ದಗಿರಿ: ಜಿಲ್ಲೆಯಲ್ಲಿ 2024ರ ವರ್ಷ ಸಿಹಿಗಿಂತ ಕಹಿಯನ್ನೇ ಉಣಬಡಿಸಿದೆ. ಜನವರಿ, ಫೆಬ್ರುವರಿ, ಜುಲೈ, ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯ ನಾಲ್ವರು ಮಾಜಿ, ಹಾಲಿ ಶಾಸಕರು ನಿಧನರಾಗಿದ್ದಾರೆ.


ನಾಗನಗೌಡ ಕಂಕದೂರ:


ಗುರುಮಠಕಲ್ ಮತಕ್ಷೇತ್ರದ ಜೆಡಿಎಸ್‌ ಮಾಜಿ ಶಾಸಕ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಆಪ್ತ ನಾಗನಗೌಡ ಕಂದಕೂರ (77) ಹೃದಯಾಘಾತದಿಂದ ಜನವರಿ 28ರಂದು ನಿಧನರಾದರು

.ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಎದುರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರವೂ ಧೃತಿಗೆಡದೆ ಛಲಗಾರನಂತೆ ಮತ್ತೆ ಸ್ಪರ್ಧಿಸುವ ಮೂಲಕ ಜಯಭೇರಿ ಬಾರಿಸಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ನಾಗನಗೌಡರದು.

ನಾಗನಗೌಡ ಕಂದಕೂರ

ರಾಜಾ ವೆಂಕಟಪ್ಪ ನಾಯಕ:

ಫೆಬ್ರುವರಿ 26ರಂದು ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನವೇ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದರು. ಅಧಿಕಾರ ಹಿಡಿಯಲು ಹೋರಾಟ ನಡೆಸಿದವರು ಕೊನೆಗೆ ಅಧಿಕಾರ ಅನುಭವಿಸದೆ ವಿಧಿ ಆಟಕ್ಕೆ ಸೋತು ಹೋದರು.

ರಾಜಾ ವೆಂಕಟಪ್ಪ ನಾಯಕ

ಡಾ.ವೀರಬಸವಂತರೆಡ್ಡಿ ಮುದ್ನಾಳ:

ಜುಲೈ 22ರಂದು ಮಾಜಿ ಶಾಸಕ ಹಾಗೂ ವೈದ್ಯ ಡಾ.ವೀರಬಸವಂತರೆಡ್ಡಿ ಮುದ್ನಾಳ (72) ತಮ್ಮ ಒಡೆತನದ ವಿಬಿಆರ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾದರು.

ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದರು. ನಂತರ ವಿಜಯಪುರ ಬಿಎಲ್‌ಡಿಇ ಮೆಡಿಕಲ್ ಆಸ್ಪತ್ರೆ, ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಕ ಮತ್ತು ಪ್ರಾಧ್ಯಾಪಕರಾಗಿದ್ದರು. ನಂತರ ಯಾದಗಿರಿಗೆ ಆಗಮಿಸಿ ಹೊಲ್‌ಸ್ಟನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಯಾದಗಿರಿ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ನ ಮಾಜಿ ಸಚಿವ ಡಾ.ಎ.ಬಿ. ಮಾಲಕರಡ್ಡಿ ಅವರನ್ನು 11,434 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅವರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು.

ಡಾ.ವೀರಬಸವಂತರೆಡ್ಡಿ ಮುದ್ನಾಳ

ವೆಂಕಟರೆಡ್ಡಿ ಮುದ್ನಾಳ:

ಯಾದಗಿರಿ ಮತಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ (70) ಸೆಪ‍್ಟೆಂಬರ್ 17ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 2018-2023ರವರೆಗೆ ಶಾಸಕರಾಗಿದ್ದರು.‌ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು.

ಮಾಜಿ ಸಚಿವ ದಿ.ವಿಶ್ವನಾಥರಡ್ಡಿ ಮುದ್ನಾಳ ಅವರ ಪುತ್ರರಾಗಿದ್ದ ವೆಂಕಟರಡ್ಡಿ ಮುದ್ನಾಳ ನೇರ, ದಿಟ್ಟ ವ್ಯಕ್ತಿಯಾಗಿ ಜನತಾ ಪರಿವಾರದ ಮೂಲಕ ರಾಜಕೀಯಕ್ಕೆ ಧುಮುಕಿದರು. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ವೆಂಕಟರೆಡ್ಡಿ ಮುದ್ನಾಳ ಅವರು, ಕೆಜೆಪಿಯಿಂದಲೂ ಸ್ಪರ್ಧಿಸಿದ್ದರು.

