ಜಾಬ್ ವಿರೋಧಿಸಿ ಇರಾನ್‌ನಲ್ಲಿ ಲಕ್ಷಾಂತರ ಮಂದಿ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ಮಾಡಿದ್ದು ನೆನಪಿರಬಹುದು. ಬುರ್ಖಾ ಧರಿಸಿಲ್ಲ ಎನ್ನುವ ಕಾರಣಕ್ಕೆ ಯುವತಿಯೊಬ್ಬಳ ಹತ್ಯೆಯ ಬೆನ್ನಲ್ಲೇ ರೊಚ್ಚಿಗೆದ್ದಿದ್ದ ಮಹಿಳೆಯರು ಬೀದಿಗಿಳಿದು ಬುರ್ಖಾ ಎಸೆದು ಭಾರಿ ಪ್ರತಿಭಟನೆ ಮಾಡಿದ್ದರು.

ಅದರ ಬೆನ್ನಲ್ಲೇ ಇದೀಗ ಇನ್ನೊಂದು ದೇಶದಲ್ಲಿ ಬುರ್ಖಾ ಸಂಪೂರ್ಣ ಬ್ಯಾನ್‌ ಮಾಡಲಾಗಿದೆ. ಕೆಲವೊಂದು ಸಮಯಗಳಲ್ಲಿ ಮಾತ್ರ ಬುರ್ಖಾ ಧರಿಸಲು ಅವಕಾಶ ಕಲ್ಪಿಸಲಾಗಿದ್ದು, ಉಳಿದ ಸಂದರ್ಭಗಳಲ್ಲಿ ಬುರ್ಖಾ ಧರಿಸಿದರೆ ದಂಡ ವಿಧಿಸಲು ಸರ್ಕಾರದ ಮುಂದಾಗಿದೆ!

ಇಂಥದ್ದೊಂದು ನಿಯಮ ಜಾರಿಗೆ ಬಂದಿರುವುದು ಸ್ವಿಜರ್ಲೆಂಡ್​ನಲ್ಲಿ. 2025ರ ಹೊಸ ವರ್ಷದ ಜನವರಿ ಒಂದರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿಷೇಧ ಮಾಡಲಾಗಿದೆ. ಬಹು ಸಂಖ್ಯಾತ ಮಹಿಳೆಯರು ಬುರ್ಖಾ ನಿಷೇಧದ ಪರವಾಗಿ ಮತ ಚಲಾಯಿಸಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ನಿಯಮವನ್ನು ಜಾರಿಗೆ ತರಲಾಗಿದೆ. ಈ ಕಾನೂನು ಉಲ್ಲಂಘಿಸಿದವರಿಗೆ 1 ಸಾವಿರ ಸ್ವಿಸ್ ಫ್ರಾಂಕ್‌ಗಳ ದಂಡ ವಿಧಿಸಲಾಗುವುದು ಎಂದು ನಿಯಮದಲ್ಲಿ ಹೇಳಲಾಗಿದೆ.

ಆದಿಲ್​ ಖಾನ್​ನಿಂದ ರಾಖಿಗೆ ಬಂಧನದ ಭೀತಿ: ಬುರ್ಖಾದಲ್ಲಿ ಮೊದಲ ಗಂಡ ರಿತೇಶ್​ನ ಆಶ್ರಯ ಪಡೆದ ನಟಿ ಹೇಳಿದ್ದೇನು?

