ರತದಲ್ಲಿ ಯುಪಿಐ ಬಂದ ಬಳಿಕ ಆರ್ಥಿಕ ಕ್ಷೇತ್ರದಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಿವೆ ಎಂದು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಬಹುಷಃ ಇಪತ್ತೊಂದನೇ ಶತಮಾನದಲ್ಲಿ ವಿಶ್ವಕಂಡ ಅತ್ಯುತ್ತಮ ಹಾಗೂ ಅಮೋಘ ಆರ್ಥಿಕ ಕ್ರಾಂತಿಗಳಲ್ಲಿ ಯುಪಿಐ ಕೂಡ ಎಂದು ಯಾವ ಮುಚ್ಚುಮರೆ ಇಲ್ಲದೆ ಹೇಳಬಹುದು.ಸದ್ಯ ಪ್ರಪಂಚದ ನೂರು ಪ್ರತಿಶತದಲ್ಲಿ 45 ಪ್ರತಿಶತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಪಾವತಿಯನ್ನು ಭಾರತವೊಂದರಿಂದಲೇ ನಿರ್ವಹಿಸಲ್ಪಡುತ್ತದೆ ಎಂಬುದು ದೇಶದ ಗರಿಮೆಗೆ ಹಿಡಿದ ಕನ್ನಡಿಯಾಗಿದೆ. ಒಂದು ಕಾಲದಲ್ಲಿ 2018 ರ ಜನವರಿಯಲ್ಲಿ ಭಾರತ ಡಿಜಿಟಲ್ ಪಾವತಿಯ ಮೂಲಕ 0.8 ಶತಕೋಟಿ ವಹಿವಾಟುಗಳನ್ನು ನಡೆಸಿದ್ದರೆ ಜುಲೈ 2024 ರಲ್ಲಿ ಬರೊಬ್ಬರಿ 14.4 ಶತಕೋಟಿಗೂ ಹೆಚ್ಚಿನ ವಹಿವಾಟುಗೂ ಹೆಚ್ಚಿನ ವಹಿವಾಟು ನಡೆದಿರುವುದು ಭಾರತದ ಜನತೆ ಡಿಜಿಟಲ್ ವಹಿವಾಟಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಎಂಬುದಕ್ಕೆ ನಿದರ್ಶನವಾಗಿದೆ.
ಸದ್ಯ UPI ಭಾರತದ ಡಿಜಿಟಲ್ ಪಾವತಿಯ ಸುಮಾರು 80 ಪ್ರತಿಶತವನ್ನು ನಿರ್ವಹಿಸುತ್ತದೆ. ಭಾರತದ ಅಸ್ತಿತ್ವದಲ್ಲಿರುವ ಬ್ಯಾಂಕಿಂಗ್ ಮೂಲಸೌಕರ್ಯದೊಂದಿಗೆ UPI ಯ ತಡೆರಹಿತ ಏಕೀಕರಣ ಮತ್ತು ಮೊಬೈಲ್ ಇಂಟರ್ನೆಟ್‌ನ ವ್ಯಾಪಕ ಬಳಕೆಯಿಂದಾಗಿ ಈ ಬೃಹತ್ ಅಳವಡಿಕೆಯಾಗಿದೆ.
ಡೆಬಿಟ್ ಕಾರ್ಡ್ ಹಿಂದಿಕ್ಕಿಂದ ಯುಪಿಐ!
ಒಂದು ಕಾಲದಲ್ಲಿ ಕೇವಲ ನೋಟಿನ ವ್ಯವಹಾರ ನಡೆಯುತ್ತಿದ್ದರೆ ಬಳಿಕ ಕಾಲ ಬದಲಾಗಿ ಕಾರ್ಡ್ ಬಳಕೆಯು ಜನಾಕರ್ಷಣೆ ಪಡೆದುಕೊಂಡಿತು. ಸದ್ಯ ಭಾರತದಲ್ಲಿ ಕಾರ್ಡ್ ಬಳಕೆ ಕೂಡ ಬಹುತೇಕ ಮೂಲೆ ಸೇರಿದಂತಾಗಿದ್ದು, ಆ ಸ್ಥಾನವನ್ನು ಸದ್ಯ ಯುಪಿಐ ತುಂಬಿದೆ.
UPI Vs UPI Wallet: ಸಣ್ಣ ಪಾವತಿಗಳಿಗೆ ʻUPI ವಾಲೆಟ್ʼ ಅತ್ಯುತ್ತಮ ಆಯ್ಕೆ ಏಕೆ?
ದೇಶದಲ್ಲಿ ಯುಪಿಐ ಬಳಕೆ ಕಂಡು ಕೇಳರಿಯದ ರೀತಿಯ ವೇಗದಲ್ಲಿ ಏರುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ RBI ಪ್ರಕಾರ UPI ಪಾವತಿಗಳು ಹೆಚ್ಚಾದಂತೆ ಸೆಪ್ಟೆಂಬರ್‌ನಲ್ಲಿ ಡೆಬಿಟ್ ಕಾರ್ಡ್-ಆಧಾರಿತ ವಹಿವಾಟುಗಳು 8% ಕುಸಿದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಸಿಕ ಅಂಕಿಅಂಶಗಳ ಪ್ರಕಾರ, ಯುಪಿಐ ಆಧಾರಿತ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದಂತೆ, ಡೆಬಿಟ್ ಕಾರ್ಡ್ ಆಧಾರಿತ ವಹಿವಾಟುಗಳು ಆಗಸ್ಟ್‌ನಲ್ಲಿ ಸುಮಾರು 43,350 ಕೋಟಿ ರೂಪಾಯಿಗಳಿಂದ ಸೆಪ್ಟೆಂಬರ್‌ನಲ್ಲಿ ಸುಮಾರು 39,920 ಕೋಟಿ ರೂಪಾಯಿಗಳಿಗೆ ಶೇಕಡಾ 8 ರಷ್ಟು ಕಡಿಮೆಯಾಗಿದೆ.
