2023-24 ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ ತಲಾ ವೆಚ್ಚವು 9% ಮತ್ತು ನಗರ ಪ್ರದೇಶಗಳಲ್ಲಿ ಸುಮಾರು 8% ರಷ್ಟು ಹೆಚ್ಚಾಗುತ್ತದೆ

2022-23ರ ಮಟ್ಟದಿಂದ 2023-24ರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಾಸಿಕ ತಲಾ ವೆಚ್ಚವು (MPCE) ಒಂಬತ್ತು ಪ್ರತಿಶತದಷ್ಟು ಮತ್ತು ನಗರ ಪ್ರದೇಶಗಳಲ್ಲಿ ಸುಮಾರು ಎಂಟು ಪ್ರತಿಶತದಷ್ಟು ಹೆಚ್ಚಾಗಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದ ಗೃಹಬಳಕೆಯ ವೆಚ್ಚ ಸಮೀಕ್ಷೆ 2023-24 ರ ಪ್ರಕಾರ, ಗ್ರಾಮೀಣ ಭಾರತದಲ್ಲಿ ಸರಾಸರಿ MPCE 4 ಸಾವಿರ 122 ರೂಪಾಯಿ ಎಂದು ಅಂದಾಜಿಸಲಾಗಿದೆ. ನಗರ ಭಾರತದಲ್ಲಿ ಸರಾಸರಿ MPCE ಆರು ಸಾವಿರದ 996 ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ದೇಶಾದ್ಯಂತ ಸುಮಾರು 2.6 ಲಕ್ಷ ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ ಎಂದು ಆಕಾಶವಾಣಿ ವರದಿಗಾರರು ವರದಿ ಮಾಡಿದ್ದಾರೆ. ಗ್ರಾಮೀಣ ಬಳಕೆ ನಗರ ಬಳಕೆಗಿಂತ ವೇಗವಾಗಿ ಬೆಳೆಯುತ್ತಿದೆ ಎಂದು ದತ್ತಾಂಶವು ತೋರಿಸಿದೆ, ನಗರ-ಗ್ರಾಮೀಣ ಬಳಕೆಯ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. MPCE ಯಲ್ಲಿನ ನಗರ-ಗ್ರಾಮೀಣ ಅಂತರವು 2011-12 ರಲ್ಲಿ 84 ಶೇಕಡಾದಿಂದ 2022-23 ರಲ್ಲಿ 71 ಶೇಕಡಾಕ್ಕೆ ಇಳಿದಿದೆ.

ಗ್ರಾಮೀಣ ಪ್ರದೇಶದ MPCE ಯಲ್ಲಿ ಸುಮಾರು 53 ಪ್ರತಿಶತ ಮತ್ತು ನಗರ ಪ್ರದೇಶದ MPCE ಯಲ್ಲಿ 60 ಪ್ರತಿಶತದೊಂದಿಗೆ ಮನೆಯ ಸರಾಸರಿ ಮಾಸಿಕ ಖರ್ಚಿಗೆ ಆಹಾರೇತರ ವಸ್ತುಗಳು ಪ್ರಮುಖ ಕೊಡುಗೆಯಾಗಿ ಉಳಿದಿವೆ ಎಂದು ಸಮೀಕ್ಷೆಯು ಸೂಚಿಸುತ್ತದೆ. ಪಾನೀಯಗಳು, ಉಪಹಾರಗಳು ಮತ್ತು ಸಂಸ್ಕರಿಸಿದ ಆಹಾರವು 2023-24ರಲ್ಲಿ ಗ್ರಾಮೀಣ ಮತ್ತು ನಗರಗಳ ಮನೆಗಳ ಆಹಾರ ಪದಾರ್ಥಗಳ ಬುಟ್ಟಿಯಲ್ಲಿ ಪ್ರಮುಖ ವೆಚ್ಚದ ಪಾಲನ್ನು ಮುಂದುವರೆಸಿದೆ ಎಂದು ಅದು ಹೇಳಿದೆ.


Post a Comment

Previous Post Next Post