ಸೂರು: ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮ ಎಂಬ ತಾರತಮ್ಯ ಎಲ್ಲೆಡೆ ತಾಂಡವವಾಡುತ್ತಿದ್ದು. ಇದರ ನಡುವಲ್ಲೇ ಐತಿಹಾಸಿಕ ದೇಗುಲಗಳ ರಕ್ಷಣೆಗೆ ಮುಸ್ಲಿಂ ವ್ಯಕ್ತಿಯೊಬ್ಬರು ಹೋರಾಡುತ್ತಿರುವುದು ಇತರರಿಗೆ ಪ್ರೇರಣೆ ನೀಡುತ್ತಿದೆ.ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ 72 ವರ್ಷದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕ ಮೊಹಮ್ಮದ್ ಕಲೀಮುಲ್ಲಾ ಐತಿಹಾಸಿಕ ದೇವಾಲಯ, ಶಾಸನ, ವೀರಗಲ್ಲುಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

ಸ್ಥಳೀಯ ವಾಸ್ತುಶಿಲ್ಪಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ಬಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಕಲೀಮುಲ್ಲಾ ಅವರು ಐತಿಹಾಸಿಕ ವೈಭವ ಸಾರುವ ದೇವಾಲಯಗಳ ರಕ್ಷಣೆ ಮಾಡುತ್ತಿದ್ದಾರೆ. ದೇವಾಲಯಗಳು, ಶಾಸನ, ಶಿಲ್ಪಕಲೆ ಹಾಗೂ ವೀರಗಲ್ಲುಗಳು ಶಿಥಿಲಾವಸ್ಥೆಯಲ್ಲಿದ್ದರೆ. ಅವುಗಳ ಜೀರ್ಣೋದ್ಧಾರಕ್ಕೆ ಶ್ರಮ ಪಡುತ್ತಿದ್ದಾರೆ.

ಮಹಮ್ಮದ್‌ ಕಲೀಮುಲ್ಲಾ ನಿವೃತ್ತ ಶಿಕ್ಷಕರಾಗಿದ್ದು, 36 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಎಲ್ಲಾ ರಾಜ್ಯಗಳಿಗೂ ಭೇಟಿ ನೀಡಿರುವ ಅವರು, ದೇಶದ ಇತಿಹಾಸ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿದಿರುವವರಾಗಿದ್ದಾರೆ.

13ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ನನ್ನ ಗಮನ ಸೆಳೆದಿತ್ತು, ಇದು ದೇವಾಲಯದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವಂತೆ ಪ್ರೇರೇಪಿಸಿತ್ತು. ಇದಲ್ಲದೆ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲಿದ್ದ ಆಸಕ್ತಿ ಗತಕಾಲದ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಪ್ರೇರೇಪಿಸಿತು ಎಂದು ಕಲೀಮುಲ್ಲಾ ಅವರು ಹೇಳಿದ್ದಾರೆ.

ಕಾಶ್ಮೀರದಿಂದ ಕರಾವಳಿ ತೀರಕ್ಕೆ: ಏರೋಪೋನಿಕ್ಸ್ ಬಳಸಿ ಮನೆಯ ಟೆರೇಸ್ ನಲ್ಲಿ ಕೇಸರಿ ಬೆಳೆದ ಉಡುಪಿಯ ಟೆಕ್ಕಿ!
ದೊಡ್ಡ ಜಟಕ ಗ್ರಾಮದಲ್ಲಿ ಚನ್ನಕೇಶವ ದೇವಾಲಯ ನನ್ನ ಗಮನ ಸೆಳೆದಿತ್ತು. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯ ಅವರು ನಿರ್ಮಿಸಿದ್ದರು. ಇತಿಹಾಸದ ಪ್ರಕಾರ ಕೃಷ್ಣದೇವರಾಯ ಅವರಿಗೆ ತಿರುಮಲ ದೇವಿ ಮತ್ತು ಚಿನ್ನಾ ದೇವಿ ಎಂಬ ಇಬ್ಬರು ರಾಣಿಯರಿದ್ದರು. ಈ ಪೈಕಿ ಚಿನ್ನಾ ದೇವಿ ಅವರ ನೆನಪಿಗಾಗಿ ಚಕ್ರವರ್ತಿ ದೇವಾಲಯವನ್ನು ನಿರ್ಮಿಸಿದ್ದರು. ಈ ದೇವಾಲಯದ ಒಳಗೆ ಹೋಗಲು ಮುಂದಾದಾಗ ಹತ್ತಿರದಲ್ಲಿದ್ದ ಕೆಲ ಮಹಿಳೆಯರು ನಾಯಿಯೊಂದು ಮರಿಹಾಕಿದೆ. ಒಳ ಹೋದರೆ ದಾಳಿ ಮಾಡುತ್ತದೆ ಎಂದು ಎಚ್ಚರಿಸಿದ್ದರು.

