ಕಾಂಡ್ಲಾ ಬಂದರು ಶೀಘ್ರದಲ್ಲೇ ಹಸಿರು ಜಲಜನಕದ ಕೇಂದ್ರವಾಗಲಿದೆ: ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್
ಕಾಂಡ್ಲಾದ ದೀನದಯಾಳ್ ಬಂದರಿನ ಸರಕು ಸಾಗಿಸುವ ಸಾಮರ್ಥ್ಯ 300 ಮಿಲಿಯನ್ ಮೆಟ್ರಿಕ್ ಟನ್ ತಲುಪಿದ ನಂತರ, ಇದು ಮೆಗಾ ಟರ್ಮಿನಲ್ ಬಂದರು ಮತ್ತು ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ದೇಶದ ಪ್ರಮುಖ ಕೇಂದ್ರವಾಗಲಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.
ಶ್ರೀ ಸೋನೊವಾಲ್ ಅವರು ಇಂದು ಕಾಂಡ್ಲಾದಲ್ಲಿರುವ ದೀನದಯಾಳ್ ಬಂದರು ಪ್ರಾಧಿಕಾರದಲ್ಲಿ (ಡಿಪಿಎ) ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಶ್ರೀ ಸೋನೊವಾಲ್ ಅವರು ದೀನದಯಾಳ್ ಬಂದರಿನಲ್ಲಿ ಗ್ರೀನ್ ಹೈಡ್ರೋಜನ್ ಎಕ್ಸಲೆನ್ಸ್ ಸೆಂಟರ್‌ಗೆ ಶಂಕುಸ್ಥಾಪನೆ ಮಾಡಿದರು ಮತ್ತು ತ್ಯಾಜ್ಯ ಮರುಬಳಕೆ ಘಟಕ ಮತ್ತು ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ ಸೇರಿದಂತೆ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಂಡ್ಲಾ ಬಂದರಿನಲ್ಲಿ 57 ಸಾವಿರ ಕೋಟಿ ರೂ.ಗಳ ಎರಡು ಹೊಸ ಯೋಜನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದರು. 27 ಸಾವಿರ ಕೋಟಿ ಮೌಲ್ಯದ ಕೊಲ್ಲಿಯಿಂದ ಹೊರಗೆ ಹೊಸ ಮೆಗಾ ಟರ್ಮಿನಲ್ ಬಂದರು ಮತ್ತು 30 ಸಾವಿರ ಕೋಟಿ ವೆಚ್ಚದಲ್ಲಿ ಹಡಗು ನಿರ್ಮಾಣ ಯೋಜನೆ ಒಳಗೊಂಡಿದೆ.
Post a Comment