ನ್ ಫ್ರಾನ್ಸಿಸ್ಕೋ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ವೇತ ಭವನದ ಕೃತಕ ಬುದ್ಧಿಮತ್ತೆ (ಎಐ) ವಿಭಾಗದ ಹಿರಿಯ ಸಲಹೆಗಾರರನ್ನಾಗಿ ಭಾರತೀಯ ಅಮೆರಿಕನ್ ಉದ್ಯಮಿ ಶ್ರೀರಾಮ ಕೃಷ್ಣನ್​ರನ್ನು ಭಾನುವಾರ ನೇಮಿಸಿದ್ದಾರೆ. ಶ್ವೇತ ಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯ ಎಐ ಹಿರಿಯ ಸಲಹೆಗಾರರಾಗಿ ಶ್ರೀರಾಮ ಕೃಷ್ಣನ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಟ್ರಂಪ್ ಪ್ರಕಟಿಸಿದ್ದಾರೆ.

ಎಐ ವಿಭಾಗದ ಇನ್ನೂ ಹಲವು ನೇಮಕಗಳನ್ನು ಕೂಡ ಅವರು ಘೋಷಿಸಿದ್ದಾರೆ.

ಉದ್ಯಮಿ ಎಲಾನ್ ಮಸ್ಕ್​ರ ಆಪ್ತರಾಗಿರುವ ಕೃಷ್ಣನ್, ಒಬ್ಬ ಲೇಖಕರೂ ಆಗಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಅನುಭವಿ ಉದ್ಯಮಿಯಾಗಿರುವ ಕೃಷ್ಣನ್, ಮೈಕ್ರೋಸಾಫ್ಟ್, ಟ್ವಿಟರ್, ಫೇಸ್​ಬುಕ್, ಸ್ನಾಯಪ್ ಮತ್ತು ಯಾಹೂ ದಂಥ ಅಗ್ರ ಮಾಹಿತಿ ತಂತ್ರಜ್ಞಾನ ಕಂಪನಿಗಳಲ್ಲಿ ಸುದೀರ್ಘ ಕಾಲ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಅವರು ಶ್ವೇತ ಭವನದ ಎಐ ಮತ್ತು ಕ್ರಿಪ್ಟೋ ಝಾರ್ ಆಗಿ ಟ್ರಂಪ್​ರಿಂದ ನೇಮಕಗೊಂಡಿರುವ ಡೇವಿಡ್ ಓ ಸ್ಯಾಕ್ಸ್​ರೊಂದಿಗೆ ಕೆಲಸ ಮಾಡಲಿದ್ದಾರೆ. ಹಲವು ಮಹತ್ವದ ಹುದ್ದೆಗಳಿಗೆ ಭಾರತೀಯ ಮೂಲದ ಅಮೆರಿಕನ್ನರನ್ನು ಟ್ರಂಪ್ ನೇಮಿಸುತ್ತಿದ್ದು ಕೃಷ್ಣನ್​ರ ಆಯ್ಕೆ ಆ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.

ಅಮೆರಿಕದ ಸೇವೆ ಸಲ್ಲಿಸುವ ಗೌರವ: ಅಮೆರಿಕದ ಸೇವೆ ಸಲ್ಲಿಸುವ ಗೌರವ ದೊರಕಿರುವುದಕ್ಕೆ ತಮಗೆ ಸಂತಸವಾಗಿದೆ ಎಂದು ಪ್ರಮುಖ ಹುದ್ದೆಗೆ ನೇಮಕಗೊಂಡಿರುವ ಕೃಷ್ಣನ್ ಹೇಳಿದ್ದಾರೆ. ಎಐ ಕ್ಷೇತ್ರದಲ್ಲಿ ಅಮೆರಿಕದ ಮುಂಚೂಣಿ ನಾಯಕತ್ವವನ್ನು ಮುಂದುವರಿಸುವುದನ್ನು ಖಾತರಿಪಡಿಸಲು ಡೇವಿಡ್ ಸ್ಯಾಕ್ಸ್​ರೊಂದಿಗೆ ಕೆಲಸ ಮಾಡುವುದು ಗೌರವದ ವಿಷಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಸಮುದಾಯದವರು ಕೃಷ್ಣನ್ ನೇಮಕವನ್ನು ಸ್ವಾಗತಿಸಿದ್ದಾರೆ.

ಪರಿಹಾರಕ್ಕೆ ಸಲಹೆ: ಪ್ರಮುಖ ಇಂಟರ್​ನೆಟ್ ವೇದಿಕೆಗಳು ಮತ್ತು ಓಪನ್​ಎಐನ ಚಾಟ್​ಜಿಪಿಟಿಯಂಥ ಎಐ-ಪ್ರೇರಿತ ಮಾದರಿಗಳ ನಡುವಿನ ಸಂಘರ್ಷಗಳನ್ನು ಬಗೆಹರಿಸಲು ಆವಿಷ್ಕಾರಕ ಹಾಗೂ ತಂತ್ರಜ್ಞಾನ ಕೇಂದ್ರಿತ ಕಾರ್ಯತಂತ್ರವನ್ನು ಅನುಸರಿಸಬೇಕೆಂದು ಈ ಹಿಂದೆ ಕೃಷ್ಣನ್ ಸಲಹೆ ಮಾಡಿದ್ದರು.

Shami ಫಿಟ್ನೆಸ್​ ಬಿಗ್ಗೆ ಹೊರಬಿತ್ತು ಬಿಗ್​​ ಅಪ್ಡೇಟ್​; BGT ಅಲ್ಲ ಮುಂಬರುವ ಟೂರ್ನಿಗಳಲ್ಲಿ ಆಡೋದು ಡೌಟ್ ಎಂದ ಬಿಸಿಸಿಐ ​

ಮತ್ತೆ ಜೈಲು ಸೇರ್ತಾರಾ Allu Arjun? ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ಸಜ್ಜಾದ ಫೊಲೀಸರು

Post a Comment

Previous Post Next Post