ಬೆಂಗಳೂರು ಅರಮನೆ ವಶಪಡಿಸಿಕೊಂಡಿರುವ 1997ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ ಯ ಸಿಂಧುತ್ವ ಎತ್ತಿ ಹಿಡಿಯಲು ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಮೈಸೂರು ರಾಜಮನೆತನಕ್ಕೆ ರಾಜ್ಯ ಸರ್ಕಾರದಿಂದ ಕಿರುಕುಳ : ಹೆಚ್‌ಡಿಕೆ ಗಂಭೀರ ಆರೋಪ
ಅರಮನೆ ಮೈದಾನದ ಮಾಲೀಕತ್ವ ಕುರಿತ ಮೂಲ ದಾವೆ ಇತ್ಯರ್ಥವಾದ ಬಳಿಕ ಟಿಡಿಆರ್ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಕುರಿತು ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಅರ್ಜಿ ಪರಿಗಣಿಸಿ ತುರ್ತು ವಿಚಾರಣೆಗೆ ಕೈಗೆತ್ತಿಕೊಂಡು ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಕೋರಲು ತೀರ್ಮಾನಿಸಲಾಗಿದೆ. ಅಲ್ಲದೆ ಇದೇ ಪ್ರಕರಣದಲ್ಲಿ 2001ರಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
3 ದಶಕಗಳ ವಿವಾದ
* 1996-9700 ರಾಮಯ್ಯ ಡಿಸಿಎಂ ಆಗಿದ್ದಾಗ ಬೆಂಗಳೂರು ಅರಮನೆ, ಮೈಸೂರು ಅರಮನೆ ಸ್ವಾಧೀನಕ್ಕೆ ಕಾಯ್ದೆ ಅಂಗೀಕಾರ
* ಹೈಕೋರ್ಟ್‌ಲ್ಲಿ ಸರ್ಕಾ ರಕ್ಕೆ ಜಯ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ರಾಜಮನೆತನ. 2001 ರಲ್ಲಿ ಯಥಾಸ್ಥಿತಿಗೆ ಸುಪ್ರೀಂ ಆದೇಶ
* ಬೆಂಗಳೂರಿನ ಬಳ್ಳಾರಿ, ಜಯಮಹಲ್ ರಸ್ತೆಗಳ ಅಗಲೀಕರಣಕ್ಕೆ ರಾಜ ಮನೆತನಕ್ಕೆ ಸೇರಿದ 15.7 ಎಕರೆ ಜಾಗವನ್ನು ಬಳಸಿದ್ದ ರಾಜ್ಯ ಸರ್ಕಾರ
* ಟಿಡಿಆರ್ ಪರಿಹಾರ ರೂಪ ದಲಿ 3011 ಕೋಟಿ ರುಪಾಯಿ ನೀಡಲು 2014ರಲ್ಲಿ ಹೈಕೋರ್ಟ್ ತೀರ್ಪು.
* ಸರ್ಕಾರದ ಮೇಲ್ಮನವಿ ವಜಾ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ರಾಜಮನೆತನ. ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್
Post a Comment