್ಷಸರು ಸೋತು ದೇವತೆಗಳು ಗೆದ್ದರು.
*ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ....ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ*🙏
*!! ಶ್ರೀಕೃಷ್ಣಾರ್ಪಣಮಸ್ತು !!*
[05/06, 8:42 PM] Pandit Venkatesh. Astrologer. Kannada: ನವಗ್ರಹ ಸರಳ ಪರಿಹಾರ                                                                                                                                               
1.ರವಿ ಗ್ರಹ ಪರಿಹಾರ,
ಯಾವುದೇ ಕೆಲಸ ಮಾಡುವ ಮೊದಲುಬೆಲ್ಲವನ್ನು,ಅಥವಾ,ಸಿಹಿತಿಂದುನೀರುಕುಡಿದುಪ್ರಾರಂಭ ಮಾಡಬೇಕು.
2, ಚಂದ್ರ ಗ್ರಹ ಪರಿಹಾರ,
ತಾಮ್ರದ ನಾಣ್ಯವನ್ನು ಕಾಕಿ ಬಣ್ಣದ ದಾರದಿಂದ ಕಟ್ಟಿ, ಸಮಸ್ಯೆಇರುವಜಾತಕರುಧರಿಸಬೇಕು,
3, ಕುಜ,( ಮಂಗಳ) ಗ್ರಹ  ಪರಿಹಾರ, 
ಬಡವರಿಗೆ,ಗೋದಿ,ಅಥವಾ,ಬೆಲ್ಲವನ್ನುದಾನಮಾಡುತ್ತಾಇರಬೇಕು.
4, ಬುಧ ಗ್ರಹ ಪರಿಹಾರ,
ಕೋತಿಗಳಿಗೆ,ವಾನರ ಗಳಿಗೆ  ಬೆಲ್ಲವನ್ನು,ಅಥವಾ ಗೋಧಿಯನ್ನು ತಿನ್ನಲು ಕೊಡಿ,
5, ಗುರು ಗ್ರಹ ಪರಿಹಾರ,
ಕಪ್ಪು ಬಣ್ಣದ ಗೋವನ್ನು ಸಾಕಬೇಕು,ಪಾಲನೆ,ಮಾಡಬೇಕುಅಥವಾ,ಗೋದಾನ,ನೀಡಬೇಕು,
6, ಶುಕ್ರ ಗ್ರಹ ಪರಿಹಾರ,
ಮನೆಯಲ್ಲಿಬಾವಿ,ಬೋರ್ ವೆಲ್,ತೋಡಿಸಬೇಕು ಅಥವಾ ಸಾರ್ವ ಜನಿಕ ವಾಗಿಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
7. ಶನಿ ಗ್ರಹ ಪರಿಹಾರ,
ಮನೆಯ ಎಡ ಬಾಗದಲ್ಲಿ ಒಂದು ಕತ್ತಲು ಕೋಣೆಯನ್ನು ನಿರ್ಮಿಸಬೇಕು,ಅಂದರಿಗೆ,ಕುರುಡರಿಗೆ, ನಮ್ಮ ಶಕ್ತಿಗೆ ಅನುಸಾರ, ದಾನ ಮಾಡುತ್ತಾ ಇರಬೇಕು.
8, ರಾಹು ಗ್ರಹ ಪರಿಹಾರ,
ಬಿಳಿಯ ಬಣ್ಣದ ವಸ್ತ್ರವನ್ನು ಧರಿಸಿ ಅಥವಾ ಸದಾ ಕಾಲ ಬಳಿಯಲ್ಲಿ ಇಟ್ಟು ಕೊಳ್ಳಬೇಕು.
ಮದ್ಯ ಪಾನ ಮಾಡಬಾರದು, ಮಾಂಸಾಹಾರ ತಿನ್ನ ಬಾರದು.
9, ಕೇತು ಗ್ರಹ ಪರಿಹಾರ,
ಬೆಳ್ಳಿ, ಹಾಲು,ಮತ್ತುಅಕ್ಕಿಯನ್ನು ಉಚಿತವಾಗಿ ಸ್ವೀಕರಿಸಬಾರದು.
ಅಜ್ಜಿಯಆಶೀರ್ವಾದಪಡೆಯಬೇಕು,ತಾಯಿಯತಾಯಿ
10, ಮಹಾಮೃತ್ಯುಂಜಯ ಪರಿಹಾರ,
ಹರಿಯುವ ನದಿಯ ಯಲ್ಲಿ ತಾಮ್ರದ ನಾಣ್ಯ ಗಳನ್ನು ಹಾಕುತ್ತಾ,ಇರಬೇಕು.ಚೌಕಾಕಾರದ 9ತಾಮ್ರದ ಬಿಲ್ಲೆಗಳನ್ನು ಮನೆ ಅಥವಾ ನಿರ್ಜನ ಪ್ರದೇಶದಲ್ಲಿ, ಊಳಬೇಕು ಬೇಕು.🕉️ಶ್ರೀ ಜ್ಯೋತಿಶ್ ಸಲಹಾ 📱9482655011🙏🙏🙏
[05/06, 10:15 PM] Pandit Venkatesh. Astrologer. Kannada: #ಪಂಚ_ಋಣಗಳು.

ಮನುಷ್ಯನು ತನ್ನ ಜೀವನದಲ್ಲಿ ತೀರಿಸಲೇಬೇಕಾದ ಐದು ಋಣಗಳು.