ಚಕ್ರವರ್ತಿಯೊಬ್ಬ ತನ್ನ ಪತ್ನಿಯ ನೆನಪಿಗಾಗಿ ನಿರ್ಮಿಸಿದ ಈ ಸುಂದರ ದೇವಾಲಯ ನಿರ್ಲಕ್ಷ್ಯಕ್ಕೊಳಗಾಗಿರುವುದನ್ನು ಕಂಡು ಬೇಸರವಾಯಿತು. ಈ ದೇವಾಲಯ ಕೂಡ ಶಹಜಹಾನ್ ಮುಮ್ತಾಜ್'ಗಾಗಿ ಕಟ್ಟಿದ ತಾಜ್‌ಮಹಲ್‌ನಂತಿದೆ.

ಬಳಿಕ ಇದರ ಪುನಃಸ್ಥಾಪನೆ ಬಗ್ಗೆ ಚಿಂತನೆ ನಡೆಸಿದೆ. ಈ ವೇಳೆ ಪ್ರಾಚೀನ ದೇವಾಲಯಗಳ ಪುನಃಸ್ಥಾಪನೆಯಲ್ಲಿ ತೊಡಗಿರುವ ಶ್ರೀ ಧರ್ಮಸ್ಥಳ ಮಠದಿಂದ ನಡೆಸಲ್ಪಡುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಬಗ್ಗೆ ತಿಳಿದುಕೊಂಡೆ.

ದೇವಾಲಯದ ಘೋಟೋ ಹಾಗೂ ಇತಿಹಾಸದೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿದೆ. ಬಳಿಕ ಪುನಃಸ್ಥಾಪನೆಯ ಅಂದಾಜು ವೆಚ್ಚಕ್ಕಾಗಿ ಧರ್ಮಸ್ಥಳದ ಟ್ರಸ್ಟ್ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿತು. ಅಂದಾಜು ವೆಚ್ಚದ ಶೇ.40ರಷ್ಟು ಹಣ ನೀಡಲು ಟ್ರಸ್ಟ್ ಒಪ್ಪಿಕೊಂಡಿತು. ಬಳಿಕ ರಾಜ್ಯ ಸರ್ಕಾರ ಕೂಡ ಶೇ.40ರಷ್ಟು ಹಣ ನೀಡಿತು. ಉಳಿದ ಶೇ.20ರಷ್ಟು ಹಣವನ್ನು ಗ್ರಾಮಸ್ಥರೇ ವ್ಯವಸ್ಥೆ ಮಾಡಬೇಕಾಗಿತ್ತು. ಶೇ.20ರಷ್ಟು ವೆಚ್ಚದ ಹಣ ರೂ.10 ಲಕ್ಷವಾಗಿತ್ತು. ಈ ಹಣ ಸಂಗ್ರಹವೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಸ್ಥಳೀಯರಿಂದ ದೇಣಿಗೆ ಪಡೆಯುವ ಮೊದಲು ದೇವಾಲಯದ ಮಹತ್ವ, ಅದರ ಇತಿಹಾಸ ಮತ್ತು ಪುನಃಸ್ಥಾಪನೆಯ ಅಗತ್ಯತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕಾಗಿತ್ತು. ಬೆಂಗಳೂರಿನ ಶ್ರೀನಗರದಲ್ಲಿ ನೂರಾರು ನಿವಾಸಿಗಳು ನೆಲೆಸಿರುವುದರಿಂದ, ಮೊದಲು ಅವರನ್ನು ಸಂಪರ್ಕಿಸಿ ಪುನಃಸ್ಥಾಪನೆಗಾಗಿ ಹಣವನ್ನು ದಾನ ಮಾಡುವಂತೆ ಮನವೊಲಿಸಿದೆ. ಇದರಿಂದ ರೂ. 2.5 ಲಕ್ಷ ಸಂಗ್ರಹಿಸಿ ಟ್ರಸ್ಟ್‌ಗೆ ನೀಡಿದ್ದೆ. ಒಂದು ವರ್ಷದಲ್ಲಿ ಕೆಲಸ ಪೂರ್ಣಗೊಂಡಿತು.

