ಸನಾತನ ಧರ್ಮವು (Sanatana Dharma) ಭೂಮಿಯ ಮೇಲಿನ ಅತ್ಯಂತ ಹಳೆಯ ಧರ್ಮವಾಗಿದೆ ಎಂದು ಪಾಕಿಸ್ತಾನದ (Pakistan) ಹಿಂದೂ ವಿದ್ವಾಂಸರಾದ (Hindu scholar) ಪ್ರೊ. ಮನೋಜ್ ಚೌಹಾಣ್ (Manoj Chauhan) ಅವರು ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ, ವಿವಾದಾತ್ಮಕ ಇಸ್ಲಾಮಿಕ್ ಬೋಧಕರಾಗಿರುವ (Controversial Islamic preacher) ಝಾಕಿರ್ ನಾಯಕ್ (Zakir Naik) ಅವರು ಸಹ ಭಾಷಣಕಾರರಾಗಿರುವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಚೌಹಾಣ್ ಅವರು ಶ್ರೀ ಕೃಷ್ಣನು (Shri Krishna) ನಮ್ಮ ಕರ್ಮವನ್ನು ಯಾವುದೇ ಸಂದರ್ಭದಲ್ಲಿ ತಪ್ಪದೆ ಮಾಡಬೇಕೆಂದು ಹೇಳಿದ್ದಾನೆ. ಜೊತೆಗೆ ಯಾವುದಾದರೂ ಧರ್ಮದವರಿಂದ ಹತ್ಯೆಯಾದಾಗ ಆ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.

ಏಕಾಏಕಿ ವೇದಿಕೆಯಿಂದ ನಿರ್ಗಮಿಸಿದ ಝಾಕಿರ್

ಅನಾಥ ಹೆಣ್ಣುಮಕ್ಕಳನ್ನು ಬೆಂಬಲಿಸುವ ಪಾಕಿಸ್ತಾನ್ ಸ್ವೀಟ್ ಹೋಮ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಝಾಕಿರ್ ನಾಯಕ್ ಅವರುನ್ನು ಯುವ ಅನಾಥ ಹುಡುಗಿಯರಿಗೆ ಪ್ರಶಸ್ತಿಗಳನ್ನು ನೀಡಲು ಆಹ್ವಾನಿಸಲಾದಾಗ ಬುಧವಾರ ಏಕಾಏಕಿ ವೇದಿಕೆಯಿಂದ ನಿರ್ಗಮಿಸುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

ಅನಾಥ ಹುಡುಗಿಯರೆಂದರೆ ಮಹರ್ಮೇತರರು

ನಿರೂಪಕಿಯರು ಹುಡುಗಿಯರನ್ನು "ಹೆಣ್ಣುಮಕ್ಕಳು" ಎಂದು ಉಲ್ಲೇಖಿಸಿದಾಗ ಈ ಘಟನೆ ಸಂಭವಿಸಿದೆ. ನಿರೂಪಿಕಿಯು ಹುಡುಗಿಯರನ್ನು ತನ್ನ "ಹೆಣ್ಣುಮಕ್ಕಳು" ಎಂದು ಉಲ್ಲೇಖಿಸಿರುವುದು ಸೂಕ್ತವಲ್ಲ ಎಂದು ನಾಯಕ್ ಹೇಳಿದರು. "ನೀವು ಅವರನ್ನು ಮುಟ್ಟಲು ಅಥವಾ ಅವರನ್ನು ನಿಮ್ಮ ಹೆಣ್ಣುಮಕ್ಕಳು ಎಂದು ಕರೆಯಲು ಸಾಧ್ಯವಿಲ್ಲ" ಎಂದರು. ಹಾಗೂ ಅನಾಥ ಹುಡುಗಿಯರನ್ನು "ಮಹರ್ಮೇತರರು" ಎಂದು ಕರೆದರು. ಮಹರ್ಮೇತರರು ಎಂದರೆ ಇಸ್ಲಾಮಿಕ್ ಪರಿಭಾಷೆಯಲ್ಲಿ, "ನಾನ್-ಮಹ್ರಮ್ಸ್" ಎಂಬುದು ನಿಕಟ ಸಂಬಂಧವಿಲ್ಲದ ಮತ್ತು ಮದುವೆಗೆ ಅರ್ಹರಾಗಿರುವ ವ್ಯಕ್ತಿಗಳನ್ನು ಸೂಚಿಸುತ್ತದೆ.

