ಅಂಗಮಾಲಿಯಿಂದ ಎರುಮೇಲಿವರೆಗೆ ಮೂಲ ಜೋಡಣೆಯಂತೆ ಶಬರಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಬದ್ಧ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಅಂಗಮಾಲಿಯಿಂದ ಎರುಮೇಲಿವರೆಗೆ ಮೂಲ ಜೋಡಣೆಯಂತೆ ಶಬರಿ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಬದ್ಧ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಕೇರಳದ ಅಂಗಮಾಲಿಯಿಂದ ಎರುಮೇಲಿವರೆಗಿನ ಮೂಲ ಜೋಡಣೆಯಂತೆಯೇ ಶಬರಿ ರೈಲು ಮಾರ್ಗವನ್ನು ನಿರ್ಮಿಸಲು ಕೇಂದ್ರ ಬದ್ಧವಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಹೇಳಿದ್ದಾರೆ . ಇಂದು ಮಧ್ಯಾಹ್ನ ತ್ರಿಶೂರ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಯೋಜನೆಗೆ ಸಂಬಂಧಿಸಿದಂತೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲೇ ನಮೂನೆಯನ್ನು ಕಳುಹಿಸಲಿದ್ದು, ನಮೂನೆಯನ್ನು ಭರ್ತಿ ಮಾಡಿದ ನಂತರ ಅದನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

ಕೇರಳ ಸರ್ಕಾರವು ಪ್ರಸ್ತಾಪಿಸಿರುವ ಹೈ-ಸ್ಪೀಡ್ ಕೆ-ರೈಲ್ ಯೋಜನೆಯನ್ನು ಉಲ್ಲೇಖಿಸಿದ ಸಚಿವರು, ಯೋಜನೆಗೆ ಸಂಬಂಧಿಸಿದ ಪರಿಸರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿದರೆ, ಅದನ್ನು ಸಹ ಕೈಗೆತ್ತಿಕೊಳ್ಳಬಹುದು ಎಂದು ಹೇಳಿದರು.

ಕೇರಳದಲ್ಲಿ ರೈಲ್ವೇ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ತಿಳಿಸಿದ ಸಚಿವರು, ಮಂಗಳೂರಿನಿಂದ ಶೋರ್ನೂರ್ ನಡುವೆ 3 ಮತ್ತು 4 ನೇ ಮಾರ್ಗ ಮತ್ತು ಕೊಟ್ಟಾಯಂ ಮತ್ತು ತಿರುವನಂತಪುರಂ ಮೂಲಕ ಶೋರ್ನೂರಿನಿಂದ ಕನ್ಯಾಕುಮಾರಿಯವರೆಗೆ 3 ನೇ ಮಾರ್ಗವನ್ನು ನಿರ್ಮಿಸಲು ಗಮನಹರಿಸಲಾಗಿದೆ ಎಂದು ಹೇಳಿದರು.

ರೈಲ್ವೆ ಅಭಿವೃದ್ಧಿ ರಾಜಕೀಯಕ್ಕಿಂತ ಮಿಗಿಲಾಗಿ ಜನರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

                                                           

Post a Comment

Previous Post Next Post