ವೆಂಕಟರೆಡ್ಡಿ ಮುದ್ನಾಳ

ಜನವರಿ 23: ಪ್ರಥಮ ಬಾರಿಗೆ ಯಾದಗಿರಿ ನಗರಕ್ಕೆ ಆಗಮಿಸಿದ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥರಿಗೆ ಭಕ್ತರು ಅದ್ದೂರಿ ಶೋಭಾಯಾತ್ರೆ ಏರ್ಪಡಿಸಿದ್ದರು.

ಜನವರಿ 12: ಜ.12ರಿಂದ 18ರವರೆಗೆ ಯಾದಗಿರಿ ತಾಲ್ಲೂಕಿನ ಮೈಲಾಪುರದ ಮೈಲಾ‍ರಲಿಂಗೇಶ್ವರ ಜಾತ್ರೆ ಜರುಗಿತು.

ಜನವರಿ 26: ಭಾರತದ ಸಂವಿಧಾನ ಮೌಲ್ಯ ಹೆಚ್ಚಿಸುವ ದಿಶೆಯಲ್ಲಿ ಜನವರಿ 26ರಿಂದ ಜಿಲ್ಲೆಯಾದ್ಯಂತ ಸಂವಿಧಾನ ಜಾಗೃತಿ ಜಾಥಾ ನಡೆಯಿತು.

ಫೆಬ್ರುವರಿ 8: ಯಾದಗಿರಿ ತಾಲ್ಲೂಕಿನ ಲಿಂಗೇರಿ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಸೂರ್ಯಕಾಂತ್ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಗೆ ಕನ್ನ ಹಾಕಿದ್ದು, ಅಮಾನತು ಮಾಡಲಾಯಿತು.

ಫೆಬ್ರುವರಿ 19: ಫೆ.19ರಿಂದ 24ರ ಸುರ‍ಪುರ ತಾಲ್ಲೂಕಿನ ತಿಂಥಣಿ ಮೌನೇಶ್ವರ ಜಾತ್ರೆ ನಡೆಯಿತು.

ಮಾರ್ಚ್‌ 20: ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯಾದಗಿರಿಯ ಗೋಗಿ ಮೊಹಲ್ಲಾ ಯುವಕನ ಮೇಲೆ ಹಲ್ಲೆ ಮಾಡಲಾಗಿತ್ತು.

ಏಪ್ರಿಲ್‌ 21: ಯಾದಗಿರಿಯ ಶಹಾಪುರಪೇಟ ಬಡಾವಣೆಯಲ್ಲಿ ತಡರಾತ್ರಿ ರೊಟ್ಟಿ ಕೇಳಿದನೆಂಬ ಕಾರಣಕ್ಕೆ ರಾಕೇಶ ನಾಗೇಂದ್ರ ಎಂಬ ಯುವಕನ ಕೊಲೆ.

ಏಪ್ರಿಲ್‌ 23: ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ಖಾನಾಪುರ ಕೆರೆಯಲ್ಲಿ ಈಜಲು ತೆರಳಿದ ಬಾಲಕರು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದರು.

ಮೇ 1: ಜಿಲ್ಲೆಯ ಸುರಪುರ ತಾಲ್ಲೂಕಿನ ದೇವತ್ಕಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು.

ಮೇ 7: ಸುರಪುರ ಮತಕ್ಷೇತ್ರದ ಶಾಸಕರಾಗಿದ್ದ ದಿ.ರಾಜಾವೆಂಕಟಪ್ಪ ನಾಯಕ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 7ರಂದು ಉಪಚುನಾವಣೆ ನಡೆಯಿತು.

ಮೇ 15: ಎಸ್‌ಎಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮೇ 15ರಿಂದ ಜೂನ್ 6ರವರೆಗೆ ಆಯೋಜಿಸಲಾಗಿತ್ತು.

ಮೇ 20: ಕಳುವಾಗಿದ್ದ ₹16 ಲಕ್ಷದ ಮೌಲ್ಯದ ವಿವಿಧ ಕಂಪನಿಯ 74 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಗ್ರಾಹಕರಿಗೆ ವಿತರಿಸಲಾಯಿತು.

ಮೇ 22: (ನಾಫೆಡ್‌) ಸಂಸ್ಥೆಗೆ ಯಾದಗಿರಿಯ ಸಿದ್ದಪ್ಪ ಹೊಟ್ಟಿ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇ 23: ಬರೋಬ್ಬರಿ ಎರಡು ಗಂಟೆ ಸತತವಾಗಿ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ನೂರಾರು ಮರಗಳು, ವಿದ್ಯುತ್‌ ಕಂಬಗಳು, ವಿದ್ಯುತ್ ಪರಿವರ್ತಕಗಳು, ಆವರಣಗೋಡೆಗಳು ಕುಸಿದು ಬಿದ್ದಿದ್ದವು.

