ಗಳೂರು: ವೀಕೆಂಡ್ ಕಳೆಯಲು ರಾಮನಗರ (Ramanagar) ಬಳಿಯ ನಗರದ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ಗೆ (Farmhouse) ತೆರಳಿದ್ದ ಬಸವೇಶ್ವರನಗರದ ಏಳು ಮಂದಿ ಪದವಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಅಕ್ಟೋಬರ್ 26 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಗಳೂರು: ವೀಕೆಂಡ್ ಕಳೆಯಲು ರಾಮನಗರ (Ramanagar) ಬಳಿಯ ನಗರದ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ಗೆ (Farmhouse) ತೆರಳಿದ್ದ ಬಸವೇಶ್ವರನಗರದ ಏಳು ಮಂದಿ ಪದವಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಅಕ್ಟೋಬರ್ 26 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗಳೂರು: ವೀಕೆಂಡ್ ಕಳೆಯಲು ರಾಮನಗರ (Ramanagar) ಬಳಿಯ ನಗರದ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ಗೆ (Farmhouse) ತೆರಳಿದ್ದ ಬಸವೇಶ್ವರನಗರದ ಏಳು ಮಂದಿ ಪದವಿ ವಿದ್ಯಾರ್ಥಿಗಳ ಗುಂಪಿನ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ಅಕ್ಟೋಬರ್ 26 ರಂದುಹಲ್ಲೆಗೊಳಗಾದವರಲ್ಲಿ ಓರ್ವ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ (Death). ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೃತ ಪುನಿತ್ RSSನಲ್ಲಿ ಬೌದ್ಧಿಕ್ ಪ್ರಮುಖ್ ಆಗಿದ್ದ!
ಮೃತಪಟ್ಟಿರುವ ಪುನೀತ್ ಎನ್ನುವ ವಿದ್ಯಾರ್ಥಿಯು ಬಸವೇಶ್ವರನಗರದ RSS ಕಾರ್ಯಕರ್ತನಾಗಿದ್ದ, ಬೌದ್ಧಿಕ್ ಪ್ರಮುಖ್ ಕೂಡ ಆಗಿದ್ದರು. C A ವ್ಯಾಸಂಗ ಮಾಡುತ್ತಿದ್ದರು, ಅವರ ತಂದೆ ಬನ್ನೇರುಘಟ್ಟದಲ್ಲಿ ಆಟೋ ಚಾಲಕರಾಗಿದ್ದರು, ತಾಯಿ ಮನೆಕೆಲಸ ಮಾಡಿ ಮಗನಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಹಲ್ಲೆಗೊಳಗಾಗಿದ್ದ ಪುನೀತ್‌ಗೆ ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿತ್ತು. ತಲೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 29 ರಂದು ಸಾವನ್ನಪ್ಪಿದ್ದಾನೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಅಂಗಾಂಗ ದಾನ ಮಾಡಲಾಯಿತು. ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲುಗಟ್ಟಿದ್ದಾರೆ.
ಏನಿದು ಘಟನೆ?
ಬಿಕಾಂ ಓದುತ್ತಿರುವ ಏಳು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ದೀಪಾವಳಿ ಹಬ್ಬಕ್ಕೆ ರಜೆ ನೀಡಿದ್ದರಿದ ಹೊರಗೆ ಹೋಗಲು ನಿರ್ಧರಿಸಿದರು. ವಿದ್ಯಾರ್ಥಿಯೊಬ್ಬನಿಗೆ ಮಾಲೀಕನ ಪರಿಚಯವಿದ್ದ ಕಾರಣ ಅವರು ತೋಟದ ಮನೆಗೆ ಹೋಗಿದ್ದರು. ಇಬ್ಬರು ಹುಡುಗಿಯರು ಅಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದರು. ಇತರರು ಅಂತಕ್ಷರಿ ಆಡುತ್ತಿದ್ದರು. ಹೊರಗಿನಿಂದ ಯಾರೋ ಬಾಗಿಲು ಬಡಿಯುತ್ತಿದ್ದಂತೆ ಒಬ್ಬ ವಿದ್ಯಾರ್ಥಿನಿ ಎದ್ದು ಹೋಗಿ ಬಾಗಿಲು ತೆರೆದಿದ್ದಾಳೆ.
HD Kumaraswamy: ಮುಡಾ ಪ್ರಭಾವದಿಂದ ದೇವರ ಮೇಲೆ ಭಕ್ತಿ! ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಕೆ ವ್ಯಂಗ್ಯ
ಹುಡುಗಿಯರ ಫೋಟೋ ತೆಗೆಯುವುನ್ನು ತಡೆಯಲು ಹೋದ ವಿದ್ಯಾರ್ಥಿಗಳು
ಮೂವರು ಆರೋಪಿಗಳು ಸ್ಥಳೀಯರು ಎಂದು ಹೇಳಿಕೊಂಡು ಒಳಗೆ ನುಗ್ಗಿ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಕೂಗಾಡಲು ಪ್ರಾರಂಭಿಸಿದರು. ಇಲ್ಲಿಗೆ ಬರಲು ನಿಮಗೆ ಅನುಮತಿ ನೀಡಿದವರು ಯಾರು ಎಂದು ಕೇಳಿ ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಆರೋಪಿಗಳು ಹುಡುಗಿಯರ ಫೋಟೋ ತೆಗೆಯಲು ಪ್ರಾರಂಭಿಸಿದರು. ಇತರ ವಿದ್ಯಾರ್ಥಿಗಳು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಮರದ ದಿಮ್ಮಿಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 22 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬರು ನೀಡಿದ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಆಗಮಿಸಿದ ನಂತರ ಗಂಭೀರವಾಗಿ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಕೆಂಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂತ್ರಸ್ತ ಇಬ್ಬರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೇಳಲಾಗಿತ್ತು.
ನನ್ನ ಸ್ನೇಹಿತ ಕೆಂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾನೆ, ಅವನ ಸ್ಥಿತಿ ಅತ್ಯಂತ ಗಂಭೀರವಾಗಿದೆ, ಅವನಿಗೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ" ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದರು. ಚಂದ್ರು, ನಾಗೇಶ್ ಮತ್ತು ಮುರಳಿ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರೂ ನಿರುದ್ಯೋಗಿಗಳು. ಅವರು ಮದ್ಯದ ಅಮಲಿನಲ್ಲಿದ್ದ ಶಂಕೆ ಇದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 109 ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ. ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Post a Comment