ಗ್ಲಾದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗುತ್ತಿದ್ದು, ಚೀನಾ, ಪಾಕಿಸ್ತಾನದಂತಹ ದೇಶಗಳು ಹತ್ತಿರವಾಗುತ್ತಿದೆ, ಅಲ್ಲದೇ ಭಾರತದೊಂದಿಗೆ ಸಂಬಂಧ ಕೂಡ ಬಿರುಕು ಬಿಡುತ್ತದೆ, ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಾಂಗ್ಲಾ ಭಾರತದ ಎದುರು ಮಂಡಿಯುರಿದ್ದು, ಸಹಾಯ ಮಾಡುವಂತೆ ಅಂಗಲಾಚುತ್ತಿದ್ದಾರೆ.

ಸರ್ಕಾರ ಪತನಗೊಂಡ ಬಳಿಕ ಬಾಂಗ್ಲಾ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಆಹಾರ ಉತ್ಪನ್ನಗಳ ಪೂರೈಕೆ, ಹಣದುಬ್ಬರ ಕಾರಣದಿಂದ ಒಂದು ಹೊತ್ತು ಊಟಕ್ಕೂ ಪರದಾಡುವಂತಾಗಿದೆ. ಈ ಹಿನ್ನಲೆ ನಮಗೆ ಸಹಾಯ ಮಾಡಿ ಎಂದು ಭಾರತದ ಮುಂದೆ ಬಾಂಗ್ಲಾದೇಶ ಅಂಗಲಾಚಿ ನಿಂತಿದೆ.

ಬಾಂಗ್ಲಾದ ಈ ಮನವಿಯನ್ನು ಪುರಸ್ಕರಿಸಿದ ಭಾರತ ಸಹಾಯ ಮಾಡುವುದಾಗಿ ತಿಳಿಸಿದ್ದು, ಐವತ್ತು ಸಾವಿರ ಟನ್ ಅಕ್ಕಿಯನ್ನು ಖರೀದಿಸಲು ಬಾಂಗ್ಲಾ ಮುಂದಾಗಿದೆ. ಪ್ರತಿ ಟನ್‌ ಅಕ್ಕಿಗೆ 456.67 ಅಮೆರಿಕನ್‌ ಡಾಲರ್‌ ಬೆಲೆಯನ್ನು ವಿಧಿಸಲಾಗಿದ್ದು, ಛತ್ತೀಸ್‌ಗಡ ಮೂಲದ ಬಗಾಡಿಯ ಬ್ರದರ್ಸ್‌ ಪ್ರೈವೆಟ್‌ ಲಿಮಿಟೆಡ್‌ ಮೂಲಕ ಅಕ್ಕಿಯನ್ನು ಖರೀದಿಸಲು ಬಾಂಗ್ಲಾ ಮುಂದಾಗಿದೆ.

ಬಾಂಗ್ಲಾ ಆಹಾರ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಬಾಂಗ್ಲಾದೇಶವು 7 ಲಕ್ಷದ 42 ಸಾವಿರ ಟನ್ ಅಕ್ಕಿ ಸೇರಿ 1.1148 ಮಿಲಿಯನ್ ಟನ್ ಆಹಾರ ದಾಸ್ತಾನನ್ನು ಹೊಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2.625 ಲಕ್ಷ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಂಡಿದ್ದು, ಇದರಲ್ಲಿ 54,170 ಟನ್ ಅಕ್ಕಿಯೂ ಸೇರಿದೆ ಎನ್ನಲಾಗಿದೆ.

Post a Comment

Previous Post Next Post