ಅಮೆರಿಕದ ಸಂಸತ್ತಿನಲ್ಲಿ ಜಂಟಿ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಚೀನಾ ಮತ್ತು ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಪರಸ್ಪರ ಶುಲ್ಕಗಳನ್ನು ವಿಧಿಸುವುದಾಗಿ ಘೋಷಿಸಿದ್ದರು.
1. ಅಮೆರಿಕವು 'ಟ್ಯಾರಿಫ್' (ತೆರಿಗೆ ಶುಲ್ಕ) ಹೆಚ್ಚಿಸುವ ಮೂಲಕ ಚೀನಾದ ಮೇಲೆ ಒತ್ತಡ ಹೇರಲು ಮತ್ತು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದೆ. "ಅವರು ನಮಗೆ ಸಹಾಯ ಮಾಡಿದ್ದಕ್ಕಾಗಿ ಶಿಕ್ಷಿಸುತ್ತಿದ್ದಾರೆ. ಇದು ಅಮೆರಿಕದ 'ಫೆಂಟಾನಿಲ್ ಸಮಸ್ಯೆ' (ಫೆಂಟಾನಿಲ್ ನೋವು ನಿವಾರಕ ಔಷಧ) ಯನ್ನು ಪರಿಹರಿಸುವುದಿಲ್ಲ, ಮತ್ತು ಎರಡೂ ದೇಶಗಳ ನಡುವಿನ ಮಾದಕ ವಸ್ತುಗಳ ವಿರೋಧಿ ಸಂವಾದ ಮತ್ತು ಸಹಕಾರವನ್ನು ದುರ್ಬಲಗೊಳಿಸುತ್ತದೆ" ಎಂದು ಕ್ಸಿ ಜಿನ್‌ಪಿಂಗ್ ಹೇಳಿದರು.
2. ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗಳ ವಿರುದ್ಧ ಚೀನಾವು ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ. "ಬೆದರಿಕೆ ಹಾಕುವುದು ಚೀನಾದೊಂದಿಗೆ ವ್ಯವಹರಿಸುವ ಸರಿಯಾದ ಮಾರ್ಗವಲ್ಲ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
Post a Comment