ಅಂಚೆ ಕಚೇರಿಯಲ್ಲಿ ಸುಮಾರು 3500 ಪೋಸ್ಟ್​​ಗಳನ್ನ ccb ಪರಿಶೀಲನೆ, ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್​ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್​ಗಳು ಪತ್ತೆ

ತ್ತೀಚಿಗೆ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅಂಚೆ ಮೂಲಕ ಬಂದ ಪ್ಯಾಕೆಟ್​ಗಳಲ್ಲಿ ಡ್ರಗ್ಸ್​ ಪತ್ತೆಯಾಗಿತ್ತು. ಇದರ ಮೂಲವನ್ನು ಪತ್ತೆ ಹಚ್ಚಲು ತನಿಖೆಗೆ ಇಳಿದ ಅಧಿಕಾರಿಗಳಿಗೆ ಸ್ಫೋಟಕ ವಿಚಾರಗಳು ತಿಳಿದಿವೆ.ಬೆಂಗಳೂರು, ಅಕ್ಟೋಬರ್​ 20: ಚಾಮರಾಜಪೇಟೆ ಅಂಚೆ ಕಚೇರಿ (Chamarajpet Post Office) ​ಮೇಲೆ ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳ ದಾಳಿಯಿಂದ ಹಲವು ಸಂಗತಿಗಳು ಬಯಲಾಗಿವೆ. ಬೆಂಗಳೂರಿಗೆ (Bengaluru) ಕಾನೂನು ಬದ್ಧವಾಗಿಯೇ ಹೈ-ಎಂಡ್​​ ಡ್ರಗ್ಸ್ (Drugs) ಸಪ್ಲೈ ಆಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ​



ಕಳೆದ ತಿಂಗಳು ಸೆಪ್ಟೆಂಬರ್​ 9ರಂದು ಚಾಮರಾಜಪೇಟೆ ಬಳಿಯ ಅಂಚೆ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ‌ ಮಾದಕ ವಸ್ತು ಇರುವ 606 ಪ್ಯಾಕೆಟ್​ಗಳು ಪತ್ತೆಯಾಗಿದ್ದವು. ಈ ಮಾದಕ ವಸ್ತುಗಳ ಪ್ಯಾಕೆಟ್​ಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿ, ವಶಕ್ಕೆ ಪಡೆದುಕೊಂಡಿದ್ದರು.


ಈ ಪ್ಯಾಕೆಟ್​ಗಳ ಮೂಲ ಪತ್ತೆ ಹಚ್ಚಲು ಸಿಸಿಬಿಯ ವಿಶೇಷ ತಂಡ ಕಾರ್ಯಾಚರಣೆಗೆ ಫೀಲ್ಡ್​ಗೆ ಇಳಿಯಿತು. ತನಿಖೆ ವೇಳೆ ಎಲ್ಲ ಪ್ಯಾಕೆಟ್​ಗಳು ವಿದೇಶದಿಂದ ಬಂದಿರುವುದು ತಿಳಿದಿದೆ. ಆದರೆ, ಯಾವ ಯಾವ ದೇಶದಿಂದ ಬರುತ್ತಿದ್ದವು ಎಂದು ತಿಳಿಯಲು ಹೋದಾಗ, ಶಾಕ್​ ಕಾದಿತ್ತು. ಈ ಎಲ್ಲ ಡ್ರಗ್ಸ್​ ಪ್ಯಾಕೆಟ್​ಗಳು ಥೈಲ್ಯಾಂಡ್, ಅಮೆರಿಕ, ಹಾಂಕಾಂಗ್, ಬ್ರಿಟನ್​ನಿಂದ ಬಂದಿರುವುದು ಪತ್ತೆಯಾಗಿದೆ.


ಡ್ರಗ್ಸ್​ ಕೇಸ್​ನಲ್ಲಿ​ ಸ್ನೇಹಿತರು ಅರೆಸ್ಟ್​, 1 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ


ಪೆಡ್ಲರ್ಸ್​ಗಳು ಆನ್​ಲೈನ್​ನಲ್ಲಿ ಬುಕ್ ಮಾಡಿ ಪೋಸ್ಟ್ ಮೂಲಕ ಡ್ರಗ್ಸ್​ ತರಿಸಿಕೊಂಡಿರುವುದು ತಿಳಿದಿದೆ. ಈ ಡ್ರಗ್ಸ್​ ಅನ್ನು ಹಾಂಕಾಂಗ್, ಥೈಲ್ಯಾಂಡ್, ಅಮೆರಿಕದ ಗಾಂಜಾ ಮಾರಾಟಗಾರರು ಕಳುಹಿಸುತ್ತಿದ್ದರು. ಅಲ್ಲಿ ಡ್ರಗ್ಸ್​ ಸರಬರಾಜು ಕಾನೂನು ಬದ್ಧವಾಗಿದೆ. ಈ ಪ್ಯಾಕೆಟ್​ಗಳು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಅಂಚೆ ಕಚೇರಿಗೆ ಬರುತ್ತಿದ್ದವು.


ಈ ಸಂಬಂಧ ಸಿಸಿಬಿ ಅಧಿಕಾರಿಗಳು ಒಟ್ಟು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ತಂಡ ಕೆಲ ಪೆಡ್ಲರ್​ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೆಡ್ಲರ್​ಗಳ ವಿಚಾರಣೆ ವೇಳೆ ಹಾಂಕಾಂಗ್, ಥೈಲ್ಯಾಂಡ್, ಅಮೆರಿಕಗೆ ಲಿಂಕ್ ಇರುವುದು ಪತ್ತೆಯಾಗಿದೆ. ಸಿಸಿಬಿ ವಿಶೇಷ ತಂಡ ಸದ್ಯ ಅಂತಾರಾಷ್ಟ್ರೀಯ ಡ್ರಗ್ ನೆಟ್​ವರ್ಕ್​ ಬಗ್ಗೆ ತನಿಖೆ ನಡೆಸುತ್ತಿದೆ.


21 ಕೋಟಿ ಮೌಲ್ಯದ ಡ್ರಗ್ಸ್​ ಪತ್ತೆ


ಸಿಸಿಬಿ ಅಧಿಕಾರಿಗಳು ಶ್ವಾನದಳದ ಸಹಾಯದಿಂದ ಅಂಚೆ ಕಚೇರಿಯಲ್ಲಿ ಸುಮಾರು 3500 ಪೋಸ್ಟ್​​ಗಳನ್ನ ಪರಿಶೀಲನೆ ನಡೆಸಿದರು. ಈ ವೇಳೆ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್​ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್​ಗಳು ಪತ್ತೆಯಾಗಿದ್ದವು.

Post a Comment

Previous Post Next Post