ಸರ್ಕಾರಿ ಶಾಲೆ ಉಳಿವಿಗೆ ಯತ್ನ: ಒಂದನೇ ತರಗತಿಗೆ ದಾಖಲಾದರೆ 1 ಸಾವಿರ ರೂ ಠೇವಣಿ: ಮಾದರಿಯಾಯ್ತು ಮುಖ್ಯೋಪಾಧ್ಯಾಯರ ನಡೆ
ಸರ್ಕಾರಿ ಶಾಲೆ ಉಳಿವಿಗೆ ಯತ್ನ: ಒಂದನೇ ತರಗತಿಗೆ ದಾಖಲಾದರೆ 1 ಸಾವಿರ ರೂ ಠೇವಣಿ: ಮಾದರಿಯಾಯ್ತು ಮುಖ್ಯೋಪಾಧ್ಯಾಯರ ನಡೆದೇವಾಲಯದ ಪುನಃಸ್ಥಾಪನೆ ಕಾರ್ಯ ಆರಂಭವಾದ ಬಳಿಕ ಇತರೆ ಗ್ರಾಮದವರು ಮನವಿ ಸಲ್ಲಿಸಲು ಪ್ರಾರಂಭಿಸಿದರು. ಬಳಿಕ ಧರ್ಮಸ್ಥಳ ಟ್ರಸ್ಟ್‌ನ ಬೆಂಬಲದೊಂದಿಗೆ ಹೊಯ್ಸಳರ ಅವಧಿಯಲ್ಲಿ ನಿರ್ಮಿಸಲಾದ ನಾಗಮಂಗಲ ತಾಲ್ಲೂಕಿನ ಮಚಲಘಟ್ಟ ಗ್ರಾಮದಲ್ಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯವನ್ನು ಪುನಃಸ್ಥಾಪಿಸಲಾಯಿತು. ಇದರ ಜೀರ್ಣೋದ್ಧಾರಕ್ಕೆ ಸುಮಾರು 12 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು, ನಮ್ಮ ಬಳಿ ಆರ್ಥಿಕ ನೆರವು ಕಡಿಮೆ ಇತ್ತು, ಆದ್ದರಿಂದ ಶ್ರೀನಗರದ ಜನರನ್ನು ಮತ್ತೆ ಸಂಪರ್ಕಿಸಿದ್ದೆ.

ಇದಾದ ಬಳಿಕ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಬಳಿಯ ಶ್ರೀ ಚನ್ನಕೇಶವ ದೇವಾಲಯವನ್ನು ಮತ್ತು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯವನ್ನು ಪುನಃಸ್ಥಾಪಿಸಲಾಯಿತು.

ಈ ನಡುವೆ ರಸ್ತೆ ಬದಿ ಹಾಗೂ ದೇವಾಲಯಗಳಲ್ಲಿ ನಿರ್ಲಕ್ಷ್ಯದಿಂದ ಹಾನಿಗೊಳಗಾಗಿದ್ದ ವೀರಗಲ್ಲು ಹಾಗೂ ಶಾಸನಗಳನ್ನೂ ಸಂರಕ್ಷಿಸುವ ಕೆಲಸ ಮಾಡಲು ಆರಂಭಿಸಿದ್ದೆ. ಸಾಮಾನ್ಯವಾಗಿ ವೀರಗಲ್ಲುಗಳನ್ನು ಯೋಧನೊಬ್ಬ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸಂಕೇತವಾಗಿ ನಿರ್ಮಿಸಲಾಗುತ್ತದೆ. ಇವುಗಳನ್ನು ರಕ್ಷಿಸಬೇಕು. ಆದರೆ, ಅವುಗಳನ್ನು ನಿರ್ಲಕ್ಷಿಸಲಾಗುತ್ತಿದೆ.

