ಮ್ಯಾನ್ಮಾರ್‌ನಲ್ಲಿ ವೈಮಾನಿಕ ದಾಳಿ: 27 ನಾಗರಿಕರ ಸಾವು
ಮ್ಯಾನ್ಮಾರ್‌ನಲ್ಲಿ, ಪ್ರಜಾಪ್ರಭುತ್ವ ಪರ ಪ್ರತಿರೋಧ ಗುಂಪಿನ ನಿಯಂತ್ರಣದಲ್ಲಿರುವ ಹಳ್ಳಿಯ ಮೇಲೆ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಆರು ಮಕ್ಕಳು ಸೇರಿದಂತೆ ಕನಿಷ್ಠ 27 ನಾಗರಿಕರು ಸಾವನ್ನಪ್ಪಿದ್ದಾರೆ. ಸಿಂಗು ಟೌನ್‌ಶಿಪ್‌ನ ಲೆಟ್ ಪ್ಯಾನ್ ಹ್ಲಾ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಜನರು ಗಾಯಗೊಂಡಿದ್ದಾರೆ ಎಂದು ಮಂಡಲೆ ಪೀಪಲ್ಸ್ ಡಿಫೆನ್ಸ್ ಫೋರ್ಸ್ ವಕ್ತಾರರು ತಿಳಿಸಿದ್ದಾರೆ.
ಮಂಡಲೆ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಮ್ಯಾನ್ಮಾರ್‌ನ ಪ್ರಮುಖ ವಿರೋಧ ಪಕ್ಷವನ್ನು ಬೆಂಬಲಿಸುತ್ತದೆ ಮತ್ತು ಕಳೆದ ವರ್ಷ ಜುಲೈನಲ್ಲಿ ಸಿಂಗು ಪಟ್ಟಣವನ್ನು ವಶಪಡಿಸಿಕೊಂಡಿತು. ಮಿಲಿಟರಿ ಸರ್ಕಾರವು ಸಶಸ್ತ್ರ ಪ್ರಜಾಪ್ರಭುತ್ವ ಪರ ಪೀಪಲ್ಸ್ ಡಿಫೆನ್ಸ್ ಫೋರ್ಸ್ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಗೆರಿಲ್ಲಾ ಗುಂಪುಗಳ ವಿರುದ್ಧ ವೈಮಾನಿಕ ದಾಳಿಯನ್ನು ಹೆಚ್ಚಿಸಿದೆ. ಈ ಗುಂಪುಗಳು ದಶಕಗಳಿಂದ ಹೆಚ್ಚಿನ ಸ್ವಾಯತ್ತತೆಗಾಗಿ ಹೋರಾಡುತ್ತಿವೆ.
Post a Comment