olitical News: ಚನ್ನಪಟ್ಟಣ/ರಾಮನಗರ: ನಾನು ನನ್ನ ಕೊನೆ ಉಸಿರು‌ ಎಳೆಯುವ ಮುನ್ನ ಮೇಕೆದಾಟು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಘೋಷಣೆ ಮಾಡಿದರು. ಹೊಡಿಕೆಹೊಸಹಳ್ಳಿ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡುವ ವೇಳೆ ಮಾತನಾಡಿದರು ಮಾಜಿ‌ ಪ್ರಧಾನಿಗಳು.

ಮೇಕೆದಾಟು ಯೋಜನೆ ಆಗುತ್ತೆ ಎಂದರೆ ಅದು‌ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಇದರಲ್ಲಿ ಎರಡು ಮಾತಿಲ್ಲ. ಆದರೆ ತಮಿಳುನಾಡಿನವರು‌ ನಮ್ಮ ಕುತ್ತಿಗೆ ಹಿಡಿದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾನು‌ ಇಗ್ಗಲೂರು‌ ಆಣೆಕಟ್ಟು ಕಟ್ಟಿದ್ದು‌ ದೊಡ್ಡ ವಿಷಯ ಅಲ್ಲ. ನಾನು ಪ್ರಧಾನಿ ಆಗಿದ್ದು‌ ದೈವದ ಆಟ. ಮೇಕೆದಾಟು ಯೋಜನೆ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ನಾನು ಅವರಿಗೆ ಮನವಿ ಮಾಡುತ್ತೇನೆ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುತ್ತೇನೆ. ಈಗಾಗಲೇ ಹಲವಾರು ಸಲ ಅವರು ನನ್ನ ಮನವಿ ಅಳಿಸಿದ್ದಾರೆ.

ಕಾಂಗ್ರೆಸ್ ನಾಯಕರು ನಾಟಕ ಮಾಡುತ್ತಿದ್ದಾರೆ

ಆರು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ನಾನೇ ಅಭ್ಯರ್ಥಿ ಅಂದರು. ರಾಜ್ಯದ ಮಾನ ಮಾರ್ಯಾದೆಯನ್ನು ತೀರಾ ಕೆಳಮಟ್ಟಕ್ಕೆ ತೆಗೆದುಕೊಂಡು ಹೋದರು. 55 ವರ್ಷದಿಂದ ಚನ್ನಪಟ್ಟಣದಲ್ಲಿ ನಾನು ಸಂಘಟನೆ ಮಾಡಿದ್ದೇನೆ. ನಾನು ಕಡಿಮೆ ದರದಲ್ಲಿ ಪಡಿತರ ನೀಡಿದ್ದೇನೆ. ಅದನ್ನು ಸಿದ್ದರಾಮಯ್ಯ ಬಳಿ‌ ನೀವು ಕೇಳಿ. ಆಲಮಟ್ಟಿ, ಹಾರಂಗಿ, ಹೇಮಾವತಿ, ಯಗಚಿ ಅಣೆಕಟ್ಟು ಕಟ್ಟಿದವರು ಯಾರು? ಬರೀ ಇಗ್ಗಲೂರು ಡ್ಯಾಮ್ ಅಷ್ಟೇ ಅಲ್ಲ. ನಿಮ್ಮನ್ನು ‌ನಾನು ನೋಡುತ್ತಿದ್ದರೆ 92 ವರ್ಷದ ನನಗೆ 18ರ ಶಕ್ತಿ ಬರುತ್ತದೆ. ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ ಎಂದರು ದೇವೇಗೌಡರು.

Where is DK? Where is HDK..? Where is Kumaranna? Where is DK? ಹಿಮಾಲಯ ಪರ್ವತಕ್ಕೂ ಇಲ್ಲಿನ ಸಣ್ಣ ಗುಡ್ಡಕ್ಕೂ ಎಲ್ಲಿಯ ಹೊಲಿಕೆ. ಒಂದು ಶಾಲೆ ಮಾಡಲು ಜಾಗ ಕೇಳಿದರೆದುಡ್ಡು ದುಡ್ಡು ಅಂತಾರೆ ಎಂದು ಮಾಜಿ ಪ್ರಧಾನಿಗಳು ಗುಡುಗಿದರು.

ನಿಖಿಲ್ ನನ್ನ ನಾನೇ ರಾಜ್ಯ ನಾಯಕನನ್ನಾಗಿ ಮಾಡ್ತೇನೆ. ತೋಟದಲ್ಲಿ ಕುಳಿತು ಹೇಳಿಕೊಟ್ಟು ರಾಜ್ಯ ನಾಯಕನನ್ನಾಗಿ ಮಾಡುವ ಕಾಲ ಬರಲಿದೆ. ಅವನನ್ನು ದೊಡ್ಡ ನಾಯಕನನ್ನಾಗಿ ರೂಪಿಸುತ್ತೇನೆ ಎಂದು ದೇವೆಗೌಡರು ಹೇಳಿದರು.

ಯಾರಾದರೂ ಕಣ್ಣೀರು ಹಾಕಿದರೆ ಅಣಕಿಸಬಾರದು ಎಂದ ನಟಿ ತಾರಾ

ಯಾರಾದರೂ ಕಣ್ಣೀರು ಹಾಕಿದರೆ ಅಣಕಿಸಬಾರದು. ತಾಯಿ ಭಾವನೆ ಇದ್ದವರಿಗೆ ಮಾತ್ರ ಕಣ್ಣಿರು ಬರುತ್ತದೆ. ಏನೋ ಟೀಕೆ ಮಾಡಬಾರದು ಎಂದು ಬಿಜೆಪಿ ಹಿರಿಯ ನಾಯಕಿ ಹಾಗೂ ನಟಿ ತಾರಾ ಹೇಳಿದರು.

ದೇವೇಗೌಡರ ಜತೆ ನಿಲಸಂದ್ರದಲ್ಲಿ ನಿಖಿಲ್ ಪರ ಪ್ರಚಾರ ಮಾಡಿದ ತಾರಾ ಅವರು; ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತದೆ ಎಂದರು. ಅಭಿವೃದ್ಧಿ ಬಗ್ಗೆ ಮಾತಾಡಿದರೆ ಬಹಳ‌ ಮಾತಾಡಬಹುದು. ಎಲ್ಲರಿಗೂ ಒಂದು ಅವಕಾಶ ಕೊಟ್ಟಿದ್ದೀರಿ. ನಿಖಿಲ್ ಕುಮಾರಸ್ವಾಮಿಗೆ ಒಂದು ಅವಕಾಶ ಕೊಡಿ. ಈ ಕ್ಷೇತ್ರಕ್ಕೆ ದೇವೆಗೌಡರು, ಕುಮಾರಸ್ವಾಮಿ ಏನ್ ಮಾಡಿದ್ದಾರೆ ಅಂತ ನೆನಪು ಮಾಡಿಕೊಳ್ಳಿ. ನೂರಾರು ಕೆರೆ ತುಂಬಿದವರು ಕುಮಾರಸ್ವಾಮಿ. ಆದರೆ, ಯಾರೋ ಕೆರೆ ತುಂಬಿಸಿದವರು ಅಂತಾರೆ. ಇದು ಸರಿಯಲ್ಲ ಎಂದು ತಾರಾ ಅವರು ಹೇಳಿದರ

Post a Comment

Previous Post Next Post