ಜೂನ್‌ 3: ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ನಡೆಯಿತು.

ಜೂನ್‌ 4: ಸುರಪುರ ಮತಕ್ಷೇತ್ರಕ್ಕೆ ನಡೆದ ಉಪ‍ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ರಾಜಾ ವೇಣುಗೋಪಾಲ ನಾಯಕ ಗೆಲುವು‌

ಜುಲೈ 17: ಕೃಷ್ಣಾ ಮೇಲ್ದಂಡೆ ಯೋಜನೆಯ ಎಲ್ಲ ಕಾಲುವೆಗಳಲ್ಲಿ ನೀರು ಹರಿಸಲು ತೀರ್ಮಾನ

ಆಗಸ್ಟ್‌ 28: ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ ಗರಿಮಾ ಪಂವಾರ್‌ ವರ್ಗಾವಣೆಯಾಗಿ ಅವರ ಸ್ಥಾನಕ್ಕೆ ಬೀದರ್ ಉಪವಿಭಾಗಾಧಿಕಾರಿ ಲವೀಶ್‌ ಒರಡಿಯಾ ಆಗಮಿಸಿದರು.

ಸೆಪ್ಟೆಂಬರ್ 17: ಯಾದಗಿರಿ ಮತಕ್ಷೇತ್ರದ ಮಾಜಿ ಶಾಸಕ ದಿ.ವೆಂಕಟರೆಡ್ಡಿ ಮುದ್ನಾಳ ನಿಧನ

ಅಕ್ಟೋಬರ್ 3: ಯಾದಗಿರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಬಿಜೆಪಿ ಗದ್ದುಗೆ ಅಲಂಕರಿಸಿತ್ತು.

ನವೆಂಬರ್‌ 15: ಯಾದಗಿರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಪೃಥ್ವಿಕ್‌ ಶಂಕರ್‌ ನೇಮಕ.

ಡಿಸೆಂಬರ್ 25: ಯೇಸುಕ್ರಿಸ್ತನ ಜನನದ ಅಂಗವಾಗಿ ಜಿಲ್ಲೆಯಾದ್ಯಂತ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಯಿತು.

ಪೂಕರ ವರದಿ: ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

 ಪ್ರಥಮ ಬಾರಿಗೆ ಯಾದಗಿರಿ ನಗರಕ್ಕೆ ಮಂಗಳವಾರ ಆಗಮಿಸಿದ ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರತೀರ್ಥರನ್ನು ಭಕ್ತರು ಸಾರೋಟದಲ್ಲಿ ಕೂಡಿಸಿ ಶೋಭಾಯಾತ್ರೆ ನಡೆಸಿದರು

ಶಿಶುಗಳ ಮರಣ ಸದ್ದು

ಯಾದಗಿರಿ ಜಿಲ್ಲೆಯಲ್ಲಿ ಏಪ್ರಿಲ್‌ 1ರಿಂದ ಅಕ್ಟೋಬರ್‌ 30ರವರೆಗೆ 127 ಶಿಶುಗಳು ಸಾವನ್ನಪ್ಪಿದ್ದು ನವೆಂಬರ್‌ 30ರಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಸದ್ದು ಮಾಡಿತು. ಕೇವಲ 5 ತಿಂಗಳಲ್ಲಿ 127 ಶಿಶು ಮರಣ ಹೊಂದಿದ್ದರಿಂದ ಜನಪ್ರತಿನಿಧಿಗಳು ವೈದ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‌ಐ ನಿಧನ: ಸಂಘಟನೆಗಳ ಆಕ್ರೋಶ

ಯಾದಗಿರಿ ನಗರ ಠಾಣೆ ಪಿಎಸ್‌ಐ ಪರಶುರಾಮ (34) ಆಗಸ್ಟ್‌ 2ರಂದು ನಿಧನರಾಗಿದ್ದರು. ಇದು ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಕಾರಣವಾಯಿತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಪುತ್ರ ಪಂಪನಗೌಡ ಅವರು ₹ 30 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದೇ ಕಾರಣ ಎಂದು ಮೃತ ಪರಶುರಾಮ್‌ ಪತ್ನಿ ಶ್ವೇತಾ ಕುಟುಂಬಸ್ಥರು ದೂರಿದ್ದಾರೆ. ಕಲಬುರಗಿ-ಗುತ್ತಿ ರಸ್ತೆ ಬಂದ್‌ ಮಾಡಿ ಸುಮಾರು ಗಂಟೆಗಳ ಕಾಲ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರ ಪುತ್ರ ಪಂಪನಗೌಡ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದ್ದರು. ನಂತರ ಪ್ರಕರಣ ದಾಖಲಾಯಿತು. ಪರಶುರಾಮ್ ಪತ್ನಿ ಶ್ವೇತಾ ಅವರು ನೀಡಿದ ದೂರಿನ್ವಯ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು‍ ಎ1 ಅವರ ಪುತ್ರ ಪಂಪನಗೌಡ (ಸನ್ನಿಗೌಡ) (ಎ2) ವಿರುದ್ಧ ನಗರ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಸಿಐಡಿಯಲ್ಲಿ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

