ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ಸಂಪೂರ್ಣ ಭಾರತೀಯ ವಾಹನ ಮತ್ತು ಚಲನಶೀಲ ಪರಿಸರ ವ್ಯವಸ್ಥೆಯನ್ನು ಒಂದೇ ಸೂರಿನಡಿ ಒಂದುಗೂಡಿಸುತ್ತದೆ
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ನವದೆಹಲಿಯ ಭಾರತ್ ಮಂಟಪದಲ್ಲಿ 22 ವಿವಿಧ ಬ್ರಾಂಡ್‌ಗಳಿಂದ 56 ಹೊಸ ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ವಿವಿಧ ಸುಧಾರಿತ ವಾಹನಗಳು, ಅತ್ಯಾಧುನಿಕ ಚಲನಶೀಲತೆ ಪರಿಹಾರಗಳು ಮತ್ತು ಸೂಪರ್ ಬೈಕ್‌ಗಳು, ಕಾರುಗಳು, ಬಸ್‌ಗಳು ಮತ್ತು ಆಂಬ್ಯುಲೆನ್ಸ್‌ಗಳಿಂದ ಹಿಡಿದು ಇತ್ತೀಚಿನ ಘಟಕಗಳನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಈ ಜಾಗತಿಕ ಎಕ್ಸ್‌ಪೋಗೆ ಚಾಲನೆ ನೀಡಿದ್ದರು.
ಆರು ದಿನಗಳ ಎಕ್ಸ್‌ಪೋ ನವದೆಹಲಿಯ ಭಾರತ್ ಮಂಟಪ ಮತ್ತು ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್‌ನಲ್ಲಿ ನಡೆಯುತ್ತಿದೆ. ಇಡೀ ಭಾರತೀಯ ಆಟೋಮೋಟಿವ್ ಮತ್ತು ಮೊಬಿಲಿಟಿ ಇಕೋಸಿಸ್ಟಮ್ ಅನ್ನು ಒಂದೇ ಸೂರಿನಡಿ ಒಂದುಗೂಡಿಸುವ ಹೆಗ್ಗುರುತಾಗಿದೆ ಈ ಎಕ್ಸ್‌ಪೋ ಎಂದು ಸಚಿವಾಲಯ ಹೇಳಿದೆ.
Post a Comment