ಬ ಲೂಚಿಸ್ತಾನದಲ್ಲಿ ಪ್ಯಾಸೆಂಜರ್ ರೈಲನ್ನು ಹೈಜಾಕ್ ಮಾಡಿದ ಪ್ರತ್ಯೇಕತಾವಾದಿ ಉಗ್ರರು ಹಲವಾರು ಪ್ರಯಾಣಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ದಾರೆ. 9 ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರನ್ನು ಹೊತ್ತೊಯ್ದ ಜಾಫರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಗುಂಡು ಹಾರಿಸಿದರು.

ಮಂಗಳವಾರ ನೈಋತ್ಯ ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ರೈಲು ಚಾಲಕ ಗಾಯಗೊಂಡಿದ್ದಾರೆ.

ಬಲೂಚ್ ಲಿಬರೇಶನ್ ಆರ್ಮಿ (BLA) ಬಲೂಚಿಸ್ತಾನದಲ್ಲಿ ಜಾಫರ್ ಎಕ್ಸ್‌ಪ್ರೆಸ್ ಮೇಲೆ ದಾಳಿ ಮಾಡಿ 6 ಸೇನಾ ಸಿಬ್ಬಂದಿಯನ್ನು ಕೊಂದು ಸುಮಾರು 120 ಪ್ರಯಾಣಿಕರನ್ನು ಅಪಹರಿಸಿದ್ದರಿಂದ ಪಾಕಿಸ್ತಾನ ಸರ್ಕಾರವು ತನ್ನ ಹೆಚ್ಚಿನ ಪ್ರದೇಶ ಮತ್ತು ಕಾರ್ಯಾಚರಣೆಗಳ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದೆ. ಈ ರೈಲು ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ತೆರಳುತ್ತಿತ್ತು.

ಹೊಣೆ ಹೊತ್ತುಕೊಂಡ ಬಲೂಚ್ ಲಿಬರೇಶನ್ ಆರ್ಮಿ

ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ಬೋಲನ್‌ನಲ್ಲಿ ಜಾಫರ್ ಎಕ್ಸ್‌ಪ್ರೆಸ್ ಅನ್ನು ಹೈಜಾಕ್ ಮಾಡಿ 120 ಪ್ರಯಾಣಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡು ಆರು ಸೇನಾ ಸಿಬ್ಬಂದಿಯನ್ನು ಕೊಂದ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಅವರ ವಿರುದ್ಧ ಯಾವುದೇ ಸೇನಾ ಕಾರ್ಯಾಚರಣೆ ನಡೆಸಿದರೆ ಎಲ್ಲಾ ಒತ್ತೆಯಾಳುಗಳನ್ನು ಹತ್ಯೆ ಮಾಡಬೇಕಾಗುತ್ತದೆ ಎಂದೂ ಪ್ರತ್ಯೇಕತಾವಾದಿ ಉಗ್ರರ ಗುಂಪು ಎಚ್ಚರಿಸಿದೆ.

ಅಲ್ಲದೆ, "ಈ ಕಾರ್ಯಾಚರಣೆಯ ಸಮಯದಲ್ಲಿ, BLA ಪ್ರತ್ಯೇಕತಾವಾದಿ ಉಗ್ರರು ಮಹಿಳೆಯರು, ಮಕ್ಕಳು ಮತ್ತು ಬಲೂಚ್ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದಾರೆ'' ಎಂದೂ ತಿಳಿದುಬಂದಿದೆ. ಅಲ್ಲದೆ, ಸುಮಾರು 120 ಒತ್ತೆಯಾಳುಗಳ ಪೈಕಿ ಪ್ರಯಾಣಿಕರಲ್ಲಿ ಪಾಕಿಸ್ತಾನಿ ಮಿಲಿಟರಿ ಮತ್ತು ಐಎಸ್‌ಐ ಸಿಬ್ಬಂದಿ ಇದ್ದಾರೆ ಎಂದೂ ಹೇಳಿದೆ.

ಬಲೂಚಿಸ್ತಾನದ ಬೋಲನ್ ಜಿಲ್ಲೆಯ ಮುಷ್ಕಾಫ್ ಪ್ರದೇಶದಲ್ಲಿ ಘಟನೆ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಬಲೂಚಿಸ್ತಾನ್ ಸರ್ಕಾರವು ತುರ್ತು ಕ್ರಮಗಳನ್ನು ವಿಧಿಸಿದ್ದು. ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ.

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರತ್ಯೇಕತಾವಾದಿ ಉಗ್ರಗಾಮಿ ಗುಂಪುಗಳಿಂದ ದಶಕಗಳಿಂದ ದಂಗೆ ನಡೆಯುತ್ತಿರುವುದು ಇಲ್ಲಿ ಉಲ್ಲೇಖಿಸಬೇಕಾದ ಅಂಶವಾಗಿದೆ. ಈ ಪ್ರದೇಶದಲ್ಲಿ ಸರ್ಕಾರ, ಸೈನ್ಯ ಮತ್ತು ಚೀನೀ ಹಿತಾಸಕ್ತಿಗಳ ವಿರುದ್ಧ ಆಗಾಗ್ಗೆ ದಾಳಿಗಳು ನಡೆಯುತ್ತಿವೆ, ಏಕೆಂದರೆ ಅವರು ಖನಿಜ-ಸಮೃದ್ಧ ಸಂಪನ್ಮೂಲಗಳಲ್ಲಿ ಪಾಲು ಬೇಡಿಕೆಗಳನ್ನು ಒತ್ತಾಯಿಸುತ್ತಿದ್ದಾರೆ. BLA ಪ್ರತ್ಯೇಕತಾವಾದಿ ಉಗ್ರರು ಬಲೂಚಿಸ್ತಾನಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬಯಸುತ್ತಿದೆ.

ಈ ಮಧ್ಯೆ, ಪಾಕಿಸ್ತಾನ ರೈಲ್ವೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ವೆಟ್ಟಾ ಮತ್ತು ಪೇಶಾವರ ನಡುವಿನ ರೈಲು ಸೇವೆಗಳನ್ನು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಸೇವೆ ಅಮಾನತುಗೊಳಿಸಿದ್ದ ನಂತರ ಮರುಸ್ಥಾಪಿಸಲು ಘೋಷಿಸಿತ್ತು. ಈಗ ಪ್ರತ್ಯೇಕತಾವಾದಿ ಉಗ್ರರು ನೂರಾರು ಜನರ ಒತ್ತೆಯಾಳಾಗಿ ಇರಿಸಿಕೊಂಡಿದೆ.

Read more news like this on kannada.timesnownews.com

Post a Comment

Previous Post Next Post