31 ಜಿಲ್ಲೆಗಳ ಪೈಕಿ 26 ಜಿಲ್ಲೆಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು, ಕಲಬುರಗಿ, ಬೀದರ್, ಹಾವೇರಿ, ವಿಜಯಪುರದಲ್ಲಿ ಪುರುಷ ಮತದಾರರು ಹೆಚ್ಚಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾದ ಪಟ್ಟಿಯಲ್ಲಿ 30,999 ಪುರುಷ ಮತದಾರರು, 72,754 ಮಹಿಳಾ ಮತದಾರರು ಸೇರಿದಂತೆ ಒಟ್ಟು 1,03,776 ಮತದಾರರು ಮತದಾನದ ಹಕ್ಕು ಪಡೆದಿದ್ದಾರೆ.
ಇನ್ನು 18-19 ವರ್ಷದ ಯುವಮತದಾರರ ಸಂಖ್ಯೆಯು 8,02,423 ರಷ್ಟು ಹೊಂದಿದೆ. ಕರಡು ಪಟ್ಟಿಗೆ ಹೋಲಿಸಿದರೆ ಪಟ್ಟಿಯಲ್ಲಿ 1,21,226 ಮತದಾರರು ಹೆಚ್ಚಳವಾಗಿದ್ದರೆ 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಸಂಖ್ಯೆಯ 6,36,551, 100 ವರ್ಷಕ್ಕಿಂ ಮೇಲ್ಪಟ್ಟ ಮತದಾರರ ಸಂಖ್ಯೆ 22,552 ಆಗಿದ್ದು, ಅಂಗವಿಕಲ ಮತದಾರರ ಸಂಖ್ಯೆ 6,28,554 ಇದ್ದಾರೆ ಎಂದು ಚುನಾವಣಾ ಕಚೇರಿ ಮಾಹಿತಿ ನೀಡಿದೆ.
Post a Comment