ಪಾಕಿಸ್ತಾನದ ರೈಲು ಅಪಹರಣ ಘಟನೆಯಲ್ಲಿ ಸುಮಾರು 200 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು 30 ಉಗ್ರರು ಸಾವನ್ನಪ್ಪಿದ್ದಾರೆ

ಪಾಕಿಸ್ತಾನದ ರೈಲು ಅಪಹರಣ ಘಟನೆಯಲ್ಲಿ ಸುಮಾರು 200 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಮತ್ತು 30 ಉಗ್ರರು ಸಾವನ್ನಪ್ಪಿದ್ದಾರೆ

ಪಾಕಿಸ್ತಾನದಲ್ಲಿ, ಬಲೂಚಿಸ್ತಾನದ ಬೋಲಾನ್ ಜಿಲ್ಲೆಯ ಬಳಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಉಗ್ರರು ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಅಪಹರಿಸಿದ ನಂತರ ಎರಡನೇ ದಿನವಾದ ಇಂದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇಲ್ಲಿಯವರೆಗೆ ಭದ್ರತಾ ಪಡೆಗಳು ಸುಮಾರು 200 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದಿವೆ.
ಒಂಬತ್ತು ಬೋಗಿಗಳಲ್ಲಿ 400 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲು ಕ್ವೆಟ್ಟಾದಿಂದ ಖೈಬರ್-ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿದ್ದಾಗ, ಉಗ್ರರು ಸ್ಫೋಟಕಗಳನ್ನು ಬಳಸಿ ಹಳಿತಪ್ಪಿಸಿ ಅದನ್ನು ಅಪಹರಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿಯವರೆಗೆ, ರೈಲು ಅಪಹರಣದಲ್ಲಿ ಭಾಗಿಯಾಗಿರುವ 30 ಉಗ್ರರು ಭದ್ರತಾ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ. ಉಳಿದ ದಾಳಿಕೋರರನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ಮುಂದುವರೆದಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ. 37 ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ದಾಳಿಯ ಹೊಣೆ ಹೊತ್ತಿರುವ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪು ಬಿಎಲ್‌ಎ 48 ಗಂಟೆಗಳ ಅಂತಿಮ ಗಡುವು ನೀಡಿದ್ದು, ಪಾಕಿಸ್ತಾನಿ ಸೇನೆಯಿಂದ ಅಪಹರಿಸಲ್ಪಟ್ಟ ಬಲೂಚ್ ರಾಜಕೀಯ ಕೈದಿಗಳು, ಕಾರ್ಯಕರ್ತರು ಮತ್ತು ಕಾಣೆಯಾದ ವ್ಯಕ್ತಿಗಳನ್ನು ಬಿಡುಗಡೆ ಮಾಡದಿದ್ದರೆ ಒತ್ತೆಯಾಳುಗಳನ್ನು ಗಲ್ಲಿಗೇರಿಸುವುದಾಗಿ ತಿಳಿಸಿದೆ. ಮಿಲಿಟರಿ ಹಸ್ತಕ್ಷೇಪ ಮುಂದುವರಿದರೆ, ಎಲ್ಲಾ ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು ಮತ್ತು ರೈಲನ್ನು ನಾಶಪಡಿಸಲಾಗುವುದು ಎಂದು ಅದು ಎಚ್ಚರಿಸಿದೆ

Post a Comment

Previous Post Next Post