ಆದರೆ ಅತ್ತ ದೇಶದಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ಇದೇ ಅವಧಿಯಲ್ಲಿ 5 ಪ್ರತಿಶತ ಹೆಚ್ಚಳವಾಗಿರುವುದು ಕಂಡುಬಂದಿದೆ. ಆಗಸ್ಟ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟುಗಳು ಸುಮಾರು 1.68 ಲಕ್ಷ ಕೋಟಿ ರೂ. ಆಗಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ಇದರ ಮೌಲ್ಯ ಬರೊಬ್ಬರಿ 1.76 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಯುಪಿಐ ಬಳಕೆದಾರರಿಗೆ ಸಿಹಿಸುದ್ದಿ ನೀಡಿದ ಆರ್‌ಬಿಐ: UPI ಲೈಟ್‌ನ ಮಿತಿಯಲ್ಲೂ ಹೆಚ್ಚಳ!
ಡಿಜಿಟಲ್ ವಹಿವಾಟಿನಲ್ಲಿ ಹೆಚ್ಚಳ
ರಿಸರ್ವ್ ಬ್ಯಾಂಕ್‌ನ ಕರೆನ್ಸಿ ಮ್ಯಾನೇಜ್‌ಮೆಂಟ್ ಇಲಾಖೆಯ ಅರ್ಥಶಾಸ್ತ್ರಜ್ಞ ಪ್ರದೀಪ್ ಭುಯಾನ್ ಅವರ ಪ್ರಕಾರ, ಭಾರತದಲ್ಲಿ ಡಿಜಿಟಲ್ ವಹಿವಾಟುಗಳು ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಸದ್ಯ ಭಾರದಲ್ಲಿ 60 ಪ್ರತಿಶತದಷ್ಟು ನೋಟಿನ ಬಳಕೆ ಇದ್ದರೂ ಡಿಜಿಟಲ್ ಕ್ರಾಂತಿಯು ಭಾರೀ ವೇಗದಲ್ಲಿ ಏರುತ್ತಿದೆ ಎಂದು ತಿಳಿಸಿದ್ದಾರೆ.
ಡಿಜಿಟಲ್ ಪಾವತಿಗಳ ಪಾಲು ಮಾರ್ಚ್ 2021 ರಲ್ಲಿ ಶೇಕಡಾ 14-19 ರಿಂದ ಮಾರ್ಚ್ 2024 ರಲ್ಲಿ ಶೇಕಡಾ 40-48 ಕ್ಕೆ ದ್ವಿಗುಣಗೊಂಡಿದೆ. ಇದರಲ್ಲಿ ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಪ್ರಮುಖ ಪಾತ್ರ ವಹಿಸಿದೆ. RBI ಪತ್ರಿಕೆಯ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ, ಚಿಲ್ಲರೆ ಡಿಜಿಟಲ್ ಪಾವತಿಗಳಲ್ಲಿ (RDP) ಗಮನಾರ್ಹ ಬೆಳವಣಿಗೆಯನ್ನು ನೋಡಲಾಗುತ್ತಿದೆ.
Google UPI Circle: ಗೂಗಲ್ ಪೇ- ಯುಪಿಐ ಸರ್ಕಲ್ ಎಂದರೇನು, ಇದನ್ನು ಬಳಸುವುದು ಹೇಗೆ?
ಇದು ನೈಜ-ಸಮಯದ ಒಟ್ಟು ಮೊತ್ತದ ಮೂಲಕ ಪಾವತಿಗಳನ್ನು ಹೊರತುಪಡಿಸಿ ಒಟ್ಟು ಡಿಜಿಟಲ್ ಪಾವತಿಯಾಗಿದೆ. 2016 ರಲ್ಲಿ ಪ್ರಾರಂಭವಾದ UPI ಕಳೆದ ಐದು ವರ್ಷಗಳಲ್ಲಿ RDP ಯ ಪರಿಮಾಣದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. UPI-ಆಧಾರಿತ ವಹಿವಾಟಿನ ಪ್ರಮಾಣವು ಈ ವರ್ಷದ ಮೊದಲಾರ್ಧದಲ್ಲಿ 78.97 ಶತಕೋಟಿಗೆ ಅಂದರೆ 52 ಶೇಕಡಾ ಏರಿಕೆಯಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 51.9 ಶತಕೋಟಿ ಇತ್ತು. ಅದೇ ರೀತಿ ವಹಿವಾಟಿನ ಮೌಲ್ಯ ಶೇ.40ರಷ್ಟು ವೃದ್ಧಿಯಾಗಿದ್ದು, ಈ ವರ್ಷದ ಮೊದಲ ಆರು ತಿಂಗಳಲ್ಲಿ ರೂ.83.16 ಲಕ್ಷ ಕೋಟಿಯಿಂದ ರೂ.116.63 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದೆಲ್ಲಾ ಅಂಶಗಳನ್ನು ಗಮನಿಸುವಾಗ ದೇಶದಲ್ಲಿ ಡಿಜಿಟಲ್ ಕ್ರಾಂತಿ ಯಾವ ಮಾಡಿದೆ ಎಂಬುದನ್ನು ತಿಳಿದುಕೊಳ್ಳಬಹುದು.
Goodreturns Desk Goodreturns
source: goodreturns.in
Post a Comment