ಜಗತ್ತಿನ ಪ್ರಮುಖ ಧರ್ಮಗಳಲ್ಲಿ ಹಿಂದೂ ಧರ್ಮವೂ ಒಂದು. ಜಾಗತಿಕವಾಗಿ ಸುಮಾರು 1.2 ಬಿಲಿಯನ್ ಜನರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ.
ಹಿಂದೂ ಧರ್ಮದ ಜನ್ಮಸ್ಥಳ ಭಾರತ, ಈ ಧರ್ಮವು ವಿಶ್ವದ ಅತ್ಯಂತ ಹಳೆಯ ಧರ್ಮವೆಂದುಪರಿಗಣಿಸಲಾಗಿದೆ.
ಧರ್ಮದ ವ್ಯಾಪ್ತಿದೊಡ್ಡದಾಗಿರುವುದರಿಂದ
ಅದರಲ್ಲಿರುವ ದೇವತೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳ ಸಂಖ್ಯೆಯೂ ದೊಡ್ಡದಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ದೇವತೆಯ ಪೂಜೆ ಅಥವಾ ಧಾರ್ಮಿಕ-ಮಂಗಲ ಕಾರ್ಯವನ್ನು ಗಂಗಾಜಲವಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.ಗಂಗಾಮಾತೆಯು ಹಿಮಾಲಯದ ತಪ್ಪಲಿನಲ್ಲಿ ಹುಟ್ಟಿ ಹರಿದರೂ ಭಾರತದಾದ್ಯಂತ ಜನರ ಮನದಲ್ಲಿ ಗಂಗೆಗೆ ಪವಿತ್ರ ಸ್ಥಾನವನ್ನು ಜನರಮಾನಸದಲ್ಲಿಆಗಲಿ,ಪುರಾಣಪುಣ್ಯಕಥೆಗಳಲ್ಲಾಗಲಿಶಾಸ್ತ್ರ ಸಂಪ್ರದಾಯ ಗಳಲ್ಲಾಗಲಿಗೌರವವನ್ನುನೀಡುತ್ತಾರೆ.ಹಾಗೆ ಆಕೆಯನ್ನು ಸ್ಮರಿಸದೆ ಯಾವ ಧಾರ್ಮಿಕ ಕಾರ್ಯಗಳನ್ನುಮಾಡುವುದೇ ಇಲ್ಲ.
ಪ್ರಯಾಗದಲ್ಲಿ ಕುಂಭ ಮೇಳ ಆರಂಭಾದಿಯಿಂದ ಕೋಟ್ಯಾಂತರ ಮಂದಿ ಕುಂಭ ಸ್ನಾನಮಾಡಲು ಹೋಗುವುದನ್ನು ಮೀಡಿಯಾ ದಲ್ಲಾಗಲಿ,ನ್ಯೂಸ್ ಚಾನಲ್ಗಳಲ್ಲಾಗಲಿ,
ವಿಡಿಯೋ ಗಳಲ್ಲಾಗಲಿ ನೋಡುತ್ತಲೇ ಬಂದೆ .ಸ್ನೇಹ ಬಳಗದಲ್ಲಿ ಹಲವಾರು ಗೆಳತಿಯರು ಹೋದರು,ನನ್ನನ್ನೂ ಬಾ ಎಂದು ಕರೆದರು.ಆದರೆ ನನಗೆ ಹಲವು ಕಾರಣಗಳಿಂದ ಹೋಗಲಾಗದೆ ಮನಸ್ಸಿನಲ್ಲಿಯೇ ಬೇಸರಿಸಿಕೊಂಡು"ಹೇ ಗಂಗಾಮಾತೆ ನಾ ಬಾರದಿರಲು ನಿನಗೆ ಕಾರಣ ತಿಳಿದಿದೆ,ಅದೇನುಮಾಡುವೆಯೋ ನನಗೆತಿಳಿಯದು,ನಿನ್ನ ಒಂದು ಹನಿಯಾದರು ಸರಿಯೇ ನನ್ನ ಶಿರದ ಮೇಲೆ ಬೀಳುವಂತೆ ದಯೆಮಾಡಿ ಕರುಣಿಸು" ಎಂದು ಆಕೆಯಲ್ಲಿ ಪ್ರಾರ್ಥಿಸಿಕೊಂಡೆ. ತದನಂತರ ದಿನಗಳಲ್ಲಿ ನಾನಾಗಿಯೇ ನನಗಾಗಿ ಗಂಗಾಜಲ ತಂದುಕೊಡಿ ಎಂದು ಯಾರಲ್ಲೂ ಅವಲತ್ತುಕೊಳ್ಳಲಿಲ್ಲ,ಕಾರಣ ಅವರುಗಳೇ ಹರಸಾಹಸ ಪಟ್ಟು ಅಷ್ಟು ದೂರದಿಂದ ತಂದಿರುತ್ತಾರೆ ಅದರಲ್ಲಿ ನಾನು ಕೇಳಿದರೆ ಏನುಅಂದುಕೋತಾರೋ ಏನೋ ಅನ್ನುವ ಸಂಕೋಚ.ಆದರೆ ನನಗೆ ಲಭ್ಯವಿದ್ದರೆ ತಾನಾಗಿಯೇ ಬರುವಳು
ನಮ್ಮಮನೆಗೆಎಂದುಸಂಕಲ್ಪಮಾಡಿ
ಕೊಂಡಿದ್ದೆ.
