ತಮಿಳು ಕವಿ ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ತಿರುವಳ್ಳುವರ್ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಖ್ಯಾತ ತಮಿಳು ಕವಿ ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸಿದರು. ತಿರುವಳ್ಳುವರ್ ಅವರ ವಚನಗಳು ತಮಿಳು ಸಂಸ್ಕೃತಿಯ ಸಾರ ಮತ್ತು ದೇಶದ ತಾತ್ವಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಧಾನಿ ಹೇಳಿದ್ದಾರೆ. ತಿರುವಳ್ಳುವರ್ ಅವರ ಬೋಧನೆಗಳು ಸದಾಚಾರ, ಸಹಾನುಭೂತಿ ಮತ್ತು ನ್ಯಾಯವನ್ನು ಒತ್ತಿಹೇಳುತ್ತವೆ ಎಂದು ಶ್ರೀ ಮೋದಿ ಹೇಳಿದರು. ಕವಿಯ ಸಮಯಾತೀತವಾದ ಕೃತಿ ತಿರುಕ್ಕುರಲ್ ಸ್ಫೂರ್ತಿಯ ದಾರಿದೀಪವಾಗಿ ನಿಂತಿದೆ ಮತ್ತು ವ್ಯಾಪಕವಾದ ವಿಷಯಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
Post a Comment