ಇಂದಿನ ಬಂಗ್ಲಾದೇಶ ಅವನ ಸೇಡಿನ ಫಲ.

ಕಾಲ ಪಹಾಡ್ ಎಂಬ ಬಂಗಾಲದ ಸಂಪ್ರದಾಯನಿಷ್ಠ ಹಿಂದು ಸರದಾರ  ಇಕ್ಕಟ್ಟಿಗೆ ಒಳಗಾಗಿ ತನ್ನ ನವಾಬನ ಮಗಳನ್ನು ವರೀಸಬೇಕಾದ ಪ್ರಸಂಗ ಬಂತು. ನಮ್ಮ ಧಾರ್ಮಿಕ ನಾಯಕರು ಅವನು ಮಾಡಿದ್ದು ಅಪರಾಧ ಎಂದು ಬಹಿಷ್ಕಾರ ಹಾಕಿದರು. ಪರಿಣಾಮ ಅವನೇ ಬಂಗಾಲದ ತುಂಬೆಲ್ಲ ಹಿಂದುಗಳನ್ನು ಇಸ್ಲಾಂಗೆ ಮತಾಂತರಿಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಾನೆ. ಇಂದಿನ ಬಂಗ್ಲಾದೇಶ ಅವನ ಸೇಡಿನ ಫಲ.

ಒಂದು ಕಾಲಕ್ಕೆ ಕಾಶ್ಮೀರದ ಇಡೀ ಸಮುದಾಯ ಹಿಂದೂ ಧರ್ಮಕ್ಕೆ ಮರಳಲು ಮುಂದೆ ಬಂದಿತ್ತು. ಮಹಾರಾಜರ ಒಪ್ಪಿಗೆಯೂ ಇತ್ತು. ಧಾರ್ಮಿಕ ಮುಖಂಡರು ಇದಕ್ಕೆ ಅಡ್ಡ ಬಂದರು. ಪರಿಣಾಮ ಇಂದಿನ ಕಾಶ್ಮೀರ ಸಮಸ್ಯೆ.

ಗೋವಾಕ್ಕೆ ಬಂದ ಕ್ರೈಸ್ತ ಮಿಷನರಿಗಳು ಹಿಂದುಗಳ ಬಾವಿಗಳಿಗೆ ರಾತ್ರಿ ಬ್ರೆಡ್ ಎಸೆಯುತ್ತಿದ್ದರು. ಬೆಳಿಗ್ಗೆ ಆ ನೀರು ಕುಡಿದವರು ಕ್ರೈಸ್ತರಾದ ರೆಂದು ಘೋಷಣೆ ಮಾಡುತ್ತಿದ್ದರು. ನಮ್ಮವರು ಅಂತವರನ್ನು ಬಹಿಷ್ಕರಿ ಸುತ್ತಿದ್ದರು.

ನಮ್ಮಲ್ಲಿಯೇ ಇರುವ ಅಸ್ಪೃಶ್ಯತೆ, ಆರ್ಥಿಕ ಸಮಸ್ಯೆಗಳು, ಧಾರ್ಮಿಕ ಕಟ್ಟರ್ ಪಂಥ , ಮನೆಗಳಲ್ಲಿ ಸಂಸ್ಕಾರದ ಕೊರತೆ, ನಮ್ಮ ಮಕ್ಕಳನ್ನೇ ಹತೋಟಿಯಲ್ಲಿ ಇಟ್ಟು ಕೊಳ್ಳಲಾರದ ಅಸಹಾಯಕತೆ, ಮತಾಂತರ ಲವ್ ಜಿಹಾದಿಗೆ ಕಾರಣ.

ಮತಾಂತರ ನಿಷೇಧ ಕಾನೂನು ಸರಿ. ಆದರೆ ಇಂತಹ ವಿಷಯಗಳನ್ನು ಕಾನೂನಿನ ಮೂಲಕ ತಡೆಯಲು ಸಾಧ್ಯವೇ.?

ನಮ್ಮ ಮಠಾಧೀಶರುಗಳು ಮಠಗಳಿಗೆ ಸೀಮಿತವಾಗದೆ ಮೂಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಮರುಮತಾಂತರ ಕ್ರಿಯೆಗಳಲ್ಲಿ ಆಕ್ರಮಣಕಾರಿ ಗಳಾಗಿ ಕೆಲಸ ಮಾಡಬೇಕೆ ಹೊರತು ಸರಕಾರದ ಮೇಲೆ ಜವಾಬ್ದಾರಿ ಹಾಕಿ ಕೊಡುವುದಲ್ಲ. ಬೇರೆ ಧರ್ಮದ ಹುಡುಗಿಯರನ್ನು ಮದುವೆಯಾಗುವವರಿಗೆ ರಕ್ಷಣೆ ಭದ್ರತೆ ಸಿಗಬೇಕು. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗೆ ಸಹಾಯ ಮಾಡಲು ಉಳ್ಳವರೊಂದಿಗೆ ಸೇತುವೆಯಾಗಿ ಕೆಲಸ ಮಾಡುವುದು ನಮ್ಮ ಧಾರ್ಮಿಕ ಮುಖಂಡರ ಕೆಲಸವಾಗಬೇಕು. 

ನಮ್ಮ ಶ್ರೀ ವಜ್ರದೇಹಿ ಸ್ವಾಮಿಗಳು ಹಾಗೂ ಬಂಜಾರ ಸಮಾಜದ ಸ್ವಾಮೀಜಿಗಳು ಯಾವ ರೀತಿ ಕೆಲಸ ಮಾಡುತ್ತಾರೆ,  ಅದೇ ರೀತಿ ಉಳಿದವರು ಮಾಡುವುದು ಅವಶ್ಯ.

Post a Comment

Previous Post Next Post