ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ 6 ವಿಭಾಗಗಳಲ್ಲಿ ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಉಪವಿಭಾಗಗಳ ಅಭಿಯಂತರರು ಹಾಗೂ ವಲಯದ ನಗರ ಯೋಜನೆ ಅಭಿಯಂತರರು ನಕ್ಷೆ ಮಂಜೂರಾತಿಗೆ ವ್ಯತಿರಿಕ್ತವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ, ನಗರ ಯೋಜನೆ ಶಾಖೆಯಿಂದ ಹಾಗೂ ಉಪವಿಭಾಗದ ವತಿಯಿಂದ ಬಿಬಿಎಂಪಿ ಕಾಯ್ದೆ 2020ರ ಅಡಿ ನೋಟೀಸ್‌ಗಳನ್ನು ಜಾರಿ ಮಾಡಲಾಗಿರುತ್ತದೆ.ತದನಂತರ ಮಾನ್ಯ ಮುಖ್ಯ ಆಯುಕ್ತರು, ಹಾಗೂ ಅಫೀಲು ಮೇಲ್ಮನವಿ ಪ್ರಾಧಿಕಾರ ಬಿಬಿಎಂಪಿ ರವರು ಮೇಲ್ಮನವಿಗಳನ್ನು ವಜಾಗೊಳಿರುವುದರಿಂದ ಮಾನ್ಯ ಮುಖ್ಯ ಆಯುಕ್ತರು, ಬಿ.ಬಿ.ಎಂ.ಪಿ ಮತ್ತು ಮಾನ್ಯ ವಲಯ ಆಯುಕ್ತರು (ಪೂರ್ವ) ವಲಯ ಅವರ ಆದೇಶದ ರೀತ್ಯಾ ದಿನಾಂಕ:04/01/2025 ರಿಂದ ಈವರೆಗೂ 16 ಕಟ್ಟಡಗಳು ಹಾಗೂ ಅವುಗಳ ಹೆಚ್ಚುವರಿ ಅಂತಸ್ತುಗಳಿಗೆ ಬೀಗ ಮುದ್ರೆ ಹಾಕಲಾಗಿರುತ್ತದೆ ಎಂದು ತಿಳಿಸಿದೆ.
'ಡಿನ್ನರ್ ಪಾಲಿಟಿಕ್ಸ್' ಬಗ್ಗೆ 'ಡಿಸಿಎಂ ಡಿ.ಕೆ ಶಿವಕುಮಾರ್' ಹೇಳಿದ್ದೇನು ಗೊತ್ತಾ?
Post a Comment