ಅದೇನು ದೃಢಸಂಕಲ್ಪವೋ,ದೃಢ ನಂಬಿಕೆಯೋ ಆ ದೇವಿ ತನ್ನ ಇರುವಿಕೆಯನ್ನು ತೋರಲೋ ಅಥವಾ ಪವಾಡವೋ ತಿಳಿಯದು, ನನ್ನ ಮಗನ ಗೆಳೆಯ ಕಾಲ್ ಮಾಡಿ ಪ್ರಯಾಗ್ನಿಂದ ಗಂಗಾಜಲ ತಂದಿದ್ದೀನಿ ಬೆಂಗಳೂರಿಗೆ ಬಾ ಕೊಟ್ಟುಕಳಿಸುವೆ ಎಂದು ತಾನಾಗಿಯೇ ಹೇಳಿದ್ದಾನೆ.ಅದೇನು ಆಶ್ಚರ್ಯವಲ್ಲವಾ? ಓದುಗರಾಗಿ ನಿಮಗೇ ಅಷ್ಟು ಆಶ್ಚರ್ಯ ವಾದರೆ ಇನ್ನು ನನ್ನ ಮನದಲ್ಲಿ ಸಂಕಲ್ಪ ಮಾಡಿಕೊಂಡ ನನಗೆ ಅದೆಷ್ಟು ಆಶ್ಚರ್ಯ, ಆಗಿರಬೇಕು ನೀವೇ ಲೆಕ್ಕ ಹಾಕಿಕೊಳ್ಳಿ.(ಸತ್ಯದ ಮಾತುಗಳಿವು)ಮಗ ಬೆಂಗಳೂರಿಗೆ ತನ್ನ ಗೆಳೆಯನ ಮನೆಗೆ ಹೋಗಿ ಶ್ರದ್ದೆಯಿಂದ ಕೊಟ್ಟ ಜಲವನ್ನು ಅಷ್ಟೇ ಜತನವಾಗಿ ತಂದು ಕೊಟ್ಟಾಗ ನನಗಾದ ಆನಂದಕ್ಕೆ ಪಾರವೇಇಲ್ಲ ಕಂಡ್ರಿ.ನೇರ ದೇವರ ಮನೆಲಿ ಇಟ್ಟು ಪೂಜಿಸಿ ಅಮ್ಮಾ ತಾಯಿ ನಿನ್ನ ಇರುವಿಕೆಯ ಅರಿವನ್ನು ಜಗತ್ತಿಗೆ ಹೇಗೆಲ್ಲಾ ತಿಳಿಸುತ್ತಿರುವೆ ನಿನ್ನ ಮಹತ್ಮೆಯನ್ನು ಏನೆಂದು ಹಾಡಿ ಹೊಗಳಲಿ ಹೇಳು ಎಂದು ಆಕೆಗೆ ಕೇಳಿದೆ ಮನಸಿನಲ್ಲಿ.
ಸ್ನೇಹಿತರೇ ಅದೇನೋ ಗಂಗಾ ನದಿಯ ನೀರು ಮಲಿನಗೊಂಡಿದೆ,ಸ್ನಾನಕ್ಕೆ ಹಾಗೂ ಕುಡಿಯಲು ಅರ್ಹವಿಲ್ಲೆಂದು ಬೊಬ್ಬೆ ಹೊಡೆಯುತ್ತಿರುವ ಮಂದಿಗೂ ಏನೂ ಕಮ್ಮಿಇಲ್ಲ.ಬಾಟಲಿನಲ್ಲಿ ತಂದಿರುವ ನೀರನ್ನು ಕಂಡಾಗ ನೋಡಿ ಆಶ್ಚರ್ಯ ಪಟ್ಟೆ! ಇಷ್ಟು ಕ್ಲಿಸ್ಟರ್ ಕ್ಲಿಯರ್ ಆಗಿರುವ ನೀರಿಗೂ ಹುಸಿನಾಮಕರಣ ಮಾಡುವ ಮಂದಿಯ ಮನಸ್ಥಿತಿ ಗೆ ಏನೆಂದು ಹೇಳಬೇಕು ಹೇಳಿ.
