ಗಳೂರು: ಇತ್ತೀಚಿಗೆ ಜಿಗಣಿಯಲ್ಲಿ (Jigani) ಪಾಕಿಸ್ತಾನಿ ಪ್ರಜೆ (Pakistani Citizen) ಮತ್ತು ಆತನ ಪತ್ನಿ ಸೇರಿದಂತೆ ನಾಲ್ವರನ್ನು ಪೊಲೀಸರು (Police) ಬಂಧಿಸಿದ್ದರು. ಈ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಮೇರೆಗೆ ಮತ್ತೆ ಮೂವರು ಪಾಕ್‌ ಪ್ರಜೆಗಳನ್ನು ಬೆಂಗಳೂರಿನ (Bangalore) ಪೀಣ್ಯದಲ್ಲಿ (Pinya) ಬಂಧಿಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಈ ಪ್ರಮುಖ ಆರೋಪಿಯು ಪಾಕ್ ಪ್ರಜೆಗಳಿಗೆ ಅಕ್ರಮವಾಗಿ ಭಾರತ (India) ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತಿದ್ದ ಎಂದು ಹೇಳಲಾಗಿದೆ. ಸಧ್ಯ ಪೊಲೀಸರು ಆತನನ್ನು ಅಜ್ಞಾತ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಇವನೇ ಕಾರಣ

ಪಾಕ್ ಪ್ರಜೆಗಳ ಬಂಧನ ಪ್ರಕರಣದ ಪ್ರಮುಖ ರೂವಾರಿ ಪರ್ವೇಜ್‌ನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಖರ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಪರ್ವೇಜ್‌ ಜಿಗಣಿ ಪೊಲೀಸರ ವಶದಲ್ಲಿ ಇದ್ದಾನೆ. ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಇವನೇ ಪ್ರಮುಖ ಕಾರಣ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರತದಲ್ಲಿ ಧರ್ಮ ಗುರುಗಳ ಪ್ರವಚನ

ಭಾರತೀಯ ದಾಖಲೆಗಳನ್ನು ಸಹ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಈತನೇ ಮಾಡಿಕೊಟ್ಟಿದ್ದ. ಅಲ್ಲದೇ, ಯೂನಸ್ ಆಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಪ್ರಚಾರಕ. ಬಂಧಿತ ಪ್ರಜೆಗಳೆಲ್ಲರೂ ಸಹ ಇವನ ಸಂಪರ್ಕದಲ್ಲಿ ಇದ್ದರು. ಇವನ ಸೂಚನೆಯ ಮೇರೆಗೆ ಧರ್ಮ ಗುರುಗಳ ಪ್ರವಚನವನ್ನು ಪಾಕ್ ಪ್ರಜೆಗಳು ಭಾರತದಲ್ಲಿ ಮಾಡುತ್ತಿದ್ದರು ಎಂಬ ಮಾಹಿತಿ ಸಹ ಲಭ್ಯವಾಗಿದೆ. ಸದ್ಯ ಜಿಗಣಿ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಅಂಶಗಳು ಹೊರಬರಬೇಕಿದೆ.

ಪ್ರಕರಣದ ಪ್ರಮುಖ ಆರೋಪಿ ಪರ್ವೇಜ್, ಮೆಹದಿ ಫೌಂಡೇಷನ್ ಪ್ರಮುಖ ವ್ಯಕ್ತಿ

ಪ್ರಕರಣದ ಪ್ರಮುಖ ಆರೋಪಿ ಪರ್ವೇಜ್, ಮೆಹದಿ ಫೌಂಡೇಷನ್ ಪ್ರಮುಖ ವ್ಯಕ್ತಿಯಾಗಿದ್ದಾನೆ. ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನ ಪ್ರಚಾರದ ಭಾರತದ ಉಸ್ತುವಾರಿಯನ್ನು ಇತನೇ ನಿರ್ವಹಿಸುತ್ತಾನಂತೆ. ಪೊಲೀಸರು ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳು ಈ ಕೆಳಗಿನಂತಿವೆ..

ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಬಗ್ಗೆ ವಿಚಾರಣೆ

  • ಧರ್ಮಗುರು ಮಾಡುತ್ತಿದ್ದ ಪ್ರವಚನವಾದ್ರು ಎಂತಹದ್ದು?
  • ಮೊಗಲ್ ದೊರೆ ಅಕ್ಬರನ ದಿನ್ ಐ ಇಲಾಹಿ ಪಂಥವನ್ನು ಬೋಧಿಸುತ್ತಿದ್ರಾ?
  • ಮುಸ್ಲಿಂ ಮೂಲಭೂತವಾದವನ್ನು ವಿರೋಧಿಸುತ್ತಿದ್ರಾ?
  • ಮಹಮ್ಮದ್ ಪೈಗಂಬರ್ನ ವಿಚಾರಧಾರೆಗಳನ್ನು ಒಪ್ಪುತ್ತಿರಲಿಲ್ವಾ?
  • ಕುರಾನ್ ಗ್ರಂಥವನ್ನು ಇವ್ರು ಗೌರವಿಸುತ್ತಿರಲಿಲ್ವಾ?
  • ಮುಸ್ಲಿಂ ಧರ್ಮದಲ್ಲಿನ ಅಮಾನವೀಯ ರೂಡಿ ಸಂಪ್ರದಾಯಗಳನ್ನು ವಿರೋಧಿಸುತ್ತಿದ್ರಾ?
    ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು‌ ಪ್ರತಿಪಾದಿಸುತ್ತಿದ್ರಾ?
  • ಇಂದ್ರಿಯ ನಿಗ್ರಹ, ಸದ್ಗುಣಗಳನ್ನು ಬೋಧಿಸುತ್ತಿದ್ರಾ?
  • ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ನಿರಂತರ ದೌರ್ಜನ್ಯದ ಬಗ್ಗೆ ಸಹಾನುಭೂತಿ ಹೊಂದಿದ್ರಾ?

ದೇಹಶುದ್ಧಿಗಿಂತ ಆತ್ಮ ಶುದ್ಧಿ ಬಗ್ಗೆ ನಂಬಿಕೆ

ಯೂನಸ್ ಅಲ್ಗೋರ್ ಧರ್ಮ ಗುರುಗಳು ದೇಹಶುದ್ಧಿಗಿಂತ ಆತ್ಮ ಶುದ್ಧಿ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರಂತೆ, ಇವರ ವಿಚಾರಧಾರೆಗಳಿಂದ ಕಟ್ಟರ್ ಮುಸ್ಲಿಂವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಸ್ಲಿಂ ಗುರುಗಳ ದಾಳಿಯಿಂದ ಪಾರಾಗಲು ಪರ್ವೇಜ್ ಅಂಡ್ ಟೀಮ್ ಪಾಕಿಸ್ತಾನವನ್ನು ತ್ಯಜಿಸಿದ್ದನು. ಬಾಂಗ್ಲಾದೇಶದಲ್ಲಿಯು ದಿನ್ ಐ ಇಲಾಹಿ ಮಾದರಿ ಧರ್ಮ ಪ್ರವಚನ ಪ್ರಚಾರ ಮಾಡಲು ಪ್ರಯತ್ನಿಸಿದಾಗ ಅಲ್ಲಿಯೂ ಮುಸ್ಲಿಂ ಧರ್ಮ ಗುರುಗಳಿಂದ ಜೀವ ಬೆದರಿಕೆ ಬಂದಿದೆ. ಹಾಗಾಗಿಸುರಕ್ಷತೆ ದೃಷ್ಟಿಯಿಂದ ಪಾಕ್ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ. ಆದ್ರೆ ದಶಕಗಳ ಹಿಂದೆ ದಿನ್ ಐ ಇಲಾಹಿ ಪಂಥ ನಶಿಸಿ ಹೋಗಿದೆ. ಆದರೂ ಅದರ ವಿಚಾರಧಾರೆಗಳನ್ನು ಮೆಹದಿ ಫೌಂಡೇಷನ್ ಪ್ರಚಾರ ಮಾಡುತ್ತಿದೆ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

8 ಮಂದಿ ಪಾಕಿಸ್ತಾನಿ ಪ್ರಜೆಗಳ ಬಂಧನ

ಸದ್ಯ ಪರ್ವೇಜ್ ಸೇರಿದಂತೆ 8 ಮಂದಿ ಪಾಕಿಸ್ತಾನಿ ಪ್ರಜೆಗಳು ಅರೆಸ್ಟ್ ಆಗಿದ್ದಾರೆ. ಪರ್ವೇಜ್ ಸಂಪರ್ಕದಲ್ಲಿದ್ದ ಮತ್ತಷ್ಟು ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗಳು

  • ಪಾಕಿಸ್ತಾನಿ ಪ್ರಜೆಗಳಿಗೆ ಭಾರತೀಯ ಪಾಸ್‌ಪೋರ್ಟ್, ಅಧಾರ್, ಪಾನ್ ಕಾರ್ಡ್ ಮತ್ತು ಡಿ ಎಲ್ ಸಿಕ್ಕಿದ್ದು ಹೇಗೆ?
  • ಭಾರತೀಯ ದಾಖಲೆಗಳನ್ನು ‌ಮಾಡಿ ಕೊಟ್ಟವರು ಯಾರು?
  • ಎಷ್ಟು ಮಂದಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಅಕ್ರಮವಾಗಿ ಬಂದಿದ್ದಾರೆ?
  • ಎಷ್ಟು ಮಂದಿ ಪಾಕಿಸ್ತಾನಿ ಪ್ರಜೆಗಳಿಗೆ ಭಾರತೀಯ ದಾಖಲೆ ಮಾಡಿಕೊಡಲಾಗಿದೆ?

Post a Comment

Previous Post Next Post