ಮಹಿಳಾ ಕ್ರಿಕೆಟ್‌ನಲ್ಲಿ, ಭಾರತ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ 3 ನೇ ODI ನಲ್ಲಿ ಐರ್ಲೆಂಡ್ ಅನ್ನು 304 ರನ್‌ಗಳಿಂದ ಸೋಲಿಸುವ ಮೂಲಕ ತನ್ನ ಅತಿದೊಡ್ಡ ಗೆಲುವನ್ನು ದಾಖಲಿಸಿದೆ. ಭಾರತ 3- ಶೂನ್ಯದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಆತಿಥೇಯರು 436 ರನ್‌ಗಳ ಬೃಹತ್ ಗುರಿಯನ್ನು ನೀಡಿದ್ದರು. ಗುರಿ ಬೆನ್ನಟ್ಟಿದ ಐರ್ಲೆಂಡ್ 31.4 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮೊದಲು, ವುಮೆನ್ ಇನ್ ಬ್ಲೂ ತಮ್ಮ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 435 ರನ್‌ಗಳ ಬೃಹತ್ ಮೊತ್ತವನ್ನು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು, ಇದು ಅವರ ಗರಿಷ್ಠ ODI ಮೊತ್ತವಾಗಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಗರಿಷ್ಠ ಮೊತ್ತವಾಗಿದೆ. ಭಾರತದ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಇಬ್ಬರೂ ಶತಕಗಳನ್ನು ಗಳಿಸಿದರು. ರಾವಲ್ 129 ಎಸೆತಗಳಲ್ಲಿ 154 ರನ್ ಗಳಿಸುವ ಮೂಲಕ ತನ್ನ ಚೊಚ್ಚಲ ODI ಶತಕವನ್ನು ಸಿಡಿಸಿದರು. ಕೇವಲ 80 ಎಸೆತಗಳಲ್ಲಿ 135 ರನ್ ಗಳಿಸುವ ಮೂಲಕ ಮಂಧಾನಾ ತನ್ನ 10ನೇ ಶತಕವನ್ನು ದಾಖಲಿಸಿದರು, ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ವೇಗದ ODI ಶತಕವನ್ನು ಗಳಿಸಿದರು. ಈ ಜೋಡಿ ಕೇವಲ 26.4 ಓವರ್‌ಗಳಲ್ಲಿ 231 ರನ್‌ಗಳ ಆಕರ್ಷಕ ಜೊತೆಯಾಟವನ್ನು ಸಹ ನಿರ್ಮಿಸಿತು. ರಿಚಾ ಘೋಷ್ 42 ಎಸೆತಗಳಲ್ಲಿ 59 ರನ್ ಕೊಡುಗೆ ನೀಡಿದರು. ಐರ್ಲೆಂಡ್ ಪರ ಒರ್ಲಾ ಪ್ರೆಂಡರ್‌ಗಾಸ್ಟ್ ಎರಡು ವಿಕೆಟ್ ಪಡೆದರು.
Post a Comment