ಗಂಗೆಗೆ ಮಲಿನತೆಯೇ ಇಲ್ಲ ಎಂದು ಹೇಳುತ್ತಾರೆ.ಹಾಗೇ ದೋಷವೂ ಇರಲಾರದು ಎಂದು ತಿಳಿಯಬೇಕು. ಹೀಗೆ ಗಂಗಮ್ಮನಿಗೆ ಯಾವುದೇ ಜಾತಿ ಧರ್ಮದ ಬೇದವಿಲ್ಲ ನೀರಿನಲ್ಲಿ ಹೆಚ್ಚು ಆಮ್ಲಜನಕ ಮಿಶ್ರಣಗೊಂಡಿದೆ ಕಾರಣ ಕಲ್ಕತ್ತಾ ದಿಂದ ಪ್ರಯಾಗ್ ಗೆ ಹರಿದುಕೊಂಡು ಖುಷಿ ಖುಷಿಯಿಂದ ಬರುವಾಗ ತನ್ನ ಮಡಿಲಿಗೆ ಸಾವಿರಾರು ಔಷಧಿ ಗಿಡಮೂಲಿಕೆಗಳ ಮೇಲೆಯೇ ಹರಿಯುವುದು ಹಾಗಾಗಿ ಯಾವುದೇ ರೋಗರುಜಿನಗಳು,
ಚರ್ಮರೋಗವು ಬಾರದು ಎಂದು ಹೇಳುತ್ತಾರೆ,ಜೊತೆಗೆ ಹರಿಯುವ ನೀರಿನಲ್ಲಿ ಯಾವ ದೋಷಗಳು ಇರಲಾರದು ಎಂಬ ಬಲವಾದ ನಂಬಿಕೆ ಪುರಾಣ ಕಾಲದಿಂದಲೂ ಇದೆ.
ಈ ಕಲಿಗಾಲದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಒಂದೆಡೆಗೆ ಸೇರಿದ ಹಿಂದುಗಳ ನಂಬಿಕೆಯು ಅಚಲವಾಗಿದೆ ಆ ನಂಬಿಕೆಕೆಯೇ ದೇವರಾಗಿಸಿತು ಈ ಕುಂಭಮೇಳ ,45 ದಿನಗಳಲ್ಲಿ ಸರಿ ಸುಮಾರು 65ಕೋಟಿಗೂ ಹೆಚ್ಚು ಮಂದಿ ಕುಂಭಮೇಳಕ್ಕೆ ಹೋಗಿ ಮಿಂದಿದ್ದಾರೆ ,. ಜನರ ಕಣ್ಣಿಗೆ ಕಾಣದ ಸಾಧು,ಸಂತರು,
ನಾಗಸಾಧುಗಳು,ಆಧ್ಯಾತ್ಮದಲ್ಲಿ ತೊಡಗಿಸಿಕೊಂಡವರು ಒಟ್ಟಾಗಿ ಸಾಮಾನ್ಯ ಜನರಿಗೆ ಕಾಣಿಸಿಕಡಿದ್ದು ಸಹ ಅದ್ಬುತವೇ ಹೌದಲ್ಲವೇ?ಅಷ್ಟೇ ಅಲ್ಲ, ಅಲ್ಲಿ ಯಾವ ದೇವಾಲಯವಿಲ್ಲ
ವಿಗ್ರಹಗಳಿಲ್ಲಅಲ್ಲಿ ಇರುವುದು ಗಂಗೆ ಅಷ್ಟೇ, ಹರಿಯುವ ಮೂರುಪುಣ್ಯ ನದಿಗಳ ಸಂಗಮ ಪ್ರಯಾಗ್ರಾಜ್
ಆ ಸ್ಥಳಕ್ಕೆ ಅಷ್ಟೇ ಜನರು ಭೇಟಿಮಾಡಿ ಕುಂಭಸ್ನಾನ ಮಾಡಿದ್ದಾರೆ ಅಲ್ಲಿ ಯಾವ ಮತಭೇದವಿಲ್ಲ,ಧರ್ಮಭೇದ ವಿರಲಿಲ್ಲ ಲಿಂಗ ತಾರತಮ್ಯಿರಲಿಲ್ಲ, ಎಲ್ಲರ ಒಗ್ಗಟ್ಟು ಬೃಹದಾಕಾರವಾಗಿ ಇಡೀ ಜಗತ್ತು ನಿಬ್ಬೆರಗಾಗುವಂತೆ ವಿಸ್ಮಯವೇ ಘಟಿಸಿತು ಅಲ್ಲವೇ? ಪ್ರಕೃತಿಯ ಜಲಧಾರೆಯಲ್ಲಿನ ನಂಬಿಕೆ ಗಂಗೆಯಾಗಿ ಹರಿಯುವ ದೇವತೆಎಂದು ಧೃಡವಾಗಿ ನಂಬಿರುವ ಮಂದಿಗಳ ನಂಬಿಕೆಯೇ ದೇವತೆ ಯಾಗಿದ್ದಳು ಗಂಗಾ ಮಾತೆ🙏
ಅಂತು ಇಂತು ಕುಂಭಮೇಳ ಅದ್ಬುತ ಯಶಸ್ಸಿನಿಂದ ಸಂಪನ್ನವಾಯಿತು.ಪ್ರತಿದಿನ ನಾವುಗಳು ಟಿವಿಯಲ್ಲಿ ನೋಡುತ್ತಿದ್ದೆವು.
