ಅದು ಹೇಗೆ ಅಂತ ಮುಂದೆ ಓದಿ.
ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ಗ್ರಾಮ ಪಂಚಾಯ್ತಿ ಸೇವೆಗಳು ಕುಳಿತಲ್ಲೇ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪಂಚಮಿತ್ರ ವಾಟ್ಸಾಪ್ ಚಾಟ್ ಆರಂಭಿಸಲಾಗಿದೆ. ಇನ್ಮುಂದೆ ವಾಟ್ಸ್ ಆಪ್ ನಲ್ಲಿ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ, ಪಡೆಯಬಹುದಾಗಿದೆ.
ಜನತೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಅಹವಾಲು ದಾಖಲಿಸುವುದು ಅತಿ ಮುಖ್ಯವಾಗುತ್ತದೆ, ಜನರು ಅಹವಾಲು ಸಲ್ಲಿಸುವುದಕ್ಕಾಗಿ ಸರಳ, ಸುಲಭ ಹಾಗೂ ಸಮರ್ಥ ವ್ಯವಸ್ಥೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಕೈಗೊಂಡಿದೆ.
ಕುಂದು-ಕೊರತೆಗಳನ್ನು ಹಾಗೂ ಸಮಸ್ಯೆಗಳನ್ನು ದಾಖಲಿಸಲು ಇದ್ದ ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಪಂಚಮಿತ್ರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಗ್ರಾಮೀಣ ಜನತೆ ತಮ್ಮೆಲ್ಲಾ ಅಹವಾಲುಗಳನ್ನು ದಾಖಲಿಸಲು ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಕರೆ ಮಾಡಬಹುದು. ಅಥವಾ ಅದೇ ಸಂಖ್ಯೆಯಲ್ಲಿ ವಾಟ್ಸಾಪ್ ಚಾಟ್ ಮೂಲಕವೂ ಅಹವಾಲು ಸಲ್ಲಿಸಬಹುದು.
ವಾಟ್ಸಾಪ್ ಚಾಟ್ ಮೂಲಕ ಅಹವಾಲು ಸಲ್ಲಿಸುವ ಸರಳ ವಿಧಾನ ಇಲ್ಲಿದೆ, ಎಲ್ಲರೂ ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.
ನೀವು ಮಾಡಬೇಕಿರುವುದು ಇಷ್ಟೇ!
ನಿಮ್ಮ ವಾಟ್ಸಾಪ್ ಮೂಲಕ 82775060000 ಸಂಖ್ಯೆಗೆ Hi ಎಂದು ಕಳುಹಿಸಿ
ನಿಮ್ಮ ಜಿಲ್ಲೆಯ ಸಂಖ್ಯೆಯನ್ನು ನಮೂದಿಸಿ
ನಿಮ್ಮ ತಾಲೂಕಿನ ಸಂಖ್ಯೆಯನ್ನು ನಮೂದಿಸಿ
ನಿಮ್ಮ ಗ್ರಾಮ ಪಂಚಾಯತಿಯ ಸಂಖ್ಯೆಯನ್ನು ನಮೂದಿಸಿ
ನಿಮ್ಮ ಗ್ರಾಮದ ಸಂಖ್ಯೆಯನ್ನು ನಮೂದಿಸಿ
ನಿಮ್ಮ ಗ್ರಾಮವನ್ನು ಖಚಿತ ಪಡಿಸಲು ಹೌದು ಎಂದು ಸೆಲೆಕ್ಟ್ ಮಾಡಿ
ಈಗ ನಿಮಗೆ ಬೇಕಿರುವ ಮಾಹಿತಿ/ ಕುಂದುಕೊರತೆ/ ಅಥವಾ ಸೇವೆಗಾಗಿ ಮುಂದುವರೆಸಿ
Post a Comment