aif Ali Khan hospitalised : ಬಾಲಿವುಡ್ ಹೀರೋ ಸೈಫ್ ಅಲಿ ಖಾನ್ ( Saif Ali Khan ) ಮೇಲೆ ಚಾಕುವಿನಿಂದ ಹಲ್ಲೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕುಟುಂಬಸ್ಥರು ಕೂಡಲೇ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡಿದ್ದ ಸೈಪ್​​ ಅಲಿಖಾನ್​ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಕಳ್ಳ ಸೈಪ್​ ಅಲಿಖಾನ್​ ಮೇಲೆ 2 ರಿಂದ 3 ಬಾರಿ ಹಲ್ಲೆ ಮಾಡಿದ್ದಾನೆ. ಹೀಗಾಗಿ ಅವರಿಗೆ ಆರು ಗಾಯಗಳಾಗಿದ್ದು, ಎರಡು ಕಡೆ ತುಂಬಾನೆ ಗಂಭೀರವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಧ್ಯರಾತ್ರಿ ಸೈಫ್‌ ಅಲಿಖಾನ್ ಮನೆ ಒಳಗೆ ನುಗ್ಗಿದ ದುಷ್ಕರ್ಮಿಗಳು ( Saif Ali Khan attacked during attempted robbery at Mumbai home )

ನಡೆದಿದ್ದೇನು?: ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಕಳ್ಳ ಮನೆಗೆ ಪ್ರವೇಶಿಸಿದನ್ನು ಅರಿತುಕೊಂಡ ಮನೆಯ ಸಿಬ್ಬಂದಿ ಎಚ್ಚರಗೊಂಡರು. ಮನೆಯಲ್ಲಿ ಗಲಾಟೆಯಿಂದ ನಿದ್ದೆಯಿಂದ ಎದ್ದ ಸೈಫ್ ಕಳ್ಳನನ್ನು ಹಿಡಿಯಲು ಯತ್ನಿಸಿದ್ದಾರೆ. ಇದೇ ವೇಳೆ ಕಳ್ಳ ಸೈಫ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ.

ಈ ಘಟನೆ ಬಳಿಕ ಕಳ್ಳ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿಯಲು ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಶ್ರಮಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಪತ್ನಿ, ನಟಿ ಕರೀನಾ ಕಪೂರ್ ಖಾನ್ ಮತ್ತು ಅವರ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಶೀಘ್ರದಲ್ಲೇ ಪ್ರಕರಣದ ವಿವರಗಳನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಮನೆಯ ಸುತ್ತ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಹೃದಯಾಘಾತದಿಂದ ನಟ ಸುದೀಪ್ ಪಾಂಡೆ ನಿಧನ: ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದ Sudip Pandey

Post a Comment

Previous Post Next Post