ಈ ಬೇಡಿಕೆ ಮುಂದಿರಿಸಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೊಗ್ಗ ಘಟಕದ ಅಧ್ಯಕ್ಷ ಸಂತೋಷ್ ಹೊನ್ನೆಗುಂಡಿ, ಮಹಿಳೆಯರಿಗೆ ಏನೇ ತೂಂದರೆ ಉಂಟಾದರೆ ಅವರ ರಕ್ಷಣೆಗೆ ಕಾನೂನು ಇದೆ. ಅವರಿಗೆ ಮಹಿಳಾ ಆಯೋಗ ಇದೆ. ಇದರಿಂದ ಅವರಿಗೆ ಸಕಾಲದಲ್ಲಿ ಸ್ಪಂದನೆ ಸಿಗುತ್ತಿದೆ. ಆದರೆ, ಎಷ್ಟೋ ಸಂದರ್ಭಗಳಲ್ಲಿ ಪುರುಷರು ಸಹ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸುಳ್ಳು ಕೇಸುಗಳಲ್ಲಿ ಅವರ ಬಂಧನವಾಗುತ್ತಿದೆ. ಇದರಿಂದ ಅವರ ಜೀವನ, ಕೀರ್ತಿ, ಯಶಸ್ಸು ಎಲ್ಲಾ ಮಣ್ಣು ಪಾಲಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಅವರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದಕ್ಕೆ ಸಂಬಂಧಪಟ್ಟಂತೆ ಯಾಕೆ ಹೋರಾಟ ಮಾಡಬಾರದು ಎಂದು ನಮ್ಮಲ್ಲಿ ಹಲವರು ಬಂದು ಕೇಳಿದ್ದಾರೆ. ಈ ಹಿನ್ನೆಲೆ ಈ ಬೇಡಿಕೆ ಮುಂದಿಟ್ಟಿದ್ದೇವೆ ಎಂದರು.
ನೊಂದಿರುವ ಪುರುಷರಿಗೂ ಬೇಕಿದೆ ಆಯೋಗ : ನೋವಿ ಇಂದು ಅನೇಕ ಘಟನೆಗಳಲ್ಲಿ ಹಲವು ಬಾರಿ ಅಮಾಯಕ ಪುರುಷರ ಮೇಲೆ ವರದಕ್ಷಿಣೆ, ಅತ್ಯಾಚಾರ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿ ಸಾಕಷ್ಟು ಕೇಸುಗಳು ಸುಳ್ಳು ಕೇಸುಗಳಾಗಿವೆ. ಕೊನೆಯಲ್ಲಿ ಇದು ರಾಜಿಯಲ್ಲಿ ಅಂತ್ಯವಾಗುತ್ತದೆ. ಆದರೆ, ಈ ಅವಧಿಯಲ್ಲಿ ಅಮಾಯಕ ಪುರುಷನೊಬ್ಬ ಸಮಾಜದಲ್ಲಿ ಏನೂ ತಪ್ಪು ಮಾಡದೆ ನಿಂದನೆಗೆ ಒಳಗಾಗುತ್ತಾರೆ. ಇಂತಹ ನೂಂದ ಪುರುಷರಿಗೆ ಆಯೋಗ ಬೇಕು ಎಂದು ನಮ್ಮ ಸಂಸ್ಥೆಯ ಮುಂದೆ ಹಲವರು ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಸಂತೋಷ್ ಹೊನ್ನೆಗುಂಡಿ ತಿಳಿಸಿದರು.
Post a Comment