ಕಾನೂನು -ಸುವ್ಯವಸ್ಥೆ ಕಾಪಾಡುವ ಬಗ್ಗೆ ಕೂಡಲೇ ಸರ್ವಪಕ್ಷಗಳ ಸಭೆ: ಎನ್.ರವಿಕುಮಾರ್ ಆಗ್ರಹ
ಬೆಂಗಳೂರು: ರಾಜ್ಯ ಸರಕಾರವು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಮಾನ್ಯ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದಂತೆ ದರೋಡೆ ಮಾಡಿ ಆರೋಪಿಗಳು ಇಷ್ಟು ಸಲೀಸಾಗಿ ತಪ್ಪಿಸಿಕೊಂಡು ಹೋಗಿದ್ದು ಹೇಗೆ? ಎμÉ್ಟಲ್ಲಾ ಟೋಲ್ ಗಳನ್ನು ದಾಟಿ ಹೋಗಿದ್ದಾರೆ, ತಕ್ಷಣ ಟೋಲ್ ಗಳನ್ನು ಏಕೆ ಬಿಗಿ ಮಾಡಲಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಜನತೆಯು ಈ ಪ್ರಶ್ನೆಯನ್ನು ನಿಮಗೆ ಹಾಗೂ ನಿಮ್ಮ ಗೃಹ ಇಲಾಖೆಗೆ ಕೇಳಬೇಕಲ್ಲವೇ? ಎಂದಿದ್ದಾರೆ.
ನೀವು ಮತ್ತು ನಿಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವುದಕ್ಕೆ ಈ ಪ್ರಶ್ನೆಯನ್ನು ನಿಮ್ಮನ್ನು ನೀವೇ ಕೇಳುತ್ತಿದ್ದಿರಿ ಎನ್ನಿಸುತ್ತಿದೆಯಲ್ಲವೇ? ಎಂದು ಕೇಳಿದ್ದಾರೆ.
ರಾಜ್ಯದ ನಿಮ್ಮ ಪೆÇಲೀಸ್ ಇಲಾಖೆ ಏನು ಮಾಡುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ರಾಜ್ಯದಲ್ಲಿ ಬ್ಯಾಂಕ್ ಗಳ ಹಗಲು ದರೋಡೆ, ಅಮಾಯಕ ಜನರ ಕೊಲೆ ಪ್ರಕರಣಗಳು ನಡೆಯುತ್ತಿವೆ. ನೀವು ಮತ್ತು ನಿಮ್ಮ ಮಂತ್ರಿ ಮಹೋದಯರು ತಮ್ಮ ತಮ್ಮ ಕುರ್ಚಿ ಉಳಸಿಕೊಳ್ಳಲು ಡಿನ್ನರ್ ಪಾರ್ಟಿ ಮಾಡುತ್ತಿದ್ದೀರಿ ಎಂದು ಟೀಕಿಸಿದ್ದಾರೆ.
ಬೆಂಗಳೂರಿನ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಅಮಾಯಕರ ಕೊಲೆ, ಸುಲಿಗೆ ನಡೆಯುತ್ತಿದೆ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದಿದ್ದಾರೆ, ಮಚ್ಚಿನಿಂದ ಹಲ್ಲೆ ಆಗಿದೆ. ನಿನ್ನೆ ಚಾಮರಾಜನಗರದಲ್ಲಿ ದೇವರ ಹರಕೆಯ ಹಸುವಿನ ಬಾಲವನ್ನು ಕತ್ತರಿಸಿ ಹಾನಿ ಮಾಡಿದ್ದಾರೆ. ಇಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ಬೀದರ್ ನಗರದಲ್ಲಿ ಸುಮಾರು 93 ಲಕ್ಷ ಹಣ ಹಗಲು ದರೋಡೆ ನಡೆದಿದೆ. ಅದರಲ್ಲಿ ಇಬ್ಬರ ಅಮಾಯಕರ ಸಾವಾಗಿದೆ. ವಿಜಯಪುರ ನಗರದಲ್ಲಿ ದರೋಡೆ ನಡೆದಿದೆ. ಇಂದು ಸ್ವತ ಮಾನ್ಯ ಮುಖ್ಯಮಂತ್ರಿಗಳ ಮಂಗಳೂರು ಜಿಲ್ಲೆ ಪ್ರವಾಸದ ಸಂದರ್ಭದಲ್ಲಿ ಮಂಗಳೂರಿನ ಕೋಟೇಶ್ವರ ಸಹಕಾರ ಬ್ಯಾಂಕ್ ನಲ್ಲಿದ್ದ ಸುಮಾರು 10-15 ಕೋಟಿ ರೂಪಾಯಿ ಹಣ ಮತ್ತು ಬಂಗಾರವನ್ನು ಹಗಲು ದರೋಡೆ ಮಾಡಿದ್ದಾರೆ. ಇನ್ನು ಕೂಡ ಅಪಹರಣಕಾರರ ಬಂಧನವಾಗಿಲ್ಲ ಎಂದು ಕಳವಳ ಸೂಚಿಸಿದ್ದಾರೆ.
ರಾಜ್ಯದಲ್ಲಿ ಇμÉ್ಟಲ್ಲ ಸಿಸಿ ಟಿವಿ ಟೋಲ್ ಗಳನ್ನು, ಪೆÇಲೀಸರನ್ನು ಮೀರಿ ದರೋಡೆಕೋÀರರು, ಡಕಾಯಿತರು ದರೋಡೆ ಮಾಡಿ, ಕೊಲೆ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದರೆ ಏನು? ರಾಜ್ಯ ಪೆÇಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಕೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಗೃಹ ಇಲಾಖೆಯು ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಮಹಿಳೆಯರು ಸೇರಿದಂತೆ ಯಾರಿಗೂ ಸಹ ಸುರಕ್ಷತೆ ಇಲ್ಲವಾಗಿದೆ. ರಾಜ್ಯದ ಬ್ಯಾಂಕ್ ಗಳಿಗೆ ಸುರಕ್ಷತೆ ಇಲ್ಲವಾಗಿದೆ. ರಾಜ್ಯದಲ್ಲಿ ದಿನನಿತ್ಯ ಹಗಲು ದರೋಡೆ, ಕೊಲೆಗಳು ನಡೆಯುತ್ತಿವೆ. ನಾಳೆ ಇನ್ನೇನಾಗುತ್ತೋ ಎನ್ನುವ ಭಯ ಮತ್ತು ಆತಂಕ ರಾಜ್ಯದ ಜನತೆಯಲ್ಲಿ ಕಾಡುತ್ತಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಬಗ್ಗೆ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ನಾನು ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.
(ಕರುಣಾಕರ ಖಾಸಲೆ)
ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ
Post a Comment