ಕ ಜಾನ್‌: ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ (Brics Summit) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Chinese President Xi Jinping) ಇಂದು ದ್ವಿಪಕ್ಷೀಯ ಸಭೆ ನಡೆಸಿದರು.

ಐದು ವರ್ಷಗಳಲ್ಲಿ ಉಭಯ ನಾಯಕರ ನಡುವಿನ ಮೊದಲ ಔಪಚಾರಿಕ ಭೇಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಗಡಿ ವಿಚಾರಕ್ಕೆ ವಾರ್ನಿಂಗ್ ನೀಡಿದ್ದಾರೆ. ಗಡಿ ವಿಚಾರವಾಗಿ ಶಂತಿಯುತವಾಗಿದ್ದರೆ ಎರಡೂ ದೇಶಕ್ಕೂ ಒಳ್ಳೆಯದು ಎಂದು ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ.

ಭಾರತ ಹಾಗೂ ಚೀನಾ ಸಂಬಂಧ ಬಹಳ ಪ್ರಮುಖವಾಗಿದೆ. ಗಡಿ ವಿಚಾರವಾಗಿ ಇತ್ತೀಚೆಗೆ ಮಾಡಿಕೊಂಡಿರುವ ಗಸ್ತು ಒಪ್ಪಂದವನ್ನು ಸ್ವಾಗತಿಸುತ್ತೇನೆ. ಪರಸ್ಪರ ಗೌರವ, ಶಾಂತಿ, ಕಾಪಡಿಕೊಂಡು ಹೋಗಬೇಕು ಆಗ ಎರಡು ದೇಶಗಳು ಮಾತ್ರವಲ್ಲ ಸುತ್ತಲಿನ ದೇಶಗಳಿಗೂ ಒಳ್ಳೆಯದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"ನೀವು ಹೇಳಿದಂತೆ, ಇದು ಐದು ವರ್ಷಗಳ ನಂತರ ನಮ್ಮ ಮೊದಲ ಔಪಚಾರಿಕ ಸಭೆಯಾಗಿದೆ. ಗಡಿಯಲ್ಲಿ ಮಾಡಿಕೊಂಡಿರುವ ಒಪ್ಪಂದಗಳನ್ನು ಸ್ವಾಗತಿಸುತ್ತೇವೆ. ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ನಮ್ಮ ಆದ್ಯತೆಯಾಗಿ ಉಳಿಯಬೇಕು. ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸಂವೇದನಾಶೀಲತೆ ನಮ್ಮ ಸಂಬಂಧದ ಆಧಾರವಾಗಿ ಉಳಿಯಬೇಕು" ಎಂದು ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದರ ಜೊತೆಗೆ, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಸ್ಥಾಪಿಸಲು ಅದನ್ನು ನಿರ್ವಹಣೆಯ ಮೇಲ್ವಿಚಾರಣೆ ಮಾಡಲು ವ್ಯವಸ್ಥೆಯಾಗಬೇಕು. ನ್ಯಾಯೋಚಿತ, ಸಮಂಜಸವಾದ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಭಾರತ-ಚೀನಾ ಗಡಿ ಪ್ರಶ್ನೆಯ ಕುರಿತು ಮಾತನಾಡಲು ಮತ್ತೊಂದು ದಿನ ಭೇಟಿಯಾಗಲು ಉಭಯ ನಾಯಕರು ಒಪ್ಪಿಕೊಂಡರು.





ಈ ಭೇಟಿ ಕುರಿತು ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, "ಕಜಾನ್ ಬ್ರಿಕ್ಸ್ ಶೃಂಗಸಭೆ ನಡುವೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಲಾಯಿತು. ಭಾರತ-ಚೀನಾ ಸಂಬಂಧ ಎರಡೂ ದೇಶಗಳ ಜನರಿಗೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ ಮುಖ್ಯವಾಗಿದೆ. ಪರಸ್ಪರ ನಂಬಿಕೆ, ಪರಸ್ಪರ ಗೌರವ ಮತ್ತು ಪರಸ್ಪರ ಸೂಕ್ಷ್ಮತೆಯು ದ್ವಿಪಕ್ಷೀಯ ಸಂಬಂಧಗಳಿಗೆ ಮಾರ್ಗದರ್ಶನ ನೀಡುತ್ತದೆ.

ನಾಲ್ಕು ವರ್ಷಗಳ ಸುದೀರ್ಘ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸುವಲ್ಲಿ ಮೊದಲ ಹೆಜ್ಜೆಯಾಗಿ ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಗಸ್ತು ತಿರುಗುವ ಕುರಿತು ಒಪ್ಪಂದಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

Post a Comment

Previous Post Next Post