ಶುಕ್ರವಾರದ ಪ್ರಾರ್ಥನಾ ಸಭೆಗಳನ್ನು ಉದ್ದೇಶಿಸಿ ಮಾತು

ಜಾಕಿರ್ ನಾಯ್ಕ್ ಅವರು ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಭಾಷಣಗಳ ಸರಣಿಯನ್ನು ಮಾಡಲು ನಿರ್ಧರಿಸಿದ್ದಾರೆ ಎಂದು ಪಾಕಿಸ್ತಾನಿ ಪತ್ರಿಕೆಯಾದ ದಿ ಟ್ರಿಬ್ಯೂನ್ ವರದಿ ಮಾಡಿದೆ. ಅವರ ಮಾತುಕತೆಗಳ ಜೊತೆಗೆ, ನಾಯಕ್ ಅವರ ಭೇಟಿಯ ಸಮಯದಲ್ಲಿ ಶುಕ್ರವಾರದ ಪ್ರಾರ್ಥನಾ ಸಭೆಗಳನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದ್ದು, ನಾಯಕ್ ಅವರಿಗೆ ಪಾಕ್ ಸರ್ಕಾರ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿತು. ಇಸ್ಲಾಮಿಕ್ ಬೋಧಕರಾದ ನಾಯಕ್ ಅವರು ಉಪ ಪ್ರಧಾನಿಯಾದ ಇಶಾಕ್ ದಾರ್ ಅವರನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಈ ಸಂದರ್ಭದಲ್ಲಿ ಭೇಟಿಯಾಗಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ ಅಡಿ ಆರೋಪ

2016 ರಿಂದ, ಝಾಕಿರ್ ನಾಯಕ್ ವಿರುದ್ಧ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ಮಲೇಷ್ಯಾದಲ್ಲಿ ನೆಲೆಸಿದ್ದಾನೆ. ಎನ್‌ಐಎ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (ಈಗನ ಭಾರತೀಯ ನ್ಯಾಯ ಸಂಹಿತಾ) ವಿವಿಧ ವಿಭಾಗಗಳ ಅಡಿಯಲ್ಲಿ ಇವನ ಮೇಲೆ ಆರೋಪ ಹೊರಿಸಲಾಗಿದೆ.

ಭಯೋತ್ಪಾದಕ ದಾಳಿಗೆ ಸ್ಫೂರ್ತಿ

ರಾಷ್ಟ್ರೀಯ ತನಿಖಾ ಸಂಸ್ಥೆಯ ಈ ಕ್ರಮವು ಜುಲೈ 2016 ರ ಢಾಕಾ ಭಯೋತ್ಪಾದಕ ದಾಳಿಯಲ್ಲಿ ದುಷ್ಕರ್ಮಿಗಳಲ್ಲಿ ಒಬ್ಬರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ನಾಯಕ್ ಅವರ ಧರ್ಮೋಪದೇಶಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರು. ಝಾಕಿರ್ ನಾಯಕ್ ಅವರ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಭಾರತವು ಮಲೇಷ್ಯಾಗೆ ಹಸ್ತಾಂತರಿಸುವಂತೆ ಕೋರಿದೆ, ಆದರೆ ಮಲೇಷ್ಯಾ ಈ ವಿನಂತಿಯನ್ನು ಇನ್ನೂ ಅನುಮತಿಸಿಲ್ಲ.

Post a Comment

Previous Post Next Post