ಮಹಾಕುಂಭದಲ್ಲಿ ಭಾರತದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರದರ್ಶಿಸುವ ಕಲಾಗ್ರಾಮ
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಇಂದು ಸಂಜೆ ಪ್ರಯಾಗರಾಜ್‌ನ ಮಹಾಕುಂಭ ನಗರದಲ್ಲಿ ಕಲಾಗ್ರಾಮವನ್ನು ಉದ್ಘಾಟಿಸಿದರು. ಸಂಸ್ಕೃತಿ ಸಚಿವಾಲಯವು ಕಲಾಗ್ರಾಮವನ್ನು ರಚಿಸಿದ್ದು ಅದು ದೇಶದ ಶ್ರೀಮಂತ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ.
ಉದ್ಘಾಟನೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀ ಶೇಖಾವತ್, ಕಲಾಗ್ರಾಮವು ಕರಕುಶಲ, ಪಾಕಪದ್ಧತಿ ಮತ್ತು ಸಂಸ್ಕೃತಿಯ ಮೂಲಕ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುತ್ತದೆ. ಮುಂದಿನ 45 ದಿನಗಳಲ್ಲಿ 14 ಸಾವಿರದ ಆರು ನೂರಕ್ಕೂ ಹೆಚ್ಚು ಕಲಾವಿದರು ಕಲಾಗ್ರಾಮದಲ್ಲಿ ಪ್ರದರ್ಶನ ನೀಡಲಿದ್ದಾರೆ ಎಂದರು. ಭಕ್ತರು ಮತ್ತು ಪ್ರವಾಸಿಗರು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಇದು ಅವಕಾಶ ನೀಡುತ್ತದೆ ಎಂದು ಅವರು ಹೇಳಿದರು.
ಮಹಾಕುಂಭವು ಏಕತೆ ಮತ್ತು ಭಕ್ತಿಯ ಸಂಕೇತವಾಗಿದೆ ಎಂದು ಶೇಖಾವತ್ ಹೇಳಿದರು. ಮಹಾಕುಂಭದ 45 ದಿನಗಳಲ್ಲಿ ಸುಮಾರು 45 ಕೋಟಿ ಭಕ್ತರು ಮೇಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರು. ಮಹಾಕುಂಭದಲ್ಲಿ 15 ಲಕ್ಷ ವಿದೇಶಿ ಪ್ರವಾಸಿಗರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
Post a Comment