PMBJP ಅಕ್ಟೋಬರ್‌ನಲ್ಲಿ ₹1,000 ಕೋಟಿ ಮೌಲ್ಯದ ಮಾರಾಟವನ್ನು ಸಾಧಿಸಿದೆ

PMBJP ಅಕ್ಟೋಬರ್‌ನಲ್ಲಿ ₹1,000 ಕೋಟಿ ಮೌಲ್ಯದ ಮಾರಾಟವನ್ನು ಸಾಧಿಸಿದೆ

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಈ ತಿಂಗಳು ಒಂದು ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾರಾಟವನ್ನು ಸಾಧಿಸುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ತಲುಪಿದೆ. ಈ ಸಾಧನೆಯು ಕೈಗೆಟಕುವ ಮತ್ತು ಗುಣಮಟ್ಟದ ಔಷಧಿಗಳ ಮೇಲೆ ಜನರ ಹೆಚ್ಚುತ್ತಿರುವ ನಂಬಿಕೆ ಮತ್ತು ಅವಲಂಬನೆಯನ್ನು ಎತ್ತಿ ತೋರಿಸುತ್ತದೆ ಎಂದು ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರಗಳ ಸಂಖ್ಯೆಯಲ್ಲಿ 170 ಪಟ್ಟು ಹೆಚ್ಚು ಬೆಳವಣಿಗೆಯಾಗಿದೆ ಎಂದು ಸಚಿವಾಲಯ ಹೇಳಿದೆ. 2014ರಲ್ಲಿ ಕೇವಲ 80 ಜನೌಷಧಿ ಕೇಂದ್ರಗಳಿದ್ದು, ಈಗ 14 ಸಾವಿರಕ್ಕೂ ಹೆಚ್ಚು ಕೇಂದ್ರಗಳು ದೇಶದ ಬಹುತೇಕ ಜಿಲ್ಲೆಗಳನ್ನು ಒಳಗೊಂಡಿವೆ ಎಂದು ಅದು ಹೇಳಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಕಳೆದ ತಿಂಗಳು ಇನ್ನೂರು ಕೋಟಿ ರೂಪಾಯಿಗಳ ಔಷಧಗಳನ್ನು ಮಾರಾಟ ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ 25 ಸಾವಿರ ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಲಿವೆ ಎಂದು ಸಚಿವಾಲಯ ತಿಳಿಸಿದೆ

Post a Comment

Previous Post Next Post