ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಸದಾಗಿ ವರ್ಗೀಕರಿಸಲಾದ 5 ಶಾಸ್ತ್ರೀಯ ಭಾಷೆಗಳ ವಿದ್ವಾಂಸರೊಂದಿಗೆ ಸಂವಾದ ನಡೆಸಿದರು

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಸದಾಗಿ ವರ್ಗೀಕರಿಸಲಾದ 5 ಶಾಸ್ತ್ರೀಯ ಭಾಷೆಗಳ ವಿದ್ವಾಂಸರೊಂದಿಗೆ ಸಂವಾದ ನಡೆಸಿದರು

ಎಲ್ಲಾ ಭಾರತೀಯ ಭಾಷೆಗಳಲ್ಲಿ ಕಲಿಕೆಯನ್ನು ಬಲಪಡಿಸಲು ಮತ್ತು ಸುಗಮಗೊಳಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ಹೇಳಿದ್ದಾರೆ. ಭಾರತೀಯ ಭಾಷೆಗಳಲ್ಲಿ ಕಲಿಕೆಯನ್ನು ಉತ್ತೇಜಿಸುವ ಜೊತೆಗೆ ದೇಶದ ಭಾಷಾ ಪರಂಪರೆಯನ್ನು ಆಚರಿಸಲು, ಗೌರವಿಸಲು ಮತ್ತು ಸಂರಕ್ಷಿಸಲು ಸರ್ಕಾರವು ಸರ್ವತೋಮುಖ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಸಚಿವರು ಇಂದು ನವದೆಹಲಿಯಲ್ಲಿ ಹೊಸದಾಗಿ ವರ್ಗೀಕರಿಸಲಾದ ಐದು ಶಾಸ್ತ್ರೀಯ ಭಾಷೆಗಳಾದ ಪ್ರಾಕೃತ, ಪಾಲಿ, ಮರಾಠಿ, ಬಾಂಗ್ಲಾ ಮತ್ತು ಅಸ್ಸಾಮಿಗಳ ವಿದ್ವಾಂಸರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ದೇಶದ ಎಲ್ಲಾ ಭಾಷೆಗಳು ಭಾರತೀಯ ಭಾಷೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಹೇಳುತ್ತಿದ್ದಾರೆ.

 

ಕಾರ್ಯಕ್ರಮದಲ್ಲಿ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷ ಚಾಮು ಕೃಷ್ಣ ಶಾಸ್ತ್ರಿ ಮತ್ತು ಯುಜಿಸಿ ಅಧ್ಯಕ್ಷ ಎಂ. ಜಗದೇಶ್ ಕುಮಾರ್ ಸೇರಿದಂತೆ ಶಿಕ್ಷಣ ತಜ್ಞರು, ವಿದ್ವಾಂಸರು ಮತ್ತು ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಭಾಷೆಗಳು ಶಾಸ್ತ್ರೀಯ ಭಾಷೆಗಳ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ವಿದ್ವಾಂಸರು ಸಂತಸ ವ್ಯಕ್ತಪಡಿಸಿದರು.

Post a Comment

Previous Post Next Post