ದು ಜೂನ್ 1991. ಮನಮೋಹನ್ ಸಿಂಗ್ ನೆದರ್ಲ್ಯಾಂಡ್ಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ದೆಹಲಿಗೆ ಹಿಂತಿರುಗಿ ಮನೆಯಲ್ಲಿ ಮಲಗಿದ್ದರು. ಆ ರಾತ್ರಿ ಒಂದು ಫೋನ್ ಕಾಲ್ ಬಂತು. ಸಿಂಗ್ ಅವರ ಅಳಿಯ ವಿಜಯ್ ತಂಖಾ ಅವರು ಫೋನ್ ಕರೆಯನ್ನು ಸ್ವೀಕರಿಸಿದರು. ಫೋನ್ ಕರೆ ಮಾಡಿದ್ದವರು ಪಿ.ವಿ.ನರಸಿಂಹ ರಾವ್ ಅವರ ಆಪ್ತರಾಗಿದ್ದ ಪಿಸಿ ಅಲೆಕ್ಸಾಂಡರ್.
ಆದರೆ, ಪ್ರಧಾನಿ ರಾವ್ ಗಂಭೀರವಾಗಿಯೇ ಇದ್ದರು. ಜೂನ್ 21 ರಂದು ಸಿಂಗ್ ತಮ್ಮ ಯುಜಿಸಿ ಕಚೇರಿಯಲ್ಲಿದ್ದರು. ಆಗ ಪ್ರಧಾನಿಗಳು, 'ಮನೆಗೆ ಹೋಗಿ ಬಟ್ಟೆ ಧರಿಸಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ' ಹೇಳಿದ್ದರು. ಈ ಕುರಿತು ಮನಮೋಹನ್ ಸಿಂಗ್ ಹೇಳಿಕೊಂಡಿದ್ದಾರೆ. 'ಹೊಸ ತಂಡದ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಲು ಅಣಿಯಾಗಿ ನಿಂತಿದ್ದ ನನ್ನನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ನನ್ನ ಖಾತೆಯನ್ನು ನಂತರ ಹಂಚಿಕೆ ಮಾಡಲಾಯಿತು. ಆದರೆ ನಾನು ಹಣಕಾಸು ಸಚಿವನಾಗಲಿದ್ದೇನೆ ಎಂದು ನರಸಿಂಹರಾವ್ ಜಿ ನೇರವಾಗಿ ನನಗೆ ತಿಳಿಸಿದ್ದರು' ಎಂದು ಸಿಂಗ್ ಹೇಳಿದರು. ಈ ಬಗ್ಗೆ ಅವರ ಮಗಳು ದಮನ್ ಸಿಂಗ್ ಅವರ ಪುಸ್ತಕ 'ಸ್ಟ್ರಿಕ್ಟ್ಲಿ ಪರ್ಸನಲ್, ಮನಮೋಹನ್ ಮತ್ತು ಗುರುಶರಣ್'ನಲ್ಲಿ ಈ ವಿಚಾರವನ್ನು ಉಲ್ಲೇಖಿಸಿದ್ದಾರೆ.
ಆ ನೇಮಕಾತಿ ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿತು. ಇದು, ಕುಂಟುತ್ತಾ ಸಾಗಿದ್ದ ಆರ್ಥಿಕತೆಯಿಂದ ಇಂದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗೆ ನಾಂದಿ ಹಾಡಿತು.
ರಾವ್ ಜೊತೆಗೆ, ಸಿಂಗ್ ಅವರು 1991 ರ ಸುಧಾರಣೆಗಳ ವಾಸ್ತುಶಿಲ್ಪಿಯಾಗಿದ್ದರು. ಕಾಂಗ್ರೆಸ್ ಒಳಗೆ ಮತ್ತು ಹೊರಗಿನ ದಾಳಿಗಳನ್ನು ಎದುರಿಸಿದರು. ಆರ್ಥಿಕತೆಯು ಹದಗೆಟ್ಟಿತ್ತು. ಫಾರೆಕ್ಸ್ ಮೀಸಲು 2,500 ಕೋಟಿಗೆ ಇಳಿದಿದೆ, 2 ವಾರಗಳ ಆಮದುಗಳನ್ನು ಸರಿದೂಗಿಸಲು ಸಾಕಾಗುವುದಿಲ್ಲ, ಜಾಗತಿಕ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸುತ್ತಿವೆ, ವಿದೇಶಿ ವಿನಿಮಯ ಹೊರಹರಿವು ದೊಡ್ಡದಾಗಿದೆ, ಹಣದುಬ್ಬರವು ಗಗನಕ್ಕೇರಿದೆ.. ಸಮಸ್ಯೆ ಒಂದಾ ಎರಡಾ.
Post a Comment