ಹುಣಸಗಿ ತಾಲ್ಲೂಕು ಹಿನ್ನೋಟ

ಮಾ.2: 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ಹುಣಸಗಿಯ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಇಷ್ಟ ಲಿಂಗಪೂಜೆ ಮೇ 1: ಪ್ರಜಾಪ್ರತಿನಿಧಿಯಾತ್ರೆ ದೇವತಕಲ್ಲ ಗ್ರಾಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಗಣ್ಯರು ಭಾಗಿ ಆ.20: ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಬಾಗಿನ. ಶಾಸಕ ರಾಜಾ ವೇಣುಗೋಪಾಲ್ ನಾಯಕ ಉಪಸ್ಥಿತಿ ಅ.2: ದೇಶದಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ಗಾಂಧೀಜಿ ಗುಡಿ ಬಲಶೆಟ್ಟಿಹಾಳ ನೂತನ ಗಾಂಧೀಜಿ ಮೂರ್ತಿ ಪ್ರತಿಷ್ಠಾಪನೆ ಸೆ.21: ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಲ್ಲಿ ಆನೆ ಅಂಬಾರಿಯಲ್ಲಿ ಖಾಸ್ಗತೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ಸೆ.6: ಹುಣಸಗಿ ಪಟ್ಟಣ ಪಂಚಾಯಿತಿಯ ಮೊದಲ ಅಧ್ಯಕ್ಷರಾಗಿ ತಿಪ್ಪಣ್ಣ ರಾಠೋಡ ಉಪಾಧ್ಯಕ್ಷರಾಗಿ ಶಾಂತಣ್ಣ ಮಲಗಲದಿನ್ನಿ ಆಯ್ಕೆ

ಶಹಾಪುರ ತಾಲ್ಲೂಕಿನ ಪ್ರಮುಖ ಘಟನಾವಳಿಗಳು

ಜ.5: ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಆಡಳಿತ ಕಚೇರಿಯ ಎದುರು ರೈತರು ಮೆಣಸಿನಕಾಯಿ ಬೆಳೆಗೆ ನೀರು ಹರಿಸುವಂತೆ ಆಗ್ರಹಿಸುವಾಗ ಜಿಲ್ಲಾಧಿಕಾರಿ ಬಿ.ಸುಶೀಲಾ ಸಮ್ಮುಖದಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಜ.16: ಶಹಾಪುರ ಮತಕ್ಷೇತ್ರದ ಅಮೀನರಡ್ಡಿ ಪಾಟೀಲ ಯಾಳಗಿ ಅವರು ಬಿಜೆಪಿ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ.

ಜ.28: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮಕ್ಕೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮನ ಹಾಗೂ ಪಕ್ಷದ ಶಕ್ತಿ ಪ್ರದರ್ಶನ

ಮಾ.2: ಭೀಮರಾಯನಗುಡಿಯಲ್ಲಿ ಕಸಾಪ 4ನೇ ತಾಲ್ಲೂಕು ಮಟ್ಟದ ಸಮ್ಮೇಳನ

ಮೇ 23: ಅಕ್ಷರ ಕ್ರಾಂತಿಯ ಗಂಗೂ ನಾಯಕ ತಾಂಡಾದ ಬಗ್ಗೆ ಗಮನ ಸೆಳೆದ ಸುದ್ದಿ

ಜು.19: ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಬಂಧನ

ಜು.23: ಕಾಂಗ್ರೆಸ್ ಪಕ್ಷದ ರಾಜ್ಯದ ಘಟಕದ ಕಾರ್ಯದರ್ಶಿ ಮರಿಗೌಡ ಪಾಟೀಲ ಹುಲಕಲ್ ನಿಧನ

ಸೆ.23: ₹2.6 ಕೋಟಿ ಮೌಲ್ಯದ ಅಕ್ಕಿ ನಾಪತ್ತೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ. ದೂರುದಾರನೇ ಆರೋಪಿಯಾಗಿರುವ ಬಗ್ಗೆ ಗಮನ ಸೆಳೆದ ವರದಿ.

ನ.24: ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ ನಿಧನ.

Post a Comment

Previous Post Next Post