೧. #ದೇವ‌_ಋಣ.
 ದೇವತಾರ್ಚನೆ,ಪ್ರಾರ್ಥನೆ,
ಅಗ್ನಿಹೋತ್ರ,ಯಜ್ಞ,ಯಾಗಗಳನ್ನು ಮಾಡುವುದು.
ಇವುಗಳನ್ನು ಮಾಡುವುದರಿಂದ ದೇವತೆಗಳು ಸುಪ್ರೀತರಾಗುವರು.ಆಗ ದೇವ ಋಣದಿಂದ ಮುಕ್ತರಾಗುತ್ತೇವೆ.

೨. #ಋಷಿ‌_ಋಣ.

ಋಷಿ,ಮುನಿಗಳು ನಮಗಾಗಿ ಬಿಟ್ಟು ಹೋಗಿರುವ ವೇದ,ಆಗಮ,
ಶಾಸ್ತ್ರ,ಪುರಾಣ,ಉಪನಿಷತ್ತುಗಳ ಅಧ್ಯಯನ,ಮನನ ಮಾಡಿಕೊಳ್ಳುವುದರಿಂದ ಋಷಿ ಋಣದಿಂದ ಮುಕ್ತರಾಗುತ್ತೇವೆ.

೩. #ಪಿತೃ_ಋಣ.

ತಂದೆ,ತಾಯಿ,ಅಜ್ಜ,ಅಜ್ಜಿ ಮುಂತಾದ ಹಿರಿಯರ ಸೇವೆ,ವಂಶಾಭಿವೃದ್ಧಿಗಾಗಿ ಮಕ್ಕಳನ್ನು ಪಡೆದು ಅವರಿಗೆ ಒಳ್ಳೆಯ ವಿದ್ಯೆ ಕಲಿಸಿ,
ಸಂಸ್ಕಾರವಂತರನ್ನಾಗಿ ಮಾಡಿದರೆ ನಾವು ಪಿತೃ ಋಣದಿಂದ ಮುಕ್ತರಾಗುತ್ತೇವೆ.

೪. #ಮನುಷ್ಯ_ಋಣ.

ಎಲ್ಲ ವರ್ಣಗಳ ಜನರು,
ನಮ್ಮ ಜೊತೆಗಿರುವ ಬಂಧು,ಮಿತ್ರರು ನಮ್ಮ ಏಳಿಗೆಗೆ ಪ್ರತ್ಯಕ್ಷವಾಗಿಯೂ,
ಪರೋಕ್ಷವಾಗಿಯೂ ಕಾರಣರಾಗುರುತ್ತಾರೆ.ದಾನ,ಧರ್ಮಗಳ ಮೂಲಕ,
ಪಾಠ,ಪ್ರವಚನಗಳ ಮೂಲಕ ಮನುಷ್ಯರ,
ಸಮಾಜದ ಋಣ ತೀರಿಸಿದರೆ ನಾವು ಮನುಷ್ಯ ಋಣದಿಂದ ಮುಕ್ತರಾಗುತ್ತೇವೆ.

೫. #ಭೂತ_ಋಣ.

ಯಾವುದೇ ಪ್ರಾಣಿಗಳನ್ನು ಹಿಂಸೆ ಮಾಡದಿರುವುದು,ಪ್ರಕೃತಿಯಲ್ಲಿ ಸಹಜವಾಗಿ ಜೀವಿಸುವ ಗಿಳಿ,ಅಳಿಲು,ನವಿಲು,ಜಿಂಕೆ ಮುಂತಾದುವುಗಳನ್ನು ಮನೆಯೊಳಗೆ ಬಂಧನದಲ್ಲಿರಿಸಿ ಸಾಕದಿರುವುದು,ಸಾಕುಪ್ರಾಣಿಗಳಾದ ಹಸು,ಎತ್ತು,ಎಮ್ಮೆ,ಕೋಣ,ಬೆಕ್ಕು,ನಾಯಿ ಮುಂತಾದುವುಗಳಿಗೆ ಕಾಲ ಕಾಲಕ್ಕೆ ನೀರು,ಆಹಾರ ಒದಗಿಸಿ ಪ್ರೀತಿಯಿಂದ ನೋಡಿಕೊಳ್ಳುವುದರಿಂದ ನಾವು ಭೂತ ಋಣದಿಂದ ಮುಕ್ತರಾಗುತ್ತೇವೆ.
ಯಾವುದೇ ಪ್ರಾಣಿ,ಪಕ್ಷಿಗಳು ರೋಗಗ್ರಸ್ತವಾಗಿದ್ದರೆ,ಬೇರೆ ಹಿಂಸ್ರಪ್ರಾಣಿಗಳ ಧಾಳಿಯಿಂದ ಗಾಯಗೊಂಡಿದ್ದರೆ ಅವುಗಳನ್ನು ತಂದು ಶುಶ್ರೂಷೆ ಮಾಡಿ ಸಾಕುವುದು ಪ್ರಾಣಿದಯೆಯಾದುದರಿಂದ ಇದು ತಪ್ಪಲ್ಲ.

ಶಾಸ್ತ್ರಗಳಲ್ಲಿ ದೇವ,ಋಷಿ,ಪಿತೃ ಋಣಗಳನ್ನು ತೀರಿಸಲೇ ಬೇಕಾದ #ಋಣ_ತ್ರಯಗಳು ಎಂದು ವ್ಯಾಖ್ಯಾನಿಸಲ್ಪಟ್ಟಿದೆ.🕉️ಶ್ರೀ ಜ್ಯೋತಿಶ್ ಸಲಹಾ 📱9482655011🙏🙏🙏

Post a Comment

Previous Post Next Post