ಅಷ್ಟಕ್ಕೂ ಸ್ವಿಜರ್ಲೆಂಡ್​ನಲ್ಲಿ ಇಂಥದ್ದೊಂದು ಕ್ರಾಂತಿ ಶುರುವಾದದ್ದು ಈ ವರ್ಷ ಅಲ್ಲ. ಬದಲಿಗೆ ಬುರ್ಖಾ ನಿಷೇಧದ ಕುರಿತಂತೆ 2021ರಲ್ಲಿ ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿತ್ತು. ಇರಾನ್‌ನಲ್ಲಿ ಹಿಜಾಬ್‌, ಬುರ್ಖಾ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಸ್ವಿಜರ್ಲೆಂಡ್‌ನಲ್ಲಿಯೂ ಇಂಥದ್ದೊಂದು ಜನಾಭಿಪ್ರಾಯ ಸಂಗ್ರಹವಾಗಿತ್ತು. ಮುಖಕ್ಕೆ ಮುಸುಕು ಧರಿಸುವುದನ್ನು ನಿಷೇಧಿಸುವ ಬಗ್ಗೆ ಮತದಾನ ನಡೆಸಲಾಗಿತ್ತು. ಕುತೂಹಲದ ವಿಷಯ ಏನೆಂದರೆ, ಬುರ್ಖಾ ನಿಷೇಧದ ಪರವಾಗಿ ಶೇಕಡಾ 51.21ರಷ್ಟು ಜನರು ಮತ ಚಲಾಯಿಸಿದ್ದರೆ, ಬುರ್ಖಾ ನಿಷೇಧದ ವಿರುದ್ಧ ಶೇ. 48.8ರಷ್ಟು ಜನರು ಮತ ಚಲಾಯಿಸಿದ್ದರು. ಆದರೆ ಬಹುಮತವು ಬುರ್ಖಾ ವಿರುದ್ಧವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ಜಾರಿಗೆ ತರಲಾಗಿದೆ.

ಈ ಹೊಸ ನಿಯಮದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮೂಗು, ಬಾಯಿ, ಕಣ್ಣು ಮುಚ್ಚುವುದಕ್ಕೆ ನಿಷೇಧವಿದೆ. ಖಾಸಗಿ ಸ್ಥಳಗಳಿಗೂ ಈ ನಿಯಮ ಅನ್ವಯ ಆಗಲಿದೆ. ಆದರೆ ಕೆಲವೊಂದು ಸ್ಥಳಗಳಿಗೆ ವಿನಾಯಿತಿ ನೀಡಲಾಗಿದೆ. ವಿಮಾನ, ರಾಜತಾಂತ್ರಿಕ ಪ್ರದೇಶಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ. ಅದೇ ರೀತಿ, ಪೂಜಾ ಸ್ಥಳ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಮುಖ ಮುಚ್ಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ, ಸುರಕ್ಷತಾ ಕಾರಣಗಳಿಂದ ಮುಖ ಮುಚ್ಚಿಕೊಳ್ಳಲು ಕೂಡ ಸಮ್ಮತಿ ಸೂಚಿಸಲಾಗಿದೆ. ಮಾತ್ರವಲ್ಲದೇ, ಸೋಂಕು, ಕಾಯಿಲೆಯಿದ್ದರೆ ಮಾಸ್ಕ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ಮತ್ತು ಸೈನಿಕರಿಗೆ ಗ್ಯಾಸ್ ಮಾಸ್ಕ್ ಧರಿಸಲು ಅನುಮತಿ ಇದೆ. ಇದನ್ನು ಹೊರತು ಪಡಿಸಿದರೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಹಾಕಿಕೊಂಡರೆ ದಂಡ ವಿಧಿಸಲಾಗುಗುವುದು. ಸ್ವಿಜರ್ಲೆಂಡ್‌ನ 86 ಲಕ್ಷ ಜನಸಂಖ್ಯೆಯಲ್ಲಿ ಸುಮಾರು ಶೇ. 5ರಷ್ಟು ಮುಸ್ಲಿಮರಿದ್ದಾರೆ. ಇಲ್ಲಿರುವ ಮುಸ್ಲಿಂ ಮಹಿಳೆಯರ ಪೈಕಿ ಶೇಕಡಾ 30ರಷ್ಟು ಮಂದಿ ಮಾತ್ರ ಬುರ್ಖಾ ಧರಿಸುತ್ತಾರೆ ಎನ್ನಲಾಗಿದೆ.

ಮಿನಿ ಸ್ಕರ್ಟ್​ ಬಿಟ್ಟು ಬುರ್ಖಾಧಾರಿಯಾದ ಗಗನಸಖಿ ರಿಧಿ ಜಾಧವ್​- ಬಿಗ್​ಬಾಸ್​ ಅದ್ನಾನ್​ ಶೇಖ್​​ ಚಪ್ಪಲಿ ಮೇಲೆ ನೆಟ್ಟಿಗರ ಕಣ್ಣು!

Post a Comment

Previous Post Next Post