ಧಾನಿ ಮನಮೋಹನ್ ಸಿಂಗ್ (Manmohan Singh) ಅವರನ್ನು ಪಾಕ್ ಹೀಯಾಳಿಸಿದ್ದಕ್ಕೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ವಿರುದ್ಧ ಗುಡುಗಿದ್ದರು. 2013ರಲ್ಲಿ ಪಾಕಿಸ್ತಾನ (Pakistan) ಪ್ರಧಾನಿ ನವಾಜ್ ಷರೀಫ್ (Nawaz Sharif) ಅವರನ್ನು ನರೇಂದ್ರ ಮೋದಿ (Narendra Modi) ಸಾರ್ವಜನಿಕವಾಗಿ ಟೀಕಿಸಿದ್ದರು.ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಪತ್ರಕರ್ತರ ಜತೆಗೆ ನಡೆಸಿದ ಸಭೆಯಲ್ಲಿ ಷರೀಫ್, ಪ್ರಧಾನಿ ಸಿಂಗ್ ಅವರನ್ನು `ಹಳ್ಳಿಯ ಮಹಿಳೆ' (ದೆಹತಿ ಔರತ್) ಎಂದು ಬಣ್ಣಿಸಿದ್ದರು ಎಂದು ಆಗ ವರದಿಯಾಗಿತ್ತು.
ಇದನ್ನು ಗಮನಿಸಿದ ಪ್ರಧಾನಿ ಮೋದಿ, ನನ್ನ ದೇಶದ ಪ್ರಧಾನಿಯನ್ನು ಹಳ್ಳಿಯ ಮಹಿಳೆ ಎಂದು ಸಂಬೋಧಿಸಲು ನಿಮಗೆ ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದರು. ದೇಶದೊಳಗೆ ನಾನು ಮನಮೋಹನ್ ಸಿಂಗ್ ಅವರನ್ನು ವಿರೋಧಿಸಬಹುದು. ವಿದೇಶದಲ್ಲಿ ಅವರಿಗೆ ಆಗುವ ಅವಮಾನವನ್ನು ಸಹಿಸುವುದಿಲ್ಲ. 1.2 ಶತಕೋಟಿ ಜನಸಂಖ್ಯೆಯ ಈ ರಾಷ್ಟ್ರವು ತನ್ನ ಪ್ರಧಾನಿಯ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಎಂದು ಗುಡುಗಿದ್ದರು.
ಇದೊಂದು ಗಂಭೀರ ವಿಷಯ ಎಂದು ಕಿಡಿಕಾರಿದ್ದರು.
Post a Comment