ಆ ಪುಣ್ಯಘಳಿಗೆಯಲ್ಲಿ ಮಿಂದೆದ್ದ ಮಂದಿಯನ್ನುನೋಡಿಖುಷಿಪಟ್ಟೆವು.
ಕೊನೆಗೆ ಗಂಗೆಯು ಅಚಾನಕ್ಕಾಗಿ ನಮ್ಮ ಮನೆಗೂ ಬಂದಿದ್ದುಆತ್ಮಾನಂದವಾಯಿತು. ವಯಸ್ಸಾದಾಮ್ಮಳಶಿರಧಾರೆಯಾಗಿದ್ದಾಯಿತು, ಒಡಲನ್ನು ಸೇರಿದಳು ತೀರ್ಥ ರೂಪದಲ್ಲಿ ,ಇನ್ನೇನು ಬೇಕು ಹೇಳಿ.ಮನೆ ಮಂದಿಗೆಲ್ಲಾ ಆಗಿ ಮತ್ತಷ್ಟನ್ನುಎತ್ತಿಟ್ಟಿರುವೆ.
ಮುಗಿಯೋ ತನಕ ತೀರ್ಥವಾಗಿಸೇವಿಸುವ ಎಂದು.
ನಂಬಿಕೆಗಳು ಅವರವರ ವೈಯಕ್ತಿಕ, ಯಾರೂ ಯಾರ ನಂಬಿಕೆಗಳನ್ನು ಅಲ್ಲಗಳೆಯದೆ,ಎಲ್ಲಾಜಾತಿ ಮತ ಪಂಗಡ, ಧರ್ಮದವರು ಸಹಮತದಿಂದ ನಡೆದಾಗ ಜಗತ್ತು ಮತ್ತಷ್ಟು ಔನತ್ಯಕ್ಕೆ ಏರುವಲ್ಲಿ ಸಂಶಯವೇ ಇಲ್ಲ.ಸರ್ವ ಧರ್ಮದ ಶಾಂತಿಯ ತೋಟವಾಗಲಿ,ಪ್ರಕೃತಿ ಮುಂದೆ ಈ ಮಾನವನ ಆಟ ಏನೂ ನಡೆಯದು.
ಇರುವಷ್ಟುದಿನ ಎಲ್ಲರೊಟ್ಟಿಗೆ ಸಹಮತ
ದಿಂದ ಇದ್ದುಸಾಗುವ ಬಿಡಿ,ನಾವೂ ಶಾಶ್ವತ ಅಲ್ಲವಲ್ಲಾ ಯಾರೂ ಶಾಶ್ವತವಲ್ಲ.ದೇವರು ಒಬ್ಬನೇ ನಾಮ ಹಲವು,ನಂಬಿಕೆಯೇ ದೇವರಾದಾಗ ಗಂಗೆಯಂತೆ ಎಲ್ಲರ ಮನೆ,ಮನಗಳಲ್ಲಿ ತುಂಬಿ, ಶಾಂತಿ,ನೆಮ್ಮದಿ ಯ ಜೀವನ ಸರ್ವರಲ್ಲಿ ನೆನಸಲಿ ಎಂದು ಪ್ರಾರ್ಥಿಸಿಕೊಳ್ಳುವೆ..ಧನ್ಯವಾದಗಳು,🙏
ಪ್ರಭಾವಸಂತ್💐💐
Post a Comment