ವಿಧಾನ ಪರಿಷತ್ ಅಧಿವೇಶನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ (Lakshmi hebbalkar) ವಿರುದ್ಧ ಸಿಟಿ ರವಿ (CT ravi) ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Cm siddaramaih) ಆಪ್ತರು ಅಂತರ ಕಾಯ್ದುಕೊಡಿದ್ದಾರೆ ಎನ್ನಲಾಗ್ತಿದೆ.
ರಾಜ್ಯ ಸರ್ಕಾರದ ಪ್ರಭಾವಿ ಸಚಿವರಾದ ಸತೀಶ್ ಜಾರಕಿಹೊಳಿ (Satish jarakiholi), ಮಹಾದೇವಪ್ಪ, ತಿಮ್ಮಾಪುರ, ಈಶ್ವರ ಖಂಡ್ರೆ, ಸೇರಿದಂತೆ ಹಲವು ಸಚಿವರು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಈಗಾಗಲೇ ಸಿ.ಟಿ. ರವಿಯನ್ನ ಪೊಲೀಸರು ನಡೆಸಿಕೊಂಡ ರೀತಿ ಬಗ್ಗೆ ಸರ್ಕಾರಕ್ಕೆ ಮುಜುಗರ ಆಗಿದೆ. ಕೆಲವು ಸಚಿವರು ಪೊಲೀಸರಿಗೆ ಕರೆ ಮಾಡಿ, ಮಾರ್ಗದರ್ಶನ ನೀಡಿದ್ರು ಎಂದೂ ಕೂಡ ಸಿಟಿ ರವಿ ಆರೋಪಿಸಿದ್ದಾರೆ.
ಹೀಗಾಗಿ ಅನಾವಶ್ಯಕ ಗೊಂದಲ ಬೇಡ ಎಂಬ ಲೆಕ್ಕಾಚಾರದಲ್ಲಿ ಸಿಎಂ ಆಪ್ತ ಸಚಿವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗ್ತಿದೆ.
Post a Comment