ಲಗಕೋಟೆ, ಮಾರ್ಚ್ 19: ರಾಜ್ಯದಲ್ಲಿ ಕುರಿಗಾಯಿ ಹತ್ಯೆಗೈದು ಪರಾರಿಯಾಗಿದ್ದ ಪ್ರಕರಣ ಬೆಚ್ಚಿಬೀಳಿಸಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೆ ಕುರಿಗಾಹಿಗಳಿಗೆ ಆತ್ಮ ರಕ್ಷಣೆಗಾಗಿ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಾಲಗಕೋಟೆ ಜಿಲ್ಲೆ ಪೊಲೀಸರಿಂದ ಬಂದೂಕು ತರಬೇತಿ ನೀಡಲಾಗುತ್ತದೆ.

ಈ ಮಹತ್ವದ ನಿರ್ಧಾರಕ್ಕೆ ಭಾರೀ ಪ್ರಶಂಸೆಯು ವ್ಯಕ್ತವಾಗಿದೆ.

ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೈ.ಮಂಜುನಾಥ್ ರೆಡ್ಡಿ ಅವರು ಕುರಿಗಾಹಿಗಳಿಗೆ ಬಂದೂಕು ತರಬೇತಿ ಕುರಿತು ಅಧಿಕೃತ ಮಾಹಿತಿ ನೀಡಿದ್ದಾರೆ. ಅವರು ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಸುತ್ತಮುತ್ತಲಿನ ಕುರಿ ದಡ್ಡಿಗಳಿಗೆ ಭೇಟಿ ನೀಡಿ ಕುರಿಗಾಹಿಗಳ ಆತ್ಮರಕ್ಷಣೆ ಸಲುವಾಗಿ ವಿಶೇಷ ಬಂದೂಕು ತರಬೇತಿ ನೀಡಲಾಗುವುದು. ಜಿಲ್ಲೆಯ ಡಿಎಆರ್ ಘಟಕದಲ್ಲಿ ಮುಂದಿನ ತಿಂಗಳು 7 ರಿಂದ 13 ನೇ ತಾರೀಕಿನ ಒಳಗೆ ಆಯೋಜಿಸಲಾಗಿದೆ. ಈ ಬಗ್ಗೆ ತಿಳಿವಳಿಕೆ ನೀಡಿ, ರಾತ್ರಿ ಸಮಯದಲ್ಲಿ ಕುರಿ ದಡ್ಡಿಗಳ ಕಡೆಗೆ ನಿಗಾ ವಹಿಸುವಂತೆ ತಿಳಿಸಲಾಗಿದೆ.

ಕುರಿಗನ್ನು ಕಾಯುವಾಗ, ರಾತ್ರಿ ಹೊತ್ತು ಏನಾದರು ತೊಂದರೆ ಆದಲ್ಲಿ ಪೊಲೀಸ್ ಠಾಣೆಗೆ ತಿಳಿಸಬೇಕು. ತುರ್ತು ಸೇವೆಯ ಅಗತ್ಯವಿದ್ದಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದ್ದೇವೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕುರಿ ಕಳ್ಳತನ ತಡೆಗೆ, ದಾಳಿ ತಡೆಗೆ ಪೊಲೀಸ್ ಕ್ರಮ

ಕುರಿಗಳು ದಡ್ಡಿಯಲ್ಲಿದ್ದಾಗ ರಾತ್ರಿ ವೇಳೆ ಕುರಿ ಕಳ್ಳತನ, ಕುರಿಗಾಹಿಗಳ ಮೇಲೆ ಹಲ್ಲೆ ಪ್ರಕರಣಗಳು ಆಗಾಗ ಕೇಳಿ ಬಂದಿವೆ. ಇವುಗಳ ಕಡಿವಾಣಕ್ಕೆ ಹಾಗೂ ಭವಿಷ್ಯದಲ್ಲಿ ಇಂತಹ ಅಹಿಕರ ಮತ್ತು ಅಪರಾಧ ಕೃತ್ಯಗಳು ಜರುಗದಂತೆ ತಡೆಯಲು ಪೊಲೀಸರು ಮುಂದಾಗಿದ್ದಾರೆ.

ಬಾಗಲಕೋಟೆ ಎಸ್‌ಪಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕುರಿಗಾಹಿಗಳ ಆತ್ಮರಕ್ಷಣೆಗಾಗಿ ಅವರಿಗೆ ಮುಂದಿನ ಏಪ್ರಿಲ್ 07ರಿಂದ 13ರವರೆಗೆ ಬಂದೂಕು ತರಬೇತಿ ನೀಡಲು ಮುಂದಾಗಿದ್ದಾರೆ. ಆರು ದಿನಗಳ ತರಬೇತಿಯಲ್ಲಿ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಬಂದೂಕನ್ನು ಹೇಗೆ ಬಳಸಬೇಕು ಎಂಬ ದೈಹಿಕ ತರಬೇತಿ ಸಹ ನೀಡಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.

ಕುರಿಗಾಹಿಯ ಹತ್ಯೆಗೈದಿದ್ದ ಖದೀಮರು

ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಕುರಿಗಳ ಕಳ್ಳತನಕ್ಕೆ ಬಂದಿದ್ದ ಖದೀಮರ ವಿರುದ್ಧ ಸೆಣಸಿದ ಕುರಿಗಾಯಿ ಶರಣಪ್ಪ ಜಮ್ಮನಕಟ್ಟಿ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಬಳಿಕ ಕೊಲೆಗಾರರನ್ನು ಬಂಧಿಸಲಾಯಿತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯು 200 ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಲು ಮುಂದಾಗಿರುವುದು ರಾಜ್ಯದಲ್ಲಿ ಇದೇ ಮೊದಲು.

ಯಾರು ಅರ್ಜಿ ಸಲ್ಲಿಸಬಹುದು?

* 18 ವರ್ಷ ಮೇಲ್ಪಟ್ಟ ಮತ್ತು 60 ವರ್ಷ ಒಳಗಿನ ಕುರಿಗಾಯಿಗಳು ಅರ್ಜಿ ಸಲ್ಲಿಸಬಹುದು.

* ಸದ್ಯ ಬಾಗಲಕೋಟೆ ಜಿಲ್ಲೆಯ ಬೀಳಗಿ, ಬಾದಾಮಿ, ಬಾಲಕೋಟೆ ತಾಲೂಕುಗಳಿಗೆ ಸಿಮೀತವಾಗಿ ತರಬೇತಿ

* ಅಪರಾಧ ಕೃತ್ಯ ಹಿನ್ನೆಲೆ ಇರುವವರಿಗೆ ತರಬೇತಿಗೆ ಅನರ್ಹರು

* ಅಪರಾಧ ಕೃತ್ಯದ ಹಿನ್ನೆಲೆ ಇಲ್ಲದವರು ಕೂಡಲೇ ಅರ್ಜಿ ಸಲ್ಲಿಸಬೇಕು.

* ಏಪ್ರಿಲ್ 07ರಿಂದ 13ರವರೆಗೆ ಬಂದೂಕು ತರಬೇತಿ

* ಏಪ್ರಿಲ್ 05ರೊಳಗೆ ಪೊಲೀಸ್ ಶಸ್ತ್ರಾಗಾರದಿಂದ ಅರ್ಜಿ ಪಡೆದು, ನಿಮ್ಮ ಮೂರು ಭಾವಚಿತ್ರ, ಗುರುತಿಸನ ಚೀಟಿ ಸಹಿತ ಅರ್ಜಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Shankrappa Parangi Oneindia

source: oneindia.com

Post a Comment

Previous Post Next Post