ಹುತಾತ್ಮರಾದವರ ಸ್ಮರಣಾರ್ಥವಾಗಿ ನಮ್ಮ ಪೂರ್ವಜರು ನಿರ್ಮಿಸಿದ ಕಲ್ಲುಗಳನ್ನು ನಾವು ಗೌರವಿಸಬೇಕು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈವರೆಗೂ ಸಾಕಷ್ಟು ಶಾನಗಳನ್ನು ಹಾಗೂ ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 1,060 ಶಾಸನದ ಕಲ್ಲುಗಳಿವೆ, ಆದರೆ, ಅವುಗಳನ್ನು ಅರ್ಥಮಾಡಿಕೊಳ್ಳಲು ತಜ್ಞರಿಲ್ಲ. ಹೀಗಾಗಿ ಅವುಗಳನ್ನು ನಿರ್ಲಕ್ಷಿಸಲಾಗಿದೆ. ನಾನು ಸಂರಕ್ಷಿಸಿರುವ ಶಾಸನಗಳನ್ನು ಶ್ರೀರಂಗಪಟ್ಟಣದ ರಾಜ್ಯ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.

ನಾಗಮಂಗಲ ತಾಲ್ಲೂಕಿನ ಹಳಿಸಂದ್ರ ಗ್ರಾಮದಲ್ಲಿ ಶಾಸನವೊಂದು ಪತ್ತೆಯಾಗಿತ್ತು. 13 ಅಡಿ ಎತ್ತರದ ಶಾಸನವನ್ನು ರೈತನೊಬ್ಬ ತನ್ನ ದನಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲು ಬಳಸುತ್ತಿದ್ದ. ಬಳಿಕ ಶಿಲಾಶಾಸನದ ಮಹತ್ವದ ಬಗ್ಗೆ ರೈತನಿಗೆ ಮನವರಿಕೆ ಮಾಡಿಕೊಡಲಾಯಿತು. ನಂತರ ಕ್ರೇನ್ ಬಳಸಿ ಶಾಸನವನ್ನು ಆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಂದೆ ಸ್ಥಾಪಿಸಲಾಯಿತು ಎಂದು ತಿಳಿಸಿದ್ದಾರೆ.

ನನ್ನ ಈ ಪ್ರಯಾಣದಲ್ಲಿ ಯಾರೊಬ್ಬರಿಂದಲೂ ವಿರೋಧಗಳು ವ್ಯಕ್ತವಾಗಲಿಲ್ಲ. ಸಮುದಾಯದಿಂದಾಗಲೀ, ಕುಟುಂಬ ಸದಸ್ಯರಿಂದಾಗಿ ವಿರೋಧ ವ್ಯಕ್ತವಾಗಿಲ್ಲ. ಇದು ದೇವರ ವಿಚಾರವಲ್ಲ. ಇತಿಹಾಸ ಮುಖ್ಯವಾಗುತ್ತದೆ. ಸಂಸ್ಕೃತಿಗೆ ಅವಿಭಾಜ್ಯವಾಗಿರುವ ದೇವಾಲಯಗಳು ಮತ್ತು ಶಾಸನಗಳ ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪವು ನನ್ನನ್ನು ಈ ಕೆಲಸ ಮಾಡಲು ಆಕರ್ಷಿಸಿತು. ಇಂದಿನ ಮಕ್ಕಳಿಗೆ ಅಮೆರಿಕದ ಇತಿಹಾಸ ತಿಳಿದಿರುತ್ತದೆ. ಆದರೆ, ತಮ್ಮದೇ ಸ್ವಂತ ಊರಿನ ಇತಿಹಾಸ, ಸಂಸ್ಕೃತಿಯ ಬಗ್ಗೆ ಯಾವುದೇ ಕಲ್ಪನೆ ಕೂಡ ಇರುವುದಿಲ್ಲ. ಹೀಗಾಗಿ, ಸ್ಥಳೀಯ ಇತಿಹಾಸ ಹಾಗೂ ಸಂಸ್ಕೃತಿಗೆ ಮಹತ್ವ ನೀಡುವುದನ್ನು ಹೆಚ್ಚಿಸಬೇಕೆಂದು ಕಲೀಮುಲ್ಲಾ ಅವರು ಹೇಳಿದ್ದಾರೆ.

Post a Comment

Previous Post Next Post