ನ್ನಾವರ (ಜ.20): ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ನಡುವೆಯೇ, ಉತ್ತರ ಕನ್ನಡದ ಹೊನ್ನಾವರದಲ್ಲಿ ಅದಕ್ಕಿಂತ ಭೀಕರ ಪ್ರಾಣಿಹಿಂಸೆ ವರದಿಯಾಗಿದೆ. ಹೊನ್ನಾವರದ ಸಾಲ್ಕೋಡಿನಲ್ಲಿ ಗರ್ಭಧರಿಸಿದ್ದ ಹಸುವನ್ನು ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಲಾಗಿದೆಹಸುವಿನ ತಲೆ ಹಾಗೂ ಕಾಲುಗಳನ್ನು ಕಡಿಯಲಾಗಿದ್ದು, ದೇಹವನ್ನೂ ಮಾತ್ರವೇ ಮಾಂಸಕ್ಕಾಗಿ ಹೊತ್ತೊಯ್ದಿದ್ದಾರೆ. ಹಸುವಿನ ಹೊಟ್ಟೆಯನ್ನು ಕೊಯ್ದು ಅದರಲ್ಲಿದ್ದ ಚಿಕ್ಕ ಕರುವನ್ನು ಎಸೆದುಹೋಗಲಾಗಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ಸರ್ಕಾರದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಮೊನ್ನೆ ಆಕಳ ಕೆಚ್ಚಲು ಕತ್ತರಿಸಿದಾಗ ಆತನನ್ನು ನಮ್ಮ ಗೃಹ ಸಚಿವರೇ ಮಾನಸಿಕ ಅಸ್ವಸ್ಥ ಎಂದಿದ್ದರು. ಮಾನಸಿಕ ಅಸ್ವಸ್ಥ ಆತ ಅಲ್ಲ, ನಮ್ಮ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ತಮ್ಮ ತಲೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಿಎಂ ಮತ್ತು ಗೃಹ ಸಚಿವರು ಆಸ್ಪತ್ರೆಯಲ್ಲಿ ತಮ್ಮ ಮಾನಸಿಕತೆ ಚೆಕ್ ಮಾಡಿಕೊಳ್ಳಬೇಕು. ಇಂತಹ ಕೃತ್ಯಗಳು ರಾಜ್ಯದಲ್ಲಿ ಆಗುವುದಕ್ಕೆ ಕಾರಣ ಹೇಡಿ ಸಿಎಂ ಮತ್ತು ಹೇಡಿ ಗೃಹ ಸಚಿವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಕೃತ್ಯ ನಡೆದಾಗ ನಿಮ್ಮಿಂದ ನಾವು ಪರಿಹಾರ ಬಯಸಲ್ಲ. ಯಾರೇ ಎಷ್ಟೇ ಪರಿಹಾರ ಕೊಟ್ಟರೂ ಸ್ವೀಕರಿಸದಂತೆ ಗೋ ಮಾಲಕರಿಗೆ ಹೇಳಿದ್ದೇನೆ. ನೀವು ಇಲ್ಲಿಗೆ ಬಂದು ಪರಿಹಾರ ಕೊಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿನ ಗೋವುಗಳಿಗೆ ರಕ್ಷಣೆ ಕೊಡುವ ಕೆಲಸ ಮಾಡಿ. ನಾವೆಲ್ಲರೂ ಒಟ್ಟಾಗಿ ಗೋ ಮಾಲಕರಿಗೆ ಪರಿಹಾರ ಕೊಡುತ್ತೇವೆ. ಕಳ್ಳರಿಗೆ ಪೊಲೀಸರೆಂದರೆ ಭಯ ಇಲ್ಲದಂತಾಗಿದೆ. ಪೊಲೀಸರ ಬಗ್ಗೆ ಭಯ ಇದ್ರೆ ಇಂತಹ ಕೃತ್ಯ ಆಗಲ್ಲ. ಕಳ್ಳರಿಗೆ ಪೊಲೀಸರೇ ಮಾಹಿತಿ ಕೊಟ್ಟು ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಗರ್ಭ ಧರಿಸಿದ ಹಸುವನ್ನು ಕಡಿದ ದುರುಳರು; ಕರು, ಕತ್ತು, ಕಾಲು ಬಿಟ್ಟು ದೇಹ ಕದ್ದರು!
ಕೆಲವು ಪ್ರಕರಣಗಳು ನನ್ನ ಗಮನಕ್ಕೂ ಬಂದಿದೆ. ಪೊಲೀಸರ ಸಹಕಾರದಿಂದಲೇ ಕಳ್ಳರು ಇಂತಹ ಕೃತ್ಯ ಮಾಡುತ್ತಿದ್ದಾರೆ. ಯಾವುದಾದರೂ ಪ್ರಕರಣದಲ್ಲಿ ಕಳ್ಳ ಠಾಣೆಗೆ ಬಂದರೆ ಆತನನ್ನು ಬೆದರಿಸಲ್ಲ.ಠಾಣೆಗೆ ಬಂದ ಕಳ್ಳರ ಜತೆ ಪೊಲೀಸರು ದೋಸ್ತಿ ಮಾಡಿಕೊಳ್ತಾರೆ. ಮುಂದೆ ಯಾವುದೇ ಕೃತ್ಯ ನಡೆಯುತ್ತಿದ್ದರೆ ಇಬ್ಬರೂ ದೋಸ್ತಿಯಾಗಿ ನಿಭಾಯಿಸ್ತಾರೆ. ಪೊಲೀಸರು ಇನ್ನಾದ್ರೂ ಎಚ್ಚೆತ್ಕೊಂಡು ಕೆಲಸ ಮಾಡಬೇಕಿದೆ. ತಪ್ಪು ಮಾಡಿದವರಿಗೆ ಪೊಲೀಸರೆಂದರೆ ಭಯ ಹುಟ್ಟಬೇಕು. ಸಿಎಂ, ಹೋಂ ಮಿನಿಸ್ಟರ್ ಹಾಗೂ ಪೊಲೀಸರ ವಿರುದ್ಧ ಬಿಜೆಪಿ ಶಾಸಕ ದಿನಕರ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ!.
Post a Comment